Breaking News

Breaking News

ಪಡೀಲ್‌ನ ಕಾರು ಶೋರೂಂನಲ್ಲಿ ಬೆಂಕಿ, ವಾಹನಗಳಿಗೆ ಹಾನಿ!

ಮಂಗಳೂರು: ಪಡೀಲ್‌ನ ಕಾರು ಶೋರೂಂನಲ್ಲಿ ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಹೊಗೆ ಕಾಣಿಸಿಕೊಂಡು ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯಿಂದ ಶೋರೂಂನಲ್ಲಿದ್ದ ಕಾರುಗಳಿಗೂ ಹಾನಿಯಾಗಿದೆ. ಮಾಹಿತಿ ತಿಳಿದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಗಂಟೆಗಳ ಕಾರ್ಯಾಚರಣೆ ಬಳಿಕ ಬೆಂಕಿ ನಂದಿಸಲಾಗಿದ್ದು, ಘಟನೆಯಿಂದ ಉಂಟಾದ ನಷ್ಟದ ಪ್ರಮಾಣ ಇನ್ನಷ್ಟೇ ಅಂದಾಜಿಸಬೇಕಿದೆ.

Read More »

ಪತಿ ಬಟ್ಟೆಯಲ್ಲಿದ್ದ ‘ಬಾರ್‌ ಕೋಡ್‌’ ಕೊಟ್ಟ ಸುಳಿವು!

ಬೆಂಗಳೂರು: ಪತ್ನಿಯನ್ನು ಕೊಲೆ ಮಾಡಿ ಮೃತದೇಹವನ್ನು ಎಂ.ಎಸ್. ನಗರ ಅಗ್ರಹಾರ ಲೇಔಟ್‌ನ ಖಾಲಿ ನಿವೇಶನದಲ್ಲಿ ಎಸೆದಿದ್ದ ಆರೋಪದ ಮೇಲೆ ಸಂಪಿಗೆಹಳ್ಳಿ ಪೊಲೀಸರು ಸಾಗರ್ ಚಂದ್ರ ರಾವತ್ (32) ಎಂಬಾತನನ್ನು ಬಂಧಿಸಿದ್ದಾರೆ. ಹಣಕಾಸಿನ ವಿಚಾರಕ್ಕೆ ದಂಪತಿ ನಡುವೆ ಗಲಾಟೆ ನಡೆದಿದ್ದು, ಆಗಸ್ಟ್‌ 11ರಂದು ಅನಸೂಯ (28) ಅವರನ್ನು ಕೊಲೆ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಕೊಲೆ ಬಳಿಕ ಮೂರು ದಿನ ಮೃತದೇಹದ ಜೊತೆಯಲ್ಲೇ ಇದ್ದ ಆರೋಪಿ, ಬೆಡ್‌ಶೀಟ್‌ನಲ್ಲಿ ಸುತ್ತಿ ಖಾಲಿ ನಿವೇಶನಕ್ಕೆ ಎಸೆದಿದ್ದ. …

Read More »

ದೇಶದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ; ಚಿಕ್ಕಬಳ್ಳಾಪುರದಲ್ಲಿ ಆರೋಪಿ ಶಬ್ಬೀರ್ ಅರೆಸ್ಟ್.!

ಚಿಕ್ಕಬಳ್ಳಾಪುರ: ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ ಆರೋಪದ ಮೇಲೆ ಚಿಕ್ಕಬಳ್ಳಾಪುರ ನಗರ ಪೊಲೀಸರು ಬಾಪೂಜಿನಗರದ ಶಬ್ಬೀರ್ ಎಂಬ ಯುವಕನನ್ನು ಬಂಧಿಸಿದ್ದಾರೆ. ಟೆಲಿಗ್ರಾಂ ಗ್ರೂಪ್‌ನಲ್ಲಿ ದಾಳಿ ನಡೆಸುವುದು ಹಾಗೂ ಹಣ ಸಂಗ್ರಹಿಸುವ ಕುರಿತು ಚರ್ಚೆ ನಡೆಸಿದ್ದ ಎನ್ನಲಾಗಿದೆ. ಶ್ರೀಮಂತರನ್ನು ಅಪಹರಿಸಿ ಹಣ ಸಂಗ್ರಹಿಸಿ, ಅದನ್ನು ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸುವ ಬಗ್ಗೆ ಚರ್ಚೆ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ …

Read More »

ಭಯೋತ್ಪಾದನೆಗೆ ಪಿತೂರಿ ಆರೋಪ; ಹಾಸನದ ಅರಕಲಗೂಡಿನಲ್ಲಿ ಮತ್ತೋರ್ವ ಆರೋಪಿ ಬಂಧನ!

