Breaking News

Breaking News

ಹುಬ್ಬಳ್ಳಿಯಲ್ಲಿ ಕಳ್ಳರ ಅಟ್ಟಹಾಸ ಮುಂದುವರಿಕೆ: ಅಂಗಡಿ ಮುಂದೆ ನಿಲ್ಲಿಸಿದ್ದ ವಾಹನ ಎಗರಿಸಿದ ಕಳ್ಳರು…

ಹುಬ್ಬಳ್ಳಿ: ನಗರದಲ್ಲಿ ಹಾಡಾಗಲೇ ಕಳ್ಳರ ಹಾವಳಿ ಹೆಚ್ಚುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಜನ ಸಂಚಾರ ಇರುವ ಸಮಯದಲ್ಲೇ ಅಂಗಡಿ ಮುಂದೆ ನಿಲ್ಲಿಸಿದ್ದ ವಾಹನವನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರುವ ಘಟನೆ ಬೆಳಕಿಗೆ ಬಂದಿದೆ… ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಅಂಗಡಿ ಮುಂಭಾಗ ನಿಲ್ಲಿಸಿದ್ದ ವಾಹನವನ್ನು ಕಳ್ಳರು ಹಾಡಾಗಲೇ ಕದ್ದು ಪರಾರಿಯಾಗಿದ್ದಾರೆ. ಈ ಸಂಪೂರ್ಣ ಘಟನೆ ಸಮೀಪದಲ್ಲಿದ್ದ ಸಿಸಿಟಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ತಿಳಿದುಬಂದಿದೆ… ಹಾಡಾಗಲೇ ನಡೆದ ಈ …

Read More »

ರೈಲಿಗೆ ಸಿಲುಕಿ ವ್ಯಕ್ತಿ ಆತ್ಮಹತ್ಯೆ

ಆನಂದಪುರ: ತಾಳಗುಪ್ಪದಿಂದ ಮೈಸೂರಿಗೆ ತೆರುಳುತ್ತಿದ್ದ ಮೈಸೂರ್ ಇಂಟರ್ ಸಿಟಿ ರೈಲಿಗೆ ಆನಂದಪುರ ಸಮೀಪ ನವ ಟೂರ್ ಬಳಿ ಓರ್ವ ವ್ಯಕ್ತಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ.14ರ ಶನಿವಾರ ಮಧ್ಯಾಹ್ನ ನಡೆದಿದೆ. ನವಟೂರ್ ಗ್ರಾಮದ ಭದ್ರಾಚಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ.ತಾಳಗುಪ್ಪದಿಂದ ಮೈಸೂರಿಗೆ ತೆರಳುತ್ತಿದ್ದ ಇಂಟರ್ ಸಿಟಿ ರೈಲು 3.30ರ ಸುಮಾರಿಗೆ ಮೈಸೂರು ಕಡೆಗೆ ಚಲಿಸುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. ಈ …

Read More »

ದಾವಣಗೆರೆ: ಉಡುಗೊರೆ ನೆಪದಲ್ಲಿ ₹ 47 ಲಕ್ಷ ವಂಚನೆ

ವಿದ್ಯಾನಗರದ ನಿವಾಸಿಗೆ ಆರೋಪಿ ಡಾ.ನೀಲ್‌ ಆಶ್ಲೆ ಸಾಮಾಜಿಕ ಜಾಲತಾಣದ ಮೂಲಕ ಪರಿಚಿತನಾಗಿದ್ದ. ಸ್ಕಾಟ್‌ಲೆಂಡ್‌ನಲ್ಲಿ ವೈದ್ಯನಾಗಿರುವುದಾಗಿ ಮಹಿಳೆಯ ವಿಶ್ವಾಸ ಗಳಿಸಿದ್ದ. ಮಹಿಳೆಯ ಪುತ್ರನ ಜನ್ಮದಿನಕ್ಕೆ ಬೆಲೆಬಾಳುವ ಉಡುಗೊರೆ ಕಳುಹಿಸುವುದಾಗಿ ನಂಬಿಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಅ.17ರಂದು ಮಹಿಳೆಗೆ ಕರೆ ಮಾಡಿದವರು ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಎಂಬುದಾಗಿ ಪರಿಚಯ ಮಾಡಿಕೊಂಡಿದ್ದರು. ವಿದೇಶದಿಂದ ದುಬಾರಿ ಗಿಫ್ಟ್‌ಬಾಕ್ಸ್‌ ಬಂದಿರುವುದಾಗಿ ನಂಬಿಸಿದ್ದರು. ಇದಕ್ಕೆ ₹ 35,000 ಶುಲ್ಕ ಪಾವತಿಸುವಂತೆ ಸೂಚಿಸಿದ್ದರು. ಇದನ್ನು ನಂಬಿದ ಮಹಿಳೆ ಹಣ …

