Breaking News

News

ನಾಗರ ಹಾವಿನಿಂದ ಮನೆಯವರನ್ನು ರಕ್ಷಣೆ ಸಾಕು ಬೆಕ್ಕುಗಳು

ಯಾರೂ ಇಲ್ಲದ ವೇಳೆ ಅಡುಗೆಮನೆ ಸೇರಿಕೊಂಡಿದ್ದ ವಿಷಕಾರಿ ನಾಗರಹಾವಿನಿಂದ ಜೋಡಿ ಬೆಕ್ಕುಗಳು ಇಡೀ ಕುಟುಂಬದ ಸದಸ್ಯರು ರಕ್ಷಿಸಿದ ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಘಟನೆ ಜರುಗಿದೆ. ಗದಗ ಜಿಲ್ಲೆಯ ನರಗುಂದ ಪಟ್ಟಣದ ಡಾ.ಅಂಬೇಡ್ಕರ್ ನಗರದಲ್ಲಿ ಲಕ್ಷ್ಮಣ್ ಎಂಬುವರಿಗೆ ಸೇರಿದ ಮನೆಯಲ್ಲಿ ಬುಧವಾರ ನಡೆದಿದ್ದು ಬೆಳಕಿಗೆ ಬಂದಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ವಿಷಕಾರಿ ನಾಗರಹಾವು ಅಡುಗೆಮನೆಗೆ ಸೇರಿದೆ. ಹಾವು ಸೇರಿದ್ದನ್ನು ಮನೆಯಲ್ಲಿ ಇದ್ದ ಜೋಡಿ ಬೆಕ್ಕುಗಳು ನೋಡಿವೆ. ಮನೆ ಮಾಲೀಕರು …

Read More »

ಚಿಟಗುಪ್ಪಿ ಆಸ್ಪತ್ರೆ ಆವರಣಕ್ಕೆ ಫಾಗಿಂಗ್ ಸಿಂಪಡಣೆ

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ವಾರ್ಡ್ 57ರ ಚಿಟಗುಪ್ಪಿ ಆಸ್ಪತ್ರೆ ಆವರಣದಲ್ಲಿ ರೋಗಿಗಳ ಆರೋಗ್ಯ ಹಿತದೃಷ್ಟಿಯಿಂದ ಫಾಗಿಂಗ್ ಕಾರ್ಯ ಕೈಗೊಳ್ಳಲಾಯಿತು. ನಂತರ ಅಧಿಕಾರಿಗಳು ಬಂದಿರುವ ರೋಗಿಗಳ ಸಂಬಂಧಿಗಳಿಗೆ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಿದರು. ಹುಬ್ಬಳ್ಳಿ ಧಾರವಾಡ ಸತತವಾಗಿ ಎರಡು ದಿನಗಳಿಂದ ತುಂತುರು ಮಳೆ ಪ್ರಾರಂಭವಾಗಿದ್ದ, ಸೊಳ್ಳೆಗಳು ಹೆಚ್ಚಾಗಿರುವ ಹಿನ್ನಲೆ ಹಾಗೂ ಇತರೆ ಕೀಟಗಳಿಂದ ಹರಡಬಹುದಾದ ರೋಗಗಳಿಂದ ಮುಕ್ತಿ ನೀಡುವ ಹಿನ್ನಲೆ ಮಹಾನಗರ ಪಾಲಿಕೆ ಹಾಗೂ ಆರೋಗ್ಯ ಇಲಾಖೆಯ ವತಿಯಿಂದ ಈ …

Read More »

