Breaking News

Breaking News

ಅಪಘಾತ ಕೇಸ್ – ನಡುರಸ್ತೆಯಲ್ಲಿ ಸರ್ಕಾರಿ ಬಸ್ ಸೀಜ್.!

ಬೆಂಗಳೂರಿನಿಂದ ಶೃಂಗೇರಿಗೆ ತೆರಳುತ್ತಿದ್ದ ಚಿಕ್ಕಮಗಳೂರು ಡಿಪೋಗೆ ಸೇರಿದ ಎರಡು ಸರ್ಕಾರಿ ಬಸ್‌ಗಳನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಸೀಜ್‌ ಮಾಡಲಾಗಿದೆ. ಅಪಘಾತ ಪ್ರಕರಣಕ್ಕೆ ಸಂಬಂಧಿಸಿದ ಬಸ್‌ಗಳನ್ನು ಚನ್ನರಾಯಪಟ್ಟಣ ಕೋರ್ಟ್ ಆವರಣಕ್ಕೆ ಕರೆದೊಯ್ಯುವಂತೆ ವಕೀಲರು ಸೂಚನೆ ನೀಡಿದ್ದಾರೆ. ಈ ವೇಳೆ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ನಡುರಸ್ತೆಯಲ್ಲೇ ಇಳಿಸಲಾಯಿತು. ಇದರಿಂದ ಪ್ರಯಾಣಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಆಕ್ರೋಶ ಹೊರಹಾಕಿದರು. ಯಾವುದೇ ಮುನ್ಸೂಚನೆ ಇಲ್ಲದೆ ಬಸ್‌ಗಳನ್ನು ಸೀಜ್‌ ಮಾಡಿದ ಕಾರಣ ಪ್ರಯಾಣಿಕರಿಗೆ ತೀವ್ರ ತೊಂದರೆಯಾಯಿತು ಎಂದು …

Read More »

ತಲೆ ಮೇಲೆ ಕಲ್ಲು ಎತ್ತಿಹಾಕಿ ವ್ಯಕ್ತಿಯ ಕೊಲೆ; ಬೆಚ್ಚಿಬಿದ್ದ ಶಿವಮೊಗ್ಗ

ಶಿವಮೊಗ್ಗ : ಜಿಲ್ಲೆಯ ಗಾಜನೂರು ಗ್ರಾಮದಲ್ಲಿ ನಿನ್ನೆ ರಾತ್ರಿ ವ್ಯಕ್ತಿಯೊಬ್ಬನನ್ನು ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಮೃತನನ್ನು ಶಿವಮೊಗ್ಗ ನಗರದ ಹೊಸಮನೆ ಬಡಾವಣೆ 6ನೇ ತಿರುವಿನ ನಿವಾಸಿ ಶ್ರೀನಿವಾಸ್ (36) ಎಂದು ಗುರುತಿಸಲಾಗಿದೆ.ಶ್ರೀನಿವಾಸ್ ಗಾರೆ ಕೆಲಸ ಮಾಡುತ್ತಿದ್ದನು. ಗಾಜನೂರಿನಲ್ಲೂ ಗಾರೆ ಕೆಲಸಕ್ಕೆ ತೆರಳಿದ್ದ ಆತ ಕಳೆದ ಮೂರು ದಿನಗಳಿಂದ ಅಲ್ಲಿಯೇ ವಾಸವಾಗಿದ್ದನು. ನಿನ್ನೆ ರಾತ್ರಿ ಗಾಜನೂರು ಗ್ರಾಮದ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಪಕ್ಕದಲ್ಲಿ …

Read More »

ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ

ಹುಬ್ಬಳ್ಳಿ ಕಿಮ್ಸ್ (KIMS) ಆಸ್ಪತ್ರೆಯಲ್ಲಿ ಶಿಶುಗಳ ಸುರಕ್ಷತೆ ಮತ್ತು ಜನದಟ್ಟಣೆ ನಿಯಂತ್ರಣಕ್ಕಾಗಿ ಹೊಸ ಪ್ಲಾನ್ ಮಾಡಿದೆ. ಆಸ್ಪತ್ರೆಯಲ್ಲಿ ಇತ್ತೀಚೆಗೆ ಶಿಶುಗಳ ಕಳ್ಳತನ ಆಗುತ್ತಿದೆ. ಇದನ್ನು ತಡೆಗಟ್ಟಲು ಕ್ಯೂಆರ್ ಕೋಡ್ (QR Code) ವ್ಯವಸ್ಥೆಯನ್ನು ತಂದಿದೆ. ಇನ್ನು ಮುಂದೆ ಹೆರಿಗೆ ವಾರ್ಡ್ಗೆ ಬರಬೇಕಾದರೆ ಕ್ಯೂಆರ್​​ ಕೋಡ್ ಸ್ಕ್ಯಾನ್ ಮಾಡಿ ಬರಬೇಕು. ಕ್ಯೂಆರ್ ಕೋಡ್​​​​ ಸ್ಕ್ಯಾನ್ ಮಾಡಿ ಕುಟುಂಬದವರು ಒಳಹೋಗಬೇಕು ಎಂದು ಕಿಮ್ಸ್ ಹೇಳಿದೆ. ಹೆರಿಗೆ ವಾರ್ಡ್ ಪ್ರವೇಶಿಸುವ ಕುಟುಂಬದ ಸದಸ್ಯರಿಗೆ ಸಿಬ್ಬಂದಿ …

Read More »

₹7.11 Crore Robbery Case in bengaluru: ಸಿದ್ದಾಪುರ ATM ದರೋಡೆ ಪ್ರಕರಣ; ಪೊಲೀಸ್ ಪೇದೆಯೇ ಕಿಂಗ್‌ಪಿನ್!

ಬೆಂಗಳೂರು: ರಾಷ್ಟ್ರಮಟ್ಟದಲ್ಲಿ ಭಾರೀ ಸದ್ದು ಮಾಡಿದ್ದ ಎಚ್‌ಡಿಎಫ್‌ಸಿ ಬ್ಯಾಂಕ್‌ನ 7.11 ಕೋಟಿ ರೂ. ದರೋಡೆ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ಸಿದ್ದಾಪುರ ಠಾಣೆ ಪೊಲೀಸರು 56ನೇ ಎಸಿಎಂಎಂ–ಸಿಸಿಎಚ್ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಗೋವಿಂದಪುರ ಠಾಣೆಯ ಕಾನ್‌ಸ್ಟೇಬಲ್ ಅಣ್ಣಪ್ಪ ನಾಯಕ್ ಸೇರಿ ಒಂಬತ್ತು ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ–2023ರಡಿ ಆರೋಪ ದಾಖಲಿಸಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್ ತಿಳಿಸಿದ್ದಾರೆ. ದರೋಡೆ, ಅಕ್ರಮ ತಡೆ-ಬಂಧನ, …

Read More »

ಮನೆ ಹಿಂದಿನ ಸೆಪ್ಟಿಕ್ ಟ್ಯಾಂಕ್​​ನಲ್ಲಿ ತಲೆಬುರುಡೆ ಪತ್ತೆ; ಪ್ರೀತಿ, ಮದುವೆ ಹೆಸರಲ್ಲಿ ದ್ರೋಹ

ಸಾಗರ್: ಆಗಸ್ಟ್ 20ರಂದು ನಾಪತ್ತೆ ಆದ ಪ್ರಿನ್ಸ್​ ಪ್ರಕರಣದಲ್ಲಿ ಹೊಸ ಘಟ್ಟ. ಪ್ರಿನ್ಸ್​ನ ತಲೆ ಬುರುಡೆ ಮತ್ತು ಅವಶೇಷಗಳು ಸೆಪ್ಟಿಕ್ ಟ್ಯಾಂಕ್​ನಲ್ಲಿ ಸಿಕ್ಕಿದ್ದು, ಪ್ರೇಮ, ದ್ರೋಹ, ಕೊಲೆ ಕಥೆಯನ್ನು ಬೆಳಕಿಗೆ ತಂದಿವೆ.ಪೊಲೀಸರು ಆರೋಪಿ ಶೋಯೆಬ್​ನನ್ನು ನರಸಿಂಗ್​ಪುರದಿಂದ ಬಂಧಿಸಿದ್ದಾರೆ. ತನಿಖೆಯಲ್ಲಿ ತಿಳಿದಂತೆ, ಪ್ರಿನ್ಸ್​ನ ಪತ್ನಿ ತುಳಸಿ ಮತ್ತು ಶೋಯೆಬ್​ಗೆ ಮದುವೆಗೂ ಮುಂಚೆ ಸಂಬಂಧವಿತ್ತು. ಪ್ರಿನ್ಸ್​ನೊಂದಿಗೆ ಮದುವೆಯ ನಂತರವೂ ಅಕ್ರಮ ಸಂಬಂಧ ಮುಂದುವರೆದಿತ್ತು ಎಂದು ಆರೋಪ. ಶೋಯೆಬ್​ ಪ್ರಿನ್ಸ್​ಗೆ ಮಾದಕ ದ್ರವ್ಯ ನೀಡಿ …

