Breaking News

Breaking News

ಬೆಂಗಳೂರಲ್ಲಿ ಕಾರು ಚಾಲಕನ ಅಟ್ಟಹಾಸ : ನಡೆದುಕೊಂಡು ಹೋಗ್ತಿದ್ದ ವೃದ್ಧನ ಮೇಲೆ ಹಲ್ಲೆ, ಆರೋಪಿ ಅರೆಸ್ಟ್!

ಬೆಂಗಳೂರಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧನ ಮೇಲೆ ಕಾರು ಚಾಲಕನೊಬ್ಬ ಹಲ್ಲೆ ನಡೆಸಿದ್ದಾನೆ. ಕೆಂಗೇರಿಯ ನಾಗದೇವನಹಳ್ಳಿಯ ವಿನಾಯಕ ಲೇಔಟ್ ನಲ್ಲಿ ಈ ಒಂದು ಘಟನೆ ಸಂಭವಿಸಿದೆ.ಕಾರು ಚಾಲಕ ನವೀನ್ ಎಂಬಾತನಿಂದ ನಂಜುಂಡಪ್ಪ (65) ಎನ್ನುವ ವೃದ್ಧನ ಮೇಲೆ ಹಲ್ಲೆ ನಡೆದಿದೆ. ಹಿಂದಿನಿಂದ ಕಾರಿನಲ್ಲಿ ಬಂದು ಚಾಲಕ ನವೀನ್ ಹಾರ್ನ್ ಮಾಡಿದ್ದಾನೆ. ಪಕ್ಕದಲ್ಲಿ ಅಷ್ಟು ದೊಡ್ಡ ರಸ್ತೆ ಇದೆ ಹೋಗಿ ಅಂತ ನಂಜುಂಡಪ್ಪ ಹೇಳಿದ್ದಾರೆ. ರೊಚ್ಚಿಗೆದ್ದು ಅವಾಚ್ಯ ಶಬ್ದದಿಂದ ಬೈದು ನಂಜುಂಡಪ್ಪ ಮೇಲೆ …

Read More »

ಕುಖ್ಯಾತ ಅಂತರ್‌ಜಿಲ್ಲಾ ದ್ವಿಚಕ್ರವಾಹನ ಕಳ್ಳನ ಬಂಧನ – ₹20 ಲಕ್ಷ ಮೌಲ್ಯದ 12 ಬೈಕ್‌ಗಳ ಜಪ್ತಿ

ಹುಬ್ಬಳ್ಳಿ ಕೇಶ್ವಾಪೂರ ಪೊಲೀಸ್ ಠಾಣೆಯ ಗುನ್ನಾ ನಂ. 11/2026 ಕಲಂ 303(2) ಬಿಎನ್‌ಎಸ್–2023 ಪ್ರಕರಣಕ್ಕೆ ಸಂಬಂಧಿಸಿದಂತೆ, ಕುಖ್ಯಾತ ಅಂತರ್‌ಜಿಲ್ಲಾ ದ್ವಿಚಕ್ರವಾಹನ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಶಶಿಕುಮಾರ ಎನ್. ಐಪಿಎಸ್, ಉಪ ಪೊಲೀಸ್ ಆಯುಕ್ತರಾದ ಶ್ರೀ ರವೀಶ (ಅಪರಾಧ ವಿಭಾಗ) ಹಾಗೂ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಶಿವಾನಂದ ಚಲವಾದಿ ಅವರ ಮಾರ್ಗದರ್ಶನದಲ್ಲಿ, ಕೇಶ್ವಾಪೂರ ಪೊಲೀಸ್ ಠಾಣೆಯ ಪಿಐ ಶ್ರೀ ಕೆ.ಎಸ್. ಹಟ್ಟಿ ಅವರ ನೇತೃತ್ವದಲ್ಲಿ …

Read More »

ಕಲ್ಸಂಕ ಸರ್ಕಲ್‌ನಲ್ಲಿ ಹೈಡ್ರಾಮಾ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ!

