Breaking News

Breaking News

40 ಲಕ್ಷ ರೂ. ಮೌಲ್ಯದ ಟ್ರಾನ್ಸ್‌ಫಾರ್ಮರ್ ವೈಂಡಿಂಗ್ ಕಳವು : ಪ್ರಕರಣ ದಾಖಲು

ಕನಕಗಿರಿ: ತಾಲೂಕಿನ ನವಲಿ ಗ್ರಾಮದ ಹೊರವಲಯದಲ್ಲಿರುವ 110/11 ಕೆವಿ ವಿದ್ಯುತ್ ಉಪಕೇಂದ್ರದಲ್ಲಿ ದಾಸ್ತಾನು ಮಾಡಿದ್ದ 5 MVA ಸಾಮರ್ಥ್ಯದ ಪವರ್ ಟ್ರಾನ್ಸ್‌ಫಾರ್ಮರ್‌ನ ತಾಮ್ರದ ವೈಂಡಿಂಗ್ ಕಳ್ಳತನವಾಗಿದ್ದು, ಈ ಕುರಿತು ಕನಕಗಿರಿ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ. ಸುಮಾರು 40.53 ಲಕ್ಷ ರೂ. ಮೌಲ್ಯದ ತಾಮ್ರ ವೈಂಡಿಂಗ್ ಕಳುವಾಗಿರುವುದರಿಂದ ಜೆಸ್ಕಾಂ ಇಲಾಖೆಗೆ ಭಾರೀ ನಷ್ಟ ಉಂಟಾಗಿದೆ. ಜೆಸ್ಕಾಂ ಅಧಿಕಾರಿಗಳ ಪ್ರಕಾರ, ಈ ಟ್ರಾನ್ಸ್‌ಫಾರ್ಮರ್ ಸಂಪೂರ್ಣ ದುರಸ್ತಿಗೆ ಕೋಟಿಗಟ್ಟಲೆ ವೆಚ್ಚವಾಗುವ ಸಾಧ್ಯತೆ …

Read More »

ಅಕ್ರಮವಾಗಿ ಸಾಗಿಸುತ್ತಿದ್ದ 3 ಒಂಟೆಗಳ ರಕ್ಷಣೆ

ಭಟ್ಕಳ: ಅಕ್ರಮವಾಗಿ ಒಂಟೆಗಳನ್ನು ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮಧ್ಯಪ್ರದೇಶದ ಕರಣ ಬಾಬರ, ಕೊಲ್ಲಾಪುರದ ಸುಹಾಸ ಸೂರ್ಯವಂಶಿ ಹಾಗೂ ಯಶ ಗೋಟಕಿಂಡೆ ಬಂಧಿತ ಆರೋಪಿಗಳು. ಶಿರಾಲಿ ಕಡೆಯಿಂದ ಉಳ್ಳಾಲ ಕಡೆಗೆ ಲಾರಿ ಮೂಲಕ 3.75 ಲಕ್ಷ ಮೌಲ್ಯದ ಒಂಟೆಗಳನ್ನು ಹಿಂಸಾತ್ಮಕವಾಗಿ ಕಟ್ಟಿ ಸಾಗಾಟ ಮಾಡಲಾಗುತ್ತಿತ್ತು. ಆರೋಪಿಗಳು ಒಂಟೆಗಳಿಗೆ ನೀರು ಹಾಗೂ ಮೇವು ನೀಡದೆ, ಜಾನುವಾರು ಸಾಗಾಟಕ್ಕೆ ಅಗತ್ಯವಾದ ಸಕ್ಷಮ ಪ್ರಾಧಿಕಾರದ ಪರವಾನಗಿಯಿಲ್ಲದೆ …

Read More »

ದೆಹಲಿಯಲ್ಲಿ ಆಘಾತಕಾರಿ ಘಟನೆ: ಹಿರಿಯ ಅಧಿಕಾರಿಯ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ!