Read More »

ಬೆಳಗಾವಿಯಲ್ಲಿ ಹಲವೆಡೆ ವಾಹನ ಕಳ್ಳತನ ಮಾಡುತ್ತಿದ್ದ ನಾಲ್ವರ ಬಂಧನ: 18 ಬೈಕ್‌ ವಶ

ನಗರದಲ್ಲಿ ಹಲವೆಡೆ ವಾಹನ ಕಳ್ಳತನ ಮಾಡುತ್ತಿದ್ದ ನಾಲ್ವರನ್ನು ಗುರುವಾರ ಬಂಧಿಸಿರುವ ಪೊಲೀಸರು, 18 ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿಯ ಉಮೇಶ ಹನುಮಂತ ಬಾಗೇವಾಡಿ (33), ಗುಡಸ ಗ್ರಾಮದ ಮೌಲಾ ಹಸನಸಾಬ ಹಲಕರ್ಣಿ (42), ಕಂಗ್ರಾಳಿ ಕೆ.ಎಚ್.ಗ್ರಾಮದ ರಜತ ಸಂಜಯ ಶಿವಣಗೇಕರ (29) ಹಾಗೂ ಬೈಲಹೊಂಗಲ ತಾಲ್ಲೂಕಿನ ಶೀಗಿಹಳ್ಳಿ ಗ್ರಾಮದ ವಿಠ್ಠಲ ಸದೆಪ್ಪ ಆರೇರ (38) ಬಂಧಿತರು. ಸಿಸಿಬಿಯ ಸಿಪಿಐ ನಂದೀಶ್ವರ ಕುಂಬಾರ ಹಾಗೂ ಪಿಎಸ್‌ಐ ಮಂಜುನಾಥ ಭಜಂತ್ರಿ …

Read More »

ದೂರು ನೀಡಲು ಕುಡಿದ ಮತ್ತಿನಲ್ಲಿ ಠಾಣೆಗೆ ಬಂದು ಪೊಲೀಸರನ್ನೇ ನಿಂದಿಸಿದಾತ ಅರೆಸ್ಟ್

ಮಂಗಳೂರು ನಗರದ ಲ್ಯಾಂಡ್‌ ಲಿಂಕ್ಸ್‌ ನ ಅಪಾರ್ಟ್ ಮೆಂಟ್ ಒಂದರ ನಿವಾಸಿ, ಬ್ಯಾಂಕ್ ಉದ್ಯೋಗಿ ಮಂಜಪ್ಪ ಸುರೇಂದ್ರನ್ ಬಂಧನಕ್ಕೊಳಗಾದ ವ್ಯಕ್ತಿ. ಮನೆಯ ಪಕ್ಕದಲ್ಲಿ ಶಟಲ್ ಆಟ ಆಡುತ್ತಿದ್ದ ಯುವಕರ ಬಗ್ಗೆ ಮಂಜಪ್ಪ ಕಾವೂರು ಪೊಲೀಸರಿಗೆ ದೂರವಾಣಿ ಮೂಲಕ ಆಗಾಗ್ಗೆ ಫೋನ್ ಮಾಡಿ ದೂರು ನೀಡಿದ್ದ. ಸಂಜೆ ಹೊತ್ತು ಯುವಕರು ತಮ್ಮ ಪಾಡಿಗೆ ಶಟಲ್ ಆಡುತ್ತಿದ್ದಾಗ, ತನಗೆ ನಿದ್ರೆ ಮಾಡಲು ತೊಂದರೆ ಆಗುತ್ತಿದೆ ಎಂದು ಬೊಬ್ಬೆ ಹಾಕಿ ಪತ್ನಿಯ ಜತೆಗೆ ಕಾವೂರು …

Read More »

