Breaking News

Breaking News

ಬೆಂಗಳೂರಿನಲ್ಲಿ ನಡೆದ ಸ್ಫೋಟ ಪ್ರಕರಣ: ಜಲಾಲ್ ನ ಬಂಧನ !

ಬೆಂಗಳೂರು: ಪುಲಿಕೇಶಿನಗರದ ಜರ್ಮಿಯಾ ರಸ್ತೆಯ ಕಟ್ಟಡವೊಂದರಲ್ಲಿ ಅ.20ರಂದು ಸಂಭವಿಸಿದ್ದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರಿನ ಜಲಾಲ್ (25) ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಕಟ್ಟಡದ ಭದ್ರತಾ ಸಿಬ್ಬಂದಿಯಾಗಿದ್ದ ತನ್ನ ಚಿಕ್ಕಪ್ಪ ಅಲ್ಲಾವುದ್ದೀನ್ ಅವರನ್ನು ಕೊಲೆ ಮಾಡಲು ಜಲಾಲ್ ಸಂಚು ರೂಪಿಸಿದ್ದ ಎನ್ನಲಾಗಿದೆ. ಬಾಂಬ್ ಇರಿಸಿದ್ದ ಬ್ಯಾಗ್‌ ಅನ್ನು ಚಿಕ್ಕಪ್ಪನಿಗೆ ತಂದುಕೊಟ್ಟಿದ್ದ ಎಂದು ಆರೋಪಿಸಲಾಗಿದೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಲಾಗಿದ್ದು, ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಸ್ಫೋಟ ಸಂಭವಿಸಿತ್ತು. ಪ್ರಕರಣ …

Read More »

ಯುವತಿಗೆ ಹಣ ಆಮಿಷಯೊಡ್ಡಿ ಲೈಂಗಿಕ ಕಿರುಕುಳ ಆರೋಪ

ಬೆಳ್ತಂಗಡಿ: ಸಾರ್ವಜನಿಕ ಸ್ಥಳದಲ್ಲಿ ಯುವತಿಗೆ ಹಣದ ಆಮಿಷವೊಡ್ಡಿ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ವೇಣೂರು ನಿವಾಸಿ ಸೈಯ್ಯದ್ ಮಹಮ್ಮದ್ ಇಸಾಕ್ (61) ವಿರುದ್ಧ ಪ್ರಕರಣ ದಾಖಲಾಗಿದೆ. ಅ.24ರಂದು ಪರಿಶಿಷ್ಟ ಜಾತಿಗೆ ಸೇರಿದ ಯುವತಿ ಕೆಲಸ ಮಾಡುತ್ತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿ, ಅಸಭ್ಯವಾಗಿ ಮಾತನಾಡಿ ಹಣದ ಆಮಿಷವೊಡ್ಡಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ …

Read More »

ಸ್ಟಿಂಗ್ ಶಂಕಿತ ಆರೋಪಿಯ ಮನೆಯಲ್ಲಿ ತಪಾಸಣೆ ವೇಳೆ ತಳ್ಳಾಟ: ಮಹಿಳಾ ಇನ್ಸ್‌ಪೆಕ್ಟರ್ ಬ್ರೇಸ್ ಲೆಟ್ ನಾಪತ್ತೆ, ದೂರು ದಾಖಲು

ಬೆಂಗಳೂರು: ಸ್ಟಿಂಗ್ ಆಪರೇಷನ್ ಪ್ರಕರಣ ಸಂಬಂಧ ಜೆಡಿಎಸ್ ಕಾರ್ಯಕರ್ತ ಮೋಹನ್‌ಗೌಡರ ಮನೆಗೆ ಶೋಧ ನಡೆಸಲು ತೆರಳಿದ್ದ ಸಿಸಿಬಿ ಮಹಿಳಾ ಇನ್‌ಸ್ಪೆಕ್ಟರ್ ಜಿ.ಎಂ. ಕವಿತಾ ಅವರ 9 ಗ್ರಾಂ ಚಿನ್ನದ ಬ್ರೇಸ್‌ಲೆಟ್ ನಾಪತ್ತೆಯಾಗಿದೆ. ಅ.23ರಂದು ಶೋಧ ಕಾರ್ಯಾಚರಣೆ ವೇಳೆ ಮೊಬೈಲ್ ನೀಡುವ ವಿಚಾರವಾಗಿ ಮೋಹನ್‌ಗೌಡರ ಪತ್ನಿ ಪವಿತ್ರಾ ಹಾಗೂ ಪಕ್ಕದ ಮನೆಯ ಪವಿತ್ರಾ ಅವರೊಂದಿಗೆ ವಾಗ್ವಾದ ಮತ್ತು ತಳ್ಳಾಟ ನಡೆದಿತ್ತು. ಈ ವೇಳೆ ಕವಿತಾ ಅವರ ಬ್ರೇಸ್‌ಲೆಟ್ ತುಂಡಾಗಿ ಹಾಸಿಗೆ ಮೇಲೆ …

