Breaking News

Breaking News

ಕೇಂದ್ರ ಸಚಿವಾಲಯಗಳಿಗೆ ಹೊಸ ಕಾರ್ಯದರ್ಶಿಗಳ ನೇಮಕ: ಸಂಪುಟದ ನೇಮಕಾತಿ ಸಮಿತಿ ಅನುಮೋದನೆ

ನವದೆಹಲಿ: ನಾಲ್ಕು ಕೇಂದ್ರ ಸಚಿವಾಲಯಗಳಿಗೆ ಹೊಸ ಕಾರ್ಯದರ್ಶಿಗಳು ಸೇರಿದಂತೆ ಏಳು ಕಾರ್ಯದರ್ಶಿ ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡಲು ಸಂಪುಟದ ನೇಮಕಾತಿ ಸಮಿತಿ (ಎಸಿಸಿ) ಅನುಮೋದನೆ ನೀಡಿದೆ. ಪಶ್ಚಿಮ ಬಂಗಾಳ ಕೇಡರ್ನ (1990 ರ ಬ್ಯಾಚ್) ಐಎಎಸ್ ಅಧಿಕಾರಿ ಸುಬ್ರತಾ ಗುಪ್ತಾ ಅವರನ್ನು ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ ಕಾರ್ಯದರ್ಶಿಯಾಗಿ ನೇಮಿಸಲಾಗಿದ್ದು, ಪ್ರಸ್ತುತ ಕಾರ್ಯದರ್ಶಿ ಅನಿತಾ ಪ್ರವೀಣ್ ಅವರು ನವೆಂಬರ್ 30 ರಂದು ನಿವೃತ್ತರಾಗಲಿದ್ದಾರೆ. ರಾಜಸ್ಥಾನ ಕೇಡರ್ನ 1993ರ ಬ್ಯಾಚ್ನ ಐಎಎಸ್ …

Read More »

ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಯಲ್ಲಿ ಇತಿಹಾಸದಲ್ಲಿ ಕಂಡು ಕೇಳರಿಯದ ಮಳೆ: ದತ್ತಪೀಠದಲ್ಲಿ 2 ಅಡಿ ನಿಂತ ನೀರು

ಚಿಕ್ಕಮಗಳೂರು: ರಾಜ್ಯದೆಲ್ಲೆಡೆ ಅಕ್ಟೋಬರ್‌ ತಿಂಗಳಿನಲ್ಲಿ ಹಿಂಗಾರು ಮಳೆ ಹೆಚ್ಚಾಗಿದೆ ವಿಶೇಷವಾಗಿ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಯಲ್ಲಿ ಇತಿಹಾಸದಲ್ಲಿ ಕಂಡು ಕೇಳರಿಯದ ಮಳೆ ದಾಖಲಾಗಿದೆ. ಕರ್ನಾಟಕದ ಅತ್ಯಂತ ಎತ್ತರದ ಪ್ರದೇಶ ಮುಳ್ಳಯ್ಯನಗಿರಿಯ ದತ್ತಪೀಠದಲ್ಲಿ 2 ಅಡಿ ಮಳೆ ನೀರು ನಿಂತುಕೊಂಡಿದೆ. ಹಿಂಗಾರು ಮಳೆಗೆ ಪಶ್ಚಿಮಘಟ್ಟಗಳ ತಪ್ಪಲು ಅಲ್ಲೋಲ-ಕಲ್ಲೋಲವಾಗಿದೆ. ಕಳೆದ ದಿನ ಸುರಿದ ಭಾರೀ ಮಳೆಗೆ ದತ್ತಪೀಠದ ರಸ್ತೆಯಲ್ಲಿ 2 ಅಡಿ ಎತ್ತರದಲ್ಲಿ ಮಳೆ ನೀರು ಹರಿದಿದೆ. ಮಳೆರಾಯನ ಅಬ್ಬರಕ್ಕೆ ಪ್ರವಾಸಿಗರು ತೊಯ್ದು ತೊಪ್ಪೆಯಾಗಿದ್ದಾರೆ ಮಳೆ …

Read More »