ಕಾಫಿ ಬಿಲ್ ಕೇಳಿದ ಕ್ಯಾಂಟೀನ್ ಸಿಬ್ಬಂದಿ ಮೇಲೆ ಪೊಲೀಸರ ಹಲ್ಲೆ-ಆರೋಪ

ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿರುವ ಆಲ್ಫಾ ಕ್ಯಾಂಟೀನ್‌ನಲ್ಲಿ ಕಾಫಿ ಸೇವಿಸಿದ ಪೊಲೀಸರನ್ನು ಬಿಲ್ ಕೇಳಿದ ಸಿಬ್ಬಂದಿ ಮೇಲೆ ಮೂವರು ಪೊಲೀಸ್ ಕಾನ್‌ಸ್ಟೆಬಲ್‌ಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋ‍ಪಿಸಲಾಗಿದೆ. ಈಚೆಗೆ ರಾತ್ರಿ ಬೀಟ್‌ನಲ್ಲಿ ಇದ್ದ ಗಂಗರಾಜು, ಬಾಳಪ್ಪ ಹಾಗೂ ಕುಮಾರ್ ಅವರು ಕ್ಯಾಂಟೀನ್‌ನಲ್ಲಿ ಕಾಫಿ ಕುಡಿದಿದ್ದರು.ನಂತರ ಸಿಬ್ಬಂದಿ ಬಿಲ್ ಕೇಳಿದ್ದಾರೆ. ಈ ವೇಳೆ ‘ನಾವು ಪೊಲೀಸರು. ನಮಗೆ ಬಿಲ್ ಏಕೆ?’ ಎಂದು ದರ್ಪದಿಂದ ವರ್ತಿಸಿದ್ದಾರೆ’ ಎಂಬ ಆರೋಪ ಕೇಳಿಬಂದಿದೆ. …

Read More »

ಬಿಜೆಪಿ ನಾಯಕನ ಕಾರಿಗೆ ಬಾಂಬ್‌

ಕುಂಬಳೆ: ರಾಜಕೀಯ, ಧಾರ್ಮಿಕ ನಾಯಕರಾಗಿರುವ ಕುಂಬಳೆ ವ್ಯಾಪಾರಿ ವ್ಯವಸಾಯಿ ಘಟಕದ ಮಾಜಿ ಅಧ್ಯಕ್ಷ ಬಿ. ವಿಕ್ರಂ ಪೈ ಕುಂಬಳೆ ಅವರ ಕಾರಿಗೆ ಬಾಂಬ್‌ ಇಟ್ಟು ಸ್ಫೋಟಿಸಿದ ಘಟನೆ ಗುರುವಾರ ಬೆಳಗ್ಗೆ ಸಂಭವಿಸಿದೆ.ಪೈ ಅವರು ತನ್ನ ಪೊಸತ್ತಡ್ಕ ಗೋಶಾಲೆಗೆ ಕಾರಿನಲ್ಲಿ ತೆರಳುವಾಗ ಕಾಂಕ್ರೀಟ್‌ ರಸ್ತೆಯಲ್ಲಿರಿಸಿದ್ದ ನಾಡ ಬಾಂಬ್‌ ಸಿಡಿಯಿತು. ಕಾರು ಎರಡು ಅಡಿ ಮೇಲಕ್ಕೆ ಹಾರಿ ರಸ್ತೆಯಲ್ಲಿ ನಿಂತಾಗ ಎರಡು ಚಕ್ರಗಳು ಸ್ಫೋಟಗೊಂಡವು. ಕಾರಿನಲ್ಲಿ ಪೈ ಅವರು ಮಾತ್ರವಿದ್ದು ಏನೂ ಅಪಾಯವಿಲ್ಲದೆ …

Read More »

ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಪೋಸ್ಟ್: ಶಾಸಕ ಆರಗ ಜ್ಞಾನೇಂದ್ರ ಆಪ್ತ ಸಹಾಯಕ ಅರೆಸ್ಟ್

ಶಿವಮೊಗ್ಗ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪದ ಬಗ್ಗೆ ತೀರ್ಥಹಳ್ಳಿ ಶಾಸಕ ಹಾಗೂ ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರ ಆಪ್ತ ಸಹಾಯಕನನ್ನು ಬಂಧಿಸಲಾಗಿದೆ. ಹೊಸನಗರದ ಮಳಲಿ ಗ್ರಾಮದ ನಿವಾಸಿ ರಾಜೇಶ್ ಹಿರೇಮನೆ ಬಂಧಿತ ಆರೋಪಿ. ಬುಧವಾರ ಮಧ್ಯಾಹ್ನ ಬಂಧನಕ್ಕೆ ಒಳಗಾಗಿದ್ದ ಅವರಿಗೆ ಗುರುವಾರ ಜಾಮೀನು ದೊರೆತಿದೆ. ರಾಹುಲ್ ಗಾಂಧಿ ಅವರ ಮುಖದ ಅರ್ಧ ಭಾಗ ಮತ್ತು ಪಾಕಿಸ್ತಾನ …

Read More »