Breaking News

Breaking News

ಸಚಿವ ಹೆಚ್.ಬಾಲಕೃಷ್ಣ 600 ಕೋಟಿ ಸರ್ಕಾರಿ ಜಾಮೀನು ಕಬಳಿಕೆ : ಎ.ಮಂಜು ಗಂಭೀರ ಆರೋಪ!

ಬೆಂಗಳೂರು: ತಾವರೆಕೆರೆ ಬಳಿಯ ಕುರುಬರಹಳ್ಳಿಯಲ್ಲಿ ಬಡವರಿಗೆ ಹಂಚಿಕೆಯಾಗಬೇಕಿದ್ದ ಸುಮಾರು 36 ಎಕರೆ ಸರ್ಕಾರಿ ಜಮೀನನ್ನು ಪೌರಾಡಳಿತ ಸಚಿವ ಎಚ್.ಸಿ. ಬಾಲಕೃಷ್ಣ ಅವರು ರಾಜಕೀಯ ಪ್ರಭಾವ ಬಳಸಿ ಅಕ್ರಮವಾಗಿ ಕಬಳಿಸಿದ್ದಾರೆ ಎಂದು ಮಾಗಡಿ ಮಾಜಿ ಶಾಸಕ ಎ. ಮಂಜುನಾಥ್ ಆರೋಪಿಸಿದ್ದಾರೆ. ಈ ಸಂಬಂಧ ರಾಜ್ಯಪಾಲರಿಗೆ ದೂರು ನೀಡಿ ವಿಚಾರಣೆಗೆ ಅನುಮತಿ ಕೋರಲಾಗುವುದು ಎಂದು ಅವರು ತಿಳಿಸಿದ್ದಾರೆ. ಸರ್ವೇ ನಂಬರ್ 158ರಲ್ಲಿರುವ ಜಮೀನಿನ ಪೈಕಿ 10 ಎಕರೆ ಸಚಿವರ ಪತ್ನಿಯ ಹೆಸರಿಗೆ ಹಾಗೂ …

Read More »

ಚನ್ನಗಿರಿ | ಅತ್ಯಾಚಾರಿ ಬಂಧಿಸದ ಪೊಲೀಸರು: ಮನನೊಂದು ವ್ಯಕ್ತಿ ಆತ್ಮಹತ್ಯೆ

ಚನ್ನಗಿರಿ: ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಬಂಧಿಸಿಲ್ಲ ಎಂದು ಮನನೊಂದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಚನ್ನಗಿರಿ ತಾಲ್ಲೂಕಿನಲ್ಲಿ ನಡೆದಿದೆ. ಆಗಸ್ಟ್‌ 22ರಂದು ಮಗಳ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ದೂರು ನೀಡಲಾಗಿದ್ದು, ಪೋಕ್ಸೊ ಪ್ರಕರಣ ದಾಖಲಾಗಿತ್ತು. ಆದರೆ ಒಂದೂವರೆ ತಿಂಗಳಾದರೂ ಆರೋಪಿ ಬಂಧನವಾಗಿಲ್ಲ ಎಂದು ಆರೋಪಿಸಲಾಗಿದೆ. ಇದರಿಂದ ಮನನೊಂದ ತಂದೆ ಗುರುವಾರ ತೋಟದಲ್ಲಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು …

Read More »

ಬೆಂಗಳೂರಿನಲ್ಲಿ ವಿದ್ಯಾರ್ಥಿಗಳ ನಡುವೆ ಮಾರಾಮಾರಿ: ಚಾಕು ಇರಿದು ಬಿಕಾಂ ವಿದ್ಯಾರ್ಥಿಯ ಹತ್ಯೆ!

