Shaikh BigTv
October 13, 2024
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ಬೈಕ್ ಟಚ್ ಆದ ವಿಚಾರಕ್ಕೆ ದಾಯಾದಿಗಳ ನಡುವೆ ಮಾತಿಗೆ ಮಾತು ಬೆಳೆದು ಸಿದ್ದಾರ್ಥ ಎಂಬಾತನ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಿದ ಪರಿಣಾಮ ಯುವಕನ ತಲೆಗೆ ಗಂಭೀರ ಗಾಯವಾದ ಘಟನೆ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಬಿ ನಗರದಲ್ಲಿ ನಡೆದಿದೆ. ಸಿದ್ದಾರ್ಥ ಎಂಬ ಯುವಕ ಅಕ್ಕಿ ಹೊಂಡ ಬಳಿಯಲ್ಲಿ ಬೈಕ್ ತೆಗೆಯುತ್ತಿದ್ದಾಗ ಈತನ ಸಂಬಂಧಿಯಾದ ಪ್ರಭು ಎಂಬಾತ ಪಲ್ಸರ್ ಬೈಕ್‌ನಲ್ಲಿ ಬಂದು ಈತನ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. …
Read More »
Shaikh BigTv
October 13, 2024
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿರುವ ಅಪರ್ಣಾ ಅಪಾರ್ಟೆಂಟ್ ನಲ್ಲಿನ ದತ್ತಾತ್ರೇಯ ದೇವಸ್ಥಾನದಲ್ಲಿ ದತ್ತಾತ್ರೇಯ ಮೂರ್ತಿಯನ್ನು ಭಗ್ನ ಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಷಿ ಅಪರ್ಣಾ ಅಪಾರ್ಟ್‌ಮೆಂಟ್‌ನಲ್ಲಿರುವ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ವಾರದ ಕೆಳಗೆ ದತ್ತಾತ್ರೇಯ ದೇವಸ್ಥಾನದಲ್ಲಿ ಇಡಲಾಗಿದ್ದ ದತ್ತಾತ್ರೇಯ ಮೂರ್ತಿಯ ನಾಲ್ಕು ಕೈಗಳನ್ನು ಮೂರಿದು ವಿರೂಪಗೊಳಿಸಲಾಗಿತ್ತು. ಈ ಕುರಿತು ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿತ್ತು. ಆದ್ರೆ ತಾಂತ್ರಿಕ …
Read More »
Shaikh BigTv
October 13, 2024
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷ ಇಸ್ಲಾಮಿಕ್ ಭಯೋತ್ಪಾದಕರಿಗೆ ಬೆಂಬಲಿತ ಪಾರ್ಟಿ ಎಂಬುದಕ್ಕೆ ಸಾಕ್ಷಿ ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣವನ್ನು ಹಿಂದಕ್ಕೆ ತೆಗೆದುಕೊಂಡಿರುವುದರಲ್ಲಿಯೇ ಕಂಡು ಬರುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರಾಜ್ಯ ಸರಕಾರದ ವಿರುದ್ಧ ಹರಿಹಾಯ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹುಬ್ಬಳ್ಳಿಗೆ ಬರುತ್ತಿರೋ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಧಿಕಾರಿಗಳು ಕೂಡ ನೀವು ಯಾವ ಕಾರಣಕ್ಕಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದೀರಾ ಅಂತಾ ಕೇಳಿದ್ದಾರೆ. ನಾನು ಅವರಿಗೆ ಹೇಳಿದ್ದು ನಾವು …
Read More »
Shaikh BigTv
October 13, 2024