Read More »

LPG ಸಿಲಿಂಡರ್ ಬಿಕ್ಕಟ್ಟು- ಸೈಬರ್ ವಂಚಕರ ತಂತ್ರಕ್ಕೆ 4 ಲಕ್ಷ ರೂ. ಕಳೆದುಕೊಂಡ ಮಹಿಳೆಯರು

ದೇಶಾದ್ಯಂತ LPG ಕೊರತೆ ಎದುರಾದ ಬೆನ್ನಲ್ಲೇ ಅನಿಲ ಮಾಹಿತಿಯ ನವೀಕರಣವನ್ನು ಪಡೆಯುವ ನೆಪದಲ್ಲಿ ಆನ್ಲೈನ್ ವಂಚಕರು ಮಹಿಳೆಯರಿಬ್ಬರಿಗೆ ವಂಚಿಸಿದ ಘಟನೆ ಮಹಾರಾಷ್ಟ್ರದ ಕಲ್ಯಾಣ-ಡೊಂಬಿವಲಿ ಪ್ರದೇಶದಿಂದ ವರದಿಯಾಗಿದೆ. ದೂರಿನ ಪ್ರಕಾರ, ಇಬ್ಬರು ಮಹಿಳೆಯರು ಅಪರಿಚಿತ ವ್ಯಕ್ತಿಯ ಕರೆಯನ್ನು ಸ್ವೀಕರಿಸಿದ್ದರು. ತಾನು ಮಹಾನಗರ ಗ್ಯಾಸ್ ಲಿಮಿಟೆಡ್ ನಿಂದ ಮಾತನಾಡುತ್ತಿರುವುದಾಗಿ ಹೇಳಿಕೊಂಡಿದ್ದ ವ್ಯಕ್ತಿ ತಮ್ಮ ಫೋನ್‌ ನಲ್ಲಿ ಫಾರಂ ಭರ್ತಿ ಮಾಡಲು ಎಪಿಕೆ ಫೈಲ್ ಒಂದನ್ನು ಡೌನ್ಲೋಡ್ ಮಾಡಿಕೊಂಡು ಅದನ್ನು ತೆರೆಯುವಂತೆ ಸೂಚಿಸಿದ್ದ. ಅದರಂತೆ …

Read More »

ಪಡಿತರ ಅಕ್ಕಿ ಸಾಗಾಟ: ಇಬ್ಬರ ಬಂಧನ

ಗುಂಡ್ಲುಪೇಟೆ(ಚಾಮರಾಜನಗರ): ಪಡಿತರ ಅಕ್ಕಿ ಸಾಗಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ತೆರಕಣಾಂಬಿ ಠಾಣೆ ಪೊಲೀಸರು ಬಂಧಿಸಿರುವ ಘಟನೆ ತಾಲೂಕಿನ ಪರಮಾಪುರ ಗ್ರಾಮದ ಬಳಿ ಮಾ.14ರ ಶನಿವಾರ ನಡೆದಿದೆ. ಟಿ.ನರಸೀಪುರ ತಾಲೂಕಿನ ಹಳೇ ನರಿಪುರ ಗ್ರಾಮದ ಹುಸೇನ್(28) ಮತ್ತು ನಿಸಾರ್ ಅಹಮದ್(52) ಬಂಧಿತ ಆರೋಪಿಗಳು. ಚಾಲಕ ಹುಸೇನ್ ಮತ್ತು ನಿಸಾರ್ ಅಹಮದ್ ಇಬ್ಬರು ಮಹೀಂದ್ರ ಮ್ಯಾಕ್ಸಿಮ್ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ತೆರಕಣಾಂಬಿ ಪೊಲೀಸ್ …

Read More »

