Breaking News

Breaking News

ಕಲಬುರಗಿ| ನಕಲಿ ಅಂಕಪಟ್ಟಿ: 52 ಗ್ರೂಪ್ ‘ಡಿ’ ಸಿಬ್ಬಂದಿ ಅಮಾನತು

ಆರೋಗ್ಯ ಇಲಾಖೆಯಲ್ಲಿ 2015ರಲ್ಲಿ ಡಿ ಗ್ರೂಪ್ ಹುದ್ದೆಗೆ ನೇಮಕಗೊಂಡಿದ್ದ ಕಲಬುರಗಿ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳ 52 ಸಿಬ್ಬಂದಿಯ ಎಸ್ಸೆಸ್ಸೆಲ್ಸಿ ಅಂಕಪಟ್ಟಿಗಳು ನಕಲಿ ಎಂಬುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಶಿಸ್ತು ಪ್ರಾಧಿಕಾರದ ನಿರ್ದೇಶಕಿ ರಜನಿ ಎಂ. ಅವರು ಸೆ.22ರಂದು ಎಲ್ಲರನ್ನೂ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ …

Read More »

ಶಿವಮೊಗ್ಗದಲ್ಲಿ ಮಿತಿಮೀರಿದ ಗಾಂಜಾ ಹಾವಳಿ: ಕೇವಲ 500 ರೂ.ಗಾಗಿ ಕಾರ್ಮಿಕನ ಕೊಲೆ

ಶಿವಮೊಗ್ಗ: ಗಾಂಜಾ ಅಮಲಿನಲ್ಲಿದ್ದ ನಾಲ್ವರು ಯುವಕರು ₹500 ಹಣಕ್ಕಾಗಿ ಕೂಲಿ ಕಾರ್ಮಿಕನನ್ನು ಡ್ರ್ಯಾಗನ್‌ನಿಂದ ಇರಿದು ಹತ್ಯೆ ಮಾಡಿರುವ ಘಟನೆ ಅಶೋಕನಗರದ ತುಂಗಾ ಚಾನೆಲ್ ಬಳಿ ನಡೆದಿದೆ. ಮಹ್ಮದ್ ಅಲಿ ಮೃತರು. ಎರಡು ಬೈಕ್‌ಗಳಲ್ಲಿ ಬಂದಿದ್ದ ನಾಲ್ವರು ಯುವಕರು ಹಣಕ್ಕಾಗಿ ಆತನನ್ನು ಪೀಡಿಸಿದ್ದು, ಹಣ ನೀಡಲು ನಿರಾಕರಿಸಿದಾಗ ಹಲ್ಲೆ ನಡೆಸಿದ್ದಾರೆ. ಆರೋಪಿಗಳು ಡ್ರ್ಯಾಗನ್‌ನಿಂದ ಮಹ್ಮದ್ ಅಲಿಗೆ ಇರಿದು, ಅವರ ಬಳಿಯಿದ್ದ ₹500 ಕಸಿದುಕೊಂಡು ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರು ರಸ್ತೆ ಬದಿಯಲ್ಲೇ …

Read More »

ಅಡುಗೆ ರುಚಿಯಾಗಿಲ್ಲವೆಂದು ಕಿರಿಕ್, ಪೇಂಟರ್ ಕೈಯಿಂದಲೇ ಕಾರ್ಪೆಂಟರ್ ಭೀಕರ ಕೊಲೆ!