ಬೆಂಗಳೂರು: ನಾಗರಬಾವಿಯಲ್ಲಿ ಕಾಲೇಜು ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಬಿಕಾಂ ವಿದ್ಯಾರ್ಥಿ ಯೋಗೇಶ್ (19) ಕೊಲೆಯಾಗಿದ್ದಾನೆ. ಕಾಲೇಜಿನ ಹಿಂಭಾಗದ ಜಿಮ್ ಬಳಿ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದ್ದು, ಈ ವೇಳೆ ಯೋಗೇಶ್‌ನ ಎದೆಗೆ ಚಾಕುವಿನಿಂದ ಇರಿಯಲಾಗಿದೆ. ಗಂಭೀರವಾಗಿ ಗಾಯಗೊಂಡ ಯೋಗೇಶ್‌ನನ್ನು ಸ್ನೇಹಿತರು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಪ್ರಾಥಮಿಕ ಮಾಹಿತಿಯಂತೆ ಕೊಲೆ ಆರೋಪಿಗಳು ಕಾಲೇಜಿನ ವಿದ್ಯಾರ್ಥಿಗಳಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ …

Read More »

ಯುವತಿಗಾಗಿ ಯುವಕರ ನಡುವೆ ಗಲಾಟೆ: ಮನನೊಂದು ಯುವಕ ಆತ್ಮಹ*ತ್ಯೆ ಶಂಕೆ..?

ಬೀದರ್: ಭಾಲ್ಕಿಯಲ್ಲಿ 21 ವರ್ಷದ ಸುದರ್ಶನ ರತ್ಕಲೆ ಎಂಬ ಯುವಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಯುವತಿಯ ವಿಚಾರವಾಗಿ ಯುವಕರ ನಡುವೆ ಗಲಾಟೆ ನಡೆದಿದ್ದೇ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಸುದರ್ಶನ ಕುಟುಂಬಸ್ಥರು ಇದನ್ನು ಆತ್ಮಹತ್ಯೆಯಲ್ಲ, ಕೊಲೆ ಎಂದು ಆರೋಪಿಸಿದ್ದಾರೆ. ಸುದರ್ಶನ ತಾಯಿ ಲಕ್ಷ್ಮೀ, ತನ್ನ ಮಗನನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿ ತನಿಖೆಗೆ ಒತ್ತಾಯಿಸಿದ್ದಾರೆ. ರೈಲ್ವೆ ಪೊಲೀಸರು ಪ್ರಾಥಮಿಕವಾಗಿ ಇದನ್ನು ಆತ್ಮಹತ್ಯೆ ಎಂದು …

Read More »

ಚಿತ್ರದುರ್ಗ ಗ್ರಾಮಾಂತರ ಪೊಲೀಸರ ಮಿಂಚಿನ ಕಾರ್ಯಾಚರಣೆ: ಯುವಕನ ಕೊಲೆ ಆರೋಪಿ 9 ಗಂಟೆಗಳಲ್ಲೇ ಅರೆಸ್ಟ್

ಚಿತ್ರದುರ್ಗ: ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪಿಯನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಾದ ಕೇವಲ 9 ಗಂಟೆಗಳಲ್ಲೇ ಬಂಧಿಸಿದ್ದಾರೆ. ಶಿವಗಂಗಾ ಗ್ರಾಮದ ರಂಗಸ್ವಾಮಿ (26) ಕೊಲೆಯಾದವರು. ಚೇಳುಗುಡ್ಡ ಗ್ರಾಮದ ಜನಾರ್ಧನ ಬಂಧಿತ ಆರೋಪಿ. ಸೆ.26ರಂದು ರಂಗಸ್ವಾಮಿಯನ್ನು ಜಾನುಕೊಂಡ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಮಾತನಾಡಿಸಿ ಕರೆದುಕೊಂಡು ಹೋದ ಜನಾರ್ಧನ, ಮದ್ಯಪಾನ ಮಾಡಿಸಿ ಈರಜ್ಜನಹಟ್ಟಿ ಗೇಟ್ ಬಳಿಯ ಗುಡ್ಡ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಬಳಿಕ ಹಲ್ಲೆ ನಡೆಸಿ, …

Read More »

ಬೆಂಗಳೂರಲ್ಲಿ ವೃದ್ದೆಗೆ ನಿದ್ರೆ ಬರಿಸೋ ಟೀ ಕುಡಿಸಿ, 4 ಲಕ್ಷ ಮೌಲ್ಯ ಚಿನ್ನ ಎಗರಿಸಿದ ಖದೀಮ!