ಉಪ್ಪಿನಂಗಡಿ: ಕೋಳಿ ಅಂಕಕ್ಕೆ ದಾಳಿ; ಐವರ ವಿರುದ್ಧ ಪ್ರಕರಣ ದಾಖಲು

ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಶೆಟ್ಟಿಕೋಡಿ ಎಂಬಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನಾಲ್ಕು ಹುಂಜಗಳನ್ನು ವಶಕ್ಕೆ ಪಡೆದಿದ್ದಾರೆ. ಕೊಡಂಬೆಟ್ಟು ಗ್ರಾಮದ ಮುಗೇರ ಮನೆಯ ಅಂಕಿತ್, ಉರುಡಾಯಿ ನಿವಾಸಿ ಯಶೋಧರ, ಮುಗೇರ ಮನೆಯ ಶಿವಪ್ಪ, ತಣ್ಣೀರುಪಂಥ ಗ್ರಾಮದ ಮುಂದಿ ಮನೆಯ ಕರುಣಾಕರ ಪೂಜಾರಿ, ಮಚ್ಚಿನ ಗ್ರಾಮದ ಮಡಕ್ಕಿಲ ಮನೆಯ ಉಮೇಶ ಅವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸ್ಥಳದಿಂದ ನಾಲ್ಕು ಅಂಕದ …

Read More »

ಎರಡು ನಿಮಿಷ ತಡವಾಗಿ ಬಂದ ಬಾಲಕನಿಗೆ ಬಿಸಿಲಿನಲ್ಲಿ ನಿಲ್ಲಿಸಿ ಶಿಕ್ಷೆ, ಪ್ರಶ್ನಿಸಿದ್ದಕ್ಕೆ ಕನ್ನಡ ಬೇಡವೆಂದ ಶಿಕ್ಷಕಿ

ಬೆಂಗಳೂರು: ಪೋಷಕರಲ್ಲಿ ಕನ್ನಡದಲ್ಲಿ ಉತ್ತರಿಸಿ ಎಂದಿದಿದ್ದಕ್ಕೆ ಶಿ‌ಕ್ಷಕಿಯೊಬ್ಬರು ನನಗೆ ಕನ್ನಡ ಬೇಡವೆಂದು ಅಹಂನಿಂದ ಉತ್ತರಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಯಾವಾ ಜಿಲ್ಲೆಯಲ್ಲಿ ನಡೆದಿದೆ ಎಂದು ಇನ್ನೂ ತಿಳಿದುಬಂದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಪೋಷಕರು ತನ್ನ ಮಗನನ್ನು ಯಾಕೆ ಬಿಸಿಲಿನಲ್ಲಿ ನಿಲ್ಲಿಸಿ ಶಿಕ್ಷಿಸಿದ್ದಾರೆಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಶಿಕ್ಷಕಿ ಆತ ಪಾಠ ಕಲಿತಿಲ್ಲ ಎಂದು ಹೇಳಿದ್ದಾರೆ. ಬಿಸಿಲಿನಲ್ಲಿ ಆತನಿಗೆ ಸರಿಹೋಗಲ್ಲ. ಯಾಕೆ ಹಾಗೇ ನಡೆಸಿಕೊಂಡಿದ್ದಾರೆ …

Read More »

VIDEO: ಶಾಲಾ ಆವರಣದಲ್ಲಿ ನಾಗರಹಾವು ಕಚ್ಚು – ಟೀಚರ್ ಸಮಯಪ್ರಜ್ಞೆ ಮೆರೆದ ಕ್ಷಣ..!