ಬೆಂಗಳೂರು: ರಾಜರಾಜೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಚೇನಹಳ್ಳಿಯಲ್ಲಿ ಅಡುಗೆ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಕಾರ್ಪೆಂಟರ್‌ವೊಬ್ಬರನ್ನು ಪೇಂಟರ್ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ನಡೆದಿದೆ. ಉತ್ತರ ಪ್ರದೇಶದ ಗೋರಖ್‌ಪುರ ಮೂಲದ ಅಮಿತ್ ಕುಮಾರ್ (22) ಮೃತ ಕಾರ್ಪೆಂಟರ್. ಆರೋಪಿ ಪೇಂಟರ್ ಸುನಿಲ್ ಕುಮಾರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿರ್ಮಾಣ ಹಂತದ ಕಟ್ಟಡದಲ್ಲಿ ಮೂವರು ಕಾರ್ಪೆಂಟರ್‌ಗಳು ಹಾಗೂ ಸುನಿಲ್ ಕುಮಾರ್ ವಾಸವಾಗಿದ್ದರು. ಮದ್ಯ ಸೇವಿಸಿ ಬಂದಿದ್ದ ಸುನಿಲ್, …

Read More »

ಬ್ರಹ್ಮಾವರ: ಮನೆಗೆ ನುಗ್ಗಿ ಸೊತ್ತು ಕಳವು

ಬ್ರಹ್ಮಾವರ: ಹನೇಹಳ್ಳಿ ಗ್ರಾಮದ ಚಾಂಪಾಡಿಯಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ₹30 ಸಾವಿರ ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ. ಆ.29ರಿಂದ ಸೆ.27ರ ನಡುವಿನ ಅವಧಿಯಲ್ಲಿ ಅಣ್ಣಪ್ಪ ಪೂಜಾರಿ ಅವರ ಮೂಲ ಮನೆಯ ಬಾಗಿಲಿನ ಚಿಲಕ ಮುರಿದು ಕಳ್ಳರು ಒಳ ಪ್ರವೇಶಿಸಿದ್ದಾರೆ. ಮನೆಯಲ್ಲಿದ್ದ ತಾಮ್ರದ ಹಂಡೆ, ಕೊಡಪಾನ, ಗ್ಯಾಸ್ ಲೈಟರ್, ನಾಲ್ಕು ಹಿತ್ತಾಳೆ ಕಾಲುದೀಪ, ಜಾಗಂಟೆ, ಆರತಿ ತಟ್ಟೆ, ಪೂಜಾ ಗಂಟೆ ಹಾಗೂ ಮೂರು ಕಾಣಿಕೆ ಡಬ್ಬಿಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. …

Read More »

ಬೀದರ್ ನಲ್ಲಿ ಉಗ್ರ ಸಂಘಟನೆ ನಂಟು ಹೊಂದಿದ್ದ ಶಂಕಿತ ಯುವಕ ಅರೆಸ್ಟ್

ಬೀದರ್: ಚಿಕ್ಕಬಳ್ಳಾಪುರದಲ್ಲಿ ಇಬ್ಬರು ಶಂಕಿತ ಉಗ್ರರನ್ನು ವಶಕ್ಕೆ ಪಡೆದ ಬೆನ್ನಲ್ಲೇ ಗಡಿ ಜಿಲ್ಲೆ ಬೀದರ್‌ನಲ್ಲೂ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಪಾಕಿಸ್ತಾನ ಮೂಲದ ನಿಷೇಧಿತ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಶಂಕೆಯ ಮೇರೆಗೆ ಭಾಲ್ಕಿ ತಾಲೂಕಿನ ಏಣಕೂರು ಗ್ರಾಮದ ವಿಶಾಲಕುಮಾರ್ ಮೇತ್ರೆ ಎಂಬಾತನನ್ನು ಭಾಲ್ಕಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಶಾಲಕುಮಾರ್ ಮೊಬೈಲ್ ಪರಿಶೀಲನೆ ವೇಳೆ ಪಾಕಿಸ್ತಾನ ಮೂಲದ ನಿಷೇಧಿತ ಉಗ್ರ ಸಂಘಟನೆಯೊಂದಿಗೆ ವಾಟ್ಸಾಪ್ ಮೂಲಕ ಸಂಪರ್ಕ ಹೊಂದಿದ್ದ ಎನ್ನಲಾದ ಮಾಹಿತಿ …

Read More »

