Breaking News

Breaking News

ಹಾವೇರಿ | ಯುವತಿ ಆತ್ಮಹತ್ಯೆ; ಲೈಂಗಿಕ ಕಿರುಕುಳ ಆರೋಪ

ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ 20 ವರ್ಷದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕಿರುಕುಳ ನೀಡಿದ ಆರೋಪದಡಿ ದರ್ಶನ್, ಅಕ್ಷಯ್ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಬಿ.ಎಸ್ಸಿ. ಕೋರ್ಸ್‌ಗೆ ಪ್ರವೇಶ ಪಡೆಯಲು ಸಿದ್ಧತೆ ನಡೆಸುತ್ತಿದ್ದ ಯುವತಿ, ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಯುವತಿ ಹಾಗೂ ದರ್ಶನ್ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದ್ದು, ಈ ವಿಚಾರ ತಿಳಿದ ಹಿರಿಯರು ಬುದ್ಧಿವಾದ ಹೇಳಿದ್ದರು. ಇದೇ ವೇಳೆ ವಿವಾಹಿತ …

Read More »

ಹಿಪ್ಪರಗಿ ಕಾರು ಸ್ಫೋಟ ಪ್ರಕರಣ: ನಾಲ್ವರು ಪ್ರಮುಖ ಆರೋಪಿಗಳ ಬಂಧನ

ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಜುಲೈ 25ರಂದು ನಡೆದ ಕಾರು ಸ್ಫೋಟ ಪ್ರಕರಣದ ತನಿಖೆ ಬಹುತೇಕ ಪೂರ್ಣಗೊಂಡಿದ್ದು, ನಾಲ್ವರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹಣಕಾಸಿನ ವ್ಯವಹಾರ ಹಾಗೂ ಜಮೀನು ವಿವಾದದ ಹಿನ್ನೆಲೆಯಲ್ಲಿ ಬಾರ್ ಮಾಲೀಕ ಹನಮಂತ ಅಥಣಿ ಅವರಿಗೆ ಬೆದರಿಕೆ ಹಾಕಿ ಕೊಲೆ ಮಾಡುವ ಉದ್ದೇಶದಿಂದ ಕಾರಿನಲ್ಲಿ ಸ್ಫೋಟಕ ಇಡಲಾಗಿತ್ತು ಎಂದು ಎಸ್ಪಿ ಸಿದ್ಧಾರ್ಥ್ ಗೋಯಲ್ ತಿಳಿಸಿದ್ದಾರೆ. ಶಿವಾನಂದ ಜಲ್ಲಿ, ರೇವಣಪ್ಪ ಜಲ್ಲಿ, ಮಹದೇವ ಸಂಗಾಪೂರ ಹಾಗೂ ಮಲ್ಲಿಕಾರ್ಜುನ …

Read More »

ಬಾಡಿಗೆಗಿದ್ದ ವಿದ್ಯಾರ್ಥಿನಿಗೆ ಮಾಲೀಕನಿಂದ ಲೈಂಗಿಕ ಕಿರುಕುಳ; 60 ವರ್ಷದ ಕಾಮುಕ ಬಂಧನ

ಬೆಂಗಳೂರು ಶಾಂತಿನಗರದ ಬರ್ಲಿ ಸ್ಟ್ರೀಟ್‌ನ ಅಪಾರ್ಟ್‌ಮೆಂಟ್‌ನಲ್ಲಿ 20 ವರ್ಷದ ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ 60 ವರ್ಷದ ಮನೆ ಮಾಲೀಕ ಕಮಲೇಶ್ ಕುಮಾರ್‌ನನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ. ಯುವತಿ ಕಳೆದ ಎರಡೂವರೆ ತಿಂಗಳಿಂದ ಆರೋಪಿಯ ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆಗೆ ವಾಸವಿದ್ದಳು. ಯುವತಿ ಮನೆಯಲ್ಲಿ ಒಂಟಿಯಾಗಿದ್ದ ವೇಳೆ ರಿಪೇರಿ ಕೆಲಸದ ನೆಪದಲ್ಲಿ ಮನೆಗೆ ಬಂದಿದ್ದ ಆರೋಪಿ, ಮೆಹಂದಿ ನೋಡುವ ನೆಪದಲ್ಲಿ ಆಕೆಯ ಕೈ ಹಿಡಿದು ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು …

Read More »

ಅಕ್ರಮ ಸಂಬಂಧಕ್ಕೆ ಅಡ್ಡಿ – ಲವರ್ ಜೊತೆ ಸೇರಿ ಗಂಡನನ್ನೇ ನದಿಗೆಸೆದ ಪತ್ನಿ!