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ರಾಜ್ಯ ಸರ್ಕಾರ ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆಯ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ಮಾಡಿದವರ ವಿರುದ್ಧ ದಾಖಲಾಗಿದ್ದ ಕೇಸ್‌ಗಳನ್ನು ವಾಪಸ್ ಪಡೆದಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕಮಿಷನರ್ ಎನ್.ಶಶಿಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರ ಕೇಸ್ ಹಿಂದೆ ಪಡೆದಿರೋ ವಿಚಾರಕ್ಕೆ ಸಂಬಂಧಿಸಿದಂತೆ ವಿವಿಧ ಪಕ್ಷದ ಮುಖಂಡರು ಹೇಳಿಕೆ ನೀಡಿದ್ದನ್ನು ನೋಡಿದ್ದೇನೆ. ಆದ್ರೆ ನಮಗೆ ಹಿರಿಯ ಅಧಿಕಾರಿಗಳಿಂದ ಹಾಗೂ ಸರ್ಕಾರದಿಂದ ಯಾವುದೇ ರೀತಿಯಾದ ಮಾಹಿತಿ ಬಂದಿಲ್ಲ. ಈ ಕುರಿತು …
Read More »
Shaikh BigTv
October 13, 2024
Breaking News, ಧಾರವಾಡ
ನವಲಗುಂದ: ಕಾಲವಾಡ ಗ್ರಾಮದ 45 ವರ್ಷದ ಲಕ್ಷ್ಮಣ ಹಣಮಂತಪ್ಪ ಬಾರಕೇರ ಎಂಬ ರೈತ ತನ್ನ ಜಮೀನಿಗೆ ಹೋದ ಸಮಯದಲ್ಲಿ ಏಕಾಏಕಿ ಬೆಣ್ಣೆಹಳ್ಳದ ನೀರು ಬಂದದ್ದರಿಂದ ಅಲ್ಲಿಯೇ ಹತ್ತಿರದಲ್ಲಿದ್ದ ಕಲ್ಯಾಣ ಬಸವೇಶ್ವರ ದೇವಸ್ಥಾನ ಕಟ್ಟೆಯನ್ನೇರಿ ಮೂರು ದಿನಗಳಿಂದ ಅಲ್ಲಿಯೇ ಉಳಿದಿದ್ದ. ಮೂರು ದಿನಗಳ ಕಾಲ ಊಟ, ನೀರು ಇಲ್ಲದೆ ಕುಳಿತ ಜಾಗದಲ್ಲೇ ಕುಳಿತ ಹನುಮಂತಪ್ಪನನ್ನು ಇಂದು ಬೆಳಿಗ್ಗೆ ಅಗ್ನಿಶಾಮಕ ದಳ ಸಿಬ್ಬಂದಿ ಸಹಾಯದಿಂದ ರಕ್ಷಿಸಲಾಗಿದೆ. ಘಟನೆ ತಿಳಿದ ತಕ್ಷಣ ಶಾಸಕ ಎನ್.ಎಚ್.ಕೋನರಡ್ಡಿ …
Read More »
Shaikh BigTv
October 13, 2024
Breaking News, ಹುಬ್ಬಳ್ಳಿ
ಧಾರವಾಡ: ಚಲಿಸುತ್ತಿದ್ದ ಕಾರಿಗೆ ಏಕಾಏಕಿ ಬೆಂಕಿ ಹತ್ತಿ ನಡು ರಸ್ತೆಯಲ್ಲೇ ಆ ಕಾರು ಧಗಧಗನೇ ಹೊತ್ತಿ ಉರಿದ ಘಟನೆ ಧಾರವಾಡದ ಸತ್ತೂರು ಕೆಎಚ್‌ಬಿ ಕಾಲೊನಿಯಲ್ಲಿ ಸಂಭವಿಸಿದೆ. ಸಾಧನಕೆರೆಯ ಶಿವಪುತ್ರಪ್ಪ ಹರಿಹರ ಎಂಬುವವರಿಗೆ ಸೇರಿದ ಕಾರು ಇದಾಗಿದ್ದು, ತಾಂತ್ರಿಕ ದೋಷದಿಂದ ಕಾರು ಹೊತ್ತಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರು ಬಿಟ್ಟು ಎಲ್ಲರೂ ಕೆಳಗೆ ಇಳಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಧಾರವಾಡ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
Read More »
Shaikh BigTv
October 13, 2024