ಒಳ ಮೀಸಲಾತಿ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದ 3 ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಸಂದರ್ಭದಲ್ಲೇ ಪರಿಶಿಷ್ಟ ಜಾತಿ ಮೀಸಲು ವರ್ಗೀಕರಣ ವಿಚಾರ ಸರ್ಕಾರಕ್ಕೆ ತಲೆಬೇನೆ ತರಿಸಿದೆ, ಎಡ ಸಮುದಾಯದ ವಿಶ್ವಾಸ ಗಳಿಸಲು ಸರ್ಕಸ್ ಆರಂಭಿಸಿರುವ ಸಿಎಂ ಸಿದ್ದರಾಮಯ್ಯ ಅ.24ರ ಸಚಿವ ಸಂಪುಟ ಸಭೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲು ನಿರ್ಧರಿಸಿದ್ದಾರೆ. ಒಳಮೀಸಲಾತಿ ವಿಚಾರವಾಗಿ ನಡೆದ ಸಚಿವರು, ಮಾಜಿ ಸಚಿವರು, ಶಾಸಕರು, ಅಧಿಕಾರಿಗಳ ಸಭೆ ಯಲ್ಲಿ ಈ ತೀರ್ಮಾನ ಹೊರಬಿದ್ದಿದೆ. ಸಚಿವ ಮುನಿಯಪ್ಪ ಸಭೆಯ ನಿರ್ಧಾರಗಳ ಮಾಹಿತಿ …

Read More »

ಬೆಣ್ಣೆಹಳ್ಳದಿಂದ ಭಾರಿ ಹಾನಿಯಾಗುತ್ತೀದ್ದು, ಅದಕ್ಕೆ ಸೂಕ್ತ ಪರಿಹಾರ ನೀಡಲಾಗುವುದು: ಕೋನರಡ್ಡಿ

ನವಲಗುಂದ: ತಾಲೂಕಿನ ಬೆಣ್ಣೆಹಳ್ಳ ಅಕ್ಕಪಕ್ಕ ಇರುವ ಗ್ರಾಮಗಳ, ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಈರುಳ್ಳಿ, ಗೋವಿನಜೋಳ, ಮೆಣಸಿನಕಾಯಿ ಬೆಳೆ ಹಾನಿ ತಪ್ಪಿಸಲು ಶಾಶ್ವತ ಪರಿಹಾರಕ್ಕಾಗಿ ಬೆಣ್ಣೆಹಳ್ಳದ ಅಗಲೀಕರಣ ಮಾಡಿ ಗ್ರಾಮಗಳಿಗೆ ನೀರು ನುಗ್ಗದಂತೆ ಈ ವರ್ಷವೇ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಶಾಸಕ ಎನ್.ಹೆಚ್. ಕೋನರಡ್ಡಿ ಹೇಳಿದರು. ತಾಲೂಕಿನ ಗುಡಿಸಾಗರ, ನಾಗನೂರ, ಸೊಟಕನಾಳ, ಕಡದಳ್ಳಿ, ಅರಹಟ್ಟಿ ಹಾಗೂ ತಡಹಾಳ ಗ್ರಾಮಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ತಡಹಾಳ ಹತ್ತಿರ ಪ್ರತಿ ವರ್ಷ …

Read More »

ಪ್ರಯಾಣಿಕರ ಬ್ಯಾಗ್ ಮರಳಿಸಿ ಪ್ರಮಾಣಿಕತೆ ಮರೆದ ಬಸ್ಸ್ ಚಾಲಕ

ಕುಂದಗೋಳ : ಪ್ರಯಾಣಿಕರೊಬ್ಬರು ಸಾರಿಗೆ ಬಸ್‌ ಒಳಗೆ ಮರೆತು ಹೋದ ನಗದು ಹಣ, ಬೆಳ್ಳಿ ಆಭರಣ ಮತ್ತು ಬಟ್ಟೆ ಬರೆ ಇರುವ ಬ್ಯಾಗನ್ನು ಪುನಃ ಪ್ರಯಾಣಿಕರಿಗೆ ತಲುಪಿಸುವ ಮೂಲಕ ಸಾರಿಗೆ ನಿರ್ವಾಹಕ ಮತ್ತು ಚಾಲಕ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ನವಲಗುಂದ ತಾಲೂಕಿನ ಹಣಸಿ ಗ್ರಾಮದ ಕಮಲಾ ಎಂಬ ಮಹಿಳೆ ಕುಂದಗೋಳ ತಾಲೂಕಿನ ದೇವನೂರು ಗ್ರಾಮಕ್ಕೆ ತೆರಳಲು ಹುಬ್ಬಳ್ಳಿಯಿಂದ ಕುಂದಗೋಳ ಮಾರ್ಗವಾಗಿ ಹೊರಡುವ ಯರಗುಪ್ಪಿ ಬಸ್‌’ನಲ್ಲಿ ಪ್ರಯಾಣ ಬೆಳೆಸಿದ್ದರು.ಪ್ರಯಾಣ ಮಧ್ಯೆ ಕುಂದಗೋಳದಲ್ಲಿ …