ಹುಲಾ ಹೂಪ್ಸ್ನಲ್ಲಿ ವರ್ಲ್ಡ್ ರೆಕಾರ್ಡ್ ಮಾಡಿದ ವಾಣಿಜ್ಯ ನಗರದ ಕ್ಯೂಟ್ ಬೆಡಗಿ

ಹುಬ್ಬಳ್ಳಿ: ಸಾಧನೆಗೆ ವಯಸ್ಸಿನ ಮಿತಿಇಲ್ಲಾ. ಮನಸ್ಸಿದ್ದರೆ ಜೀವನದಲ್ಲಿ ಎನ್ನಾದರೂ ಸಾಧಿಸಬಹುದು ಎಂಬದಕ್ಕೆ ಈ ಪೋರಿಯೇ ಸಾಕ್ಷಿ. ಈ ಪುಟ್ಟ ಬಾಲಕಿಯ ಹೆಸರು ಸಮೃದ್ಧಿ ಪಾಟೀಲ ಲಂಡನ್ ಸಿಟಿಯಲ್ಲಿ ಹಮ್ಮಿಕೊಂಡಿದ್ದ ಹುಲಾ ಹೂಪ್ಸ್ ಗೇಮ್‌ನಲ್ಲಿ ಕೇವಲ ಒಂದು ನಿಮಿಷದಲ್ಲಿ ಬರೊಬ್ಬರಿ 198 ಬಾರಿ ರೊಟೇಟ್ ಮಾಡಿ ವರ್ಲ್ಡ್ ರೆಕಾರ್ಡ್ ಮಾಡಿದ್ದಾಳೆ.ಹುಬ್ಬಳ್ಳಿಯ ಬನಶಂಕರಿ ಬಡವಾಣಿ ನಿವಾಸಿ ಸುಜಾತಾ ಪಾಟೀಲ ಅವರ ಮಗಳು. ಈ ಪುಟ್ಟ ಬಾಲಕಿಯ ಸಾಧನೆಗೆ ಭಾರತದ ಛಾತ್ರ ರತ್ನ ಪ್ರಶಸ್ತಿ …

Read More »

ಮಹಿಳಾ ವಿದ್ಯಾಪೀಠದ ಹಾಸ್ಟೇಲ್ ವಿದ್ಯಾರ್ಥಿಗಳಿಂದ‌ ಹಣದೋಚಲು ಮುಂದಯಾತ್ತಾ..? ಆಡಳಿತ ಮಂಡಳಿ ..?

ಹುಬ್ಬಳ್ಳಿ: ಅವರೆಲ್ಲರೂ ತಮ್ಮ ಮಕ್ಕಳು ಹುಬ್ಬಳ್ಳಿಯಂತ ಪಟ್ಟಣದಲ್ಲಿ ಚನ್ನಾಗಿ ಓದಬೇಕು ಎಂದುಕೊಂಡವರು. ದೂರದ ಊರಲ್ಲಿ ಮಕ್ಕಳು ಓದುತ್ತಿದ್ದಾರೆ‌ ಅವರ ಭವಿಷ್ಯ ಉಜ್ವಲವಾಗಲಿ ಅಂತ ಕಂಡ ಕಂಡ ದೇವರಲ್ಲಿ ಪ್ರಾರ್ಥನೆ ಮಾಡಿದ ಹೆತ್ತವರು. ಈಗ ಹಾಸ್ಟೆಲ್ ವಿಷಯಕ್ಕೆ ಸಂಬಂಧಿಸಿದಂತೆ ಕಣ್ಣೀರು ಹಾಕುವಂತಾಗಿದೆ. ಮೊದಲು ಹಾಸ್ಟೆಲ್ ಉಚಿತ ಎಂದಿದ್ದ ಶಾಲೆಯ ಆಡಳಿತ ಮಂಡಳಿ ಈಗ ಫೀಸ್ ತುಂಬಲು ಟೈಮ್ ಬಾಂಡ್ ಕೊಟ್ಟಿದ್ದಾರೆ ಎಂಬ ಆರೋಪ ಮಾಡಿದ ಪಾಲಕರು ಈಗ ಶಾಲೆಯ ಮುಂದೆ ತಮ್ಮ …

Read More »