SHOCKING: ವಿದ್ಯಾರ್ಥಿನಿಗೆ ನಾಗರಹಾವು ಕಚ್ಚು – ಬಾಯಿಯಿಂದ ವಿಷ ಹೀರಿಸಿ ಪ್ರಾಣ ಉಳಿಸಿದ ಶಿಕ್ಷಕ..! ಚಿತ್ರದುರ್ಗದಲ್ಲಿ ಹೃದಯಕಂಪಿ ಕ್ಷಣ: ಹಾವು ಕಚ್ಚಿದ ಬಾಲಕಿ, ಶಿಕ್ಷಕರ ಧೈರ್ಯಕ್ಕೆ ಉಳಿದ ಜೀವ..! ನಾಗರಹಾವು ದಾಳಿ – ಕ್ಷಣಾರ್ಧದಲ್ಲಿ ಪ್ರಥಮ ಚಿಕಿತ್ಸೆ ನೀಡಿ ವಿದ್ಯಾರ್ಥಿನಿ ಉಳಿಸಿದ ಟೀಚರ್..! ವಿಷ ಹೀರಿದ ಶಿಕ್ಷಕ: ಪ್ರಾಣ ಪಣಕ್ಕಿಟ್ಟು ಬಾಲಕಿ ಉಳಿಸಿದ ಚಿತ್ರದುರ್ಗದ ಘಟನೆ..! ಹಾವು ಕಚ್ಚಿದ ವಿದ್ಯಾರ್ಥಿನಿ ಚೀರಾಟ – ಓಡಿ ಬಂದ ಶಿಕ್ಷಕನ ಸಾಹಸಕ್ಕೆ ಉಳಿದ …

Read More »

ಮಾದಕ ದ್ರವ್ಯ‌ದ ಸಿರಪ್‌ ಜಪ್ತಿ; ಇಬ್ಬರ ಬಂಧನ

ಬೀದರ್‌: ಮಾದಕ ದ್ರವ್ಯದ ಅಂಶ ಹೊಂದಿರುವ ₹24 ಸಾವಿರ ಮೌಲ್ಯದ 142 ಸಿರಪ್‌ ಬಾಟಲಿಗಳನ್ನು ಜಪ್ತಿ ಮಾಡಿರುವ ನಗರದ ಗಾಂಧಿ ಗಂಜ್‌ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ನಗರದ ಶಾಹೀನ್‌ ಕಾಲೇಜು ಕ್ರಾಸ್‌ ಹತ್ತಿರ ಇಬ್ಬರು ಬ್ಯಾಗಿನಲ್ಲಿ 100 ಎಮ್‌.ಎಲ್‌.ನ 142 ಸಿರಪ್‌ ಬಾಟಲಿಗಳನ್ನು ಬ್ಯಾಗಿನಲ್ಲಿ ಇಟ್ಟುಕೊಂಡು ಸಾರ್ವಜನಿಕರು ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ, ಸಿರಪ್‌ ಜೊತೆಗೆ ಅಲ್ಲಮಪ್ರಭು ನಗರದ ಸಂಗಮೇಶ್‌ ಸುಭಾಷ್‌ ಹಾಗೂ ಶಶಿಶೇಖರ್‌ …

Read More »

ಶಾಖಾ ಕಾಲುವೆಯಲ್ಲಿ ವಿದ್ಯಾರ್ಥಿ ನೀರುಪಾಲು; ಇನ್ನೂ ಪತ್ತೆಯಾಗದ ವಿದ್ಯಾರ್ಥಿ ಶವ

ಶಹಾಪುರ: ತಾಲ್ಲೂಕಿನ ಭೀಮರಾಯನಗುಡಿ ಬೊರುಕ್ ಪ್ಲಾಂಟ್ ಬಳಿ ಶಹಾಪುರ ಶಾಖಾ ಕಾಲುವೆಯಲ್ಲಿ (ಎಸ್‌ಬಿಸಿ) ಗುರುವಾರ ಈಜಲು ಹೋಗಿ ನೀರು ಪಾಲಾಗಿದ್ದ ಕೃಷಿ ಮಹಾ ವಿದ್ಯಾಲಯದ ವಿದ್ಯಾರ್ಥಿ ಹರೀಶರಡ್ಡಿ ಶವ ಶುಕ್ರವಾರ ಇನ್ನೂ ಪತ್ತೆ ಆಗಿಲ್ಲ. ಅಗ್ನಿ ಶಾಮಕ ದಳದ 17 ಸಿಬ್ಬಂದಿ ಹಾಗೂ ತಜ್ಞ ಈಜು ಮುಳುಗರನ್ನು ಕರೆಯಿಸಿ ಕಾಲುವೆಯಲ್ಲಿ ಇಳಿಸಿ ಶೋಧ ಕಾರ್ಯ ಚುರುಕು ನೀಡಿದೆ. ಕಾಲುವೆಯ ಸುಮಾರು 2 ಕಿ.ಮೀ ದೂರದವರೆಗೆ ಶವ ಶೋಧ ಕಾರ್ಯ ನಡೆದಿದೆ …

Read More »