Breaking News

Breaking News

ಹೇ ಧನಂಜಯ ಬಾರೋ ಇಲ್ಲಿಗೆ; ಮಸೀದಿ ಎದುರು ಇನ್ಸ್‌ಪೆಕ್ಟರ್‌ಗೆ ಏಕವಚನದಲ್ಲೇ ತರಾಟೆ ತಗೆದುಕೊಂಡ ಪ್ರತಾಪ್ ಸಿಂಹ!

ಮೈಸೂರು: ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮಸೀದಿ ಮುಂಭಾಗದಲ್ಲಿ ಮಾತನಾಡುವ ವೇಳೆ ಸ್ಥಳೀಯ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಧಿಕಾರಿಯ ಹೇಳಿಕೆಗಳನ್ನು ಖಂಡಿಸಿ ಏಕವಚನದಲ್ಲಿ ಸವಾಲು ಹಾಕಿದ್ದಾರೆ. ಭಾಷಣದ ವೇಳೆ, “ಇನ್ನೂ ಒಂದುವರೆ ವರ್ಷ ಬಿಟ್ಟು ನಾವೇ ಅಧಿಕಾರಕ್ಕೆ ಬರ್ತೀವಿ. ಆಗ ಈ ಧನಂಜಯನ ಲೆಕ್ಕ ಚುಕ್ತಾ ಮಾಡ್ತೀವಿ” ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ. ಅವರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಹೇಳಿಕೆಗೆ …

Read More »

ವಿಜಯನಗರ | ಬಾಲಕನ ಅಪಹರಿಸಿ ಕೊಲೆ: ಜೀವಾವಧಿ ಶಿಕ್ಷೆ

ಕಮಲಾಪುರದಲ್ಲಿ 7 ವರ್ಷದ ಬಾಲಕನನ್ನು ಶಾಲೆಗೆ ಬಿಡುವುದಾಗಿ ನಂಬಿಸಿ ಸ್ಕೂಟಿಯಲ್ಲಿ ಕರೆದೊಯ್ದು ಕಾಲುವೆಗೆ ಎಸೆದು ಕೊಲೆ ಮಾಡಿದ ಪ್ರಕರಣದಲ್ಲಿ ಒಬಳೇಶ (24) ಎಂಬಾತನಿಗೆ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹65 ಸಾವಿರ ದಂಡ ವಿಧಿಸಿದೆ. 2024ರ ಅಕ್ಟೋಬರ್ 22ರಂದು ಬಾಲಕ ಅಭಿಯನ್ನು ಕರೆದೊಯ್ದಿದ್ದ ಒಬಳೇಶ, ಎಚ್‌ಎಲ್‌ಸಿ ಕಾಲುವೆಯ ಸೇತುವೆಯಿಂದ ಮಗುವನ್ನು ನೀರಿಗೆ ಎಸೆದು ಕೊಲೆ ಮಾಡಿದ್ದ. ಈ ಕುರಿತು ಕಮಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. …

Read More »

80s ಫೋಟೋ ಟ್ರೆಂಡ್‌ನಲ್ಲೂ ಸೈಬರ್ ವಂಚಕರ ಕನ್ನ: ಹಣ ಕೊಡದಿದ್ದಕ್ಕೆ ಬೆತ್ತಲೆ ಫೋಟೋ ಹರಿಬಿಟ್ಟ ವಂಚಕರು

