BigTv News
October 26, 2026
Breaking News
ವಿಜಯಪುರ: ಮದುವೆಯಾದ ಕೇವಲ ಐದು ತಿಂಗಳಿಗೆ ಹಳೆ ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಹತ್ಯೆ ಮಾಡಿರುವ ಘಟನೆ ಮುದ್ದೇಬಿಹಾಳ ತಾಲೂಕಿನ ರೂಡಗಿ ಗ್ರಾಮದಲ್ಲಿ ನಡೆದಿದೆ. ಮೃತನನ್ನು ಗಣೇಶ್ ಕೋಲಕಾರ್ (23) ಎಂದು ಗುರುತಿಸಲಾಗಿದೆ. ಗಣೇಶ್ ಪತ್ನಿ ಅಕ್ಷತಾ ಅಲಿಯಾಸ್ ಪೂಜಾ (19) ಮದುವೆಯ ನಂತರವೂ ತನ್ನ ಅಪ್ರಾಪ್ತ ಪ್ರಿಯಕರನೊಂದಿಗೆ ಸಂಪರ್ಕದಲ್ಲಿದ್ದಳು. ಈ ವಿಚಾರವಾಗಿ ದಂಪತಿ ನಡುವೆ ನಿತ್ಯ ಜಗಳ ನಡೆಯುತ್ತಿತ್ತು. ಅಕ್ಟೋಬರ್ 21ರ ತಡರಾತ್ರಿ ಪ್ರಿಯಕರನನ್ನು ಮನೆಗೆ ಕರೆಸಿಕೊಂಡ ಪೂಜಾ, …
Read More »
BigTv News
October 26, 2026
Breaking News
ಹುಣಸೂರು: ಪತಿ-ಪತ್ನಿ ನಡುವಿನ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ನಗರದ ಮಾರುತಿ ಬಡಾವಣೆಯಲ್ಲಿ ನಡೆದಿದೆ. ಗಾರೆ ಕೆಲಸಗಾರ ಮಂಜುನಾಥ ಅಲಿಯಾಸ್ ಮಂಜ (37) ಮೃತಪಟ್ಟಿದ್ದು, ಎರಡನೇ ಪತ್ನಿ ಪ್ರೇಮಾಳನ್ನು ಪೊಲೀಸರು ಬಂಧಿಸಿದ್ದಾರೆ. ಮೊದಲ ಪತ್ನಿಯಿಂದ ದೂರವಾಗಿದ್ದ ಮಂಜುನಾಥ್, ಪ್ರೇಮಾಳನ್ನು ಎರಡನೇ ಮದುವೆಯಾಗಿದ್ದ. ಮದ್ಯವ್ಯಸನಿಯಾಗಿದ್ದ ಆತ ಪತ್ನಿಯ ನಡತೆ ಬಗ್ಗೆ ಅನುಮಾನಗೊಂಡು ಆಗಾಗ್ಗೆ ಜಗಳವಾಡುತ್ತಿದ್ದ. ಶನಿವಾರ ಮಧ್ಯಾಹ್ನವೂ ದಂಪತಿ ನಡುವೆ ಜಗಳ ನಡೆದಿದ್ದು, ಬಳಿಕ ಮಂಜುನಾಥ್ ಮೃತಪಟ್ಟಿದ್ದಾನೆ. ತನ್ನ ಕುತ್ತಿಗೆ ಹಿಸುಕಿ …
Read More »
BigTv News
October 25, 2026
Breaking News
ಬೆಂಗಳೂರು: ಗಂಗಮ್ಮನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಮ್ಮಗೊಂಡನಹಳ್ಳಿಯ ವಾಣಿಜ್ಯ ಮಳಿಗೆಯೊಂದರಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಬರೋಬ್ಬರಿ 23 ಸಿಲಿಂಡರ್‌ಗಳು ಸ್ಫೋಟಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮಳಿಗೆಯಲ್ಲಿ ಸಿಲಿಂಡರ್‌ಗಳ ಜೊತೆಗೆ ಪೆಟ್ರೋಲ್ ಹಾಗೂ ಡೀಸೆಲ್ ಕೂಡ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಬೆಂಕಿ ಕಾಣಿಸಿಕೊಂಡ ಬೆನ್ನಲ್ಲೇ ದಟ್ಟ ಹೊಗೆ ಆವರಿಸಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿತ್ತು. ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಒಂದೇ ಮಳಿಗೆಯಲ್ಲಿ ಸಿಲಿಂಡರ್, …
Read More »
BigTv News
October 25, 2026
Breaking News
