Breaking News

Breaking News

ಬಿಜೆಪಿ, ಜೆಡಿಎಸ್‌ ರಾತ್ರಿ ಕನಸು ಬಿಟ್ಟು ಹಗಲು ಕನಸು ಕಾಣಿದ್ದಾರೆ : ಜಮೀರ್ ಅಹ್ಮದ್ ಖಾನ್

ಹುಬ್ಬಳ್ಳಿ: ಈ ಐದು ವರ್ಷ ಅಲ್ಲ ಬರುವ ಐದು ವರ್ಷ ಕೂಡ ಯಾರು ಕಾಂಗ್ರೆಸ್ ಅಲ್ಲಾಡಿಸೋಕೆ ಆಗಲ್ಲ. ಬಿಜೆಪಿ, ಜೆಡಿಎಸ್‌ ರಾತ್ರಿ ಕನಸು ಬಿಟ್ಟು ಹಗಲು ಕನಸು ಕಾಣಿದ್ದಾರೆ. ಸಿದ್ದರಾಮಯ್ಯ ಸಾಮಾನ್ಯ ಟಗರು ಅಲ್ಲ. ಗುಮ್ಮುವ ಟಗರು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಬಿಜೆಪಿ ಹಾಗೂ ಜೆಡಿಎಸ್‌ ವಿರುದ್ಧ ಲೇವಡಿ ಮಾಡಿದರು. ನಗರದಲ್ಲಿಂದು ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರ ವರ್ಚಸ್ಸು ನೋಡಿ ತಡೆಯೋಕೆ ಆಗದೇ …

Read More »

ಅದ್ದೂರಿಯಾಗಿ ನೆರವೇರಿದ ಉಳವಿ ಚೆನ್ನಬಸವೇಶ್ವರ ರಥೋತ್ಸವ

ಧಾರವಾಡ: ಶ್ರಾವಣಮಾಸದ ನಿಮಿತ್ತ ಧಾರವಾಡದ ಉಳವಿ ಚೆನ್ನಬಸವೇಶ್ವರ ರಥೋತ್ಸವ ಅದ್ದೂರಿಯಾಗಿ ನೆರವೇರಿತು. ಶ್ರಾವಣಮಾಸದ ಅಂಗವಾಗಿ ಒಂದು ತಿಂಗಳ ಪರ್ಯಂತ ಉಳವಿ ಚೆನ್ನಬಸವೇಶ್ವರ ದೇವಸ್ಥಾನದ ವಿವಿಧ ಪೂಜಾ ಕಾರ್ಯಕ್ರಮ ಹಾಗೂ ಅಭಿಷೇಕಗಳು ನೆರವೇರಿದವರು. ಕೊನೆಯ ಸೋಮವಾರ ಉಳವಿ ಚೆನ್ನಬಸವೇಶ್ವರರ ರಥೋತ್ಸವ ಸಾವಿರಾರು ಭಕ್ತರ ಹರ್ಷೋದ್ಘಾರಗಳ ಮಧ್ಯೆ ವಿಜೃಂಭಣೆಯಿಂದ ನೆರವೇರಿತು. ಉಳವಿ ಚೆನ್ನಬಸವೇಶ್ವರ ದೇವಸ್ಥಾನದಿಂದ ತೇರನ್ನು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ವೃತ್ತದವರೆಗೂ ಎಳೆಯಲಾಯಿತು. ತೇರಿಗೆ ಭಕ್ತರು ಉತ್ತುತ್ತಿ, ನಿಂಬೆಹಣ್ಣು, ಬಾಳೆಹಣ್ಣು …

Read More »
Featured Video Play Icon

ಅವಳಿನಗರದ ರೌಡಿಶಿಟಗ ಪರೇಡ್..