ಚಿಕ್ಕಬಳ್ಳಾಪುರ: ಭಯೋತ್ಪಾದನೆಗೆ ಪಿತೂರಿ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಪೊಲೀಸರು ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಬಿಹಾರ ಮೂಲದ 25 ವರ್ಷದ ಸಲಾಮಿನ್‌ನನ್ನು ಬಂಧಿಸಿದ್ದಾರೆ. ಹಿಂದೆ ಬಂಧಿತನಾಗಿದ್ದ ಶಬ್ಬೀರ್ ನೀಡಿದ ಮಾಹಿತಿ ಆಧರಿಸಿ ಸಲಾಮಿನ್‌ನನ್ನು ಬಂಧಿಸಲಾಗಿದೆ. ಶಬ್ಬೀರ್‌ನ ಟೆಲಿಗ್ರಾಂ ಗ್ರೂಪ್‌ನಲ್ಲಿ ಸಲಾಮಿನ್ ಸಕ್ರಿಯವಾಗಿದ್ದ ಎನ್ನಲಾಗಿದ್ದು, ಸೆ.24ರಂದು ಅರಕಲಗೂಡಿಗೆ ಬಂದಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ. ಶಬ್ಬೀರ್‌ನ ಮೊಬೈಲ್ ಪರಿಶೀಲನೆ ವೇಳೆ ಇನ್‌ಸ್ಟಾಗ್ರಾಂ ಹಾಗೂ ಟೆಲಿಗ್ರಾಂನಲ್ಲಿ ಪ್ರಚೋದನಕಾರಿ ಸಂದೇಶಗಳು ಪತ್ತೆಯಾಗಿದ್ದವು. ಪ್ರಕರಣದ ಕುರಿತು ಹೆಚ್ಚಿನ …

Read More »

ಬೇಲಿಯೇ ಎದ್ದು ಹೊಲ ಮೇಯ್ದ ಸುದ್ದಿ: ಫಾರೆಸ್ಟ್ ವಾಚರ್ ಮನೆಯಲ್ಲೇ ಲಕ್ಷಾಂತರ ಮೌಲ್ಯದ ಅಕ್ರಮ ನಾಟಾ ಜಪ್ತಿ!

ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಶಾಂತಿಕೆರೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರ ತೋಟದ ಮನೆಯ ಮೇಲೆ ಅರಣ್ಯ ಸಂಚಾರಿ ದಳ ದಾಳಿ ನಡೆಸಿ, ಸಾಗಾಟಕ್ಕೆ ಸಿದ್ಧವಾಗಿದ್ದ ಹೊನ್ನೆ, ಮತ್ತಿ, ಬೋಗಿ ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ನಾಟಾಗಳನ್ನು ಜಪ್ತಿ ಮಾಡಿದೆ. ಎಂಪಿಎಂ ನಡುತೋಪು ವಲಯದ ಫಾರೆಸ್ಟ್ ವಾಚರ್ ಫಿಲಿಪ್ ಡಿಸೋಜಾ ಅವರ ಮನೆಯಲ್ಲಿ ನಾಟಾಗಳು ಪತ್ತೆಯಾಗಿವೆ. ಅಲ್ಲದೆ, ಅವರು 10 ಎಕರೆಗೂ ಹೆಚ್ಚು ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡು ತೋಟ ನಿರ್ಮಿಸಿದ್ದಾರೆ ಎಂಬ …

Read More »

ಹಾವೇರಿ: ಆಸ್ತಿ ಜಗಳಕ್ಕೆ ಬಲಿಯಾದ ತಾಯಿ-ಮಗ; ಮಾರಕಾಸ್ತ್ರಗಳಿಂದ ಬರ್ಬರ ಹತ್ಯೆಗೈದ ದುಷ್ಕರ್ಮಿಗಳು

