Breaking News

ಕರ್ನಾಟಕ

ರಾತ್ರೋರಾತ್ರಿ ತಪ್ಪಿದ ಬಾರಿ ದುರಂತ

ಹುಬ್ಬಳ್ಳಿ: ಯುವಕನೊಬ್ಬ ಅತಿ ಜೋರಾಗಿ ಚಾಲನೆ ಮಾಡುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ತ ಕಂಬಕ್ಕೆ ಡಿಕ್ಕಿ ಹೊಡೆದು ವಿದ್ಯುತ್ ತಂತಿಗಳು ಕಾರಿನ ಮೇಲೆ ಬಿದ್ದರು ಕೂಡಾ ಕಾರಿನಲ್ಲಿದ್ದ 4 ಜನ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ತಡರಾತ್ರಿ ವಿದ್ಯಾನಗರದಲ್ಲಿ ನಡೆದಿದೆ. ವಿದ್ಯಾನಗರದ ಸೆವೆನ್ ಬೀನ್ಸ್ ಹೋಟೆಲ್ ಬಳಿಯಲ್ಲಿ ರಾತ್ರಿ ಸುಮಾರಿಗೆ 4 ಜನ ಯುವಕರು ಕಿಯಾ ಕಾರನ್ನು ವಿದ್ಯಾನಗರದಲ್ಲಿ ಅತಿ ಜೋರಾಗಿ ಚಾಲನೆ ಮಾಡಿಕೊಂಡು ಬರುತ್ತಿದ್ದರು. ಆದರೆ …

Read More »

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ಸಾಲ ಖಾತೆಗಳಿಗೆ ದಂಡ ಶುಲ್ಕ ವಿಧಿಸುವ ಕುರಿತಂತೆ ಸಮಗ್ರ ಮಾರ್ಗಸೂಚಿ…..

ನವದೆಹಲಿ: ಹಣಕಾಸು ಸಂಸ್ಥೆಗಳು ಸಾಲ ನೀಡುವ ಪ್ರಕ್ರಿಯೆಗಳಲ್ಲಿ ನ್ಯಾಯಸಮ್ಮತತೆ, ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಉತ್ತೇಜಿಸುವ ಪ್ರಯತ್ನವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ಸಾಲ ಖಾತೆಗಳಿಗೆ ದಂಡ ಶುಲ್ಕ ವಿಧಿಸುವ ಕುರಿತಂತೆ ಸಮಗ್ರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಗಳು ಸಣ್ಣ ಹಣಕಾಸು ಬ್ಯಾಂಕುಗಳು, ಸ್ಥಳೀಯ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಪ್ರಾಥಮಿಕ ನಗರ ಸಹಕಾರಿ ಬ್ಯಾಂಕುಗಳು, ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್​​ಬಿಎಫ್​ಸಿ) ಮತ್ತು ಅಖಿಲ ಭಾರತ ಹಣಕಾಸು …

Read More »

ರಾಜ್ಯ ಸರ್ಕಾರ ಮೈತ್ರಿ ಉದ್ದೇಶದಿಂದ ತಮಿಳುನಾಡಿಗೆ ನೀರು ಹರಿಸಿಲ್ಲ: ಡಿಕೆ ಶಿವಕುಮಾರ್

ಬೆಂಗಳೂರು: ರಾಜ್ಯ ಸರ್ಕಾರ ಮೈತ್ರಿ ಉದ್ದೇಶದಿಂದ ತಮಿಳುನಾಡಿಗೆ ನೀರು ಹರಿಸಿಲ್ಲ. ನ್ಯಾಯಾಲಯದ ಆದೇಶ ಗೌರವಿಸಿ, ಅದನ್ನು ಪಾಲಿಸಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸಮಜಾಯಿಷಿ ನೀಡಿದ್ದಾರೆ. ಸದಾಶಿವನಗರ ನಿವಾಸದ ಬಳಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, “ನಮ್ಮ ರೈತರ ಹಿತವನ್ನು ಕಾಯಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ತನ್ನ ನಿರ್ಧಾರ ಪುನರ್ ಪರಿಶೀಲಿಸುವಂತೆ ಮನವಿ ಮಾಡಿದ್ದೇವೆ. ಕಾವೇರಿ ವಿಚಾರದಲ್ಲಿ ನಾವು ಕಾನೂನು, ಸಂವಿಧಾನ ಹಾಗೂ ಕೋರ್ಟ್ ಆದೇಶಕ್ಕೆ ಗೌರವ ನೀಡಬೇಕು” ಎಂದರು. …