ಮೈಸೂರು: ಯುವತಿ ವಿಚಾರಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ಕಾಲೇಜಿಗೆ ಕರೆಸಿಕೊಂಡು ಗುಂಪೊಂದು ಹಿಗ್ಗಾಮುಗ್ಗ ಹಲ್ಲೆ ನಡೆಸಿರುವ ಘಟನೆ ಮಾನಸ ಗಂಗೋತ್ರಿ ಪ್ರದೇಶದ ಖಾಸಗಿ ಕಾಲೇಜಿನಲ್ಲಿ ನಡೆದಿದೆ ಎನ್ನಲಾಗಿದೆ. ಯುವತಿ ವಿಚಾರವಾಗಿ ಉಂಟಾದ ವಿವಾದದ ಹಿನ್ನೆಲೆಯಲ್ಲಿ ಯುವಕನ ಮೇಲೆ ಹಲ್ಲೆ ನಡೆಸಲಾಗಿದ್ದು, ಈ ವೇಳೆ ಆತನ ಬೈಕ್ ಅನ್ನು ಕೂಡ ಬೀಳಿಸಲಾಗಿದೆ. ಇದನ್ನು ಪ್ರಶ್ನಿಸಿದ ಮತ್ತೊಬ್ಬ ಯುವಕನ ಮೇಲೂ ಗುಂಪು ಹಲ್ಲೆ ನಡೆಸಿದೆ ಎಂಬ ಆರೋಪ ಕೇಳಿಬಂದಿದೆ. ಘಟನೆಯ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿದ್ದು, …
Read More »
BigTv News
October 25, 2026
Breaking News
ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಲಿಕೇಶಿನಗರ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಜಲಾಲುದ್ದೀನ್, ಸೈದುಲಾ ಇಸ್ಲಾಂ ಹಾಗೂ ಅಹ್ಮದ್ ಬಂಧಿತ ಆರೋಪಿಗಳು. ಆರೋಪಿ ಜಲಾಲುದ್ದೀನ್ ಮದುವೆಯನ್ನು ಅಲ್ಲಾವುದ್ದೀನ್ ಮುರಿಸಿದ್ದರಿಂದ ಇಬ್ಬರ ನಡುವೆ ವೈಯಕ್ತಿಕ ದ್ವೇಷ ಬೆಳೆದಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಬಾಂಬ್ ತಯಾರಿಸಿ ಬೆಂಗಳೂರಿಗೆ ತಂದು ಸ್ಫೋಟ ನಡೆಸಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಘಟನೆಯಲ್ಲಿ ಅಲ್ಲಾವುದ್ದೀನ್ ಅದೃಷ್ಟವಶಾತ್ …
Read More »
BigTv News
October 25, 2026
Breaking News
ಬೆಂಗಳೂರು: ನಿಷೇಧಿತ ಚೈನೀಸ್ ಮಾಂಜಾ ದಾರಕ್ಕೆ ಸಿಲುಕಿ ಬೈಕ್ ಸವಾರರೊಬ್ಬರ ಕುತ್ತಿಗೆ ಭೀಕರವಾಗಿ ಸೀಳಿರುವ ಘಟನೆ ಹೆಗಡೆನಗರದ ಫ್ಲೈ ಓವರ್ ಮೇಲೆ ನಡೆದಿದ್ದು, ಐದು ದಿನಗಳ ಬಳಿಕ ಬೆಳಕಿಗೆ ಬಂದಿದೆ. ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಗಾಳಿಯಲ್ಲಿ ಹಾರಿ ಬಂದ ಮಾಂಜಾ ದಾರ ಸವಾರನ ಕುತ್ತಿಗೆಗೆ ಸುತ್ತಿಕೊಂಡು ಆಳವಾದ ಗಾಯ ಉಂಟುಮಾಡಿದೆ. ತೀವ್ರ ರಕ್ತಸ್ರಾವವಾದರೂ ಸಮಯಪ್ರಜ್ಞೆಯಿಂದ ಬೈಕ್ ನಿಲ್ಲಿಸಿದ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿಷೇಧವಿದ್ದರೂ ಚೈನೀಸ್ ಮಾಂಜಾ …
Read More »
BigTv News
October 25, 2026
Breaking News
ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ಟೋಲ್ ಗೇಟ್ ಸಮೀಪ ಮೂವರು ಮಕ್ಕಳ ಎದುರೇ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ. ನಂದಂಬಳ್ಳಿಯ ಸ್ನೇಹಾ (26) ಕೊಲೆಯಾದ ಮಹಿಳೆ. ಪತ್ನಿಯ ಶೀಲದ ಬಗ್ಗೆ ಅನುಮಾನ ಹೊಂದಿದ್ದ ಪತಿ ರಾಮಚಂದ್ರ, ಪದೇಪದೇ ಜಗಳವಾಡುತ್ತಿದ್ದ ಎನ್ನಲಾಗಿದೆ. ಮೂರಂಡಹಳ್ಳಿಯ ಮನೆಗೆ ತೆರಳುತ್ತಿದ್ದ ವೇಳೆ ಮಕ್ಕಳ ಎದುರೇ ಪತ್ನಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಘಟನಾ ಸ್ಥಳಕ್ಕೆ ಎಸ್‌ಪಿ ಕನ್ನಿಕಾ ಸಿಕ್ರಿವಾಲ್ ಭೇಟಿ …