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕುಸನೂರು ಗ್ರಾಮದಲ್ಲಿ ಆಸ್ತಿ ವಿಚಾರವಾಗಿ ತಾಯಿ ಮತ್ತು ಮಗನನ್ನು ಮಾರಕಾಸ್ತ್ರಗಳಿಂದ ಹತ್ಯೆ ಮಾಡಲಾಗಿದೆ. ಪ್ರೇಮಕ್ಕ ಬಡಿಗೇರ (55) ಹಾಗೂ ಪುತ್ರ ಅವಿನಾಶ್ ಬಡಿಗೇರ (38) ಮೃತರು. ತಿರಕಯ್ಯ ಹೊಸಮಠ ಹಾಗೂ ಬಸವರಾಜ ಹೊಸಮಠ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಕೆಲವು ವರ್ಷಗಳ ಹಿಂದೆ ಖರೀದಿಸಿದ್ದ ಮನೆ ಮತ್ತು ಜಾಗ ತಮ್ಮ ಹೆಸರಿಗೆ ವರ್ಗಾವಣೆಯಾಗದ ಹಿನ್ನೆಲೆಯಲ್ಲಿ ಪ್ರೇಮಕ್ಕ ನ್ಯಾಯಾಲಯದ ಮೊರೆ ಹೋಗಿದ್ದರು. ಬಳಿಕ ನ್ಯಾಯಾಲಯದ ಮೂಲಕ …

Read More »

ಮಂಗಳೂರಲ್ಲಿ ರಾಗಿಂಗ್‌ ಹೆಸರಲ್ಲಿ ವಿಕೃತಿ: ಜೂನಿಯರ್ಸ್ ಕಿಡ್ನ್ಯಾಪ್ ಮಾಡಿ ಬೆತ್ತಲೆಗೊಳಿಸಿ ಹಲ್ಲೆ, 9 ವಿದ್ಯಾರ್ಥಿಗಳ ವಿರುದ್ಧ ಕೇಸ್

ಮಂಗಳೂರು: ಖಾಸಗಿ ಕಾಲೇಜಿನ ಪ್ರಥಮ ವರ್ಷದ ಇಬ್ಬರು ವಿದ್ಯಾರ್ಥಿಗಳನ್ನು ಅಪಹರಿಸಿ ರೂಮ್‌ನಲ್ಲಿ ಕೂಡಿ ಹಾಕಿ ಅಮಾನವೀಯವಾಗಿ ಹಲ್ಲೆ ಮಾಡಿದ ಆರೋಪದ ಮೇಲೆ 9 ಮಂದಿ ಸೀನಿಯರ್ ವಿದ್ಯಾರ್ಥಿಗಳ ವಿರುದ್ಧ ಮಂಗಳೂರು ದಕ್ಷಿಣ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಆಗಸ್ಟ್ 19ರಂದು ಕಾಲೇಜಿನಿಂದ ಹೊರಬರುತ್ತಿದ್ದ ಬಿಬಿಎ ವಿದ್ಯಾರ್ಥಿಗಳಾದ ಅಮೀರ್ ಅಲಿ ಹಾಗೂ ಮಹಮ್ಮದ್ ಅಲ್ಫಾಜ್ ಅವರನ್ನು ಬೈಕ್‌ನಲ್ಲಿ ಬಲವಂತವಾಗಿ ಕರೆದೊಯ್ದು ಕೋಣೆಯಲ್ಲಿ ಕೂಡಿ ಹಾಕಲಾಗಿತ್ತು. ಬಳಿಕ ಇಬ್ಬರನ್ನು ಬೆತ್ತಲೆಗೊಳಿಸಿ ಬೆಲ್ಟ್, ಹ್ಯಾಂಗರ್ …

Read More »

ಖಾಸಗಿ ಫೋಟೋ ಇಟ್ಟುಕೊಂಡು ಮಹಿಳೆಗೆ ಬ್ಲಾಕ್‌ಮೇಲ್: ಟ್ಯಾಟೂ ಆರ್ಟಿಸ್ಟ್ ಅರ್ಜುನ್ ವಿರುದ್ಧ ಎಫ್‌ಐಆರ್