Read More »

ರಾಜ್ಯದ 9 ಜಿಲ್ಲೆಯ 14 ಸರ್ಕಾರಿ ಅಧಿಕಾರಿಗಳ ನಿವಾಸ ಮತ್ತು ಕಚೇರಿ ಸೇರಿ 45ಕ್ಕೂ ಹೆಚ್ಚು ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ….

ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಅಪಾದನೆ ಹಿನ್ನೆಲೆ ಗುರುವಾರ ರಾಜ್ಯದ 9 ಜಿಲ್ಲೆಯ 14 ಸರ್ಕಾರಿ ಅಧಿಕಾರಿಗಳ ನಿವಾಸ ಮತ್ತು ಕಚೇರಿ ಸೇರಿ 45ಕ್ಕೂ ಹೆಚ್ಚು ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ದಾಖಲೆಗಳು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಧಿಕಾರಿಗಳು ಅಪಾರ ಪ್ರಮಾಣದ ನಗದು ಹಾಗೂ ಆಸ್ತಿ-ಪಾಸ್ತಿ ಪತ್ತೆಯಾಗಿದೆ. ಬೆಂಗಳೂರು, ತುಮಕೂರು, ಮೈಸೂರು, ಕೊಡಗು, ದಾವಣಗೆರೆ, ಚಿತ್ರದುರ್ಗ,ಧಾರವಾಡ, ಬೀದರ್, ಕೊಪ್ಪಳದಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದರು. 45ಕ್ಕೂ …

Read More »

ಎಲಿಜಬೆತ್ ಅವರು ಚೆನ್ನೈನಲ್ಲಿ ಪಶುವೈದ್ಯಕೀಯ ರೋಗಶಾಸ್ತ್ರಜ್ಞರಾಗಿದ್ದಾರೆ…

ಸುಳ್ಯ: ಕೇರಳದ ಗಡಿ ಪ್ರದೇಶವಾದ ಬದಿಯಡ್ಕದ ಎಲಿಜಬೆತ್‌ ವರ್ಗೀಸ್​​ಗೆ ಅಮೆರಿಕದಿಂದ 2.5 ಕೋಟಿ ರೂಪಾಯಿಯ ಫೆಲೋಶಿಪ್ ಲಭ್ಯವಾಗಿದೆ. ಅಮೆರಿಕದ ಸ್ಟಿಲ್ವಾಟರ್ ಒಕ್ಲಹೋಮ ಸ್ಟೇಟ್ ಯೂನಿವರ್ಸಿಟಿಯಿಂದ 5 ವರ್ಷಗಳ ಸಂಶೋಧನೆಗಾಗಿ ಬದಿಯಡ್ಕದ ಚುಳ್ಳಿಕಾನ ನಿವಾಸಿ ಎಲಿಜಬೆತ್ ಅವರಿಗೆ ಪಶುವೈದ್ಯಕೀಯ ರೋಗಶಾಸ್ತ್ರದಲ್ಲಿ ಸಂಶೋಧನೆ ನಡೆಸುವುದಕ್ಕಾಗಿ ಈ 2.5 ಕೋಟಿ ರೂಪಾಯಿಯ ಫೆಲೋಶಿಪ್ ಲಭ್ಯವಾಗಿದೆ. ಎಲಿಜಬೆತ್ ಅವರು ಚೆನ್ನೈನಲ್ಲಿ ಪಶುವೈದ್ಯಕೀಯ ರೋಗಶಾಸ್ತ್ರಜ್ಞರಾಗಿದ್ದಾರೆ. ಎಲಿಜಬೆತ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಮಿಳುನಾಡಿನಲ್ಲಿ ಪಡೆದು ನಂತರದ ಶಿಕ್ಷಣವನ್ನು ಗೋರಕ್‌ಪುರದಲ್ಲಿ …

Read More »

ಐದು ವರ್ಷದ ಬಾಲಕಿಗೆ ಬೀದಿ ನಾಯಿ ಹಲ್ಲೆ….