ದಾವಣಗೆರೆ ತಾಲೂಕಿನ ಪಾಮೇನಹಳ್ಳಿ ಗ್ರಾಮದಲ್ಲಿ ಅಕ್ರಮ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದಾನೆ ಎಂದು ಆರೋಪಿಸಿ ಪತ್ನಿಯೇ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ರಘು (36) ಕೊಲೆಯಾದ ವ್ಯಕ್ತಿಯಾಗಿದ್ದು, ಪತ್ನಿ ಶೃತಿ ಹಾಗೂ ಆಕೆಯ ಪ್ರಿಯಕರ ಉಬೇದುಲ್ಲಾ ಪ್ರಮುಖ ಆರೋಪಿಗಳಾಗಿದ್ದಾರೆ. ಮೃತದೇಹ ಸಾಗಿಸಲು ಸಹಕರಿಸಿದ ಆರೋಪದಲ್ಲಿ ಉಬೇದುಲ್ಲಾ ಸ್ನೇಹಿತ ಸುರೇಶ್‌ನನ್ನೂ ಪೊಲೀಸರು ಬಂಧಿಸಿದ್ದಾರೆ. ರಘು ಹಾಗೂ ಶೃತಿ ಸುಮಾರು 12 ವರ್ಷಗಳ ಹಿಂದೆ ವಿವಾಹವಾಗಿದ್ದರು. ರಘುವಿಗೆ ಕುಡಿತದ …

Read More »

ರಾಮನಗರ | ನಕಲಿ ಔಷಧ ಜಾಲ ಪತ್ತೆ: ₹6 ಕೋಟಿ ಮೌಲ್ಯದ ಔಷಧ ವಶಕ್ಕೆ

ಬೆಂಗಳೂರು ದಕ್ಷಿಣ ತಾಲ್ಲೂಕಿನ ಸಿ.ಕೆ. ತಾಂಡ್ಯಾ ಗ್ರಾಮದ ಫಾರಂ ಹೌಸ್‌ನಲ್ಲಿ ನಡೆಯುತ್ತಿದ್ದ ನಕಲಿ ಔಷಧ ತಯಾರಿಕೆ ಜಾಲದ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಮಂಡಳಿ ಹಾಗೂ ಪೊಲೀಸರು ಜಂಟಿ ದಾಳಿ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಸುಮಾರು ₹6 ಕೋಟಿ ಮೌಲ್ಯದ ನಕಲಿ ಔಷಧಗಳನ್ನು ವಶಪಡಿಸಿಕೊಂಡು, ಒಬ್ಬನನ್ನು ವಶಕ್ಕೆ ಪಡೆಯಲಾಗಿದೆ. ತೆಲಂಗಾಣ, ಹಿಮಾಚಲ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಔಷಧಗಳನ್ನು ತರಿಸಿಕೊಂಡು, ₹600 ಮೌಲ್ಯದ ಔಷಧಕ್ಕೆ ₹6 ಸಾವಿರದ ಲೇಬಲ್ …

Read More »