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರ 22 ವರ್ಷದ ಮಗಳು ಬುಧವಾರ ಬೆಳಗ್ಗೆ ಆಗ್ನೇಯ ದೆಹಲಿಯ ವಸಾಹತು ಪ್ರದೇಶದಲ್ಲಿರುವ ಅವರ ಮನೆಯಲ್ಲಿ ಕೊಲೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಪೊಲೀಸ್ ಮೂಲಗಳ ಪ್ರಕಾರ, ಎಂಜಿನಿಯರಿಂಗ್ ಮುಗಿಸಿ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಹಿರಿಯ ಅಧಿಕಾರಿಯ ಪುತ್ರಿಯನ್ನು ಕೊಲ್ಲುವ ಮುನ್ನ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.ಯುವತಿಯನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದ್ದು, …

Read More »

ಬೆಂಗಳೂರು ಏರ್‌ಪೋರ್ಟ್ ನಲ್ಲಿ 3.89 ಕೋಟಿ ರೂ. ಮೌಲ್ಯದ ಗಾಂಜಾ ವಶ; ಪ್ರಯಾಣಿಕನ ಬಂಧನ!

ಬೆಂಗಳೂರು: ಬ್ಯಾಂಕಾಕ್‌ನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 3.89 ಕೋಟಿ ರೂ. ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಸಾಗಿಸುತ್ತಿದ್ದ ಪ್ರಯಾಣಿಕನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯನ್ನು ಎನ್‌ಡಿಪಿಎಸ್ ಕಾಯ್ದೆಯಡಿಯಲ್ಲಿ ಬಂಧಿಸಲಾಗಿದೆ. ಬ್ಯಾಂಕಾಕ್‌ನಿಂದ ಆಗಮಿಸಿದ ಪ್ರಯಾಣಿಕನನ್ನು ತಡೆದು ಪರೀಕ್ಷಿಸಿದಾಗ ಬ್ಯಾಗೇಜ್‌ನಲ್ಲಿ ಬಚ್ಚಿಟ್ಟಿದ್ದ 11.11 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ಬೆಂಗಳೂರು ಕಸ್ಟಮ್ಸ್ ವಶಪಡಿಸಿಕೊಂಡಿದೆ. ಇದರ ಮೌಲ್ಯ ರೂ. 3.89 ಕೋಟಿ ಎಂದು ಬೆಂಗಳೂರು ಕಸ್ಟಮ್ಸ್ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದೆ. ವ್ಯಕ್ತಿಯ ಗುರುತನ್ನು …

Read More »

ಪ್ರಿಯಕರನಿಗೆ ಬೆಂಕಿ ಹಚ್ಚಿ ಹತ್ಯೆ ಕೇಸ್: ಆಸ್ಪತ್ರೆ ಬಳಿ ಕಣ್ಣೀರು ಹಾಕ್ತಿರುವ ಕಿರಣ್ ಕುಟುಂಬ

ಬೆಂಗಳೂರು: ನಗರದಲ್ಲಿ ಹೃದಯವಿದ್ರಾವಕ ಘಟನೆ ಒಂದು ಬೆಳಕಿಗೆ ಬಂದಿದೆ. ಪ್ರಿಯತಮೆಯೇ ಪ್ರಿಯಕರನಿಗೆ ಬೆಂಕಿ ಹಚ್ಚಿ ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ. ಗಂಭೀರವಾಗಿ ಗಾಯಗೊಂಡಿದ್ದ ಯುವಕ ಕಿರಣ್, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.ಆಸ್ಪತ್ರೆ ಬಳಿ ಕಿರಣ್ ಕುಟುಂಬದವರು ಹಾಗೂ ಸಂಬಂಧಿಕರು ಕಣ್ಣೀರಿನಲ್ಲಿ ಮುಳುಗಿದ್ದಾರೆ. ಕಿರಣ್ ತನ್ನ ತಂದೆ-ತಾಯಿಗೆ ಏಕೈಕ ಮಗನಾಗಿದ್ದನು. “ಈ ರೀತಿ ಸುಟ್ಟು ಹಾಕೋದು ಎಷ್ಟು ಸರಿ? ಈಗ ನಮ್ಮ ಮಗನಿಲ್ಲದೆ ನಾವು ಹೇಗೆ …

Read More »