ಕಲಬುರಗಿ | ₹ 3 ಸಾವಿರ ಲಂಚ: ಲೋಕಾಯುಕ್ತ ಬಲೆಗೆ ಕಾನ್‌ಸ್ಟೆಬಲ್

ಕಲಬುರಗಿ: ಜಾಮೀನಿನ ಮೇಲೆ ಹೊರಗಿದ್ದ ಆರೋಪಿಗೆ ಜಾಮೀನು ರದ್ದುಪಡಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಸಿ ₹3 ಸಾವಿರ ಲಂಚ ಪಡೆದ ಆರೋಪದ ಮೇಲೆ ಸುಲೇಪೇಟ ಠಾಣೆಯ ಕಾನ್‌ಸ್ಟೆಬಲ್ ಅನಿಲ್‌ಕುಮಾರ್ ಉಳ್ಳಾಗಡ್ಡಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಮಧ್ಯವರ್ತಿಯ ಮೊಬೈಲ್‌ಗೆ ಫೋನ್‌ಪೇ ಮೂಲಕ ಹಣ ಪಾವತಿಸಲಾಗಿತ್ತು. ಗಡಿಕೇಶ್ವರದ ಚಂದ್ರಕಾಂತ್ ರಂಗನೂರ ಜಾಮೀನು ಪಡೆದಿದ್ದು, ಪ್ರತಿ ತಿಂಗಳು ಠಾಣೆಗೆ ಹಾಜರಾಗಬೇಕಿತ್ತು. ಆದರೆ ಅನಿಲ್‌ಕುಮಾರ್ ಹಣ ನೀಡುವಂತೆ ಒತ್ತಡ ಹೇರಿದ್ದರಿಂದ ಚಂದ್ರಕಾಂತ್ ಲೋಕಾಯುಕ್ತರಿಗೆ ದೂರು ನೀಡಿದ್ದರು. ಶನಿವಾರ …

Read More »

ಬೆಂಗಳೂರು | ವಿದ್ಯಾರ್ಥಿ ಕೊಲೆ: ಮೂವರು ಬಾಲಕರೂ ಸೇರಿದಂತೆ ನಾಲ್ವರ ಬಂಧನ

ನಾಗರಬಾವಿಯ ಮುದ್ದಿನಪಾಳ್ಯದಲ್ಲಿ ನಡೆದ ಬಿ.ಕಾಂ ವಿದ್ಯಾರ್ಥಿ ಯೋಗೇಶ್ (19) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಬಾಲಕರು ಸೇರಿದಂತೆ ನಾಲ್ವರನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಭುವನ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಶೋಧ ಮುಂದುವರಿದಿದೆ. ಸೀನಿಯರ್ ವಿದ್ಯಾರ್ಥಿನಿಯ ವಿಚಾರಕ್ಕೆ ಯೋಗೇಶ್ ಹಾಗೂ ಭುವನ್ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಸೆ.30ರಂದು ಭುವನ್ ಯೋಗೇಶ್‌ನನ್ನು ಜಿಮ್ ಬಳಿ ಕರೆಸಿಕೊಂಡು ಸಹಚರರೊಂದಿಗೆ ಸೇರಿ ಗಲಾಟೆ ನಡೆಸಿ, ಚಾಕುವಿನಿಂದ ಇರಿದಿದ್ದಾನೆ ಎಂದು …

Read More »

ಮೈಸೂರಿನಲ್ಲಿ ವ್ಯಕ್ತಿ ಮೇಲೆ 6 ಜನರ ತಂಡದಿಂದ ದಾಳಿ: ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ

