Breaking News

Breaking News

ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ತಜ್ಞರ ಸಮಿತಿ ರಚನೆ

ಕಲಬುರಗಿ: ಸತತವಾಗಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಹಿಂದುಳಿಯುತ್ತಿರುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಶಿಕ್ಷಣ ತಜ್ಞ ಗುರುರಾಜ ಕರಜಗಿ ನೇತೃತ್ವದಲ್ಲಿ ಆರು ಜನ ತಜ್ಞರ ಸಮಿತಿಯನ್ನು ರಚಿಸಲಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅಧ್ಯಕ್ಷ ಡಾ.ಅಜಯ್ ಸಿಂಗ್ ತಿಳಿಸಿದರು. ಮಂಡಳಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಜಗಿ ಅವರೊಂದಿಗೆ ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದ ಡಾ. ರುದ್ರೇಶ್, ಹಿರೇಮಠ ಸ್ವಾಮೀಜಿ, ಬಳ್ಳಾರಿಯ ಫಾದರ್ ಫ್ರಾನ್ಸಿಸ್, ಬೀದರ್‌ನ …

Read More »

ರಾಜ್ಯದ ದೊಡ್ಡ ಜಿಲ್ಲೆಗಳು, ತಾಲೂಕುಗಳನ್ನು ವಿಂಗಡಿಸಬೇಕು: ಸಂಸದ ಜಗದೀಶ ಶೆಟ್ಟರ್‌

ಬೆಳಗಾವಿ: ಕರ್ನಾಟಕದಲ್ಲಿ ಬಳ್ಳಾರಿ ಜಿಲ್ಲೆಯು ವಿಭಜನೆಗೊಂಡು ಹೊಸ ಜಿಲ್ಲೆಯಾದ ವಿಜಯನಗರ ಮೂರು ವರ್ಷಗಳ ಹಿಂದಷ್ಟೇ ಅಸ್ತಿತ್ವಕ್ಕೆ ಬಂದಿದೆ. ಇದರ ಬೆನ್ನಲ್ಲೆ ಮೊನ್ನೆಯಷ್ಟೇ ರಾಜ್ಯದ ದೊಡ್ಡ ಜಿಲ್ಲೆ ಬೆಳಗಾವಿಯನ್ನು ವಿಭಜಿಸಬೇಕು ಎಂಬ ಮಾತು ಕೇಳಿ ಬಂದಿತ್ತು. ಇದೀಗ ರಾಜ್ಯದ ದೊಡ್ಡ ದೊಡ್ಡ ಜಿಲ್ಲೆಗಳು, ತಾಲೂಕುಗಳನ್ನು ವಿಂಗಡಣೆ ಮಾಡಬೇಕು ಎಂಬ ಮಾತು ಬಿಜೆಪಿ ಸಂಸದರಿಂದಲೇ ಕೇಳಿ ಬಂದಿದೆ. ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಅವರು, ಬೆಳಗಾವಿ ಜಿಲ್ಲೆಯ …

Read More »