ಬೆಂಗಳೂರು: ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಖದೀಮನೊಬ್ಬ ವೃದ್ಧೆಗೆ ಟೀ ಕುಡಿಸಿ ಸುಮಾರು ₹4 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿರುವ ಘಟನೆ ನಡೆದಿದೆ. ದೊಡ್ಡಬಳ್ಳಾಪುರದ 66 ವರ್ಷದ ಚೆನ್ನಮ್ಮ ಮೈಸೂರಿಗೆ ತೆರಳಲು ಬಸ್ ನಿಲ್ದಾಣಕ್ಕೆ ಬಂದಿದ್ದರು. ಬಸ್ ಹತ್ತುವ ವೇಳೆ ವೃದ್ಧೆಯನ್ನು ಹಿಂಬಾಲಿಸಿದ ಆರೋಪಿ, ಅವರು ನಿರಾಕರಿಸಿದರೂ ಟೀ ತಂದುಕೊಟ್ಟಿದ್ದಾನೆ. ಟೀ ಸೇವಿಸಿದ ಬಳಿಕ ಚೆನ್ನಮ್ಮ ನಿದ್ರೆಗೆ ಜಾರಿದ್ದಾರೆ ಎನ್ನಲಾಗಿದ್ದು, ಈ ವೇಳೆ ಆರೋಪಿ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾನೆ. ಘಟನೆ ಬಳಿಕ …

Read More »

21 ವರ್ಷದ ಯುವಕನ ಕಿಡ್ನಾಪ್ ಮಾಡಿ ಕೊಲೆ: ಮೃತದೇಹ ರೈಲ್ವೆ ಟ್ರ್ಯಾಕ್ ಬಳಿ ಎಸೆದು ಪರಾರಿ! ಐವರ ಬಂಧನ

ಬೀದರ್: ಭಾಲ್ಕಿ ಪಟ್ಟಣದಲ್ಲಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 21 ವರ್ಷದ ಸುದರ್ಶನ ರಟಕಲ್ ಎಂಬ ಯುವಕನನ್ನು ಅಪಹರಿಸಿ ಕೊಲೆ ಮಾಡಿರುವ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಲ್ಕಿ ನಗರ ಪೊಲೀಸರು ಭಾಗ್ಯವಾನ್, ವಿಠಲ್, ಸಚಿನ್, ಸಾಯಿ ಕಾಂಬ್ಳೆ ಹಾಗೂ ಆದಿತ್ಯ ಕಾಂಬ್ಳೆ ಎಂಬ ಐವರನ್ನು ಬಂಧಿಸಿದ್ದಾರೆ. ಮಾಸುಮಪಾಶಾ ಕಾಲೋನಿಯಿಂದ ಸುದರ್ಶನನನ್ನು ಅಪಹರಿಸಿದ್ದ ಆರೋಪಿಗಳು, ಹಲ್ಲೆ ನಡೆಸಿ ಕೊಲೆ ಮಾಡಿದ ಬಳಿಕ ಮೃತದೇಹವನ್ನು ಕಡ್ಯಾಳ ಗ್ರಾಮದ ಬಳಿಯ ರೈಲ್ವೆ ಟ್ರ್ಯಾಕ್ …

Read More »

ಬಸ್ ನಿಲ್ದಾಣದಲ್ಲಿ ಯುವತಿಯರ ಫೋಟೋ ತೆಗೆಯುತ್ತಿದ್ದ ವ್ಯಕ್ತಿಗೆ ಧರ್ಮದೇಟು! ಮೊಬೈಲ್ʼನಲ್ಲಿತ್ತು ಅಶ್ಲೀಲ ಚಿತ್ರಗಳು