ಕುಸುಗಲ್ ಗ್ರಾಮದಲ್ಲಿ ಸಮುದಾಯ ಜಾಗೃತೀಕರಣ ಪಾಕ್ಷಿಕ‌ ಕಾರ್ಯಕ್ರಮ

ಹುಬ್ಬಳ್ಳಿ ಸಣ್ಣ ಕುಟುಂಬ ಸುಖಿ ಕುಟುಂಬ, ಗಂಡಿರಲಿ ಹೆಣ್ಣಿರಲಿ ಮಕ್ಕಳೆರಡೇ ಇರಲಿ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಸೋಫಿಯಾ ಹೇಳಿದರು.ತಾಲೂಕಿನ ಕುಸುಗಲ್ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ಆಯೋಜಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆಯ ಅಂಗವಾಗಿ ಸಮುದಾಯ ಜಾಗೃತೀಕರಣ ಪಾಕ್ಷಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ವಿಶ್ವ ಜನಸಂಖ್ಯಾ ದಿನಾಚರಣೆ ಪ್ರಯುಕ್ತ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಕುಟುಂಬ ಯೋಜನೆಯನ್ನು ಅಳವಡಿಸಿಕೊಂಡು ಸಂತೋಷ ಮತ್ತು ಸಮೃದ್ಧಿಯ ಜೀವನ ಆಯ್ಕೆ ಮಾಡಿಕೊಳ್ಳುತ್ತೇವೆ …

Read More »

ಆಶ್ರಯ ಮನೆಯ ಸಲುವಾಗಿ ನರಗುಂದ ಪಟ್ಟಣದಲ್ಲಿ ಜಗಳ;

112 ತುರ್ತು ಸಹಾಯವಾಣಿಗೆ ನರಗುಂದ ಶಹರದ ಕೃಷ್ಣಾ ನಗರದಿಂದ ಕರೆ ಬಂದಿದ್ದು ERV ಕೂಡಲೇ ಸ್ಥಳಕ್ಕೆ ತೆರಳಿ ವಿಚಾರಿಸಲಾಗಿ ಆಶ್ರಯ ಮನೆಯ ಸಲುವಾಗಿ ನೆರೆಹೊರೆಯವರ ನಡುವೆ ಜಗಳವಾಗಿದ್ದು ಸಮಸ್ಯೆ ಬಗ್ಗೆ ಹರಿಯದ ಕಾರಣ ದೂರುದಾರರಿಗೆ ಠಾಣೆಗೆ ಹೋಗಲು ತಿಳಿಸಲಾಗಿದೆ. ಹೌದು ಆಶ್ರಯ ಮನೆ ಯೋಜನೆ ಹಂಚಿಕೆ ವಿಚಾರದಲ್ಲಿ ಈಗಾಗಲೇ ಅನೇಕ ಗೊಂದಲು ಇದ್ದು ಅದಕ್ಕೆ ಪರಿಹಾರ ನೀಡಬೇಕಾದ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯತೆ ಇದೆ , ಒಂದೇ ಜಾಗೆಯನ್ನು …

Read More »

ರೈತರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ರೈತರ ಆಗ್ರಹ

ನವಲಗುಂದ: ಮಹದಾಯಿ, ಕಳಸಾ-ಬಂಡೂರಿ ಯೋಜನೆ ಅನುಷ್ಠಾನ ಹಾಗೂ ರೈತರ ಪ್ರಮುಖ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಜಾತ್ಯಾತೀತ – ಪಕ್ಷಾತೀತ ಮಹದಾಯಿ ಕಳಸಾ ಬ೦ಡೂರಿ ರೈತ, ಅಸಂಘಟಿತ ಕಾರ್ಮಿಕರ ಮಹಿಳೆಯರ ರೈತ ಹೋರಾಟ ಒಕ್ಕೂಟ ಕೇಂದ್ರ ಸಮಿತಿ ವತಿಯಿಂದ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ರೈತ ಮುಖಂಡ ಲೋಕನಾಥ ಹೆಬಸೂರು ಅವರು ಬಸಪ್ಪ ಲಕ್ಕುಂಡಿ ವೀರಗಲ್ಲಿಗೆ ಮಾಲರ್ಪಣೆ ಮಾಡಿ ಮಾತನಾಡಿ ಮಹದಾಯಿ, ಕಳಸಾ-ಬಂಡೂರಿ ಯೋಜನೆ ಕಾಮಗಾರಿಯನ್ನು …

Read More »

ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಆರ್. ಆರ್. ಸದಲಗಿ ಅಧಿಕಾರ ಸ್ವೀಕಾರ