ಹನೂರು ಶೂಟೌಟ್ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ; ಕಳ್ಳಬೇಟೆ ಶಿಬಿರ ಸ್ಪೋಟ, ಭಾರಿ ಅನುಮಾನ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿ ಧಾಮದಲ್ಲಿ ನಡೆದ ಮೂವರ ಶೂಟೌಟ್ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಘಟನೆ ಬಳಿಕ ಅರಣ್ಯ ಇಲಾಖೆಯ ಆಂಟಿ ಪೋಚಿಂಗ್ ಕ್ಯಾಂಪ್‌ಗಳಿಗೆ ದುಷ್ಕರ್ಮಿಗಳು ನುಗ್ಗಿ ಜಿಲೆಟಿನ್ ಬಳಸಿ ಸ್ಫೋಟ ನಡೆಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಒಳ್ಳಮರದ ಹಟ್ಟಿ, ಮತ್ತಿಪುರ, ಬೂದಿಕೆರೆ ಹಾಗೂ ಕಳ್ಳಿದೊಡ್ಡಿ ಕ್ಯಾಂಪ್‌ಗಳು ಹಾನಿಗೊಳಗಾಗಿವೆ ಎಂದು ವರದಿಯಾಗಿದೆ. ಶೂಟೌಟ್‌ಗೆ ಪ್ರತೀಕಾರವಾಗಿ ದಾಳಿ ನಡೆದಿದೆಯೇ, ಅರಣ್ಯದೊಳಗೆ ಸ್ಫೋಟಕಗಳು ಹೇಗೆ ತಲುಪಿದವು ಎಂಬ ಪ್ರಶ್ನೆಗಳು …

Read More »

ಹನೂರು ಶೂಟೌಟ್ ಪ್ರಕರಣ ಬೆನ್ನಲ್ಲೇ; ಬಂಡೀಪುರದ ಹೋ ಸ್ಟೇನಲ್ಲಿ 46 ಜಿಂಕೆ ಕೊಂಬು, ನವಿಲುಗರಿ, ಕೋವಿಗಳು ಪತ್ತೆ

ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದ ಖಾಸಗಿ ಹೋಂ ಸ್ಟೇನಲ್ಲಿ ವನ್ಯಜೀವಿಗಳ ಚರ್ಮ, ಜಿಂಕೆ ಕೊಂಬುಗಳು, ನವಿಲುಗರಿ ಹಾಗೂ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ರೈತ ಸಂಘದ ಕಾರ್ಯಕರ್ತರು ಕೆಬ್ಬೇಪುರ ಗ್ರಾಮದ ಜಮೀನಿನಲ್ಲಿರುವ ಹೋಂ ಸ್ಟೇನಲ್ಲಿ ಈ ವಸ್ತುಗಳನ್ನು ಪತ್ತೆಹಚ್ಚಿದ್ದಾರೆ. ಹೋಂ ಸ್ಟೇನಲ್ಲಿ 48 ಜಿಂಕೆ ಕೊಂಬು, ಪ್ರಾಣಿ ಚರ್ಮ, ನವಿಲುಗರಿ, ನಾಲ್ಕು ಗನ್‌, ಒಂದು ರಿವಾಲ್ವರ್‌ ಹಾಗೂ ಏರ್‌ಸ್ಪೇಸ್‌ ಪಿಸ್ತೂಲ್‌ ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿವೆ. ಮಾಹಿತಿ ಪಡೆದ ಬಂಡೀಪುರ ಅರಣ್ಯಾಧಿಕಾರಿಗಳು …

Read More »

ಮನೆ ರಿಪೇರಿಗೆ ಸಾಲ ಮಾಡಿದ್ದ ಕುಟುಂಬಕ್ಕೆ ಕಳ್ಳರ ಶಾಕ್; ಹಂಚು ಮುರಿದು ₹50 ಸಾವಿರ, ಚಿನ್ನ ಎಗರಿಸಿದ ಖದೀಮರು!