ನವಲಗುಂದ : ಪಟ್ಟಣದ ದೇಸಾಯಿ ಪೇಟೆಯಲ್ಲಿ ಐದು ವರ್ಷದ ಬಾಲಕಿಗೆ ಬೀದಿ ನಾಯಿ ಹಲ್ಲೆ ಮಾಡಿ ಗಂಭೀರ ಗಾಯಗೊಳಿಸಿದ ಘಟನೆ ಜರುಗಿದೆ. ಮನೆ ಮುಂಭಾಗದಲ್ಲಿ ಬಾಲಕಿ ಭಾಗ್ಯಶ್ರೀ ಕೊಟಗಿ (5) ಆಟ ಆಡುತ್ತಿರುವಾಗ ಏಕಾಏಕಿ ನಾಯಿ ಹಲ್ಲೆ ಮಾಡಿ ಬಾಲಕಿಯ ಬಲ ಕಣ್ಣಿನ ಮೇಲ್ಬಾಗದಲ್ಲಿ ಗಂಭೀರ ಗಾಯ ಮಾಡಿದೆ ಇನ್ನು ಸ್ಥಳೀಯರು ನಾಯಿಯನ್ನು ಹೊಡೆದು ಓಡಿಸಿದ್ದಾರೆ. ಬಾಲಕಿಯನ್ನು ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ …

Read More »

ಪ್ರೇಮ ಲೋಕದಲ್ಲಿ ವಿಹರಿಸುತ್ತಿದ್ದ ಪ್ರೇಮಿಗಳ ಬಾಳಲ್ಲಿ ಸುನಾಮಿ…

ಅವರಿಬ್ಬರು ಎದುರು ಬದುರು ಮನೆಯವರು. ಅವನು ಐಟಿಐ ಮುಗಿಸಿ ಕೆಲಸಕ್ಕೆ ಹೋಗ್ತಿದ್ರೆ ಅವನ ಎದುರು ಮನೆಯಲ್ಲಿದ್ದ ಹುಡುಗಿ ಇನ್ನೂ ಪಿ.ಯು.ಸಿ ಓದುತ್ತಿದ್ಲು. ಇಬ್ಬರೂ ಒಟ್ಟಿಗೆ ಆಡಿ ಬೆಳದಿದ್ರೂ ಇಬ್ಬರ ಮಧ್ಯೆ 6 ವರ್ಷದ ಹಿಂದೆ ಪ್ರೀತಿ(Love) ಹುಟ್ಟಿತ್ತ.. ಯಾರಿಗೂ ಗೊತ್ತಾಗದ ಹಾಗೆ 6 ವರ್ಷ ಪ್ರೀತಿ ಮಾಡಿದ್ರು. ಅದೆಷ್ಟು ಡೀಪಾಗಿ ಲವ್ ಮಾಡ್ತಿದ್ರು ಅಂದ್ರೆ ಇಬ್ಬರೂ ಅದೆಷ್ಟೋ ದಿನಗಳನ್ನ ಏಕಾಂತವಾಗಿ ಕಳೆದಿದ್ರು. ಹೀಗೆ ಪ್ರೇಮ ಲೋಕದಲ್ಲಿ ವಿಹರಿಸುತ್ತಿದ್ದ ಇವರಿಬ್ಬರ ಬಾಳಲ್ಲಿ …

Read More »

ಧಾರವಾಡದ ಶಿವಾಜಿ ಮಹಾರಾಜ ಪದವಿ ಕಾಲೇಜು ಸಭಾಂಗಣದಲ್ಲಿ ನಾಳೆ ಪವಾಡ ರಹಸ್ಯ ಬಯಲು ಕಾರ್ಯಕ್ರಮ….