ಮುಡಾ ಪ್ರಕರಣದಲ್ಲಿ ವಿಪಕ್ಷ ನಾಯಕರು ಹುಚ್ಚರ ರೀತಿ ಆಡುತ್ತಿದ್ದಾರೆ: ಸಚಿವ ಭೋಸರಾಜು

ರಾಯಚೂರು: ಮುಡಾ ಪ್ರಕರಣದಲ್ಲಿ ವಿಪಕ್ಷ ನಾಯಕರು ಹುಚ್ಚರ ರೀತಿ ಆಡುತ್ತಿದ್ದಾರೆ ಅವರ ಮಾತುಗಳಿಗೆ ಅರ್ಥವಿದೆಯೇ ಎಂದು ಸಣ್ಣ ನೀರಾವರಿ ಮತ್ತು ವಿಜ್ಞಾ‌ನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ದೂರಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿ, ಸಿದ್ದರಾಮಯ್ಯರನ್ನು ಸಿಎಂ‌ ಸ್ಥಾನದಿಂದ ಇಳಿಸಿದರೆ ಕಾಂಗ್ರೆಸ್ ದುರ್ಬಲವಾಗುತ್ತಿದೆ ಎಂಬ ಲೆಕ್ಕಾಚಾರದಲ್ಲಿದ್ದಾರೆ. ಆದರೆ,‌ ನಮ್ಮದು ಸಂಪೂರ್ಣ ಜನಾಶೀರ್ವಾದದಿಂದ ಬಂದ ಸರ್ಕಾರ 135 ಸ್ಥಾನ ಪಡೆದು ಅಧಿಕಾರಕ್ಕೆ ಬಂದ ಯಾವುದೇ ಪಕ್ಷಗಳು ಇತ್ತೀಚೆಗೆ ಬಂದಿಲ್ಲ. ಸಿಎಂ …

Read More »

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ

ಧಾರವಾಡ: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಕ್ಷರ ದಾಸೋಹ ಕಾರ್ಮಿಕರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಸಕಾಲದಲ್ಲಿ ವೇತನ ನೀಡುವುದು, ಸೇವಾ ಹಿರಿತನ ಭತ್ಯೆ ನೀಡುವುದು, ಕಾಯಂ ಸರ್ಕಾರಿ ನೌಕರರನ್ನಾಗಿ ನೇಮಿಸಿಕೊಳ್ಳುವುದು, ಕನಿಷ್ಠ ವೇತನ, ಆರೋಗ್ಯ ರಕ್ಷಣೆ, ಇಪಿಎಫ್, ಇಎಸ್‌ಐ, ನಿವೃತ್ತಿ ಪಿಂಚಣಿ, ಹೆರಿಗೆ ರಜೆ ಸೌಲಭ್ಯ ನೀಡುವುದು, ಎಪ್ರೀಲ್, ಮೇ ತಿಂಗಳ ಬಾಕಿ ಗೌರವ ಧನ ಪಾವತಿಸುವುದು ಸೇರಿದಂತೆ ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ …

Read More »

ಮತ್ತೊಂದು ಸಾಧನೆಗೈದ ಕೆಎಮ್ ಸಿ ವೈದ್ಯರು

ಹುಬ್ಬಳ್ಳಿ: ಅಪಘಾತದಲ್ಲಿ ಒಬ್ಬ ವ್ಯಕ್ತಿಗೆ ಎದೆಯ ಎಡಭಾಗದ ಒಳಗೆ ಪೈಪ್ ರಾಡ್ ಒಳಗೆ ಹೊಕ್ಕಿದ್ದು, ಅದನ್ನು ಶಸ್ತ್ರ ಚಿಕಿತ್ಸೆ ಮಾಡುವುದರ ಮೂಲಕ, ಸಾವು ಬದುಕಿನ ನಡುವೆ ಹೋರಾಟದಲ್ಲಿದ್ದವನ‌ನ್ನು ಕೆಎಂಸಿ ಆಸ್ಪತ್ರೆ ವೈದ್ಯರು ಜೀವನ ಉಳಿಸಿದ್ದಾರೆ. ಆ ಯುವಕನ‌ ಶಸ್ತ್ರಚಿಕಿತ್ಸೆಯ ದೃಶ್ಯ ನೋಡಿದ್ರೆ ಮೈ ಜುಂ‌ ಎನಿಸುತ್ತೆ. ಇತ ಶಿರಸಿ ತಾಲೂಕಿನ‌ ಜವಳಮಕ್ಕಿ ಗ್ರಾಮದ ದಯಾನಂದ ಶಂಕರಬಡಗಿ ಎಂಬ ಯುವಕನೇ ಮರುಜನ್ಮ ಪಡೆದ ಯುವಕ. ಅದೊಂದು ಭಯಾನಕ ಅಪಘಾತ. ಬೇರೆ ಅಂತಹ …

Read More »