ಕಲಬುರಗಿ: ಕಂಪ್ಯೂಟರ್‌ ಆಪರೇಟರ್‌ ‘ಲೋಕಾ’ ಬಲೆಗೆ

ವಸತಿ ಯೋಜನೆಯಡಿ ಮಂಜೂರಾದ ಮನೆಯ ಸಹಾಯಧನ ಬಿಡುಗಡೆಗಾಗಿ ಲಂಚಕ್ಕೆ ಬೇಡಿಕೆಯಿಟ್ಟ ಗ್ರಾಮ ಪಂಚಾಯಿತಿಯ ಕಂಪ್ಯೂಟರ್ ಆಪರೇಟರ್ ಲೋಕಾಯುಕ್ತರ ಪೊಲೀಸರ ‘ಬಲೆ’ಗೆ ಬಿದ್ದಿದ್ದಾನೆ. ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ಮಳ್ಳಿ ಗ್ರಾಮ ಪಂಚಾಯಿತಿಯ ಬಂದೇನವಾಜ್‌ ‘ಲೋಕಾ’ ಬಲೆಗೆ ಬಿದ್ದ ಆರೋಪಿ. ‘ನನ್ನ ಅಣ್ಣನಿಗೆ ಬಸವ ವಸತಿ ಯೋಜನೆ ಅಡಿಯಲ್ಲಿ ಮನೆ ಮಂಜೂರಾಗಿತ್ತು. ಅದರ ಸಹಾಯಧನ ಮಂಜೂರಿಗೆ ಬಂದೇನವಾಜ್‌ ₹ 20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾನೆ. ₹10 ಸಾವಿರಕ್ಕೆ ಡೀಲ್‌ ಮುಗಿಸಿ, ₹5 …

Read More »

ಸುಳ್ಳು ಕೇಸ್ ಬೆದರಿಕೆ, ಲಂಚ ಬೇಡಿಕೆ – ಇಬ್ಬರು ಪೊಲೀಸರ ಬಂಧನ

ಬಾಗಲಕೋಟೆ ಜಿಲ್ಲೆಯ ಕೆರೂರ ಪೊಲೀಸ್ ಠಾಣೆಯಲ್ಲಿ ಲಂಚದ ಪ್ರಕರಣ ಭಾರಿ ಸದ್ದು ಮಾಡಿದೆ. ಬೆಳಗಂಟಿ ಕೆರೂರ ನಿವಾಸಿ ಮುತ್ತಪ್ಪ ನಾಯ್ಕರ ಅವರು 21/04/2026 ರಂದು ಬಾಗಲಕೋಟೆ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಪ್ರಕಾರ, 17/04/2026 ರಂದು ಮುತ್ತಪ್ಪ ಅವರ ಸ್ನೇಹಿತ ಶಂಕ್ರಪ್ಪ ಬೂದಿಹಾಳ ಅವರನ್ನು ಅವರ ಬೈಕ್ ನಂ: KA-29 EC-0914 ಸಮೇತ ಕೆರೂರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ, ಸುಳ್ಳು ಆರೋಪ ಮಾಡಿ ಕೇಸ್ ಹಾಕುವುದಾಗಿ …

Read More »

sp ನಂದಗಾವಿ” ಸಿಡಿಲು ದಾಳಿ: ಲಂಚದ ಲೈನಲ್ಲಿ ಸಿಕ್ಕಿಬಿದ್ದ ಪೊಲೀಸರಿಗೆ ಜೈಲು!

ಲಂಚದ ಆಟಕ್ಕೆ ಫುಲ್ ಸ್ಟಾಪ್: ಕೆರೂರು ಠಾಣೆಯ PSI-ಕಾನ್ಸ್‌ಟೇಬಲ್ ಜೈಲು ಪಾಲು! ಭ್ರಷ್ಟ ಪೊಲೀಸರಿಗೇ ಶಾಕ್: ಲೋಕಾಯುಕ್ತ ದಾಳಿಗೆ ಕುಸಿದ ಕೆರೂರು ಠಾಣೆ ಮಾನ! ಹಣ ಕೊಡಿ, ಬೈಕ್ ತೆಗೆದುಕೊಳ್ಳಿ’ ಎಂದ ಪೊಲೀಸರ ಆಟ ಮುಗಿತು: ರೆಡ್ ಹ್ಯಾಂಡ್ ಸಿಕ್ಕಿಬಿದ್ದರು! ಬಾಗಲಕೋಟೆ: ಜಿಲ್ಲೆಯ ಕೆರೂರ ಪೊಲೀಸ್ ಠಾಣೆಯಲ್ಲಿ ಭಾರಿ ಲಂಚ ಪ್ರಕರಣ ಬೆಳಕಿಗೆ ಬಂದಿದೆ. ಬೆಳಗಂಟಿ ಕೆರೂರ ನಿವಾಸಿ ಮುತ್ತಪ್ಪ ನಾಯ್ಕರ ಅವರು ಏಪ್ರಿಲ್ 21, 2026ರಂದು ಬಾಗಲಕೋಟೆ ಲೋಕಾಯುಕ್ತ …

