BigTv News
July 31, 2026
Breaking News
ರಾಯಚೂರು ತಾಲೂಕಿನ ಪಂಚಮುಖಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲೆಗೆ ಮೊಬೈಲ್ ತರದಂತೆ ಬುದ್ಧಿವಾದ ಹೇಳಿದ ಮುಖ್ಯ ಶಿಕ್ಷಕಿ ಶಶಿಕಲಾ ಅವರ ಮೇಲೆ ವಿದ್ಯಾರ್ಥಿಯೊಬ್ಬ ಕಲ್ಲು ಹಿಡಿದು ದಾಳಿಗೆ ಮುಂದಾದ ಘಟನೆ ನಡೆದಿದೆ. ಮಾತಿನ ಚಕಮಕಿ ಬಳಿಕ ವಿದ್ಯಾರ್ಥಿ ಕಾರಿನತ್ತ ಕಲ್ಲು ಎಸೆಯಲು ಮುಂದಾಗಿದ್ದು, ಶಾಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಳಿಕ ಸ್ಥಳೀಯರು ಹಾಗೂ ಪೊಲೀಸರ ಸಮ್ಮುಖದಲ್ಲಿ ಪಂಚಾಯಿತಿ ನಡೆಸಿ ರಾಜಿ-ಸಂಧಾನದ ಮೂಲಕ ಪ್ರಕರಣ …
Read More »
BigTv News
July 31, 2026
Breaking News
ಉಡುಪಿ ಜಿಲ್ಲೆಯ ಕುಂದಾಪುರ ಪಟ್ಟಣದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಐವನ್ ರಿಚರ್ಡ್ ಮಸ್ಕರೇನಸ್ (45) ಅವರನ್ನು ಗುರುವಾರ ಮುಂಜಾನೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅವರು ಮಹಿಳೆಯೊಬ್ಬರೊಂದಿಗೆ ಕಾರಿನಲ್ಲಿ ಚರ್ಚ್‌ಗೆ ತೆರಳುತ್ತಿದ್ದ ವೇಳೆ ಹೋಲಿ ರೋಸರಿ ಚರ್ಚ್ ಸಮೀಪ ದುಷ್ಕರ್ಮಿ ಗುಂಡು ಹಾರಿಸಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗುಂಡಿನ ದಾಳಿ ನಡೆಸಿದ ಆರೋಪಿ ಕಾರಿನಲ್ಲಿ ಪರಾರಿಯಾಗಿದ್ದಾನೆ. ಕುಂದಾಪುರ ಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ …
Read More »
BigTv News
July 31, 2026
Breaking News
ನವದೆಹಲಿ: ಜೆಪ್ಟೊ ಡೆಲಿವರಿ ಏಜೆಂಟ್ ವಿರುದ್ಧ ಮಹಿಳೆಯೊಬ್ಬರು ಕಿರುಕುಳದ ಆರೋಪ ಮಾಡಿದ್ದು, ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆರ್ಡರ್ ತಲುಪಿಸಿದ ಬಳಿಕ ಏಜೆಂಟ್ ಕುಡಿಯಲು ನೀರು ಕೇಳಿದ್ದು, ನೀರಿನ ಬಾಟಲಿ ನೀಡಿದರೂ ಮನೆ ಒಳಗೆ ಬರಲು ಪದೇಪದೆ ಪ್ರಯತ್ನಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಮಹಿಳೆ ಹೊರಗಡೆ ಕಾಯುವಂತೆ ಹೇಳಿದರೂ ಆತ ಕೇಳದೆ ಮನೆಯೊಳಗೆ ಬರಲು ಮುಂದಾಗಿದ್ದಾನೆ. ಇದರಿಂದ ಭಯಗೊಂಡ ಅವರು ಗೇಟ್ ಹಾಗೂ ಮುಖ್ಯ ಬಾಗಿಲು ಮುಚ್ಚಲು ಯತ್ನಿಸಿದಾಗ, …
Read More »
BigTv News
July 31, 2026
Breaking News