Read More »
BigTv News
October 25, 2026
Breaking News
ಆನೇಕಲ್: ದಸರಾ ನೋಡಲು ಬಂದಿದ್ದ ಯಲ್ಲಪ್ಪ ಅವರನ್ನು ಹಣಕ್ಕಾಗಿ ಕೊಲೆ ಮಾಡಿದ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಆರೋಪಿ ಸಾಗರ್ (19) ಎಂಬಾತನನ್ನು ಬಂಧಿಸಿದ್ದಾರೆ. ಚಿಕ್ಕಕೆರೆ ಮೈದಾನದಲ್ಲಿ ಮದ್ಯ ಸೇವಿಸುತ್ತಿದ್ದ ಯಲ್ಲಪ್ಪ ಅವರ ಜೇಬಿನಲ್ಲಿದ್ದ ಹಣ ಕಿತ್ತುಕೊಳ್ಳಲು ಆರೋಪಿ ಹಾಗೂ ಸ್ನೇಹಿತರು ಯತ್ನಿಸಿದ್ದಾರೆ. ಈ ವೇಳೆ ಪ್ರತಿರೋಧ ತೋರಿದ ಯಲ್ಲಪ್ಪ ಅವರ ತಲೆಗೆ ಸಾಗರ್ ಮರದ ಹಲಗೆಯಿಂದ ಹೊಡೆದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಬಳಿಕ ಮೃತರ ಮೊಬೈಲ್‌ನಿಂದಲೇ …
Read More »
BigTv News
October 25, 2026
Breaking News
ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯಲ್ಲಿ ರಸ್ತೆ ಗಲಾಟೆ ಹಿನ್ನೆಲೆಯಲ್ಲಿ ಬಿಹಾರ ಮೂಲದ ರಂಜಿತ್ ಕುಮಾರ್ ಸಾಹು (25) ಎಂಬ ಯುವಕನನ್ನು ಕಾರಿನಿಂದ ಡಿಕ್ಕಿ ಹೊಡೆಸಿ ಕೊಲೆ ಮಾಡಿರುವ ಘಟನೆ ನಡೆದಿದೆ. ಅಕ್ಟೋಬರ್ 21ರ ರಾತ್ರಿ ವೇಗವಾಗಿ ಬಂದ ಕಾರಿಗೆ ನಿಧಾನವಾಗಿ ಚಲಿಸುವಂತೆ ನಿತೀಶ್ ಮುಖಿಯಾ ಸನ್ನೆ ಮಾಡಿದ್ದರಿಂದ ಕೋಪಗೊಂಡ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಬಳಿಕ ನಿತೀಶ್ ಸಹಾಯಕ್ಕೆ ಬಂದ ಸ್ನೇಹಿತ ರಂಜಿತ್ ಮೇಲೆ ಕಾರು ಹರಿಸಿ, ಸುಮಾರು 100 ಮೀಟರ್ ಎಳೆದೊಯ್ದು …
Read More »
BigTv News
October 25, 2026
Breaking News
ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಹೊದಲ ಗ್ರಾಮದಲ್ಲಿ ವರದಕ್ಷಿಣೆ ಹಾಗೂ ಕೌಟುಂಬಿಕ ಕಿರುಕುಳದಿಂದ ಗೃಹಿಣಿ ಅಕ್ಷತಾ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಅಕ್ಷತಾ, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಎಂಟು ವರ್ಷಗಳ ಹಿಂದೆ ಪುರುಷೋತ್ತಮ ಅವರನ್ನು ವಿವಾಹವಾಗಿದ್ದ ಅಕ್ಷತಾ ಅವರಿಗೆ ಅತ್ತೆ, ಪತಿಯ ಎದುರೇ ಪೊರಕೆಯಿಂದ ಹಲ್ಲೆ ನಡೆಸಿ ನಿಂದಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಮಗಳ ಸಾವಿಗೆ ನ್ಯಾಯ ಒದಗಿಸುವಂತೆ ಪೋಷಕರು ಆಗ್ರಹಿಸಿದ್ದು, ಪತಿ ಪುರುಷೋತ್ತಮ …
Read More »