Read More »

ಕ್ವಾಯಿಲ್ ಹಾಕುವ ವೇಳೆ ವಿದ್ಯುತ್‌ ಶಾಕ್ ಆಗಿ ಯುವಕ ಸಾವು

ಕುಂದಗೋಳ: ನೀರನ್ನು ಕಾಯಿಸಲು ಕ್ವಾಯಿಲ್ ಹಾಕುವ ವೇಳೆ ವಿದ್ಯುತ್‌ ಶಾಕ್ ಆಗಿ ಯುವಕನೋರ್ವ ಮೃತಪಟ್ಟ ಘಟನೆ ಕುಂದಗೋಳ ತಾಲೂಕಿನ ಕುಂಕೂರು ಗ್ರಾಮದಲ್ಲಿ ಸಂಭವಿಸಿದೆ. ಕುಂದಗೋಳ ತಾಲೂಕಿನ ಕುಂಕೂರು ಗ್ರಾಮದ ಅಲಿ ಮರ್ತುಜಾ ಮೌಲಾಲಿ ದೊಡ್ಡಮನಿ (21) ಮೃತ ದುರ್ದೈವಿಯಾಗಿದ್ದಾನೆ. ಕುಂಕೂರು ಗ್ರಾಮದ ಜಾಮೀಯಾ ಮಸೀದಿಯಲ್ಲಿ ಇಮಾಮತ ಕೆಲಸ ಮಾಡುತ್ತಿದ್ದ ಯುವಕ, ಶುಕ್ರವಾರ ಬೆಳಿಗ್ಗೆ ತಾನು ವಾಸಿಸುತ್ತಿದ್ದ ಕೋಣೆಯಲ್ಲಿ ನೀರು ಕಾಯಿಸಲು ವಿದ್ಯುತ್‌ ಸ್ವಿಚ್ ಗೆ ಕ್ವಾಯಿಲ್ ಹಾಕಿ ಕೈಯಲ್ಲಿ ಹಿಡಿದುಕೊಂಡಾಗ …

Read More »

ನಿವೃತ್ತ ನೌಕರರು ಪಿಂಚಣಿಯನ್ನು ಹೆಚ್ಚಳ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ

ಧಾರವಾಡ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಿವೃತ್ತ ನೌಕರರು ಹಾಗೂ ಇಪಿಎಸ್-95 ನೌಕರರ ಪಿಂಚಣಿಯನ್ನು ಹೆಚ್ಚಳ ಮಾಡುವಂತೆ ಆಗ್ರಹಿಸಿ ನಿವೃತ್ತ ನೌಕರರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ದೇಶದ ಎಲ್ಲ 78 ಲಕ್ಷ ಇಪಿಎಸ್ ನಿವೃತ್ತ ನೌಕರರಿಗೆ 1 ಸಾವಿರದಿಂದ 3 ಸಾವಿರ ಮಾತ್ರ ಮಾಸಿಕ ಪಿಂಚಣಿ ನೀಡಲಾಗುತ್ತಿದೆ. ಈ ಪಿಂಚಣಿಯಲ್ಲಿ ಜೀವನ ನಡೆಸುವುದೇ ದುರ್ಬರವಾಗಿದೆ. ಆದ್ದರಿಂದ ಭಗತ್‌ಸಿಂಗ್‌ ಕೋಶ್ಯಾರಿ ವರದಿಯನ್ನು ಜಾರಿ ಮಾಡಬೇಕು ಎಂದು ನಿವೃತ್ತ …

