BigTv News
August 18, 2026
Breaking News
ತರೀಕೆರೆ: ತಂಗಿಯ ಮಗಳ ಕೆನ್ನೆಗೆ ಹೊಡೆದನೆಂಬ ಕ್ಷುಲ್ಲಕ ಕಾರಣಕ್ಕೆ ತಮ್ಮನೇ ಅಣ್ಣನನ್ನು ಕೊಲೆಗೈದ ಘಟನೆ ಲಿಂಗದಹಳ್ಳಿ ಹೋಬಳಿಯ ನಂದಿಬಟ್ಟಲು ಕಾಲೊನಿಯಲ್ಲಿ ಭಾನುವಾರ ನಡೆದಿದೆ.ಕೃಷ್ಣ ನಾಯ್ಕ (38 ವರ್ಷ) ಕೊಲೆಯಾದವರು. ಕೃಷ್ಣನಾಯ್ಕನ ತಮ್ಮ ಯುವರಾಜನಾಯ್ಕ ತನ್ನ ಮನೆಯಲ್ಲಿ ತಂಗಿಯ ಮಗಳನ್ನು ಸಾಕಿಕೊಂಡಿದ್ದ. ಆಕೆಯನ್ನು ಭಾನುವಾರ ಬೆಳಗಿನ ವೇಳೆಯಲ್ಲಿ ಹಸಿವಾಗಿದೆ ಊಟ ಬಡಿಸು ಎಂದು ಕೃಷ್ಣನಾಯ್ಕ ಕೇಳಿದ್ದಾನೆ. ಊಟ ಬಡಿಸಲು ಬರದೆ ಹಗಲಿನ ವೇಳೆಯಲ್ಲಿ ನಿದ್ರೆ ಮಾಡುತ್ತಿದ್ದಾಳೆ ಎಂದು ಕುಪಿತಗೊಂಡ ಕೃಷ್ಣನಾಯ್ಕ ಬಾಲಕಿಯ …
Read More »
BigTv News
August 17, 2026
Breaking News
ಮಧುಗಿರಿ: ತಾಲೂಕಿನ ಕಸಿನಾಯಕನಹಳ್ಳಿ ಗೇಟ್ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಕೊಡಿಗೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಜಿಲಾನ್ (30), ಕಲ್ಯಾಣಕುಮಾರ್ (27) ಹಾಗೂ ಚರಣ್ (26) ಬಂಧಿತ ಆರೋಪಿಗಳು. ಮಧುಗಿರಿ-ಹಿಂದೂಪುರ ಮುಖ್ಯ ರಸ್ತೆಯ ಕಸಿನಾಯಕನಹಳ್ಳಿ ಗೇಟ್ ಬಳಿ ಸಾರ್ವಜನಿಕರು ಹಾಗೂ ಗ್ರಾಹಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಮೂವರನ್ನೂ ವಶಕ್ಕೆ ಪಡೆದು ಗಾಂಜಾ ಜಪ್ತಿ ಮಾಡಿದ್ದಾರೆ. ಬಂಧಿತ ಆರೋಪಿಗಳನ್ನು …
Read More »
BigTv News
August 17, 2026
Breaking News
ದಾವಣಗೆರೆ: ಜಮೀನು ವಿಚಾರವಾಗಿ ತಾಯಿಯನ್ನು ಕೊಲೆ ಮಾಡಿದ್ದ ಮಗ ಲೋಕೇಶ ನಾಯ್ಕ (45)ಗೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹3 ಲಕ್ಷ ದಂಡ ವಿಧಿಸಿದೆ. 2023ರ ಅ.10ರಂದು ನೇರ್ಲಿಗೆ ಗ್ರಾಮದಲ್ಲಿ ಶಾಂತಿ ಬಾಯಿ (65) ಅವರನ್ನು ಕೊಲೆ ಮಾಡಲಾಗಿತ್ತು. ಶಾಂತಿ ಬಾಯಿ ಮತ್ತು ಪತಿ ಚಂದ್ರ ನಾಯ್ಕ ಅವರಿಗೆ ಮೂರು ಎಕರೆ ಜಮೀನಿತ್ತು. ಪುತ್ರಿ ಒಂದು ಎಕರೆ ಹಾಗೂ ಪುತ್ರ ಎರಡು ಎಕರೆ …
Read More »
BigTv News
August 17, 2026
Breaking News
ಬೆಂಗಳೂರು: ಕರ್ತವ್ಯನಿರತ ಸಂಚಾರ ಪೊಲೀಸ್ ಸಿಬ್ಬಂದಿಯೊಂದಿಗೆ ಗಲಾಟೆ ನಡೆಸಿ ಹಲ್ಲೆಗೆ ಯತ್ನಿಸಿದ ಆರೋಪದಡಿ ಬಂಧನಕ್ಕೊಳಗಾಗಿದ್ದ ಜೆಡಿಎಸ್ ಮುಖಂಡ ಗೊಟ್ಟಿಗೆರೆ ಮಂಜುಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಹುಳಿಮಾವು ಸಂಚಾರ ಠಾಣಾ ವ್ಯಾಪ್ತಿಯಲ್ಲಿ ವಾಹನ ದಟ್ಟಣೆ ನಿಯಂತ್ರಿಸುತ್ತಿದ್ದ ಪೊಲೀಸ್ ಸಿಬ್ಬಂದಿ ಅರುಣ್, ಮಂಜು ಅವರ ಕಾರನ್ನು ತಡೆದಿದ್ದರು. ಇದನ್ನು ಪ್ರಶ್ನಿಸಿದ ಮಂಜು ವಾಗ್ವಾದಕ್ಕಿಳಿದು, ಸಿಬ್ಬಂದಿಯ ಕಾಲರ್ ಹಿಡಿದು ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಘಟನೆಯ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ …
Read More »
BigTv News
August 17, 2026
Breaking News
ಭಟ್ಕಳ: ಕಂಪನಿ ನೀಡಿದ್ದ ಸ್ವಾತಂತ್ರ್ಯೋತ್ಸವ ರಜೆಯಲ್ಲಿ ಮುರುಡೇಶ್ವರಕ್ಕೆ ಬಂದಿದ್ದ ಹುಬ್ಬಳ್ಳಿ ಹಾಗೂ ಗದಗ ಮೂಲದ ಆರು ಮಂದಿ ಗಾಂಜಾ ಸೇವಿಸಿ ಪೊಲೀಸರ ಅತಿಥಿಯಾಗಿದ್ದಾರೆ. ಮುರುಡೇಶ್ವರದ ವಿವಿಧೆಡೆ ಗಾಂಜಾ ಸೇವಿಸಿ ಕೆಲವರು ಅನುಚಿತವಾಗಿ ವರ್ತಿಸುತ್ತಿದ್ದರು ಎನ್ನಲಾಗಿದೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರು ಮಂದಿಯನ್ನು ವಶಕ್ಕೆ ಪಡೆದು ತಾಲೂಕು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ. ಪರೀಕ್ಷೆಯಲ್ಲಿ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ. ಈ ಸಂಬಂಧ ಆರು ಮಂದಿಯ ವಿರುದ್ಧ …
Read More »
BigTv News
August 17, 2026
Breaking News
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚೌಡಿಹಾಳದಲ್ಲಿ ನಿವೃತ್ತ ಶಿಕ್ಷಕ ಸಿದ್ದಪ್ಪ ಅಂಜುಟಗಿ (62) ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಅನೈತಿಕ ಸಂಬಂಧಕ್ಕೆ ತಂದೆ ವಿರೋಧಿಸಿದ್ದಕ್ಕೆ ಪುತ್ರಿ ಪ್ರಿಯಾಂಕಾ ಸುರೇಶ ಮಸಳಿ (35) ತನ್ನ ಪ್ರಿಯಕರ ಸಂತೋಷ ಸಿಂಧೆ (32) ಜೊತೆ ಸೇರಿ ತಂದೆಯನ್ನು ಹತ್ಯೆ ಮಾಡಿದ್ದಾಳೆ ಎನ್ನಲಾಗಿದೆ. ಆಸ್ತಿ ವಿಚಾರವಾಗಿ ತಂದೆ-ಮಗಳ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಆಗಸ್ಟ್ 15ರಂದು ಮತ್ತೆ ಗಲಾಟೆ ನಡೆದ ಬಳಿಕ ಪ್ರಿಯಾಂಕಾ ತನ್ನ ಪ್ರಿಯಕರನನ್ನು …
Read More »
BigTv News
August 17, 2026
Breaking News
ಬಂಟ್ವಾಳ: ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ತೆಂಕಕಜೆಕಾರು ಉದ್ದದ ಗುಡ್ಡೆಯಲ್ಲಿ 82 ವರ್ಷದ ವೃದ್ಧೆಯ ಎರಡು ಚಿನ್ನದ ಬಳೆಗಳನ್ನು ಬಲವಂತವಾಗಿ ಎಳೆದುಕೊಂಡು ಹೋಗಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವೃದ್ಧೆಯ ಮೊಮ್ಮಗ ಶಬೀರ್ (33) ಎಂಬಾತನನ್ನು ಬಂಧಿಸಲಾಗಿದೆ. ಆ.14ರಂದು ಅವ್ವಮ್ಮ ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ಮುಖಕ್ಕೆ ಬಟ್ಟೆ ಸುತ್ತಿಕೊಂಡು ಬಂದಿದ್ದ ವ್ಯಕ್ತಿ, ಅವರ ಕೈಯಲ್ಲಿದ್ದ ಸುಮಾರು ₹5 ಲಕ್ಷ ಮೌಲ್ಯದ 40 ಗ್ರಾಂ ತೂಕದ ಎರಡು ಚಿನ್ನದ ಬಳೆಗಳನ್ನು ಬಲವಂತವಾಗಿ ಕಿತ್ತುಕೊಂಡು …