ಬೆಂಗಳೂರು, ಸೆ.25: ಮಹಿಳೆಯ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ಹಂತ ಹಂತವಾಗಿ ₹9 ಲಕ್ಷ ಸುಲಿಗೆ ಮಾಡಿದ ಆರೋಪದ ಮೇಲೆ ಅರ್ಜುನ್ ಅಲಿಯಾಸ್ ಟ್ಯಾಟೊ ಘೋಸ್ಟ್ ವಿರುದ್ಧ ಬ್ಯಾಡರಹಳ್ಳಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಎರಡು ವರ್ಷಗಳ ಹಿಂದೆ ಟ್ಯಾಟೊ ಹಾಕಿಸಿಕೊಳ್ಳಲು ತೆರಳಿದ್ದ ವೇಳೆ ಅರ್ಜುನ್ ಪರಿಚಯವಾಗಿದ್ದು, ಬಳಿಕ ಸ್ನೇಹ ಬೆಳೆದಿತ್ತು. ಮದುವೆಯಾಗುವುದಾಗಿ ನಂಬಿಸಿ ಮಹಿಳೆಯೊಂದಿಗೆ ಸಲುಗೆಯಿಂದ ಇದ್ದ ವೇಳೆ ಖಾಸಗಿ ಫೋಟೋಗಳನ್ನು ತೆಗೆದುಕೊಂಡಿದ್ದ. ಬಳಿಕ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ …

Read More »

ಶಾಲಾ ಮಕ್ಕಳ ಜೊತೆ ಅನುಚಿತ ವರ್ತನೆ! ನಿವೃತ್ತಿಯ ಅಂಚಿನಲ್ಲಿದ್ದ ಶಿಕ್ಷಕ ಅರೆಸ್ಟ್

ಮೈಸೂರು ತಾಲೂಕಿನ ಹಂಚ್ಯಾ ಗ್ರಾಮದಲ್ಲಿ ಶಾಲಾ ಮಕ್ಕಳಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ 59 ವರ್ಷದ ಮುಖ್ಯ ಶಿಕ್ಷಕ ರಾಮಶೆಟ್ಟಿಯನ್ನು ಪೊಲೀಸರು ಪೋಕ್ಸೋ ಕಾಯ್ದೆಯಡಿ ಬಂಧಿಸಿದ್ದಾರೆ. ಮಕ್ಕಳ ಗುಪ್ತಾಂಗ ಸ್ಪರ್ಶಿಸಿ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಪೋಷಕರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು. ಮಕ್ಕಳಿಂದ ಹೇಳಿಕೆ ಪಡೆದ ಬಳಿಕ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರು. 30 ವರ್ಷಗಳಿಂದ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದ ರಾಮಶೆಟ್ಟಿ ನಿವೃತ್ತಿಯ ಅಂಚಿನಲ್ಲಿದ್ದರು. ಬಂಧನದ …

Read More »

ಪೋಲಿಸ್ ಅಧಿಕಾರಿಗಳು ಅಮಾನತು: ಆರೋಪಿಯ ಅಣ್ಣನಿಗೆ ಹಿಂಸೆ ಆರೋಪ

ಕಾಸರಗೋಡು: ಶಾಸ್ತಾಂಕೋಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೋಕ್ಸೋ ಪ್ರಕರಣದ ಆರೋಪಿಯ ಅಣ್ಣನನ್ನು ಅಪಹರಿಸಿ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಬೇಕಲ್ ಠಾಣೆಯ ಪಿಎಸ್‌ಐ ಕೆ. ಶರತ್ ಸೇರಿದಂತೆ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಮೇ 29ರಂದು ಪೋಕ್ಸೋ ಪ್ರಕರಣದ ಆರೋಪಿ ಅಭಿಷೇಕ್‌ನನ್ನು ಬಂಧಿಸಲು ಪೊಲೀಸರು ಆತನ ಮನೆಗೆ ತೆರಳಿದ್ದರು. ಆತ ಮನೆಯಲ್ಲಿ ಇಲ್ಲದಿದ್ದಾಗ ಅಣ್ಣ ಅಭಿಜಿತ್‌ನನ್ನು ಬಲವಂತವಾಗಿ ಕರೆದೊಯ್ದು, ವಾಹನದಲ್ಲಿ ಸುತ್ತಾಡಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಕುರಿತು …

Read More »