ಮೈಸೂರು: ಗೋಕುಲಂ ಬಡಾವಣೆಯಲ್ಲಿ ಆರು ಮಂದಿಯ ಗುಂಪು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಮಹೇಶ್ (40) ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡಿದೆ. ಮಹಿಳೆಯ ವಿಚಾರಕ್ಕೆ ಸಂಬಂಧಿಸಿದಂತೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ವಿವಿ ಪುರಂ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆರೋಪಿಗಳ ಬಂಧನಕ್ಕೆ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇನ್ನೊಂದೆಡೆ, ಈ ಬಾರಿ ಮೈಸೂರು ದಸರಾವನ್ನು ವೈಭವದಿಂದ ಆಚರಿಸಲು ಸಿದ್ಧತೆ ನಡೆಯುತ್ತಿದೆ ಎಂದು ಸಿಎಂ …

Read More »

ಜಿಮ್‌ನಲ್ಲಿ ವ್ಯಕ್ತಿಯನ್ನು ಕೂಡಿಹಾಕಿ ಹಲ್ಲೆ: ದೂರು

ಕಾಪು: ಮಾತನಾಡುವ ನೆಪದಲ್ಲಿ ಸ್ನೇಹಿತನನ್ನು ಕಾರಿನಲ್ಲಿ ಕರೆದೊಯ್ದು ಮಣಿಪಾಲದ ಜಿಮ್‌ವೊಂದರ ಕೊಠಡಿಯಲ್ಲಿ ಕೂಡಿಹಾಕಿ ಹಲ್ಲೆ ನಡೆಸಿದ ಆರೋಪದಡಿ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಪು ಮಲ್ಲಾರು ನಿವಾಸಿ ಕೆ.ಎಸ್. ಮೊಹಮ್ಮದ್ ಹಮ್ರಾಝ್ (29) ಹಲ್ಲೆಗೊಳಗಾದವರು. ಅ.1ರಂದು ಇಲ್ಯಾಸ್ ಹಸನಬ್ಬ ಮನೆಗೆ ಬಂದು ಮಾತನಾಡುವುದಿದೆ ಎಂದು ಹೇಳಿ ಹಮ್ರಾಝ್ ಅವರನ್ನು ಕಾರಿನಲ್ಲಿ ಮಣಿಪಾಲದ ಜಿಮ್‌ಗೆ ಕರೆದೊಯ್ದಿದ್ದಾನೆ ಎನ್ನಲಾಗಿದೆ. ಕಾರಿನಲ್ಲಿ ಕುಳಿತುಕೊಳ್ಳುವ ವೇಳೆ ಮುಖಕ್ಕೆ ಹೊಡೆದು, ಬಳಿಕ ಜಿಮ್‌ನ ಕೊಠಡಿಯಲ್ಲಿ ಕೂಡಿ …

Read More »

ದೊಣ್ಣೆ,ರಾಡ್‌ ಹಿಡಿದು ಹೊಡೆದಾಡಿದ ಕಾರ್ಮಿಕರು: 6 ಮಂದಿಗೆ ಗಂಭೀರ ಗಾಯ

ಬೆಂಗಳೂರು: ನಾಯಂಡಹಳ್ಳಿಯ ನಿರ್ಮಾಣ ಹಂತದ ಅಪಾರ್ಟ್‌ಮೆಂಟ್‌ನಲ್ಲಿ ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದೆ. ಎರಡೂ ಗುಂಪುಗಳು ಪರಸ್ಪರ ದೊಣ್ಣೆ ಹಾಗೂ ರಾಡ್‌ಗಳಿಂದ ಹಲ್ಲೆ ನಡೆಸಿದ ಪರಿಣಾಮ 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಟ್ಟಡದ ಮೇಲ್ಮಹಡಿಯಲ್ಲಿ ಉತ್ತರ ಪ್ರದೇಶದವರು ಹಾಗೂ ನೆಲಮಹಡಿಯಲ್ಲಿ ಪಶ್ಚಿಮ ಬಂಗಾಳದ ಕಾರ್ಮಿಕರು ವಾಸಿಸುತ್ತಿದ್ದರು. ಗುರುವಾರ ನಡೆದ ಜಗಳ ವಿಕೋಪಕ್ಕೆ ತಿರುಗಿ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ. ಜಗಳದ ಸದ್ದು …

Read More »