ಉಡುಪಿ ನಗರದ ಜನನಿಬಿಡ ಪ್ರದೇಶವಾದ ಕಲ್ಸಂಕ ಸರ್ಕಲ್‌ನಲ್ಲಿ ಭಾನುವಾರ ಸಂಜೆ ಅಪರಿಚಿತ ವ್ಯಕ್ತಿಯೋರ್ವ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಪೊಲೀಸರು ಮತ್ತು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದೆ. ಗದಗ ಮೂಲದ ವ್ಯಕ್ತಿಯೊಬ್ಬ ಪೆಟ್ರೋಲ್ ಬಾಟಲಿ ಹಿಡಿದು ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವುದಾಗಿ ಕೂಗಾಡಿ ಆತಂಕ ಸೃಷ್ಟಿಸಿದ್ದನು. ಒಮ್ಮೆ ಆತನಿಂದ ಪೆಟ್ರೋಲ್ ಕಸಿದುಕೊಂಡರೂ, ಮತ್ತೆ ಬಾಟಲಿ ಹಿಡಿದು ಬಂದಿದ್ದನು. ತಕ್ಷಣ …

Read More »

ಸರ್ಕಾರಿ ನೌಕರಿ ಆಮಿಷವೊಡ್ಡಿ ₹ 23.75 ಲಕ್ಷ ವಂಚನೆ

ಕಲಬುರಗಿ: ಸರ್ಕಾರಿ ನೌಕರಿ ಕೊಡಿಸುವುದಾಗಿ ಆಮಿಷವೊಡ್ಡಿದ ವ್ಯಕ್ತಿಯೊಬ್ಬ ಹನುಮಾನ ತಾಂಡಾ ನಗರದ ಕುಟುಂಬವೊಂದಕ್ಕೆ ₹ 23.75 ಲಕ್ಷ ವಂಚಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಲಬುರಗಿಯ ಹನುಮಾನ ತಾಂಡಾದ ದಿ.ದಾಮು ರಾಠೋಡ ಹಾಗೂ ಅವರ ಪುತ್ರಿ ಪ್ರಿಯಾಂಕಾ ರಾಠೋಡ ವಂಚನೆಗೆ ಒಳಗಾದವರು. ‘ನಮ್ಮ ತಂದೆಗೆ ವಿಜಯಪುರ ಜಿಲ್ಲೆಯ ಸಿಂದಗಿಯ ಲೋಹಿತ ಮೇತ್ರಿ ಅವರೊಂದಿಗೆ ಸ್ನೇಹವಿತ್ತು. ಆ ಸ್ನೇಹ ಬಳಸಿ ಲೋಹಿತ ನಮ್ಮ ತಂದೆ ಹೊಲ ಮಾರಿ ಇಟ್ಟುಕೊಂಡಿದ್ದ ಹಣದಲ್ಲಿ ₹ 2.50 ಲಕ್ಷ …

Read More »

ಗೆಳೆಯ ಅಂತ ನಂಬಿಕೆ ಇಟ್ಟದ್ದೇ ತಪ್ಪಾಯ್ತು: ಸ್ನೇಹಿತನ ಅಕೌಂಟ್ ಬಳಸಿ 7 ಕೋಟಿ ರೂ. ವರ್ಗಾವಣೆ

ಬೆಂಗಳೂರು: ಸ್ನೇಹದ ಹೆಸರಿನಲ್ಲಿ ಯುವಕನೊಬ್ಬ ತನ್ನ ಸ್ನೇಹಿತನ ಬ್ಯಾಂಕ್ ಖಾತೆಯನ್ನು ದುರುಪಯೋಗಪಡಿಸಿಕೊಂಡು ಸುಮಾರು 7 ಕೋಟಿ ರೂಪಾಯಿ ಸೈಬರ್ ವಂಚನೆ ನಡೆಸಿದ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ವಂಚನೆಗೊಳಗಾದ ವಿದ್ಯಾರ್ಥಿ ಹಾಗೂ ಆಯುಷ್ ಎಂಬ ಯುವಕ ಕಳೆದ ಒಂದು ವರ್ಷದಿಂದ ಪರಿಚಯದಲ್ಲಿದ್ದರು. ತನ್ನ ಖಾತೆ ಸ್ಥಗಿತಗೊಂಡಿದೆ ಎಂದು ಹೇಳಿ ಆಯುಷ್, ವಿದ್ಯಾರ್ಥಿಯಿಂದ ಬ್ಯಾಂಕ್ ವಿವರಗಳನ್ನು ಪಡೆದಿದ್ದಾನೆ. ನಂಬಿಕೆಯ ಮೇರೆಗೆ ವಿದ್ಯಾರ್ಥಿ ಪಾಸ್‌ಬುಕ್, ಎಟಿಎಂ ಕಾರ್ಡ್ ಮತ್ತು ಮೊಬೈಲ್ ಸಿಮ್ ನೀಡಿದ್ದಾನೆ …