Read More »

ಕೆರೂರು ಪೊಲೀಸ್‌ ಠಾಣೆ ಮೇಲೆ ಲೋಕಾಯುಕ್ತ ದಾಳಿ

ಬಾಗಲಕೋಟೆ: ಸುಳ್ಳು ಪ್ರಕರಣ ದಾಖಲಿಸಿತ್ತೇನೆ ಎಂದು ಬೆದರಿಸಿ ಲಂಚ ಕೇಳಿದ್ದ ಪ್ರಕರಣದಲ್ಲಿ ಕೆರೂರು ಪೊಲೀಸ್ ಠಾಣೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಂಕ್ರಪ್ಪ ಬೂದಿಹಾಳ ಎಂಬುವರನ್ನು ಠಾಣೆಗೆ ಕರೆ‌ತಂದಿದ್ದ ಪೊಲೀಸ್ ಇನ್ ಸ್ಪೆಕ್ಟರ್ ಭೀಮಪ್ಪ ರಬಕವಿ, ₹1.70 ಲಕ್ಷ ಲಂಚ‌ ನೀಡದಿದ್ದರೆ ಇಸ್ಪೀಟ್ ಅಡಿಸುತ್ತಿದ್ದೆ ಎಂದು ಪ್ರಕರಣ ದಾಖಲಿಸುವುದಾಗಿ ಬೆದರಿಸಿದ್ದರು. ₹1.70 ಲಕ್ಷ ಲಂಚ ಪಡೆಯುವಾಗ ದಾಳಿ ಮಾಡಿ ಇನ್ ಸ್ಪೆಕ್ಟರ್ ಭೀಮಪ್ಪ ರಬಕವಿ, ಕಾನ್ ಸ್ಟೆಬಲ್ ಸಂತೋಷ …

Read More »

ಹೆಣ್ಣು ಮಕ್ಕಳಿಗೆ ಸೇಫ್‌ ಅಲ್ಲ ಸಿಲಿಕಾನ್‌ ಸಿಟಿ – ಹಾಡಹಗಲೇ ನಡುರಸ್ತೆಯಲ್ಲೇ ಬೀದಿ ಕಾಮಣ್ಣರ ದರ್ಬಾರ್‌

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆ ಎಂಬುದು ಕೇವಲ ಮಾತಿಗೆ ಸೀಮಿತವಾಗಿದೆಯೇ ಎಂಬ ಆತಂಕ ಮೂಡುವಂತಹ ಘಟನೆಯೊಂದು ನಡೆದಿದೆ. ನಗರದ ಕೋಗಿಲು ಮುಖ್ಯರಸ್ತೆಯ ಮಾರುತಿ ನಗರದಲ್ಲಿ ಹಾಡಹಗಲೇ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ಮಾರುತಿ ನಗರದ ಕೋಗಿಲು ಮುಖ್ಯರಸ್ತೆಯಲ್ಲಿ ಯುವತಿಯರಿಬ್ಬರು ನಡೆದುಕೊಂಡು ಹೋಗುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಕಾಮುಕರು ಅಟ್ಟಹಾಸ ಮೆರೆದಿದ್ದಾರೆ. ಜನದಟ್ಟಣೆ ಇರುವ ಪ್ರದೇಶ ಎನ್ನದೆ ಅಸಭ್ಯವಾಗಿ ವರ್ತಿಸಿದ ದುಷ್ಕರ್ಮಿಗಳು, ಯುವತಿಯರನ್ನು ಅನುಚಿತವಾಗಿ …

Read More »