Read More »

ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿದ ದಿವ್ಯ ಪ್ರಭು

ಕುಂದಗೋಳ : ಬೆಣ್ಣೆ ಹಳ್ಳದ ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡು ನಿರಾಶ್ರಿತರ ಕೇಂದ್ರ ಸೇರಿದ ಹಂಚಿನಾಳ ಗ್ರಾಮದ ಜನರನ್ನೂ ನಿರಾಶ್ರಿತರ ಕೇಂದ್ರದಲ್ಲೇ ಜಿಲ್ಲಾಧಿಕಾರಿ ದಿವ್ಯ ಪ್ರಭು ಭೇಟಿ ಮಾಡಿ ಸಮಸ್ಯೆ ಆಲಿಸಿದರು. ಕುಂದಗೋಳ ತಾಲೂಕಿನ ಹಂಚಿನಾಳ ಗ್ರಾಮಕ್ಕೆ ಬೆಣ್ಣೆ ಹಳ್ಳದ ಪ್ರವಾಹದಿಂದ ನೀರು ನುಗ್ಗಿ 25 ಮನೆಗಳು ಜಲಾವೃತವಾಗಿ ನಿರಾಶ್ರಿತರ ಕೇಂದ್ರ ತೆರೆದಿತ್ತು. ಈ ವಿಷಯವಾಗಿ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ನಿರಾಶ್ರಿತರ ಸಮಸ್ಯೆ ಆಲಿಸಿದಾಗ …

Read More »

ಗೋಪಾಲ ಜೋಶಿ ಕುರಿತು ಸ್ಪೋಟಕ್ ಮಾಹಿತಿ ಬಿಚ್ಚಿಟ್ಟಿ ಪ್ರಲ್ಹಾದ ಜೋಶಿ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು, ರಾಷ್ಟ್ರೀಯ ರಾಜಕಾರಣದಲ್ಲಿ ಬಹುದೊಡ್ಡ ಛಾಪನ್ನು ಮೂಡಿಸಿರುವ ಜನನಾಯಕ. ಆದರೆ ಟಿಕೆಟ್ ವಂಚನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವರ ಮೇಲೆ ಸುಳ್ಳು ಆರೋಪ ಕೇಳಿ ಬಂದಿರುವ ಬೆನ್ನಲ್ಲೇ ಈಗ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ಬಿಚ್ಚಿಟ್ಟಿದ್ದಾರೆ. ಸಹೋದರ ಗೋಪಾಲ ಜೋಶಿಯವರ ಜೊತೆಗಿನ ಸಹೋದರ ಸಂಬಂಧವನ್ನು 32 ವರ್ಷಗಳ ಹಿಂದೆಯೇ ಕಳೆದುಕೊಂಡಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು, ಈಗ ಮತ್ತೊಂದು ಸತ್ಯವನ್ನು ಹೊರಹಾಕಿದ್ದಾರೆ. ಕೇಂದ್ರ ಸಚಿವ …

Read More »

ಗೋಪಾಲ್‌ ಜೋಶಿ ಪ್ರಕರಣದಲ್ಲಿ ಕಾಂಗ್ರೆಸ್ ಪ್ರಹ್ಲಾದ ಜೋಶಿ ಅವರ ಘನತೆ, ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡಬಾರದು: ಮಹೇಶ ಟೆಂಗಿನಕಾಯಿ

ಹುಬ್ಬಳ್ಳಿ: ಗೋಪಾಲ್‌ ಜೋಶಿ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದವರು ವಿನಾಕಾರಣ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಘನತೆ, ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡಬಾರದು ಎಂದು ಹುಬ್ಬಳ್ಳಿ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಆಗ್ರಹಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷ ಕೇಂದ್ರ ಸಚಿವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಬಾರದು. ಇದನ್ನು ತೀವ್ರವಾಗಿ ವಿರೋಧಿಸುತ್ತೇವೆ ಎಂದು ಹೇಳಿದರು. ಪ್ರಲ್ಲಾದ ಜೋಶಿ ಅವರ ಕುಟುಂಬ ಕಳೆದ …

Read More »