Read More »

ಎಲೆಕ್ಟ್ರಾನಿಕ್ಸ್ ಸಿಟಿ ಸಮೀಪ ಭೀಕರ ಹಿಟ್-ಅಂಡ್-ರನ್: ಕಾರಿನಡಿ 150 ಮೀಟರ್ ಎಳೆದಾಡಲ್ಪಟ್ಟು ಬಾಣಸಿಗ ಸಾ*ವು!

ಬೆಂಗಳೂರು: ಎಲೆಕ್ಟ್ರಾನಿಕ್ಸ್ ಸಿಟಿ ಸಮೀಪ ನಡೆದ ರೋಡ್ ರೇಜ್ ಪ್ರಕರಣದಲ್ಲಿ ಕಾರಿನಡಿ ಸಿಲುಕಿ ಸುಮಾರು 150 ಮೀಟರ್ ಎಳೆದೊಯ್ಯಲ್ಪಟ್ಟ ಯುವ ಬಾಣಸಿಗ ರಂಜಿತ್ ಕುಮಾರ್ ಸಾಹು (25) ಮೃತಪಟ್ಟಿದ್ದಾರೆ. ಅಕ್ಟೋಬರ್ 21ರಂದು ಸ್ನೇಹಿತರನ್ನು ಭೇಟಿಯಾಗಲು ತೆರಳಿದ್ದ ವೇಳೆ ವೇಗವಾಗಿ ಬಂದ ಕಾರನ್ನು ಪ್ರಶ್ನಿಸಿದ್ದಕ್ಕೆ ಕಾರಿನಲ್ಲಿದ್ದವರು ಜಗಳ ತೆಗೆದಿದ್ದಾರೆ. ಬಳಿಕ ಆರೋಪಿಗಳು ಪರಾರಿಯಾಗಲು ಯತ್ನಿಸಿದಾಗ ರಂಜಿತ್ ಕಾರಿನಡಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಪ್ರಕರಣ ಸಂಬಂಧ ಅಜಯ್ ರಬಿದಾಸ್, …

Read More »

ವಿಧಾನ ಪರಿಷತ್ ಚುನಾವಣೆಯಲ್ಲಿ ನಕಲಿ ಮತದಾನ ಆರೋಪ: ಶಿಕ್ಷಕ ಅಮಾನತು, ಮಹಿಳೆ ವಿರುದ್ಧ ದೂರು

ಹಾವೇರಿ: ಪದವೀಧರ ಪಶ್ಚಿಮ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ನಕಲಿ ಮತದಾನ ನಡೆದ ಆರೋಪದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪಕ್ಕಾಗಿ ಶಿಕ್ಷಕ ವಿ.ಜಿ. ಮಲ್ಲೂರು ಅವರನ್ನು ಅಮಾನತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಆದೇಶ ಹೊರಡಿಸಿದ್ದಾರೆ. ಮತಗಟ್ಟೆ ಸಂಖ್ಯೆ 85ರಲ್ಲಿ ಬಸವೇಶ್ವರ ನಗರದ ಆಶಾ ಪಾಟೀಲ ಅವರ ಹೆಸರಿನಲ್ಲಿ ಶಿವಾಜಿನಗರದ ಶಿಲ್ಪಾ ಬಡಮ್ಮನವರ ಮತ ಚಲಾಯಿಸಿದ್ದಾರೆ ಎನ್ನಲಾಗಿದೆ. ಮತದಾರರ ಗುರುತಿನ ಚೀಟಿಯಲ್ಲಿನ ಫೋಟೋ ಸರಿಯಾಗಿ ಪರಿಶೀಲಿಸದೆ ಮತಪತ್ರ ನೀಡಲು ಸೂಚಿಸಿರುವುದು …

Read More »

ಸೆಕ್ಯುರಿಟಿ ಗಾರ್ಡ್‌ ಹತ್ಯೆಗೆ ಐಇಡಿ ಸ್ಫೋಟ!