872 ಜನ ರೌಡಿ ಶಿಟರಗಳಿಗೆ ಗಾಂದಿತತ್ವದ ಪಾಠ ನೆನಪಿಸಿದ ಖಾಕಿ ಪಡೆ ಶಾಂತಿ ಕದಡಿದರೆ ಕಠಿಣ ಶಿಕ್ಷೆಯ ಸಂದೇಶ… ಗೌರಿ ಗಣೇಶ ಹಾಗು ಈದ್ ಮಿಲಾದ್ ಸಾಲು ಸಾಲು ಹಬ್ಬಗಳ ಹಿನ್ನಲೆ ಈ ಪರೇಡ್.. ಆತ್ಮಸಾಕ್ಷಿಗೆ ಅನುಗುಣ ಜೀವನ ನಡೆಸಿ ಸಮಾಜಕ್ಕೆ ಮಾದರಿಯಾಗಲು ಕಮಿಷನರ್ ಕರೆ..

Read More »

ಶಾಸಕ ಕೋನರೆಡ್ಡಿ ಮನೆಯಲ್ಲಿ ಜವಾರಿ ಊಟ ಸವಿದ ಜಮೀರ್ ಅಹ್ಮದ್

ಧಾರವಾಡ: ನವಲಗುಂದ ಕಾಂಗ್ರೆಸ್ ಶಾಸಕ ಎನ್ ಹೆಚ್ ಕೋನರೆಡ್ಡಿ ಅತಿಥಿ ಸತ್ಕಾರ ಮಾಡುವುದರಲ್ಲಿ ಎತ್ತಿದ ಕೈ. ಇವತ್ತು ಅವರ ಮನೆಗೆ ಭೇಟಿ ನೀಡಿದ ವಸತಿ ಖಾತೆ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ ಅವರಿಗೆ ಕೋನರೆಡ್ಡಿ ಭರ್ಜರಿ ಔತಣ ಏರ್ಪಡಿಸಿದ್ದರು. ಉತ್ತರ ಮತ್ತು ಮುಂಬೈ ಕರ್ನಾಟದ ಮನೆಗಳಲ್ಲಿ ಅತಿಥಿಗಳಿಗಾಗಿ ಬಗೆಬಗೆಯ ಆಹಾರ ಪದಾರ್ಥಗಳನ್ನು ತಯಾರಿಸುತ್ತಾರೆ. ಹಾಗೆಯೇ ಜಮೀರ್, ಕೋನರೆಡ್ಡಿ ಮತ್ತು ಇತರ ನಾಯಕರು ಊಟವನ್ನು ಸವಿದಿದ್ದಾರೆ.

Read More »

ರಸ್ತೆ ಗುಂಡಿಗಳನ್ನು ಸರಿಪಡಿಸಲು ಪಾಲಿಕೆಗೆ ಡಿಸಿಎಂ ಸೂಚನೆ

ಬೆಂಗಳೂರು: ರಸ್ತೆಗಳಲ್ಲಿ ಗುಂಡಿ ತಪ್ಪಿಸಲು ಹೋಗಿ ಅಪಘಾತಗಳು ಹೆಚ್ಚಾಗುತ್ತಿದ್ದು, ಸರ್ಕಾರದ ವಿರುದ್ಧ ಜನರು ಸಿಡಿದೆದ್ದಿದ್ದಾರೆ, ಗುಂಡಿ ರಸ್ತೆಯಲ್ಲಿ ಸಂಚರಿಸುವಾಗ ಅವಘಡಗಳು ಹೆಚ್ಚಾಗ್ತಿದ್ದು, ಇದರಿಂದ ಸಂಚಾರಿ ಪೊಲೀಸರು ಬೇಸತ್ತಿದ್ದಾರೆ. ಈ ಹಿನ್ನಲೆ ಸಂಚಾರಿ ಪೊಲೀಸರೇ ನಗರದ ಕೆಲವೆಡೆ ಸ್ವಯಂ ಪ್ರೇರಿತರಾಗಿ ಗುಂಡಿ ಮುಚ್ಚುವ ಕೆಲಸ ಮಾಡ್ತಿದ್ದಾರೆ.ಆದ್ರೆ ಇಷ್ಟಾದ್ರೂ ಅಧಿಕಾರಿಗಳು ಹಾಗೂ ಸರ್ಕಾರ ಏನ್ಮಾಡ್ತಿದೆ ಅಂತ ಜನ ಆಕ್ರೋಶ ವ್ಯಕ್ತಪಡಿಸಿದ್ದು, ಬೆಂಗಳೂರು ಜನರಿಗೆ ಸರ್ಕಾರದಿಂದ ಗುಂಡಿ ಭಾಗ್ಯ ಅಂತ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ …

Read More »

ಜೋಗ ಜಲಪಾತ ಪ್ರವೇಶ ಶುಲ್ಕ ಹೆಚ್ಚಳ: ಪ್ರವಾಸಿಗರ ಆಕ್ಷೇಪ

ತಾಳಗುಪ್ಪ : ಪ್ರಕೃತಿಯ ರಮ್ಯ ತಾಣ ಜೋಗ ಜಲಪಾತ ವೀಕ್ಷಣೆ ಪ್ರವೇಶ ಶುಲ್ಕ ಈಗ ಮತ್ತಷ್ಟು ದುಬಾರಿಯಾಗಿದೆ. ಸುಮಾರು 183.7 ಕೋಟಿ ರು.ಗಳ ವೆಚ್ಚದಲ್ಲಿ ಜಲಪಾತದ ಆವರಣವನ್ನು ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವನ್ನಾಗಿ ರೂಪಿಸಲು ಹೊರಟಿರುವ ಜೋಗ ನಿರ್ವಹಣಾ ಪ್ರಾಧಿಕಾರವು, ಮೂಲ ಸೌಕರ್ಯ ಪೂರ್ಣ ರೂಪುಗೊಳ್ಳುವ ಮೊದಲೇ ಹಿಂದಿದ್ದ ಪ್ರವೇಶ ಶುಲ್ಕವನ್ನು ಹೆಚ್ಚಿಸಿದೆ.ಇದು ಈಗ ಪ್ರವಾಸಿಗರು ಹಾಗೂ ಸ್ಥಳೀಯರು ಆಕ್ಷೇಪಕ್ಕೆ ಕಾರಣವಾಗಿದೆ. ಜೋಗ ಜಲಪಾತದ ಪ್ರದೇಶದಲ್ಲಿ ಕಳೆದ ಎರಡು ವರ್ಷದಿಂದ …

Read More »

ಮುಡಾ ಹಗರಣ: ಸಿಎಂ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೆ ಒಂದು ವಾರಕಾಲ ಹೈಕೋರ್ಟ್ ರಿಲೀಫ್ ನೀಡಿದ್ದು, ಸಿಎಂ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಮತ್ತೆ ಮುಂದೂಡಿದೆ. ಮುಡಾ ಹಗರಣ ಸಂಬಂಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕ್ರಮ ಪ್ರಶ್ನಿಸಿ ಸಿದ್ದರಾಮಯ್ಯ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದು, ಅರ್ಜಿ ವಿಚಾರಣೆ ಕೈಗೊಂಡಿರುವ ಹೈಕೋರ್ಟ್ ಏಕಸದಸ್ಯ ಪೀಠ, ಸುದೀರ್ಘ ವಾದ ಪ್ರತಿವಾದ ಆಲಿಸಿತು. ವಾದ ಮಂಡನೆ ಬಳಿಕ …

Read More »