ಧಾರವಾಡಃ ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಆರ್. ಆರ್. ಸದಲಗಿ ಅಧಿಕಾರ ಸ್ವೀಕರಿಸಿದರು. ಬೆಳಗಾವಿ ಜಿಲ್ಲೆಯ ಯರಗಟ್ಟಿಯವರಾದ ಸದಲಗಿ ಯವರು ಈ ಹಿಂದೆ ಸವದತ್ತಿ ತಾಲೂಕಿನ ಕ್ಷೇತ್ರ ಸಮನ್ವಯಾಧಿಕಾರಿಗಳಾಗಿ.ನಂತರ ಮುಂಡರಗಿ ಹಾಗೂ ಬೀಳಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸಿರುವ ಸದಲಗಿಯವರು ಇಂದು ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದರು, ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಸ್ ಎಸ್ ಕೆಳದಿಮಠ, ಡಿ ವಾಯ್ ಪಿಸಿ ಎಸ್ ಎಂ ಹುಡೇದಮನಿ, …

Read More »

ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಾರ ಪ್ರಮಾಣ ಚಿನ್ನ ವಶಕ್ಕೆ ಪಡೆದ ಅಧಿಕಾರಿಗಳು;

ಬೆಂಗಳೂರು ; ವಿದೇಶಗಳಿಂದ ಬೆಂಗಳೂರಿಗೆ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ 2 ಪ್ರತ್ಯೇಕ ಪ್ರಕರಣಗಳನ್ನು ಭೇದಿಸಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 148 ಲಕ್ಷ ಮೌಲ್ಯದ 783 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ. ಬ್ಯಾಂಕಾಕ್ ನಿಂದ ಬಂದಿದ್ದ ಮೂವರು ಆರೋಪಿಗಳು ಚಿನ್ನದ ಸರಗಳನ್ನು ಮುಚ್ಚಿಟ್ಟುಕೊಂಡಿದ್ದರು. ಅವರ ಬಳಿಯಿದ್ದ 731.47 ಲಕ್ಷ ಮೌಲ್ಯದ 516 ಗ್ರಾಂನಷ್ಟು ಚಿನ್ನ ವಶಕ್ಕ ಪಡೆಯಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಟ್ರಾಲಿಬ್ಯಾಗ್‌ …

Read More »

ಗುರುವೇ ನಿಜವಾದ ಪರಮದೈವ: ಡಾ. ಹೊಸಮನಿ

ವಿದ್ಯಾರ್ಥಿ ಕಷ್ಟದಲ್ಲಿದ್ದಾಗ, ಆತನಿಗೆ ಹೆಗಲಾಗಿ ನಿಲ್ಲುವವನೇ ನಿಜವಾದ ಗುರು, ಗುರುವು ನಮ್ಮೊಳಗೆ ಜ್ಞಾನವನ್ನು ಹುಟ್ಟಿಸುವ ಬ್ರಹ್ಮನಂತೆ, ನಮ್ಮ ಮನಸ್ಸಿನ ಜ್ಞಾನವನ್ನು ಸರಿಯಾದ ದಾರಿಗೆ ಕೊಂಡೊಯ್ಯುವ ವಿಷ್ಣುವಿನಂತೆ, ನಮ್ಮ ಜ್ಞಾನಕ್ಕೆ ಅಂಟಿಕೊಂಡಿರುವ ತಪ್ಪು ಪರಿಕಲ್ಪನೆಗಳನ್ನು ನಾಶಪಡಿಸುವ ಶಿವನಂತೆ, ಹಾಗಾಗಿ ಗುರುವು ನಮಗೆ ಪರಮದೈವದಂತೆ ಎಂದು ಖ್ಯಾತ ಯೋಗಪಟು ಡಾ. ಶ್ರೀಧರ ಹೊಸಮನಿ ಹೇಳಿದ್ದಾರೆ. ಪ್ರಕಟಣೆಯಲ್ಲಿ ಅವರು, ನಾವು ನಮ್ಮ ಗುರುವನ್ನು ಪೂಜಿಸಬೇಕು ಮತ್ತು ಅವರಿಗೆ ಗೌರವ ನೀಡಬೇಕು. ಹಾಗೂ ಯೋಗ ಸಹಸ್ರಾರು …

Read More »