ವಾರ್ಡ್ ನಂ. 50 ರಲ್ಲಿ ಮನೆ ಒಳಗೆ ನುಗ್ಗಿ ಚರಂಡಿ ನೀರು

ಹುಬ್ಬಳ್ಳಿ: ಚರಂಡಿ ನೀರು ಏಕಾಏಕಿಯಾಗಿ ಮನೆ ಒಳಗೆ ನುಗ್ಗಿದ್ದು, ಜನಜೀವನಕ್ಕೆ ಅಸ್ತವ್ಯಸ್ತವಾದ ಘಟನೆ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ನಂಬರ 50 ರಲ್ಲಿ ಬರುವ ಕಾರವಾರ ರೋಡ್ ಮಂಗಳಾ ಓಣಿಯಲ್ಲಿ ನಿನ್ನೆ ರಾತ್ರಿವೇಳೆ ನಡೆದಿದೆ. ಮಳೆ ಇಲ್ಲದಿದ್ದರು ಕೂಡ ಚರಂಡಿ ಬ್ಲಾಕ್ ಆಗಿ ಚರಂಡಿ ನೀರು ಮನೆ ಒಳಗೆ ನುಗ್ಗಿದೆ. ಶೌಚಾಲಯದ ಒಳಗಿಂದ ಚರಂಡಿ ನೀರು ಮನೆ ಒಳಗೆ ನುಗ್ಗುತ್ತಿದೆ. ಈ ಸಮಸ್ಯೆ ಬಗ್ಗೆ ಅಲ್ಲಿನ ಕಾರ್ಪೊರೇಟರ್, ಪಾಲಿಕೆಗೆ …

Read More »

ಪೊಲೀಸ್ ಪೇದೆ ಮೇಲೆ ಹಲ್ಯೆ; ಅರೆಸ್ಟ್ ಮಾಡಿದ ಪೊಲೀಸರು

ಹುಬ್ಬಳ್ಳಿ: ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿರುವ ಪೊಲೀಸ್ ಔಟ್ ಪೋಸ್ಟ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ, ಪೊಲೀಸ್ ಸಿಬ್ಬಂದಿ ಮೇಲೆ ಯುವಕನೋರ್ವ ಹಲ್ಲೆ ಮಾಡಿರುವ ಘಟನೆಯೊಂದು ನಡೆದಿದ್ದ ಹಿನ್ನೆಲೆಯಲ್ಲಿ, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಿಮ್ಸ್ ನ ಹೊರ ರೋಗಿಗಳ ಆಸ್ಪತ್ರೆ ಬಳಿ ಶೇಂಗಾ ಮಾರುತಿದ್ದ ವ್ಯಕ್ತಿಯ ಜೊತೆ ಯುವಕನೊಬ್ಬ ಏರು ದ್ವನಿಯಲ್ಲಿ ವಾಗ್ವಾದ ಮಾಡುತಿದ್ದ. ಈ ಸಂದರ್ಭದಲ್ಲಿ ಅಲ್ಲೇ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆ ಆತನನ್ನ ಪ್ರಶ್ನೆ ಮಾಡಿದಕ್ಕೆ ಅವರ …

Read More »