ಧಾರವಾಡ: ಧಾರವಾಡದ ಶಿವಾಜಿ ಮಹಾರಾಜ ಪದವಿ ಕಾಲೇಜು ಸಭಾಂಗಣದಲ್ಲಿ ನಾಳೆ ಶುಕ್ರವಾರ ಮದ್ಯಾಹ್ನ 2,30, ಗಂಟೆಗೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಖ್ಯಾತ ಪವಾಡ ತಜ್ಞರು, ಕುಂದಗೋಳ ತಾಲೂಕಿನ ಭಾರತ ಜ್ಞಾನ ವಿಜ್ಞಾನ ಸಮಿತಿಯ ಅದ್ಯಕ್ಷರೂ ಆಗಿರುವ ಡಾ, ಮಂಜುನಾಥ ಬಾರಕೇರ ಅವರಿಂದ ವೈಜ್ಞಾನಿಕ ಮನೋವೃತ್ತಿ ಮೂಡಿಸುವ ಉದ್ದೇಶದಿಂದ, ನ್ಯಾಶನಲ್ ಸೈಂಟಿಫಿಕ್ ಟೆಂಪರ್ ಡೇ ಅಂಗವಾಗಿ, ಈ ಕಾರ್ಯಕ್ರಮ ಜರುಗಲಿದ್ದು, ಮರಾಠ ವಿದ್ಯಾ ಪ್ರಸಾರಕ ಮಂಡಳಿ ಶ್ರೀ ಛತ್ರಪತಿ ಶಿವಾಜಿ …

Read More »

ಶ್ರಾವಣ ಮಾಸದಲ್ಲಿ ಇಷ್ಟಲಿಂಗ ಪೂಜೆ ಮೂಲಕ ಮತ್ತೆ ಹೋರಾಟ: ಜಯ ಮೃತ್ಯುಂಜಯ ಸ್ವಾಮೀಜಿ.

ಹುಬ್ಬಳ್ಳಿ: ಮೀಸಲಾತಿಗಾಗಿ ಮತ್ತೆ ಹೋರಾಟ ಮಾಡುತ್ತೇವೆ. ಇದೇ ತಿಂಗಳಿನಿಂದ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ ಎಂದು ಹುಬ್ಬಳ್ಳಿಯಲ್ಲಿ ಪಂಚಮಸಾಲಿ‌ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಮೀಸಲಾತಿ ವಿಚಾರ ಇನ್ನೂ ನ್ಯಾಯಾಲಯದಲ್ಲಿದೆ. 2ಎ ಹಾಗೂ 2ಡಿ ಮೀಸಲಾತಿ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದೆ. ಈ ಸರ್ಕಾರಕ್ಕೂ ನಾವು ಮನವಿ ಮಾಡಿದ್ದೇವೆ. ಬಜೆಟ್ ಅಧಿವೇಶನದ ನಂತರ ಸಭೆ ಕರೆದು ಪರಿಶೀಲನೆ ಮಾಡುವುದಾಗಿ ಸಿಎಂ ಹೇಳಿದ್ದರು ಎಂದು ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು. …

Read More »

ಜನಸಂಪರ್ಕ ಕಾರ್ಯಾಲಯ ಮಿನಿ ವಿಧಾನಸೌಧದ ಮೂರನೇ ಮಹಡಿಯಲ್ಲಿ ಉದ್ಘಾಟನೆ…..

ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಮತಕ್ಷೇತ್ರದ ಶಾಸಕ ಎಮ್.ಆರ್.ಪಾಟೀಲ್ ಅವರ ಜನಸಂಪರ್ಕ ಕಾರ್ಯಾಲಯ ಇಲ್ಲಿನ ಮಿನಿ ವಿಧಾನಸೌಧದ ಮೂರನೇ ಮಹಡಿಯಲ್ಲಿ ಉದ್ಘಾಟನೆ ಮಾಡಲಾಯಿತು. ಕ್ಷೇತ್ರದ ಹಿರಿಯ ನಾಗರಿಕರು ಈ ಕಾರ್ಯಾಲಯವನ್ನು ರಿಬ್ಬನ್ ಕತ್ತಿರುವ ಮೂಲಕ ಶಾಸಕರ ಸಮ್ಮುಖದಲ್ಲಿ ಉದ್ಘಾಟನೆ ಮಾಡಿದರು. ಬಳಿಕ ಕಚೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಂದಗೋಳ ರಾಜ್ಯದಲ್ಲಿಯೇ ಹಿಂದೂಳಿದ ತಾಲೂಲು ಎಂಬ ಹಣೆಪಟ್ಟಿ ಹೊತ್ತಿದೆ. ನಮ್ಮ ಕ್ಷೇತ್ರದಲ್ಲಿ ರೈತಾಪಿ ವರ್ಗವೇ ಹೆಚ್ಚಿದ್ದು, …

Read More »