ನವದೆಹಲಿ: 2020ರ ದೆಹಲಿ ಕೋಮು ಗಲಭೆ ವೇಳೆ ಗುಪ್ತಚರ ಇಲಾಖೆ (ಐಬಿ) ಅಧಿಕಾರಿ ಅಂಕಿತ್ ಶರ್ಮ ಅವರನ್ನು ಕ್ರೂರವಾಗಿ ಹತ್ಯೆ ಮಾಡಿದ ಪ್ರಕರಣದಲ್ಲಿ, ಆಮ್ ಆದ್ಮಿ ಪಕ್ಷದ ಮಾಜಿ ಕೌನ್ಸಿಲರ್ ತಾರ್ ಹುಸೇನ್ ಅವರಿಗೆ ದೆಹಲಿಯ ಕರಕರ್‌ದೂಮಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ ಶಿಕ್ಷೆ ಪ್ರಕಟಿಸಿದ ವೇಳೆ ನ್ಯಾಯಾಲಯವು, ಈ ಕೊಲೆ ಅತ್ಯಂತ ಅಮಾನವೀಯ ಮತ್ತು ಕ್ರೂರ ರೀತಿಯಲ್ಲಿ ನಡೆದಿದ್ದು, ಹತ್ಯೆಯ ನಂತರವೂ ಮೃತದೇಹವನ್ನು ಚರಂಡಿಗೆ ಎಸೆದು ಅಪರಾಧಿಗಳು ದ್ವೇಷವನ್ನು …
Read More »
Shaikh BigTv
July 31, 2026
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ರೌಡಿ ಶೀಟರ್ ಜೊತೆ ‘ಡೀಲ್’ ಆರೋಪ..! ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಕ್ರೈಂ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಬೇಕು.. ರೌಡಿಗಳಿಗೆ ಪೊಲೀಸ್ ಸಪೋರ್ಟ್ ಆರೋಪ..!ಇನ್ಸ್ಪೆಕ್ಟರ್–ಕ್ರೈಂ ಸಿಬ್ಬಂದಿ ಅಮಾನತಿಗೆ ಮಾಜಿ ಕಾರ್ಪೋರೇಟರ್ ಆಗ್ರಹ ದುಡ್ಡು ಕೊಟ್ಟರೆ ಎಲ್ಲವೂ ಉಲ್ಟಾ ಪಲ್ಟಾ..! ಟೌನ್ ಠಾಣೆ ಇನ್ಸ್ಪೆಕ್ಟರ್–ಕ್ರೈಂ ಸಿಬ್ಬಂದಿ ಸಸ್ಪೆಂಡ್‌ಗೆ ಆಗ್ರಹ.. ಹುಬ್ಬಳ್ಳಿ: ಜನರ ಜೀವ ಹಾಗೂ ಆಸ್ತಿಗೆ ರಕ್ಷಣೆ ನೀಡಬೇಕಾದ ಕಾನೂನು ಪಾಲಕರೇ ರೌಡಿ ಶೀಟರ್‌ಗಳೊಂದಿಗೆ ಶಾಮೀಲಾದರೆ, ಸಾಮಾನ್ಯ ನಾಗರಿಕರ ಸುರಕ್ಷತೆ ಹೇಗೆ..? ಹುಬ್ಬಳ್ಳಿಯಲ್ಲಿ ರೈಲ್ವೇ …
Read More »
BigTv News
July 31, 2026
Breaking News
ಬೆಳಗಾವಿಯಲ್ಲಿ ಆನ್‌ಲೈನ್‌ನಲ್ಲಿ ಬಂದ ತಪ್ಪು ಪಾರ್ಸೆಲ್ ಅನ್ನು ವಾಪಸ್ ಮಾಡಲು ಗೂಗಲ್‌ನಲ್ಲಿ ಕಸ್ಟಮರ್ ಕೇರ್ ಸಂಖ್ಯೆ ಹುಡುಕಿದ ಗ್ರಾಹಕರೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು ₹1 ಲಕ್ಷ ಕಳೆದುಕೊಂಡಿದ್ದಾರೆ. ನಕಲಿ ಕಸ್ಟಮರ್ ಕೇರ್ ಹೆಸರಿನಲ್ಲಿ ಸಂಪರ್ಕಿಸಿದ ವಂಚಕರು ರೀಫಂಡ್ ನೆಪದಲ್ಲಿ ಬ್ಯಾಂಕ್ ಖಾತೆ ವಿವರ ಪಡೆದು, ಯುಪಿಐ ಮೂಲಕ ₹98 ಸಾವಿರ ಹಾಗೂ ₹2 ಸಾವಿರ ಸೇರಿ ಒಟ್ಟು ₹1 ಲಕ್ಷ ಹಣ ಎಗರಿಸಿದ್ದಾರೆ. ಪೊಲೀಸರ ಪ್ರಕಾರ, ವಂಚಕರು ನಕಲಿ …
Read More »
BigTv News
July 31, 2026
Breaking News
ಚಿಕ್ಕಬಳ್ಳಾಪುರ: ಇಲ್ಲಿನ ಶಾಂತಿ ನಗರದ ಬಳಿ ಕಲ್ಲಿನಿಂದ ತಲೆ ಜಜ್ಜಿ ಇಸ್ಮಾಯಿಲ್ ಪಾಷ (27) ಎಂಬುವವರನ್ನು ದುಷ್ಕರ್ಮಿಗಳು ಗುರುವಾರ ನಡುರಾತ್ರಿ ಹತ್ಯೆ ಮಾಡಿದ್ದಾರೆ. ನಗರದ 9ನೇ ವಾರ್ಡ್‌ನ ಗಂಗಮ್ಮನ ಗುಡಿ ನಿವಾಸಿ ಇಸ್ಮಾಯಿಲ್ ಪಾಷ ಬಣ್ಣ ಬಳಿಯುವ ಕೆಲಸ ಮಾಡುತ್ತಿದ್ದರು.ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಗುರುವಾರ ರಾತ್ರಿ 9 ಗಂಟೆಗೆ ಮನೆಯಿಂದ ಹೊರ ಹೋಗಿದ್ದರು. ರಾತ್ರಿ 10ರಿಂದ 11ರ ವೇಳೆಗೆ ಮನೆಗೆ ವಾಪಸ್ ಆಗುತ್ತಿದ್ದರು. ನಡು ರಾತ್ರಿ ಪೊಲೀಸರು ಕರೆ …