ಕೊಪ್ಪಳ: ಗಂಗಾವತಿ ಬಸ್ ನಿಲ್ದಾಣದಲ್ಲಿ ಯುವತಿಯರು ಹಾಗೂ ವಿದ್ಯಾರ್ಥಿನಿಯರ ಫೋಟೋಗಳನ್ನು ಅನುಮತಿಯಿಲ್ಲದೆ ಮೊಬೈಲ್‌ನಲ್ಲಿ ಸೆರೆಹಿಡಿಯುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಸಾರ್ವಜನಿಕರು ಹಿಡಿದು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಆರೋಪಿತ ವ್ಯಕ್ತಿ ರಾಯಚೂರು ಜಿಲ್ಲೆಯ ಮಾನ್ವಿ ನಿವಾಸಿ ಎನ್ನಲಾಗಿದೆ. ಯುವತಿಯರ ಫೋಟೋ ತೆಗೆಯುತ್ತಿದ್ದುದನ್ನು ಗಮನಿಸಿದ ಮಹಿಳೆಯರು ಆತನನ್ನು ಪ್ರಶ್ನಿಸಿದ್ದು, ಬಳಿಕ ಸಾರ್ವಜನಿಕರೂ ಸ್ಥಳದಲ್ಲಿ ಜಮಾಯಿಸಿದ್ದಾರೆ. ಈ ವೇಳೆ ಕೆಲವರು ಆತನಿಗೆ ಥಳಿಸಿದ್ದಾರೆ ಎನ್ನಲಾಗಿದೆ. ಮೊಬೈಲ್ ಪರಿಶೀಲಿಸಿದಾಗ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರ ಹಲವು …

Read More »

ಕಾಡಿನಲ್ಲಿ ಅವಧಿ ಮೀರಿದ ಔಷಧಗಳ ರಾಶಿ: ಡಿಎಚ್‌ಒ ನೇತೃತ್ವದಲ್ಲಿ ತನಿಖೆ

ರಾಮನಗರ: ಅಜ್ಜನಹಳ್ಳಿ ಗ್ರಾಮದ ಹೊರವಲಯದ ಅರಣ್ಯ ಪ್ರದೇಶದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಅವಧಿ ಮೀರಿದ ಔಷಧಿಗಳ ರಾಶಿ ಪತ್ತೆಯಾಗಿದೆ. ಅಪರಿಚಿತರು ರಸ್ತೆ ಬದಿ ಹಾಗೂ ಬಂಡೆಗಳ ಮೇಲೆ ಔಷಧಿಗಳನ್ನು ಎಸೆದು ಹೋಗಿದ್ದು, ಸ್ಥಳೀಯರು ಆರೋಗ್ಯ ಇಲಾಖೆ ಗಮನಕ್ಕೆ ತಂದಿದ್ದಾರೆ. ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಔಷಧಿಗಳ ಬ್ಯಾಚ್ ನಂಬರ್, ತಯಾರಿಕೆ ದಿನಾಂಕ ಮತ್ತು ಬಳಕೆ ಅವಧಿ ಪರಿಶೀಲಿಸಿದರು. ಮಧುಮೇಹ, ರಕ್ತದೊತ್ತಡ ಸೇರಿದಂತೆ ವಿವಿಧ …

Read More »

AI ಬಳಸಿ ನಕಲಿ ಹಾಲ್‌ಟಿಕೆಟ್ ಸೃಷ್ಟಿಸಿ ಪೊಲೀಸ್ ನೇಮಕಾತಿ ದೈಹಿಕ ಪರೀಕ್ಷೆಗೆ ಹಾಜರಾಗಲು ಯತ್ನ : ಯುವಕ ಅರೆಸ್ಟ್!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿಯ ದೈಹಿಕ ಪರೀಕ್ಷೆಗೆ ಹಾಜರಾಗಲು AI ತಂತ್ರಜ್ಞಾನ ಬಳಸಿ ನಕಲಿ ಹಾಲ್‌ಟಿಕೆಟ್ ಸೃಷ್ಟಿಸಿದ ಆರೋಪದ ಮೇಲೆ ಕಡಬ ಮೂಲದ ಯಜ್ಞೇಶ್ ಬಿ.ಜೆ. ರೈ (22) ಎಂಬಾತನನ್ನು ಬರ್ಕೆ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ET&PST ಪರೀಕ್ಷೆಯ ವೇಳೆ ಅಭ್ಯರ್ಥಿಗಳ ದಾಖಲೆ ಪರಿಶೀಲಿಸುವಾಗ ಯಜ್ಞೇಶ್ ನೀಡಿದ್ದ ಹಾಲ್‌ಟಿಕೆಟ್‌ ಅನುಮಾನಕ್ಕೆ ಕಾರಣವಾಗಿದೆ. KEA ಸಾಫ್ಟ್‌ವೇರ್‌ನಲ್ಲಿ ಪರಿಶೀಲಿಸಿದಾಗ CPC5225446 ಅರ್ಜಿ …

Read More »