ಬೆಂಗಳೂರು ಉತ್ತರ ತಾಲೂಕಿನ ಬಾಗಲಗುಂಟೆಯ ವಿನೋದ್ (45) ಎಂಬುವರು 80ರ ದಶಕದ ಶೈಲಿಯಲ್ಲಿ ಫೋಟೋ ಎಡಿಟ್ ಮಾಡಲು ನಕಲಿ ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡಿದ್ದು, ಬಳಿಕ ಅವರ ಮೊಬೈಲ್ ಹಾಗೂ ಖಾತೆ ಹ್ಯಾಕ್ ಆಗಿದೆ. ಮೊಬೈಲ್ ಹ್ಯಾಕ್ ಮಾಡಿದ ವಂಚಕರು ₹50 ಸಾವಿರಕ್ಕೆ ಬೇಡಿಕೆ ಇಟ್ಟು, ಹಣ ನೀಡದಿದ್ದರೆ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಹರಿಬಿಡುವುದಾಗಿ ಬೆದರಿಸಿದ್ದಾರೆ. ವಿನೋದ್ ಹಣ ನೀಡಲು ನಿರಾಕರಿಸಿದ ಕೆಲವೇ ನಿಮಿಷಗಳಲ್ಲಿ ಅವರ ಎಡಿಟ್ ಮಾಡಿದ ಅಶ್ಲೀಲ …

Read More »

ಪೊಲೀಸ್‌‍ ಖೆಡ್ಡಾಕ್ಕೆ ಬಿದ್ದ 10 ಲಕ್ಷ ಕೊಟ್ಟರೆ ಒಂದು ಕೋಟಿ ಮಾಡುವುದಾಗಿ ವಂಚಿಸುತ್ತಿದ್ದ ಖತರ್ನಾಕ್‌ ಗ್ಯಾಂಗ್‌

ಬೆಂಗಳೂರು: ₹10 ಲಕ್ಷ ನೀಡಿದರೆ ₹1 ಕೋಟಿ ನೀಡುವುದಾಗಿ ನಂಬಿಸಿ, ಮೂಟೆಗಳಲ್ಲಿ ಹಣ ತೋರಿಸಿ ಹಲವರಿಂದ ₹4.5 ಕೋಟಿಗೂ ಅಧಿಕ ಹಣ ಪಡೆದು ವಂಚಿಸಿದ್ದ ಆರೋಪದ ಮೇಲೆ ಹೊಸಕೋಟೆ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಯಳಚೇನಹಳ್ಳಿ ಶಶಿಕುಮಾರ್‌ ಪ್ರಮುಖ ಆರೋಪಿ. ಶಶಿಕುಮಾರ್‌ ಜಮೀನು ತೋರಿಸಿ ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಹಾಗೂ ಶ್ರೀಮಂತರ ವಿಶ್ವಾಸ ಗಳಿಸಿದ್ದ. ಬಳಿಕ ‘ಆರ್‌ಬಿಐ ಮ್ಯಾನೇಜರ್‌’ ಎಂದು ವ್ಯಕ್ತಿಯೊಬ್ಬರನ್ನು ಪರಿಚಯಿಸಿ, ವಿಡಿಯೋ ಕಾಲ್‌ನಲ್ಲಿ ಮೂಟೆಗಳಲ್ಲಿ ಹಣ ತೋರಿಸುತ್ತಿದ್ದ. ತಮಗೆ …

Read More »

ಪ್ರೇಯಸಿಯ ಕೊಂದು, ಶವಕ್ಕೆ ನೇಣು ಬಿಗಿದು ಆತ್ಮಹತ್ಯೆ ಕಥೆ ಕಟ್ಟಿದ ಪ್ರಿಯಕರನ ಬಂಧನ

ಬೆಂಗಳೂರು: ಮದುವೆಯಾಗುವಂತೆ ಪೀಡಿಸುತ್ತಿದ್ದ ಪ್ರೇಯಸಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಬಳಿಕ ಫ್ಯಾನ್‌ಗೆ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕಥೆ ಸೃಷ್ಟಿಸಿದ್ದ ಆರೋಪಿಯನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂ ಮೂಲದ ಮುನ್ನದಾಸ್‌ (32) ಬಂಧಿತ ಆರೋಪಿ. ಆ.30ರಂದು ಚಂಪುದಾಸ್‌ (24) ಎಂಬಾಕೆಯನ್ನು ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದ. ಆರಂಭದಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಿಸಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿಸಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದ ಬಳಿಕ ಕೊಲೆ …

Read More »

ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

ಉಡುಪಿ: ಬೆಂಗಳೂರಿನಿಂದ MDMA ತಂದು ಉಡುಪಿ, ಪೆರಂಪಳ್ಳಿ ಹಾಗೂ ಮಣಿಪಾಲದ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಉದ್ಯಾವರದ ಅಕ್ಬರ್ ಮಹಮ್ಮದ್ ಬ್ಯಾರಿ (44) ಹಾಗೂ ಬೆಂಗಳೂರಿನ ಸೈಯದ್ ಸುಹೇಲ್ (26) ಬಂಧಿತರು. ಸೆ.17ರ ಮಧ್ಯರಾತ್ರಿ ಪೆರಂಪಳ್ಳಿ ಬ್ರಿಡ್ಜ್ ಬಳಿ ಕಾರು ತಡೆದು ಪರಿಶೀಲಿಸಿದಾಗ ಸುಮಾರು ₹1 ಲಕ್ಷ ಮೌಲ್ಯದ 30 ಗ್ರಾಂ MDMA ಪತ್ತೆಯಾಗಿದೆ. ಜೊತೆಗೆ ನಾಲ್ಕು ಮೊಬೈಲ್‌ಗಳು, ಡಾಂಗಲ್‌, ₹9,500 …

Read More »

ಕರೆ ಸ್ವೀಕರಿಸುತ್ತಿಲ್ಲ ಎಂಬ ಕಾರಣಕ್ಕೆ ಪತ್ನಿಯ ಕೊಲೆ; ಆರೋಪಿ ಪತಿ ಬಂಧನ

ಬೆಂಗಳೂರು: ಪತ್ನಿ ತನ್ನ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂಬ ಕಾರಣಕ್ಕೆ ಪತಿಯೇ ಆಕೆಯನ್ನು ಕೊಲೆ ಮಾಡಿರುವ ಘಟನೆ ಮೈಕೋ ಲೇಔಟ್ ಠಾಣಾ ವ್ಯಾಪ್ತಿಯ ಬಿಳೇಕಳ್ಳಿಯಲ್ಲಿ ನಡೆದಿದೆ. ಬಿಹಾರ ಮೂಲದ ಗುಂಜಾ ಮದೇಷಿಯಾ (38) ಮೃತ ಮಹಿಳೆ. ಆಕೆಯ ಪತಿ ರಂಜಿತ್ ಕುಮಾರ್ ಗುಪ್ತಾ ಆರೋಪಿಯಾಗಿದ್ದಾನೆ. ಮಕ್ಕಳು ಶಾಲೆಗೆ ತೆರಳಿದ ಬಳಿಕ ದಂಪತಿ ನಡುವೆ ಇದೇ ವಿಚಾರಕ್ಕೆ ಜಗಳ ಆರಂಭವಾಗಿದ್ದು, ಅದು ವಿಕೋಪಕ್ಕೆ ತಿರುಗಿದೆ. ಈ ವೇಳೆ ಗುಂಜಾ ಮೃತಪಟ್ಟಿದ್ದು, ಬಳಿಕ ಪೊಲೀಸರಿಂದ …

Read More »

70 ಕೆಜಿ ಕಡವೆ ಮಾಂಸದ ಜೊತೆ ಮೂವರು ಅರೆಸ್ಟ್‌! ನಾಲ್ವರ ಪತ್ತೆಗೆ ಅರಣ್ಯ ಇಲಾಖೆ ಬಲೆ

ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿ ವಲಯದ ಎಂ.ಸಿ.ಹಳ್ಳಿ ಶಾಖಾ ವ್ಯಾಪ್ತಿಯಲ್ಲಿ ಕಡವೆ ಬೇಟೆಯಾಡಿ ಮಾಂಸ ಕತ್ತರಿಸುತ್ತಿದ್ದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಕಿರಣ್, ಗೋವಿಂದರಾಜು ಹಾಗೂ ಭದ್ರಾವತಿಯ ಮಣಿಕಂಠ ಬಂಧಿತರು. ದಾಳಿ ವೇಳೆ ಸುಮಾರು 70 ಕೆಜಿ ಕಡವೆ ಮಾಂಸ, ತಲೆ ಹಾಗೂ ಕಾಲುಗಳು, ಒಂದು ನಾಡ ಬಂದೂಕು, ದ್ವಿಚಕ್ರ ವಾಹನ, ಕತ್ತಿ, ಚಾಕು, ಚೂರಿ ಹಾಗೂ ಹೆಡ್‌ಲೈಟ್‌ ಸೇರಿದಂತೆ ಬೇಟೆಗೆ ಬಳಸಿದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. …