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಎಟಿಎಂ ಬೂತ್ ಒಳಗೆ ಯಾರೋ ನಿರಾಶ್ರಿತರು ಆರಾಮವಾಗಿ ಕುಳಿತಿದ್ದು, ಅಷ್ಟೇ ಅಲ್ಲದೆ ಅಲ್ಲೆ ಉಗುಳಿ ಗಲೀಜು ಕೂಡ ಮಾಡುತ್ತಿರುವ ಈ ವಿಡಿಯೋ ಹುಬ್ಬಳ್ಳಿಯ ಸಿದ್ಧಾರೂಢರ ಮಠದ ಆವರಣದಲ್ಲಿರುವ ಎಟಿಎಂನಲ್ಲಿ ನಡೆದಿದೆ. ಈ ಎಟಿಎಂ ಬೂತ್ ಹಳೇ ಹುಬ್ಬಳ್ಳಿಯ ಪೊಲೀಸ್ ಹೊರಠಾಣೆ ಪಕ್ಕದಲ್ಲೆ ಇದೆ. ಇಲ್ಲಿ ಸೆಕ್ಯುರಿಟಿನೇ ಇಲ್ಲ. ಜನರು ಹಣ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹೀಗೆ ಸೆಕ್ಯುರಿಟಿ ಇಲ್ಲದ ಈ ಎಟಿಎಂ ಬೂತ್‌ನಲ್ಲಿ ಏನಾದ್ರು ಕಳ್ಳತನವಾದ್ರೆ ಯಾರು ಹೊಣೆ? …
Read More »
Shaikh BigTv
October 13, 2024
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಬಿಜೆಪಿ ಉಗ್ರಗಾಮಿಗಳ ಪಕ್ಷ ಎಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಏನು ನಡೆಯುತ್ತಿದೆ ಎಂಬ ಆಧಾರದ ಮೇಲೆ ಖರ್ಗೆ ಅವರು ಈ ಮಾತನ್ನು ಹೇಳಿರಬೇಕು. ಬಾಬಾ ಜಗಜೀವನ್ ರಾಮ್, ಅಂಬೇಡ್ಕರ್ ಹಾಗೂ ಸೀತಾರಾಮ್ ಅವರಿಗೆ ಘೋರವಾದ ಅನ್ಯಾಯ ಮಾಡಿದ್ದಾರೆ. ಇವತ್ತು ಒಂದೇ ಒಂದು OBC ಪ್ರಧಾನ ಮಂತ್ರಿ ಮಾಡಿಲ್ಲ. ಎಲ್ಲವನ್ನು ನಕಲಿ ಗಾಂಧಿಗೆ ಮೀಸಲಿಟ್ಟಿದ್ದಾರೆ. ನೀವು …
Read More »
BigTv News
October 12, 2024
Breaking News, ಕಲಬುರಗಿ
ಕಲಬುರಗಿ : ಒಳ ಮೀಸಲಾತಿ ಸಂಬಂಧ ಇಂದು ಕಲಬುರ್ಗಿ ಜಿಲ್ಲಾ ಮಾದಿಗರ ಒಕ್ಕೂಟವು ಕಲ್ಬುರ್ಗಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಒಳಮಿಸಲಾತಿ ಜಾರಿಗೆ ಮಾಡುವಂತೆ ಸರ್ಕಾರಕ್ಕೆ ಸೂಚಿಸಿ ಎಂದು ಮಾದಿಗರ ಒಕ್ಕೂಟವು ಮನವಿ ಮಾಡಿದೆ. ಒಳ ಮೀಸಲಾತಿ ಜಾರಿ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಮನವಿ ಮಾಡಲಾಯಿತು. ಕಲಬುರ್ಗಿ ಜಿಲ್ಲಾ ಮಾದಿಗರ ಒಕ್ಕೂಟದಿಂದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮನವಿ ಮಾಡಿದ್ದು, ಸಿಎಂ ಸಿದ್ದರಾಮಯ್ಯ ಅವರಿಗೆ ಸೂಚನೆ …
Read More »
BigTv News
October 12, 2024
Breaking News, ಬೆಂಗಳೂರು
ಬೆಂಗಳೂರು: 2024-25 ನೇ ಸಾಲಿನಲ್ಲಿ ಕೃಷಿ ಭಾಗ್ಯ ಯೋಜನೆಯಡಿ ಕ್ಷೇತ್ರ ಬದು ನಿರ್ಮಾಣ, ಕೃಷಿ ಹೊಂಡ, ಪಾಲಿಥೀನ್ ಹೊದಿಕೆ, ಡೀಸೆಲ್, ಪೆಟ್ರೋಲ್ ಪಂಪಸೆಟ್ (ಗರಿಷ್ಠ 10 ಎಚ್‍ಪಿ), ಲಘು ನೀರಾವರಿ ಹಾಗೂ ತಂತಿ ಬೇಲಿ ಘಟಕಗಳನ್ನು ಅಳವಡಿಸಿಕೊಳ್ಳಲು ಇಚ್ಛಿಸುವ ಅರ್ಹ ರೈತರಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಸೂಕ್ತ ದಾಖಲಾತಿಗಳೊಂದಿಗೆ ಅಕ್ಟೋಬರ್ 20, 2024 ರೊಳಗಾಗಿ ರೈತ ಸಂಪರ್ಕ ಕೇಂದ್ರಕ್ಕೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರ …
Read More »