ನರಗುಂದ ಪಟ್ಟಣದ ಹಾಲಕೇರಿ ಬಡಾವಣೆಯಲ್ಲಿ ಮನೆಗೆ ಬೀಗ ಹಾಕಿಕೊಂಡು ಸಂಬಂಧಿಕರ ಊರಿಗೆ ತೆರಳಿದ್ದ ಕುಟುಂಬದ ಮನೆಯಲ್ಲಿ ಮೇಲ್ಛಾವಣಿಯ ಹಂಚು ಮುರಿದು ಕಳ್ಳರು ಒಳನುಗ್ಗಿ ₹50 ಸಾವಿರ ನಗದು ಹಾಗೂ 10 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. ಸುರೇಖಾ ಬಂಡಿವಡ್ಡರ್ ಕುಟುಂಬ ಎರಡು ದಿನಗಳ ಕಾಲ ಊರಿಗೆ ತೆರಳಿತ್ತು. ಇದೇ ವೇಳೆ ಕಳ್ಳರು ಮನೆಗೆ ನುಗ್ಗಿದ್ದು, ಕುಟುಂಬಸ್ಥರು ವಾಪಸ್ ಬಂದಾಗ ಕಳ್ಳತನ ಬೆಳಕಿಗೆ ಬಂದಿದೆ. ಮನೆ ದುರಸ್ತಿಗಾಗಿ ಸ್ವಸಹಾಯ ಸಂಘದಿಂದ ಸಾಲ …

Read More »

ಬಾಗಲಕೋಟೆ: ಖರೀದಿ ನೆಪದಲ್ಲಿ ಮಹಿಳೆಯರಿಂದ ₹22.87 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಮುಧೋಳ ನಗರದ ತಂಬಾಕ್ ಚೌಕ್ ಬಳಿಯ ಚಿನ್ನಾಭರಣದ ಅಂಗಡಿಗೆ ವ್ಯಾಪಾರ ಮಾಡುವ ನೆಪದಲ್ಲಿ ಬಂದ ಮೂವರು ಬುರ್ಖಾಧಾರಿ ಮಹಿಳೆಯರು ಮಾಲೀಕರ ಗಮನ ಬೇರೆಡೆ ಸೆಳೆದು ₹22.87 ಲಕ್ಷ ಮೌಲ್ಯದ 163 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. ಕಾಲುಚೈನು ಖರೀದಿಸುವುದಾಗಿ ಹೇಳಿ ವಿವಿಧ ವಿನ್ಯಾಸಗಳನ್ನು ತೋರಿಸುವಂತೆ ಕೇಳಿದ ಮಹಿಳೆಯರು, ಮಾಲೀಕರು ಆಭರಣಗಳನ್ನು ತೋರಿಸುತ್ತಿದ್ದ ವೇಳೆ ಚಿನ್ನಾಭರಣಗಳಿದ್ದ ಟ್ರೇಯನ್ನೇ ಕದ್ದುಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಆಗಸ್ಟ್ 8ರಂದು ಘಟನೆ ನಡೆದಿದ್ದು, ಅಂಗಡಿ ಮಾಲೀಕರು ಆಗಸ್ಟ್ …

Read More »

ವಿಟ್ಲ| ಬಾಲಕನಿಗೆ ಲೈಂಗಿಕ ಕಿರುಕುಳ, ಬೆದರಿಕೆ ಪ್ರಕರಣ: ಆರೋಪಿ ಸೆರೆ

ವಿಟ್ಲ: ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿ ಬೆದರಿಕೆ ಹಾಕಿದ ಆರೋಪದಡಿ 53 ವರ್ಷದ ವ್ಯಕ್ತಿಯೊಬ್ಬರನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ವಿಟ್ಲ ಕೊಂಡಗಾಯಿ ನಿವಾಸಿ ಉಮೇಶ್ (53) ಎಂದು ಗುರುತಿಸಲಾಗಿದೆ. ಆಗಸ್ಟ್ 15ರಂದು ಅಳಿಕೆಯಿಂದ ಪುತ್ತೂರು ಕಡೆಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಬಾಲಕನ ಪಕ್ಕದಲ್ಲಿ ಅಪರಿಚಿತ ವ್ಯಕ್ತಿ ಕುಳಿತಿದ್ದ. ಪ್ರಯಾಣದ ವೇಳೆ ಬಾಲಕನೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲದೆ, ಬಳಿಕ ಬಾಲಕ ಮನೆಗೆ ತೆರಳಿದ ಸಂದರ್ಭ ಅಲ್ಲಿಗೂ ತೆರಳಿ ಲೈಂಗಿಕ ಕಿರುಕುಳ …

Read More »