Read More »
BigTv News
July 31, 2026
Breaking News
ತುಮಕೂರು ಉಪವಿಭಾಗದ ಡಿವೈಎಸ್‌ಪಿ ಚಂದ್ರಶೇಖರ್ ಆರಂಭಿಸಿದ್ದ ಕ್ಯೂಆರ್ ಕೋಡ್ ಆಧಾರಿತ ಡ್ರಗ್ಸ್ ಜಾಗೃತಿ ಅಭಿಯಾನವೇ ಭಾರೀ ಗಾಂಜಾ ಜಾಲವನ್ನು ಬಯಲಿಗೆಳೆದಿದೆ. ಸಾರ್ವಜನಿಕರು ಗುಪ್ತವಾಗಿ ನೀಡಿದ ಮಾಹಿತಿಯ ಆಧಾರದಲ್ಲಿ ತಿಲಕ್ ಪಾರ್ಕ್ ಪೊಲೀಸರು ದಾಳಿ ನಡೆಸಿ, ಪೊಲೀಸ್ ಸಿಬ್ಬಂದಿಯ ಪುತ್ರನೇ ಗಾಂಜಾ ದಂಧೆಯ ಪ್ರಮುಖ ರೂವಾರಿಯೆಂಬ ಆಘಾತಕಾರಿ ಸಂಗತಿಯನ್ನು ಪತ್ತೆಹಚ್ಚಿದ್ದಾರೆ. ಬಂಧಿತ ಪ್ರಮುಖ ಆರೋಪಿ ದಿಶಾಂತ್ (21) ಬಿಸಿಎ ವಿದ್ಯಾರ್ಥಿಯಾಗಿದ್ದು, ಬೆಂಗಳೂರಿನಿಂದ ಸಾಮಾನ್ಯ ಗಾಂಜಾ ಹಾಗೂ ದುಬಾರಿ ‘ಹೈಡ್ರೋ ಗಾಂಜಾ’ ತರಿಸಿಕೊಂಡು …
Read More »
BigTv News
July 31, 2026
Breaking News
ಬೆಂಗಳೂರು : ಧಾರವಾಡ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿನಯ್ ಕುಲಕರ್ಣಿ ಜಾಮೀನು ಹಾಗೂ ಶಿಕ್ಷೆಗೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದು, ಈ ಒಂದು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಇದೀಗ ವಿನಯ್ ಕುಲಕರ್ಣಿಗೆ ಬಿಗ್ ರಿಲೀಫ್ ನೀಡಿದ್ದು ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇಂದು ಅರ್ಜಿ ವಿತರಣೆ ನಡೆಸಿದ ಹೈಕೋರ್ಟ್ ಶಿಕ್ಷೆ ಅಮಾನತ್ತಿನಲ್ಲಿ ಇಟ್ಟು ಹೈಕೋರ್ಟ್ ಜಾಮೀನು ನೀಡಿದ್ದು …
Read More »
BigTv News
July 31, 2026
Breaking News
ಬೆಂಗಳೂರು ವರ್ತೂರು ಠಾಣೆ ಪೊಲೀಸರು ತಂಪು ಪಾನೀಯ ಹಾಗೂ ನೀರಿನ ಕ್ಯಾನ್ ಸಾಗಿಸುತ್ತಿದ್ದ ವಾಹನವನ್ನು ಅಡ್ಡಗಟ್ಟಿ ಪಿಸ್ತೂಲ್ ತೋರಿಸಿ ₹50 ಸಾವಿರ ದರೋಡೆ ಮಾಡಿದ್ದ ಪ್ರಕರಣದಲ್ಲಿ ಆರು ಮಂದಿಯನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 8 ಮೊಬೈಲ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಜುಲೈ 25ರಂದು ಕೊಡತಿಯಿಂದ ರಾಯಸಂದ್ರ ಬಳಿ ಡೆಲಿವರಿ ವಾಹನವನ್ನು ತಡೆದು ಚಾಲಕನಿಗೆ ಬೆದರಿಕೆ ಹಾಕಿ ಹಣ ದೋಚಿ ಆರೋಪಿಗಳು ಪರಾರಿಯಾಗಿದ್ದರು. ಡೆಲಿವರಿ ಬಾಯ್ ನೀಡಿದ ದೂರಿನ …
Read More »