Breaking News

Breaking News

ರಾಯಚೂರು : ಸಿಗರೇಟ್ ವಿಚಾರಕ್ಕೆ ಗಲಾಟೆ : ಮಚ್ಚಿನಿಂದ ಕೊಚ್ಚಿ ಅಂಗಡಿ ಮಾಲೀಕನ ಹತ್ಯೆ, ಆರೋಪಿ ಅರೆಸ್ಟ್!

ರಾಯಚೂರು: ಸಿಗರೇಟ್ ನೀಡುವ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ನಗರದ ಎಲ್.ಬಿ.ಎಸ್. ಬಡಾವಣೆಯಲ್ಲಿ ನಡೆದಿದೆ. ಅಂಗಡಿ ಮಾಲೀಕ ನರಸಿಂಹಯ್ಯ ಶೆಟ್ಟಿ (40) ಕೊಲೆಯಾದ ವ್ಯಕ್ತಿ. ಆರೋಪಿ ತಿಲಕ್ ಸಿಂಗ್ ಅಂಗಡಿಯಲ್ಲಿ ಮೊದಲು ಸಿಗರೇಟ್ ಕೊಟ್ಟು ಬಳಿಕ ಹಣ ಪಡೆಯುವಂತೆ ಕೇಳಿದ್ದಾನೆ. ಇದಕ್ಕೆ ಮಾಲೀಕ ನಿರಾಕರಿಸಿದ್ದರಿಂದ ಇಬ್ಬರ ನಡುವೆ ಜಗಳ ನಡೆದಿದ್ದು, ಆರೋಪಿ ಬೆದರಿಕೆ ಹಾಕಿ ತೆರಳಿದ್ದನು. ಬಳಿಕ ಅಂಗಡಿ ಸಮೀಪ ಕಸ ಗುಡಿಸುತ್ತಿದ್ದ ನರಸಿಂಹಯ್ಯ ಅವರ ಮೇಲೆ …

Read More »

ಯುವತಿ ವಿಚಾರಕ್ಕೆ ಕಿರಿಕ್‌ – ಎರಡು ಗುಂಪುಗಳ ನಡುವೆ ತಲ್ವಾರ್‌, ಚಾಕು ಹಿಡಿದು ಬಡಿದಾಟ!

ಬೆಳಗಾವಿ: ಯುವತಿಯೊಂದಿಗಿನ ಸಲುಗೆಯ ವಿಚಾರವಾಗಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆ ಮಾರಣಾಂತಿಕ ಹಲ್ಲೆಯಲ್ಲಿ ಅಂತ್ಯಗೊಂಡಿದೆ. ಪ್ರಕರಣ ಸಂಬಂಧ ಶಹಾಪುರ ಠಾಣೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೇತನ್ ಬಬನ್‌ನಿಂದ ದೂರವಾಗಿದ್ದ ಯುವತಿ ಆಕಾಶ ಜಾಲಗಾರನೊಂದಿಗೆ ಸಲುಗೆ ಬೆಳೆಸಿಕೊಂಡಿದ್ದಳು. ಇದೇ ವಿಚಾರವಾಗಿ ಉಂಟಾದ ಮನಸ್ತಾಪ ಬಗೆಹರಿಸಿಕೊಳ್ಳಲು ಎರಡೂ ಗುಂಪುಗಳು ವಡಗಾವಿಯ ಜೈಲ್ ಶಾಲೆ ಮೈದಾನದಲ್ಲಿ ಸೇರಿದ್ದವು. ಮಾತುಕತೆ ವೇಳೆ ಗಲಾಟೆ ಉಂಟಾಗಿ ಕೇತನ್ ಹಾಗೂ ಆತನ ರಕ್ಷಣೆಗೆ ಬಂದ ಸ್ನೇಹಿತರ …

Read More »

ಮಕ್ಕಳ ಎದುರಲ್ಲೇ ಚಾಕುವಿನಿಂದ ಪತ್ನಿ ಹತ್ಯೆಗೈದ ಪತಿ ಪೊಲೀಸ್ ವಶಕ್ಕೆ

ಕೋಲಾರ: ಪತ್ನಿಯ ಶೀಲದ ಬಗ್ಗೆ ಅನುಮಾನಗೊಂಡು ಪತಿಯೇ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಶ್ರೀನಿವಾಸಪುರ ಟೋಲ್ ಗೇಟ್ ಬಳಿ ನಡೆದಿದೆ. ನಂದಂಬಳ್ಳಿಯ ಸ್ನೇಹಾ (22) ಮೃತ ಮಹಿಳೆ. ಸ್ನೇಹಾ ಅವರು ಪತಿ ರಾಮಚಂದ್ರ ಹಾಗೂ ಮಕ್ಕಳೊಂದಿಗೆ ಮೂರಾಂಡಹಳ್ಳಿಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಪತ್ನಿಯ ಶೀಲದ ವಿಚಾರವಾಗಿ ದಂಪತಿ ನಡುವೆ ಪದೇಪದೇ ಜಗಳ ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಎಸ್‌ಪಿ ಕನ್ನಿಕಾ ಸಿಕ್ರಿವಾಲ್ ಭೇಟಿ …