ಧಾನ್ಯದ ಚೀಲಗಳು ಕಳುವು ಆರೋಪ : ಐಜಿಪಿ ವಿಕಾಸ್‌ಕುಮಾರ್ ವಿಕಾಸ್ ಪ್ರತಿಕ್ರಿಯೆ

ಧಾರವಾಡ: ಅಣ್ಣಿಗೇರಿ ಎಪಿಎಂಸಿಯಲ್ಲಿ ದಾಸ್ತಾನು ಮಾಡಲಾಗಿದ್ದ ಧಾನ್ಯದ ಚೀಲಗಳು ಕಳುವು ಆಗಿದ್ದರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಉತ್ತರ ವಲಯ ಐಜಿಪಿ ವಿಕಾಸ್‌ಕುಮಾರ್ ವಿಕಾಸ್ ಪ್ರತಿಕ್ರಿಯೆ ನೀಡಿದ್ದಾರೆ. ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಣ್ಣಿಗೇರಿ ಎಪಿಎಂಸಿ ಗೋದಾಮಿನಲ್ಲಿ ರೈತರು ಬೆಳೆದ ಕಡಲೆ-ಹೆಸರು ದಾಸ್ತಾನು ಮಾಡಲಾಗಿತ್ತು. ಅದರಲ್ಲಿ 4141 ಚೀಲ ಕಡಲೆ ಮತ್ತು ಹೆಸರು ನಾಪತ್ತೆಯಾಗಿದ್ದವು. ಈ ಸಂಬಂಧ ಮೇಲಾಧಿಕಾರಿಗಳು ಅಣ್ಣಿಗೇರಿ ಠಾಣೆಯಲ್ಲಿ ದೂರು ಸಹ …

Read More »

ಧಾರಾಕಾರ ಮಳೆಗೆ ಪಗಲಾಪುರ ಸೇತುವೆ ಕುಸಿತ: ದುರಸ್ತಿಗೆ ಆಗ್ರಹ

ಯಾದಗಿರಿ: ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ತಾಲ್ಲೂಕಿನ ಪಗಲಾಪುರ ಸೇತುವೆ ಮತ್ತೆ ಕುಸಿದಿದ್ದು, ಕೂಡಲೇ ದುರಸ್ತಿ ಮಾಡುವಂತೆ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಆಗ್ರಹಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಜಿಲ್ಲಾ ಕೇಂದ್ರದಿಂದ ಸುಮಾರು 3 ಕಿ.ಮೀ.ಅಂತರದಲ್ಲಿರುವ ಕೊಯಿಲೂರ ಪಗಲಾಪುರ ಪ್ರಮುಖ ಗ್ರಾಮೀಣ ರಸ್ತೆ ಇದಾಗಿದ್ದು, ಆಗಸ್ಟ್ ಮೊದಲನೇ ವಾರ ಸುರಿದ ಭಾರಿ ಮಳೆಯಿಂದ ಸೇತುವೆ ಮೇಲೆ ನೀರು ಹರಿದು ಸಂಚಾರ ಅಸ್ತವ್ಯಸ್ತವಾಗಿತ್ತು. ತಕ್ಷಣ ಹೊಸ …

Read More »

ಪೂರ್ವಭಾವಿ ಸಭೆ ಬಹಿಷ್ಕಾರ ಮಾಡಿದ ಅಧಿಕಾರಿಗಳು

ಕುಂದಗೋಳ : ಮಹರ್ಷಿ ವಾಲ್ಮೀಕಿ ಭವನ ನಿರ್ಮಾಣ ವಿಚಾರವಾಗಿ ಪೂರ್ವಭಾವಿ ಸಭೆ ಬಹಿಷ್ಕಾರ ಹಾಕಿದ ಸಮಾಜದ ಬಾಂಧವರನ್ನು ಸಂತೈಸುವ ಕೆಲಸವನ್ನು ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳು ಮಾಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಮಹರ್ಷಿ ವಾಲ್ಮೀಕಿ ಭವನ ನೆನೆಗುದಿಗೆ ಬಿದ್ದಿದೆ, ಜಾಗ ಹಂಚಿಕೆ ವಿಷಯವಾಗಿ ಪಟ್ಟಣ ಪಂಚಾಯಿತಿ ಮತ್ತು ಸಮಾಜ ಕಲ್ಯಾಣ ಇಲಾಖೆ ಸಂಬಂಧಪಟ್ಟಂತೆ ಮುಂದಿನ ಕ್ರಮ ತಿಳಿಯುತ್ತಿಲ್ಲ ಎಂದು ಇತ್ತಿಚಿಗೆ ತಾಲೂಕಿನ ಎಸ್.ಸಿ ಮತ್ತು ಎಸ್.ಟಿ ಸಮಾಜ ಬಾಂಧವರು ವಾಲ್ಮೀಕಿ ಜಯಂತಿ …

Read More »