BigTv News
October 1, 2026
Breaking News
ಬೆಂಗಳೂರು: ಎರಡು ಗುಂಪಿನ ವಿದ್ಯಾರ್ಥಿಗಳ ನಡುವೆ ನಡೆದ ಗಲಾಟೆ ಒಬ್ಬ ವಿದ್ಯಾರ್ಥಿಯ ಕೊಲೆಯಲ್ಲಿ ಅಂತ್ಯವಾದ ಘಟನೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ. ನಾಗದೇವನಹಳ್ಳಿ ನಿವಾಸಿ, ಬಿ.ಕಾಂ ವಿದ್ಯಾರ್ಥಿ ಯೋಗೇಶ್ (20) ಕೊಲೆಯಾದವರು. ನಾಗರಬಾವಿ 2ನೇ ಹಂತದ ಖಾಸಗಿ ಕಾಲೇಜಿನ ಹಿಂಭಾಗದಲ್ಲಿ ಈ ಘಟನೆ ನಡೆದಿದೆ. ಕಾಲೇಜಿನ ವಿದ್ಯಾರ್ಥಿ ಭುವನ್ ಕರೆ ಮಾಡಿ ಯೋಗೇಶ್‌ನನ್ನು ಸ್ಥಳಕ್ಕೆ ಬರುವಂತೆ ಹೇಳಿದ್ದು, ಯೋಗೇಶ್ ಸ್ನೇಹಿತ ಪ್ರಜ್ವಲ್ ಜೊತೆ ಅಲ್ಲಿಗೆ ತೆರಳಿದ್ದ. …
Read More »
BigTv News
October 1, 2026
Breaking News
ಬೆಂಗಳೂರು: ಅಕ್ರಮ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ಅವರಿಗೆ ಕಸ್ಟಮ್ಸ್ ಇಲಾಖೆ ₹89 ಕೋಟಿ ದಂಡ ವಿಧಿಸಿದೆ. ಕಸ್ಟಮ್ಸ್ ಅಧಿಕಾರಿ ಸಂದೀಪ್ ಅವರು ಈ ಕುರಿತು ಆದೇಶ ಹೊರಡಿಸಿದ್ದು, ದಂಡದ ಮಾಹಿತಿಯನ್ನು ರನ್ಯಾ ರಾವ್ ಅವರಿಗೆ ತಿಳಿಸಲಾಗಿದೆ. 2024ರ ಮಾರ್ಚ್ 7ರಿಂದ 2025ರ ಫೆಬ್ರವರಿವರೆಗೆ ಸುಮಾರು 113 ಕೆಜಿ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡಿದ ಪ್ರಕರಣದಲ್ಲಿ ರನ್ಯಾ ರಾವ್ ಭಾಗಿಯಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ದುಬೈನಿಂದ …
Read More »
BigTv News
October 1, 2026
Breaking News
ಬಾಗಲಕೋಟೆ: ಭ್ರೂಣ ಹತ್ಯೆ ಹಾಗೂ ಅಕ್ರಮ ಭ್ರೂಣ ಲಿಂಗ ಪತ್ತೆ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದ ಕವಿತಾ ಬಾಡನವರ, ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಮತ್ತೆ ಇದೇ ದಂಧೆಯಲ್ಲಿ ತೊಡಗಿರುವ ಶಂಕೆ ವ್ಯಕ್ತವಾಗಿದೆ. 2022 ಮತ್ತು 2024ರ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿದ್ದ ಕವಿತಾ, ಕಳೆದ ಜೂನ್‌ನಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದರು. ಸೆ.27ರಂದು ಚಿಮ್ಮಡ ಗ್ರಾಮದ ಮಧ್ಯವರ್ತಿ ಆನಂದ, ಮಹಾರಾಷ್ಟ್ರ ಮೂಲದ ಗರ್ಭಿಣಿಯೊಬ್ಬರಿಗೆ ಲಿಂಗ ಪರೀಕ್ಷೆ ಹಾಗೂ ಗರ್ಭಪಾತ ಮಾಡಿಸಿ ಕರೆದೊಯ್ಯುತ್ತಿದ್ದ ವೇಳೆ …
Read More »
BigTv News
September 30, 2026
Breaking News