ಬೆಂಗಳೂರು: ಪುಲಕೇಶಿನಗರದ ಜರ್ಮಯ್ಯ ರಸ್ತೆಯ ನಿರ್ಮಾಣ ಹಂತದ ಕಟ್ಟಡದಲ್ಲಿ ನಡೆದ ಐಇಡಿ ಸ್ಫೋಟ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಸೆಕ್ಯುರಿಟಿ ಗಾರ್ಡ್ ಅಲ್ಲಾವುದ್ದೀನ್ ಹತ್ಯೆಗೆ ಹಳೇ ದ್ವೇಷದ ಹಿನ್ನೆಲೆಯಲ್ಲಿ ಸ್ಫೋಟ ನಡೆಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅಲ್ಲಾವುದ್ದೀನ್‌ನ ಅಣ್ಣನ ಮಗ ಜಾಹಿದುಲ್ ಹುಸೇನ್, ಆಸ್ತಿ ಹಾಗೂ ವೈಯಕ್ತಿಕ ದ್ವೇಷದಿಂದ ಬಾಲ್ಯ ಸ್ನೇಹಿತರ ಜತೆ ಸೇರಿ ಹತ್ಯೆಗೆ ಸಂಚು ರೂಪಿಸಿದ್ದ ಎನ್ನಲಾಗಿದೆ. ರಾಯಚೂರಿನ ಮಸ್ಕಿಯಲ್ಲಿ ಬಾಂಬ್ ತಯಾರಿಸಿ ಪಾರ್ಸೆಲ್ ರೂಪದಲ್ಲಿ ಅಲ್ಲಾವುದ್ದೀನ್‌ಗೆ ತಲುಪಿಸಲಾಗಿತ್ತು. …

Read More »

ಶಿಗ್ಗಾವಿ: ಬಡ್ಡಿ ಹಣ ನೀಡದ ಕಾರಣ ವ್ಯಕ್ತಿ ಅಪಹರಿಸಿ ಚಿತ್ರಹಿಂಸೆ

ಬಂಕಾಪುರ: ಸಾಲದ ಬಡ್ಡಿ ಹಣ ಪಾವತಿಸದ ಕಾರಣಕ್ಕೆ ಮಣಿಕಂಠ ಮಾಲತೇಶ ಹಳವಳ್ಳಿ (29) ಎಂಬ ಯುವಕನನ್ನು ಅಪಹರಿಸಿ ನಾಲ್ಕು ದಿನಗಳ ಕಾಲ ಚಿತ್ರಹಿಂಸೆ ನೀಡಿರುವ ಆರೋಪ ಕೇಳಿಬಂದಿದೆ. ಅಕ್ಟೋಬರ್ 16ರಂದು ಬೇಕರಿ ಕೆಲಸಕ್ಕೆ ತೆರಳುತ್ತಿದ್ದ ಮಣಿಕಂಠ ಅವರನ್ನು ಆರೋಪಿಗಳು ಅಡ್ಡಗಟ್ಟಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಕೈಕಾಲು ಕಟ್ಟಿ ಹಲ್ಲೆ ನಡೆಸಿ, ನಾಲ್ಕು ದಿನ ಅನ್ನ-ನೀರು ನೀಡದೆ ಸಿಗರೇಟ್‌ನಿಂದ ದೇಹದ ಹಲವು ಕಡೆ ಸುಟ್ಟು ಹಿಂಸಿಸಿದ್ದಾರೆ ಎಂದು ದೂರಲಾಗಿದೆ. ಅಕ್ಟೋಬರ್ 20ರಂದು …

Read More »

ಯುವಕರ ಮೇಲೆ ಗುಂಪಿನಿಂದ ಹಲ್ಲೆ, ದೃಶ್ಯ ಮೊಬೈಲ್ ನಲ್ಲಿ ಸೆರೆ, ಯುವತಿ ವಿಚಾರದಲ್ಲಿ ಹಲ್ಲೆ ಆರೋಪ!

ಮೈಸೂರು: ನಗರದ ಮಾನಸ ಗಂಗೋತ್ರಿ ಬಳಿಯ ಖಾಸಗಿ ಕಾಲೇಜಿನಲ್ಲಿ ಯುವತಿ ವಿಚಾರಕ್ಕೆ ಯುವಕನ ಮೇಲೆ ಗುಂಪೊಂದು ಹಿಗ್ಗಾಮುಗ್ಗ ಹಲ್ಲೆ ನಡೆಸಿದ ಘಟನೆ ನಡೆದಿದೆ. ಹಲ್ಲೆಯ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವತಿ ವಿಚಾರವಾಗಿ ಯುವಕರನ್ನು ಕಾಲೇಜಿಗೆ ಕರೆಸಿ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಈ ವೇಳೆ ಘಟನೆಗೆ ಸಂಬಂಧವೇ ಇಲ್ಲದ ಯುವಕನ ಮೇಲೂ ಹಲ್ಲೆ ನಡೆದಿದೆ. ಹಲ್ಲೆ ವೇಳೆ ಯುವಕನ ಬೈಕ್ ಬೀಳಿಸಿದ್ದು, ಇದನ್ನು ಪ್ರಶ್ನಿಸಿದ ಮತ್ತೊಬ್ಬ …