Read More »

ರಾಯಚೂರಿನಲ್ಲಿ ಬೆಚ್ಚಿ ಬೀಳಿಸುವ ದಂಧೆ ಬೆಳಕಿಗೆ: ಸ್ಮಶಾನದಲ್ಲಿ ಹೂಳಲಾದ ಮೃತದೇಹಗಳ ಅಕ್ರಮ ಸಾಗಾಟ, ಮಾರಾಟ

ರಾಯಚೂರು: ನಗರದ ಮಂತ್ರಾಲಯ ರಸ್ತೆಯ ಹಿಂದೂ ರುದ್ರಭೂಮಿಯಲ್ಲಿ ಹೂಳಲಾಗಿದ್ದ ಮೃತದೇಹಗಳು ಹಾಗೂ ಅಸ್ತಿಪಂಜರಗಳನ್ನು ಹೊರತೆಗೆದು ಖಾಸಗಿ ಮೆಡಿಕಲ್ ಕಾಲೇಜಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪ ಕೇಳಿಬಂದಿದೆ. ಸ್ಮಶಾನದ ಸಿಬ್ಬಂದಿ ಕೇವಲ ₹200ರಿಂದ ₹500ಕ್ಕೆ ಮೃತದೇಹಗಳನ್ನು ಮಾರಾಟ ಮಾಡುತ್ತಿದ್ದು, ಶವಗಳನ್ನು ತುಂಡರಿಸಿ ಅಂಗಾಂಗಗಳನ್ನು ಬೇರ್ಪಡಿಸುತ್ತಿದ್ದ ದೃಶ್ಯಗಳನ್ನು ಸ್ಥಳೀಯರು ವಿಡಿಯೋದಲ್ಲಿ ಸೆರೆಹಿಡಿದಿದ್ದಾರೆ. ಪ್ರಕರಣ ಸಂಬಂಧ ಸ್ಮಶಾನದ ಸಿಬ್ಬಂದಿ ವಿರೇಶ್ ಹಾಗೂ ಖಾಸಗಿ ಮೆಡಿಕಲ್ ಕಾಲೇಜಿನ ಸಿಬ್ಬಂದಿಗಳಾದ ರಾಜು ಮತ್ತು ಅಪ್ಸರ್ ಅವರನ್ನು ಸ್ಥಳೀಯರು …

Read More »

ಸರಕಾರಿ ವಸತಿಗೃಹದಲ್ಲಿ ಮಹಿಳೆಯ ಅನುಮಾನಾಸ್ಪದ ಸಾವು: ಪತಿ ವಿರುದ್ಧ ಕೊಲೆ ಆರೋಪ

ಬಂಟ್ವಾಳ: ಕಾವಳಪಡೂರು ಗ್ರಾಮದ ವಗ್ಗದ ಸರಕಾರಿ ವಸತಿಗೃಹದಲ್ಲಿ ಹಾವೇರಿ ಜಿಲ್ಲಾಸ್ಪತ್ರೆಯ ಶುಶ್ರೂಷಾಧಿಕಾರಿ ಸುನೀತಾ ಮಹಾದೇವ್ ದೇಸಂಗಿ (34) ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಪತಿ ಸಂಜೀವಕುಮಾರ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ವೇತನದ ಹಣದ ವಿಚಾರವಾಗಿ ಪತಿ ನಿರಂತರ ಕಿರುಕುಳ ನೀಡುತ್ತಿದ್ದು, ಹಲ್ಲೆ ನಡೆಸುತ್ತಿರುವುದಾಗಿ ಅ.22ರಂದು ಸುನೀತಾ ತನ್ನ ಸಹೋದರನಿಗೆ ಕರೆ ಮಾಡಿ ತಿಳಿಸಿದ್ದರು ಎನ್ನಲಾಗಿದೆ. ಮರುದಿನ ಮುಂಜಾನೆ ಮಂಚದಿಂದ ಬಿದ್ದು ಪ್ರಜ್ಞೆ ತಪ್ಪಿರುವುದಾಗಿ ಪತಿ ತಿಳಿಸಿದ್ದು, ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಸುನೀತಾ ಮೃತಪಟ್ಟಿದ್ದರು. …