ಮಹತ್ವಾಕಾಂಕ್ಷಿ ಕೃಷಿ ಭಾಗ್ಯ ಯೋಜನೆಗೆ ರೈತರಿಂದ ಅರ್ಜಿ ಆಹ್ವಾನ

ಹುಬ್ಬಳ್ಳಿ: ಕೃಷಿ ಇಲಾಖೆಯಿಂದ 2024-25 ನೇ ಸಾಲಿನಲ್ಲಿ ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಕೃಷಿ ಭಾಗ್ಯ ಯೋಜನೆಯನ್ನು ಮರು ಜಾರಿ ಮಾಡಲಾಗಿದೆ. ಈ ಯೋಜನೆಯಡಿ ಕೃಷಿ ಹೊಂಡ ಮತ್ತು ಇತರೆ ಘಟಕಗಳನ್ನು ಅಳವಡಿಸಿಕೊಳ್ಳಲು ಇಚ್ಛಿಸುವ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಅಗತ್ಯ ದಾಖಲೆಗಳೊಂದಿಗೆ ಸೆಪ್ಟೆಂಬರ್ 20 ರೊಳಗಾಗಿ ಅರ್ಜಿ ಸಲ್ಲಿಸಬಹುದು. ಹಿಂದಿನ ವರ್ಷಗಳಲ್ಲಿ ಕೃಷಿ ಭಾಗ್ಯ ಯೋಜನೆಯಡಿ, ನರೇಗಾ, ತೋಟಗಾರಿಕೆ ಇಲಾಖೆ, ಇತರೆ ಸರ್ಕಾರದ ಯೋಜನೆಯಡಿ ಕೃಷಿ ಹೊಂಡ ನಿರ್ಮಿಸಿಕೊಂಡ …

Read More »

ಡಿಜಿಟಲ್ ಕೃಷಿ ಅಭಿಯಾನ: ಕೇಂದ್ರ ಸರ್ಕಾರ ಅನುಮೋದನೆ

ನವದೆಹಲಿ: ರೈತರ ಜೀವನವನ್ನು ಸುಧಾರಿಸಲು ಮತ್ತು ಅವರ ಆದಾಯವನ್ನು ಹೆಚ್ಚಿಸಲು ಕ್ಯಾಬಿನೆಟ್ ಸಭೆಯಲ್ಲಿ 7 ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದ್ದು, 2,817 ಕೋಟಿ ಮೌಲ್ಯದ ಡಿಜಿಟಲ್ ಕೃಷಿ ಅಭಿಯಾನಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದರು. ಮೊದಲನೆಯದು ಡಿಜಿಟಲ್ ಅಗ್ರಿಕಲ್ಚರ್ ಮಿಷನ್ ಕೃಷಿಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ರಚನೆಯ ಮಾದರಿಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕೆಲವು ಉತ್ತಮ ಪ್ರಾಯೋಗಿಕ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅದರ ಆಧಾರದ ಮೇಲೆ, …

Read More »

ಗೃಹಲಕ್ಷ್ಮೀಯರು ಬಹುಮಾನ ಗೆಲ್ಲಲು ಸಚಿವರಿಂದ ಭರ್ಜರಿ ಆಫರ್‌

ಬೆಂಗಳೂರು:ಕಳೆದ ಒಂದು ವರ್ಷ ರಾಜ್ಯದ ಜನರಿಗೆ ಸರ್ಕಾರ ಯೋಜನೆಗಳನ್ನು ಉಚಿತವಾಗಿ ನೀಡುತ್ತಿದ್ದು, ಹಲವು ಫಲಾನುಭವಿಗಳು ಈ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಪೈಕಿ ಗೃಹಲಕ್ಷ್ಮೀ ಯೋಜನೆ ಆರಂಭವಾಗಿ ಒಂದು ವರ್ಷವಾಗಿದ್ದು, ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ಪಡೆಯುತ್ತಿರುವ ಮಹಿಳೆಯರಿಗೆ, ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರ್ಜರಿ ಆಫರ್‌ ನೀಡಿದ್ದಾರೆ. ಈ ಬಗ್ಗೆ ಸ್ವತಃ ಸಚಿವರೇ ವಿಡಿಯೋ ಹಂಚಿಕೊಂಡಿದ್ದು, ವಿಡಿಯೋದಲ್ಲಿ …

Read More »