ಯಾದಗಿರಿ: ಸ್ವಂತ ಮೊಮ್ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಆರೋಪದಡಿ 75 ವರ್ಷದ ಅಜ್ಜನ ವಿರುದ್ಧ ಪೋಕ್ಸೋ ಸೇರಿದಂತೆ ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಾಗಿದೆ. ಸುರಪುರ ತಾಲೂಕಿನ ಗ್ರಾಮವೊಂದರಲ್ಲಿ ಸೆ.23ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶರಣಪ್ಪ ಟಣಕೇದಾರ್ ಎಂಬಾತ ಬಾಲಕಿಗೆ ಚೂರಿ ತೋರಿಸಿ ಬೆದರಿಸಿ, ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ. ಅಲ್ಲದೆ, ಬಟ್ಟೆ ಬಿಚ್ಚಿಸಿ ಬಾಯಿಗೆ ಬಟ್ಟೆ ತುರುಕಿ ಕೊಲೆಗೆ ಯತ್ನಿಸಿದ ಆರೋಪವೂ ಕೇಳಿಬಂದಿದೆ. ಘಟನೆ ಗಮನಿಸಿದ …
Read More »
BigTv News
September 30, 2026
Breaking News
ಬೆಂಗಳೂರು: ನಾಗರಬಾವಿ ಪ್ರದೇಶದಲ್ಲಿ ಕಾಲೇಜು ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ನಡೆದ ಕ್ಷುಲ್ಲಕ ಗಲಾಟೆ ಭೀಕರ ಅಂತ್ಯ ಕಂಡಿದ್ದು, ಬಿಕಾಂ ವಿದ್ಯಾರ್ಥಿ ಯೋಗೇಶ್ ಮೃತಪಟ್ಟಿದ್ದಾರೆ. ಖಾಸಗಿ ಕಾಲೇಜು ಸಮೀಪ ನಡೆದ ವಾಗ್ವಾದ ಮಾರಾಮಾರಿಗೆ ತಿರುಗಿದ್ದು, ಯೋಗೇಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ಯೋಗೇಶ್ ಅವರನ್ನು ಸ್ನೇಹಿತರು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ …
Read More »
BigTv News
September 30, 2026
Breaking News
ಮಂಗಳೂರು: ಸುರತ್ಕಲ್ ಬಳಿಯ ಎಂಆರ್‌ಪಿಎಲ್ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಭಾರೀ ಸ್ಫೋಟದ ಬಳಿಕ ನಾಪತ್ತೆಯಾಗಿದ್ದ ಕಾರ್ಮಿಕನ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತನನ್ನು ಮೂಲ್ಕಿಯ ಮನೀಶ್ ಕರ್ಕೇರಾ (30) ಎಂದು ಗುರುತಿಸಲಾಗಿದ್ದು, ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ. ದುರ್ಘಟನೆಯಲ್ಲಿ ಮತ್ತೊಬ್ಬ ಕಾರ್ಮಿಕ ರಾಜೇಶ್ ಬ್ಯಾಪ್ಟಿಸ್ಟ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಫೋಟದ ಪಕ್ಕದ ಕಚೇರಿಯಲ್ಲಿದ್ದ ಎಂಟು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ …
Read More »
BigTv News
September 30, 2026
Breaking News
ಕಲಬುರಗಿ: ಸಾಲದ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿ ನಡುವೆ ನಡೆದ ಕಲಹ ದುರಂತಕ್ಕೆ ಕಾರಣವಾಗಿದ್ದು, ತಾಯಿ ತನ್ನ ಇಬ್ಬರು ಪುತ್ರಿಯರೊಂದಿಗೆ ಬಾವಿಗೆ ಹಾರಿದ ಘಟನೆ ಆಳಂದ ತಾಲೂಕಿನ ಇಕ್ಕಳಕಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಗೌರಮ್ಮ (52) ಹಾಗೂ ಪುತ್ರಿ ಭಾಗ್ಯಶ್ರೀ (25) ಮೃತಪಟ್ಟಿದ್ದಾರೆ. ಮತ್ತೊಬ್ಬ ಪುತ್ರಿ ಅಂಬಿಕಾ (21) ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾಲದ ವಿಚಾರವಾಗಿ ಗೌರಮ್ಮ ಹಾಗೂ ಪತಿ ಪೀರಪ್ಪ ನಡುವೆ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದೆ. ಇದರಿಂದ ಮನನೊಂದು …