Read More »

ಉದ್ಯಮಿಗಳಿಗೆ ಬೆದರಿಕೆ ಪ್ರಕರಣ: ಓರ್ವ ಆರೋಪಿ ಅರೆಸ್ಟ್

ಉಡುಪಿ: ಜಿಲ್ಲೆಯ ಉದ್ಯಮಿಗಳು ಹಾಗೂ ಗಣ್ಯರಿಗೆ ಕೋಟ್ಯಂತರ ರೂ. ಹಣಕ್ಕೆ ಬೇಡಿಕೆ ಇಟ್ಟು, ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರೇಶ್ ಅಮೀನ್ (38) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಭೂಗತ ಪಾತಕಿ ಹೇಮಂತ್ ಪೂಜಾರಿಯ ಸೂಚನೆಯಂತೆ ಉದ್ಯಮಿಗಳ ಮೊಬೈಲ್ ಸಂಖ್ಯೆ ಹಾಗೂ ವೈಯಕ್ತಿಕ ಮಾಹಿತಿ ಸಂಗ್ರಹಿಸಿ ನೀಡುತ್ತಿದ್ದ ಆರೋಪ ಸುರೇಶ್ ಮೇಲಿದ್ದು, ವಿವಿಧ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ 8 ಪ್ರಕರಣಗಳು ದಾಖಲಾಗಿವೆ. ಹಣ ನೀಡದ …

Read More »

ನೆಪಕ್ಕೆ ರ‍್ಯಾಪಿಡೋ ರೈಡರ್ ಆದರೆ ಪ್ರಧಾನಿ ಮೋದಿ ಹತ್ಯೆಗೆ ಜೈಶ್ ಉಗ್ರರೊಂದಿಗೆ ಸಂಚು ರೂಪಿಸುತ್ತಿದ್ದ ವ್ಯಕ್ತಿ ಎಟಿಎಸ್ ಬಲೆಗೆ

ಮುಂಬೈ: ನಿಷೇಧಿತ ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್ ಜೊತೆ ಸಂಪರ್ಕ ಹೊಂದಿದ್ದ ಹಾಗೂ ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಪ್ರಚೋದಿಸುವ ಪೋಸ್ಟ್‌ಗಳನ್ನು ಹಂಚಿಕೊಂಡ ಆರೋಪದ ಮೇಲೆ 33 ವರ್ಷದ ಮೊಹಮ್ಮದ್ ಹಸನ್ ಅಖ್ತರ್‌ನನ್ನು ಮಹಾರಾಷ್ಟ್ರ ಎಟಿಎಸ್ ಬಂಧಿಸಿದೆ. ಆರೋಪಿ ರ‍್ಯಾಪಿಡೋ ಚಾಲಕ ಹಾಗೂ ಅತ್ತರ್ ವ್ಯಾಪಾರಿಯಾಗಿ ಕೆಲಸ ಮಾಡುತ್ತಿದ್ದು, ಪಾಕಿಸ್ತಾನ ಬೆಂಬಲಿತ ಟೆಲಿಗ್ರಾಂ ಚಾನೆಲ್‌ಗಳ ಮೂಲಕ ಉಗ್ರವಾದಕ್ಕೆ ಪ್ರಚೋದನೆ ನೀಡುತ್ತಿದ್ದ ಎನ್ನಲಾಗಿದೆ. ಆತನ ಮೊಬೈಲ್ ವಶಪಡಿಸಿಕೊಂಡಿರುವ ಅಧಿಕಾರಿಗಳು 39ಕ್ಕೂ ಹೆಚ್ಚು ಆಕ್ಷೇಪಾರ್ಹ …

Read More »

ಅಮಾಯಕರಿಗೆ ಕಳ್ಳರ ಪಟ್ಟ ಕಟ್ಟಿ ಥಳಿತ – ಮಾರಣಾಂತಿಕ ಹಲ್ಲೆ!