Read More »

ಆನ್ ಲೈನ್ ಗೇಮ್ ಚಟಕ್ಕೆ ಒಂಟಿ ವೃದ್ಧೆ ಕೊಲೆ ಮಾಡಿ ಆಭರಣ ದೋಚಿದ್ದ ಆರೋಪಿ ಬಂಧನ: ರೂ. 8.44 ಲಕ್ಷ ಮೌಲ್ಯದ ಚಿನ್ನ ಜಪ್ತಿ

ದಾವಣಗೆರೆ: ಆನ್ ಲೈನ್ ಗೇಮ್‌ ಆಡಿ ಮಾಡಿಕೊಂಡಿದ್ದ ಸಾಲ ತೀರಿಸಲು ಒಂಟಿ ವೃದ್ಧೆಯನ್ನು ಕತ್ತು ಹಿಸುಕಿ ಕೊಲೆ ಮಾಡಿ, ಆಭರಣ ದೋಚಿದ್ದ ಪ್ರಕರಣವನ್ನು ನ್ಯಾಮತಿ ಪೊಲೀಸರು ಭೇದಿಸಿದ್ದಾರೆ. ಪ್ರಕರಣದ ಆರೋಪಿ ಅಭಿಷೇಕ್ ಕೆ. (23) ಎಂಬಾತನನ್ನು ಬಂಧಿಸಿರುವ ಪೊಲೀಸರು, ಆತನಿಂದ ಸುಮಾರು 8,44,000 ರೂ.ಮೌಲ್ಯದ 67.1 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಫೆಬ್ರವರಿ 2 ರಂದು ಆರುಂಡಿ ಗ್ರಾಮದ ಕಮಲಮ್ಮ (64) ಎಂಬುವವರನ್ನು ಅವರ ಮನೆಯಲ್ಲೇ ಕೊಲೆ ಮಾಡಲಾಗಿತ್ತು. ದೇವರ ಪಲ್ಲಕ್ಕಿ …

Read More »

ಸರ್ಕಾರಿ ಆಸ್ಪತ್ರೆಯಲ್ಲಿ ಇಂಜೆಕ್ಷನ್‌ ಪಡೆದ ಕೆಲವೇ ಕ್ಷಣದಲ್ಲಿ ಪ್ರಾಣಬಿಟ್ಟ ಮಹಿಳೆ

ದಾವಣಗೆರೆಯ ಚನ್ನಗಿರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಇಂಜೆಕ್ಷನ್‌ ಪಡೆದ ಕೆಲವೇ ಕ್ಷಣದಲ್ಲಿ ಮೃತಪಟ್ಟಿದ್ದಾರೆ. ತಿಪ್ಪಗೊಂಡನಹಳ್ಳಿ ನಿವಾಸಿ ಅನುಷಾ ಮೃತರು. ಹೃದಯ ಸಂಬಂಧಿ ಸಮಸ್ಯೆಯಿಂದ ಅನುಷಾ ಬಳಲುತ್ತಿದ್ದು, ಪ್ರತಿ ತಿಂಗಳು ಇಂಜೆಕ್ಷನ್‌ ಪಡೆಯುತ್ತಿದ್ದರು. ಅಂತೆಯೇ ಆಸ್ಪತ್ರೆಗೆ ಬಂದು ಇಂಜೆಕ್ಷನ್‌ ಹಾಕಿಸಿಕೊಂಡಿದ್ದಾರೆ. ಆದರೆ ಅದನ್ನು ಪಡೆದ ಕೆಲವೇ ಕ್ಷಣದಲ್ಲಿ ಮೃತಪಟ್ಟಿದ್ದಾರೆ. ಖಾಸಗಿ ಮೆಡಿಕಲ್‌ ಸ್ಟೋರ್‌ನಿಂದ ಇಂಜೆಕ್ಷನ್‌ ಖರೀದಿ ಮಾಡಿ ತಂದು ಆಸ್ಪತ್ರೆಗೆ ಕೊಟ್ಟಿದ್ದಾರೆ. ಇಂಜೆಕ್ಷನ್‌ ಸರಿ ಇದೆಯೋ? ಅವಧಿ ಮುಗಿದಿದೆಯೋ? ಮೆಡಿಕಲ್‌ ಸ್ಟೋರ್‌ನವರು …