Read More »
BigTv News
September 30, 2026
Breaking News
ಚಿಕ್ಕಬಳ್ಳಾಪುರ: ತಾಲ್ಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ವಸತಿ ಶಾಲೆಯ ಪ್ರಾಂಶುಪಾಲ ಈಶ್ವರ್ ರೆಡ್ಡಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಓದು ಬರಹ ಕಲಿಸುವ ನೆಪದಲ್ಲಿ ವಿದ್ಯಾರ್ಥಿನಿಯನ್ನು ಕೊಠಡಿಗೆ ಕರೆಸಿಕೊಳ್ಳುತ್ತಿದ್ದ ಪ್ರಾಂಶುಪಾಲರು, ಆಕೆಯ ವಿರೋಧದ ನಡುವೆಯೂ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಬಾಲಕಿ ದೂರಿನಲ್ಲಿ ಆರೋಪಿಸಿದ್ದಾಳೆ. ಬಾಲಕಿ ನೀಡಿದ ದೂರಿನ ಆಧಾರದ ಮೇಲೆ ದಿಬ್ಬೂರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸದ್ಯ ಸಂತ್ರಸ್ತ ಬಾಲಕಿಗೆ ಬಾಲಕಿಯರ ಬಾಲಮಂದಿರದಲ್ಲಿ …
Read More »
BigTv News
September 30, 2026
Breaking News
ಬೆಂಗಳೂರು: ನಗರ ಪೊಲೀಸರು ಕಳೆದ ನಾಲ್ಕು ತಿಂಗಳಲ್ಲಿ ₹161 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡು 29 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ 10 ವಿದೇಶಿ ಪ್ರಜೆಗಳು ಹಾಗೂ ಹೊರರಾಜ್ಯದ 19 ಪೆಡ್ಲರ್‌ಗಳು ಸೇರಿದ್ದಾರೆ. ಏಪ್ರಿಲ್‌ನಲ್ಲಿ ವಿದೇಶದಿಂದ ಡ್ರಗ್ಸ್ ಪೂರೈಸುತ್ತಿದ್ದ ಆರೋಪಿಯನ್ನು ಬಂಧಿಸಿ 3.2 ಕೆ.ಜಿ ಡ್ರಗ್ಸ್ ಜಪ್ತಿ ಮಾಡಲಾಗಿತ್ತು. ಬಳಿಕ ತನಿಖೆ ಮುಂದುವರಿಸಿದ ಪೊಲೀಸರು ನೋಯ್ಡಾದಿಂದ ಹೆಬ್ಬಾಳ, ಗಿರಿನಗರ ಹಾಗೂ ಬೆಳ್ಳಂದೂರಿಗೆ ಪೂರೈಕೆಯಾಗುತ್ತಿದ್ದ 26.3 ಕೆ.ಜಿ ಎಂಡಿಎಂಎ ಪತ್ತೆಹಚ್ಚಿದ್ದರು. ಜೂನ್‌ನಲ್ಲಿ 22.5 …
Read More »
BigTv News
September 30, 2026
Breaking News
ಉಡುಪಿ: ಕೊಲ್ಲೂರು ಠಾಣೆ ವ್ಯಾಪ್ತಿಯಲ್ಲಿ ಪತ್ನಿಗೆ ಇಂಜೆಕ್ಷನ್ ಮೂಲಕ ವಿಷ ನೀಡಿ ಕೊಲೆಗೆ ಯತ್ನಿಸಿದ ಪ್ರಕರಣದ ಆರೋಪಿಗಳಾಗಿದ್ದ ಪತಿ ಹಾಗೂ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗೋಳಿಹೊಳೆ ಗ್ರಾಮದ ಸೌಪರ್ಣಿಕಾ ನದಿ ಸಮೀಪ ನಡೆದಿದೆ. ವಿಠ್ಠಲ ನಾಯ್ಕ (35) ಹಾಗೂ ಭವ್ಯಾ ನಾಯ್ಕ ಅಲಿಯಾಸ್ ನಿಶ್ಮಿತಾ (33) ಮೃತರು. ವಿಠ್ಠಲ ನಾಯ್ಕ ತನ್ನ ಪತ್ನಿ ಶ್ಯಾಮಲಾ ಅವರಿಗೆ ವಿಷದ ಇಂಜೆಕ್ಷನ್ ನೀಡಿ ಕೊಲೆಗೆ ಯತ್ನಿಸಿದ ಆರೋಪದಡಿ ಪ್ರಕರಣ ದಾಖಲಾಗಿತ್ತು. ಈ …
Read More »