Read More »

ನೈಟ್ ಶಿಫ್ಟ್ಗೆ ಬರಲ್ಲ ಎಂದಿದ್ದಕ್ಕೆ ಪಿಜ್ಜಾ ಮಳಿಗೆಯಲ್ಲಿ ರಂಪಾಟ! ಮ್ಯಾನೇಜರ್ ಬೈಕ್ ಗೆ ಬೆಂಕಿ ಹಚ್ಚಿದ ಡೆಲಿವರಿ ಬಾಯ್ಸ್!

ಬೆಂಗಳೂರು: ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಸೂಚಿಸಿದ್ದಕ್ಕೆ ಇಬ್ಬರು ಡೆಲಿವರಿ ಬಾಯ್ಸ್ ಪಿಜ್ಜಾ ಮಳಿಗೆಯಲ್ಲಿ ದಾಂಧಲೆ ನಡೆಸಿದ ಘಟನೆ ವರ್ತೂರಿನ ಮೋಜೋ ಪಿಜ್ಜಾ ಮಳಿಗೆಯಲ್ಲಿ ನಡೆದಿದೆ. ಸುಮನ್ ಕುಮಾರ್ ನಾಯಕ್ ಮತ್ತು ಜಿಬ್‌ಕಾಂತ್ ಪೋದ್ದಾರ್ ವಿರುದ್ಧ ಆರೋಪ ಕೇಳಿಬಂದಿದೆ. ನೈಟ್ ಶಿಫ್ಟ್ ವಿಚಾರವಾಗಿ ಮ್ಯಾನೇಜರ್ ಸತೀಶ್ ಕುಮಾರ್ ಜೊತೆ ಜಗಳವಾಡಿದ ಇಬ್ಬರು, ಬಳಿಕ ಮದ್ಯ ಸೇವಿಸಿ ಮರಳಿ ಬಂದು ಮಳಿಗೆಯ ಎರಡು ಎಲ್‌ಇಡಿ ಪರದೆಗಳನ್ನು ಜಖಂಗೊಳಿಸಿದ್ದಾರೆ. ಸಿಬ್ಬಂದಿಗೆ ಚಾಕು ತೋರಿಸಿ …

Read More »

ಡೆಲಿವರಿ ವಿಚಾರಕ್ಕೆ ಕಿರಿಕ್‌ , ಲಾಂಗು ಮಚ್ಚು ಎತ್ತಿಕೊಂಡು ಬಂದ ಮಹಿಳೆಯರು – ಸಿಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ!

ಆನೇಕಲ್: ಬೆಂಗಳೂರು ಹೊರವಲಯದ ಲಿಂಗಾಪುರದಲ್ಲಿ ಫ್ಲಿಪ್‌ಕಾರ್ಟ್ ಡೆಲಿವರಿ ವಿಚಾರವಾಗಿ ನಡೆದ ಕ್ಷುಲ್ಲಕ ಜಗಳ ಮಾರಣಾಂತಿಕ ಹಲ್ಲೆಯಲ್ಲಿ ಅಂತ್ಯಗೊಂಡಿದೆ. ಕೀರ್ತಿ ಹಾಗೂ ಸತ್ಯ ನಡುವಿನ ಗಲಾಟೆ ಹಿನ್ನೆಲೆಯಲ್ಲಿ 15ಕ್ಕೂ ಹೆಚ್ಚು ಮಂದಿಯ ಗುಂಪು ರಾತ್ರಿ ಕೀರ್ತಿ ಮನೆಗೆ ನುಗ್ಗಿ ದಾಳಿ ನಡೆಸಿದೆ. ಲಾಂಗು, ಮಚ್ಚು ಹಾಗೂ ದೊಣ್ಣೆಗಳೊಂದಿಗೆ ಬಂದ ದುಷ್ಕರ್ಮಿಗಳು ಮನೆಯ ಕಿಟಕಿ, ಬಾಗಿಲುಗಳನ್ನು ಧ್ವಂಸಗೊಳಿಸಿ, ಕೀರ್ತಿಯನ್ನು ಹೊರಗೆ ಎಳೆತಂದು ಹಲ್ಲೆ ನಡೆಸಿದ್ದಾರೆ. ರಕ್ಷಣೆಗೆ ಬಂದ ಅಣ್ಣ ಮಧು ಮೇಲೆಯೂ ಹಲ್ಲೆ …

Read More »