Read More »

ನಶೆ, ಮಾದಕ ಮಾತ್ರೆ ನೀಡಿ 19 ವರ್ಷದ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್

ಬೆಂಗಳೂರಿನಲ್ಲಿ 19 ವರ್ಷದ ಖಾಸಗಿ ಕಾಲೇಜು ವಿದ್ಯಾರ್ಥಿನಿ ಮೇಲೆ ಆಕೆಯ ಸ್ನೇಹಿತರೇ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸಂತ್ರಸ್ತೆಗೆ ನಶೆ ಹಾಗೂ ಮಾದಕ ಮಾತ್ರೆ ನೀಡಿ ಈ ಕೃತ್ಯ ಎಸಗಲಾಗಿದ್ದು, ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬನ್ನೇರುಘಟ್ಟ ಖಾಸಗಿ ಕಾಲೇಜು ವಿದ್ಯಾರ್ಥಿನಿಯಾಗಿರುವ ಸಂತ್ರಸ್ತೆ, ಪಶ್ಚಿಮ ಬಂಗಾಳ ಮೂಲದ ಡಿಕ್ಸಿನ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇತ್ತೀಚೆಗೆ ಡಿಕ್ಸಿನ್ ಮತ್ತು …

Read More »

ಇಸ್ಪಿಟ್ ಅಡ್ಡೆಗೆ ದಾಳಿ

ಕುಂದಾಪುರ: ಗ್ರಾಮಾಂತರ ಠಾಣೆ ಪೊಲೀಸರು ದೇವಲ್ಕುಂದ ಗ್ರಾಮದ ಬಗ್ವಾಡಿ ಚಕ್ರ ನದಿಯ ಬದಿ ಹಾಡಿಯಲ್ಲಿ ನಡೆಯುತ್ತಿದ್ದ ಇಸ್ಪಿಟ್ ಅಡ್ಡೆಗೆ ದಾಳಿ ನಡೆಸಿದ್ದಾರೆ. ಗುಡುಗುಡಿ (ಗರಗರ ಮಂಡಲ) ಆಟ ಆಡುತ್ತಿದ್ದ ಹರೀಶ್ (41) ನೂಜಾಡಿ, ಗ ಗಣೇಶ ಎನ್. (31) ಬಗ್ವಾಡಿ, ರಾಘವೇಂದ್ರ (37) ನೂಜಾಡಿ, ಪ್ರವೀಣ್‌ ಎಮ್ (32) ದೇವಲ್ಕುಂದ ಅವರನ್ನು ವಶಕ್ಕೆ ಪಡೆಯಲಾಗಿದೆ. ಗುಡುಗುಡಿ (ಗರಗರ ಮಂಡಲ) ಆಟಕ್ಕೆ ಬಳಸಿದ ‌7,630ರೂ. ಹಾಗೂ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Read More »

ಕುರಿ ಕಳ್ಳತನಕ್ಕೆ ಯತ್ನ: ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

ಯಾದಗಿರಿ : ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಚಂಡರಕ್ಕಿ ಗ್ರಾಮದಲ್ಲಿ ಕುರಿ ಕಳ್ಳತನಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಗ್ರಾಮಸ್ಥರು ರೆಡ್‌ ಹ್ಯಾಂಡ್‌ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.ರಾತ್ರಿ ವೇಳೆ ಕುರಿ ಕಳ್ಳತನ ಮಾಡಲು ಬಂದಿದ್ದ ಶಂಕಿತ ವ್ಯಕ್ತಿ ಗ್ರಾಮಸ್ಥರ ಅನುಮಾನಕ್ಕೆ ಸಿಲುಕಿ ಸಿಕ್ಕಿಬಿದ್ದಿದ್ದಾನೆ. ತಕ್ಷಣವೇ ಕೆಲವರು ಆತನನ್ನು ಹಿಡಿದು ವಿದ್ಯುತ್ ಕಂಬಕ್ಕೆ ಕಟ್ಟಿ ಹೊಡೆದಿರುವುದಾಗಿ ತಿಳಿದುಬಂದಿದೆ. ಮಾಹಿತಿ ತಿಳಿದ ಬಳಿಕ ಗುರುಮಠಕಲ್ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಶಂಕಿತನನ್ನು …

Read More »