ಬೆಂಗಳೂರು: ವಾಹನ ಅಡ್ಡ ಬಂದ ವಿಚಾರಕ್ಕೆ ರಸ್ತೆಯಲ್ಲಿ ಜಗಳವಾಡುತ್ತಿದ್ದ ಇಬ್ಬರು ಯುವಕರನ್ನು ಕಳ್ಳರೆಂದು ಭಾವಿಸಿ ಸ್ಥಳೀಯರು ಅಟ್ಟಾಡಿಸಿ ಹಲ್ಲೆ ನಡೆಸಿದ ಘಟನೆ ಸಿಟಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶಾಹಿದ್ ಹಾಗೂ ಫರ್ದೀನ್ ಪಾಷಾ ಹಲ್ಲೆಗೊಳಗಾದ ಯುವಕರು. ಇಬ್ಬರ ನಡುವೆ ಗಲಾಟೆ ನಡೆಯುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ‘ಕಳ್ಳರು ಬಂದಿದ್ದಾರೆ’ ಎಂದು ಕೂಗಿದ್ದಾನೆ. ಇದನ್ನು ನಂಬಿದ ಸ್ಥಳೀಯರು ಯುವಕರನ್ನು ಬೆನ್ನಟ್ಟಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಶಾಹಿದ್ ತಲೆ ಹಾಗೂ ಮೈಕೈಗೆ …

Read More »

ನಾಗರಬಾವಿ ರಿಂಗ್ ರೋಡ್ ವಕೀಲನ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹಾರ್ಟ್ ಅಟ್ಯಾಕ್ ಅಲ್ಲ, ಅದು ಭೀಕರ ಕೊಲೆ

ಬೆಂಗಳೂರು: ಆಟೋ ಬಾಡಿಗೆ ವಿಚಾರವಾಗಿ ನಡೆದ ಗಲಾಟೆಯಲ್ಲಿ ವಕೀಲ ಶ್ರೀರಾಮ್ ಕೊಲೆಯಾಗಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಆಟೋ ಚಾಲಕ ಮೇಘರಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ಟೋಬರ್ 9ರಂದು ಅಂಬೇಡ್ಕರ್ ಕಾಲೇಜು ಬಳಿ ಆಟೋ ಬಾಡಿಗೆ ವಿಚಾರವಾಗಿ ಶ್ರೀರಾಮ್ ಹಾಗೂ ಮೇಘರಾಜ್ ನಡುವೆ ಗಲಾಟೆಯಾಗಿತ್ತು. ಬಳಿಕ ಮೇಘರಾಜ್ ತನ್ನ ಸಹಚರರೊಂದಿಗೆ ಶ್ರೀರಾಮ್‌ ಅವರನ್ನು ಬೆನ್ನಟ್ಟಿ ತಲೆಗೆ ಹಲ್ಲೆ ನಡೆಸಿ, ಮೊಬೈಲ್ ಹಾಗೂ ಹಣ …

Read More »

ಬಾಗಲಕೋಟೆಯಲ್ಲಿ 2 ಎಕರೆ ಜಮೀನಿಗಾಗಿ, ಅತ್ತಿಗೆ ಮೇಲೆನೆ ಬೊಲೆರೋ ವಾಹನ ಹಾಯಿಸಿ ಕ್ರೌರ್ಯ ಮೆರೆದ ಮೈದುನ!

ಬಾಗಲಕೋಟೆ: ಜಿಲ್ಲೆಯ ಕಂದಗಲ್ ಗ್ರಾಮದಲ್ಲಿ ಎರಡು ಎಕರೆ ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ಮೈದುನನೇ ಅತ್ತಿಗೆ ಮೇಲೆ ಬೊಲೆರೋ ವಾಹನ ಹಾಯಿಸಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ. ಮಂಗಳಾದೇವಿ ಹಾಗೂ ಚನ್ನಪ್ಪಗೌಡ ನಾಡಗೌಡರ್ ನಡುವೆ ಹಲವು ವರ್ಷಗಳಿಂದ ಜಮೀನು ವಿವಾದ ನಡೆಯುತ್ತಿತ್ತು. ಮಂಗಳಾದೇವಿಗೆ ಸೇರಿದ ಎರಡು ಎಕರೆ ಜಮೀನನ್ನು ಚನ್ನಪ್ಪಗೌಡ ಅತಿಕ್ರಮಿಸಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಜಮೀನು ಬಿಟ್ಟುಕೊಡುವಂತೆ ಕೇಳಲು ಹೋದ ಮಂಗಳಾದೇವಿ ಮೇಲೆ ಚನ್ನಪ್ಪಗೌಡ ಬೊಲೆರೋ ವಾಹನ ಹಾಯಿಸಿದ್ದಾನೆ ಎನ್ನಲಾಗಿದೆ. …

Read More »