Read More »

ಕೆಪಿಎಸ್‌ಸಿ ಅಕ್ರಮ: ಮತ್ತೊಂದು ಚಿನ್ನದ ಜಾಲ ಬಯಲು; ಲೂಟಿ ಮಾಡಿದ್ದ ಹಣದಲ್ಲಿ ಗೆಳತಿಗೆ 30 ಲಕ್ಷ ಮೌಲ್ಯದ ಆಭರಣ ಗಿಫ್ಟ್ ಕೊಟ್ಟಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್

ಬೆಂಗಳೂರು: ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆಯಲ್ಲಿ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ವಿರುದ್ಧ ಮತ್ತಷ್ಟು ಆರೋಪಗಳು ಬೆಳಕಿಗೆ ಬಂದಿವೆ. ಕೆಪಿಎಸ್‌ಸಿಯಲ್ಲಿ ಅಕ್ರಮವಾಗಿ ಗಳಿಸಿದ ಹಣದಲ್ಲಿ ಗೆಳತಿಗೆ ₹30 ಲಕ್ಷ ಮೌಲ್ಯದ ಚಿನ್ನಾಭರಣ ಖರೀದಿಸಿಕೊಟ್ಟಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಸಿಐಡಿ ತಿಳಿಸಿದೆ. ಈ ಹಿಂದೆ ಇದೇ ಗೆಳತಿಗೆ ₹26 ಲಕ್ಷ ಮೌಲ್ಯದ ಚಿನ್ನಾಭರಣ ಖರೀದಿಸಿದ್ದ ಆರೋಪದ ಮೇಲೆ ಆಭರಣಗಳನ್ನು ಸಿಐಡಿ ಜಪ್ತಿ ಮಾಡಿತ್ತು. ಇದೀಗ ಮತ್ತಷ್ಟು ₹30 ಲಕ್ಷ …

Read More »

ಅತ್ತೆ ಪ್ರಿಯಕರನ ಜೊತೆ ಸೊಸೆ ಲವ್ವಿಡವ್ವಿ: ಆತ್ಮಹತ್ಯೆ ಎಂದುಕೊಂಡಿದ್ದ ಕೇಸ್‌ಗೆ ಬಿಗ್ ಟ್ವಿಸ್ಟ್ ಕೊಟ್ಟ ಮುಗ್ಧ ಮಗಳು, ಚನ್ನಗಿರಿಯ ಅಜ್ಜಿಹಳ್ಳಿಯಲ್ಲಿ ತಾಯಿ ಅಕ್ರಮ ಸಂಬಂಧ ಬಯಲು!

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅಜ್ಜಿಹಳ್ಳಿ ಗ್ರಾಮದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಪ್ರಕರಣ ಇದೀಗ ಕೊಲೆ ಶಂಕೆಯ ತಿರುವು ಪಡೆದುಕೊಂಡಿದೆ. ಮೃತ ಶಕ್ತಿಕುಮಾರ್‌ ಅವರ ಪತ್ನಿ ಹಾಗೂ ಗೋಪಾಲ್‌ ವಿರುದ್ಧ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ತಂದೆಯ ಮೇಲೆ ತಾಯಿ ಹಾಗೂ ಗೋಪಾಲ್‌ ಹಲ್ಲೆ ನಡೆಸಿದ್ದನ್ನು ಬಾಲಕಿ ಕಣ್ಣಾರೆ ಕಂಡಿದ್ದಾಳೆ ಎನ್ನಲಾಗಿದ್ದು, ಸಂಬಂಧಿಕರ ಮುಂದೆ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಈ ಹೇಳಿಕೆ ಆಧರಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. …

Read More »