Read More »
BigTv News
August 17, 2026
Breaking News
ಭಟ್ಕಳ: ವೆಂಕಟಾಪುರದಲ್ಲಿ ಡೆಂಟಲ್ ಕ್ಲಿನಿಕ್ ನಡೆಸುತ್ತಿರುವ ವೈದ್ಯರ ವಿರುದ್ಧ ಸ್ವತಃ ಪತ್ನಿಯೇ ದೂರು ನೀಡಿದ್ದಾರೆ. ಕ್ಲಿನಿಕ್‌ಗೆ ಬರುವ ಮಹಿಳೆಯರನ್ನು ಬ್ಲ್ಯಾಕ್‌ಮೇಲ್ ಮಾಡಿ ಅವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ. ವೈದ್ಯರು ಈ ಹಿಂದೆ ಉತ್ತರ ಪ್ರದೇಶದ ಡೆಂಟಲ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. 2009ರಲ್ಲಿ ಮುರುಡೇಶ್ವರದಲ್ಲಿ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಭಟ್ಕಳಕ್ಕೆ ಬಂದು ಕ್ಲಿನಿಕ್ ಆರಂಭಿಸಿದ ಬಳಿಕ ಪತಿ ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಗಿ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ. ಅಕ್ರಮ …
Read More »
BigTv News
August 17, 2026
Breaking News
ಬೆಂಗಳೂರು ಕೆ.ಆರ್.ಪುರದಲ್ಲಿ ಜಗಳ ಬಿಡಿಸಲು ತೆರಳಿದ್ದ ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ ಮಾಡಿ, ಅವಾಚ್ಯ ಹಾಗೂ ಅಶ್ಲೀಲ ಪದಗಳಿಂದ ನಿಂದಿಸಿದ ಘಟನೆ ನಡೆದಿದೆ. ಕೆ.ಆರ್.ಪುರ ಸಂಚಾರ ಠಾಣೆ ಪಿಎಸ್‌ಐ ನಯನಾ ನೀಡಿದ ದೂರಿನ ಮೇರೆಗೆ ಹೇಮಂತ್ ರೆಡ್ಡಿ, ರಾಹುಲ್, ಹರ್ಷಿತ್ ರೆಡ್ಡಿ, ರಾಧಾಕೃಷ್ಣ ರೆಡ್ಡಿ ಸೇರಿದಂತೆ ಇತರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆ.12ರಂದು ಭಟ್ಟರಹಳ್ಳಿ ಸಿಗ್ನಲ್ ಬಳಿ ಟ್ರಾಫಿಕ್ ಜಾಮ್ ಉಂಟುಮಾಡಿ ಹೇಮಂತ್ ರೆಡ್ಡಿ ಜಗಳವಾಡುತ್ತಿದ್ದ. ಪಿಎಸ್‌ಐ ನಯನಾ ಜಗಳ …
Read More »
BigTv News
August 17, 2026
Breaking News
ಕೊಪ್ಪಳ: ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (KUDA) ₹8.43 ಕೋಟಿ ಅಕ್ರಮ ವರ್ಗಾವಣೆಯಾಗಿರುವುದು ಆಡಿಟ್ ವೇಳೆ ಬಯಲಾಗಿದೆ. ಅಧ್ಯಕ್ಷರು ಹಾಗೂ ಸದಸ್ಯರಿಲ್ಲದ ಅವಧಿಯಲ್ಲಿ ಪ್ರಾಧಿಕಾರದ ಹೆಸರಿನಲ್ಲಿ ಅನಧಿಕೃತ ಬ್ಯಾಂಕ್ ಖಾತೆಗಳನ್ನು ತೆರೆದು ಹಣ ವರ್ಗಾಯಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. 2022-23ರ ಅವಧಿಯಲ್ಲಿ ಹಾಗೂ ನಂತರ ಸುಮಾರು ಒಂದೂವರೆ ವರ್ಷಗಳ ಕಾಲ ಅಧ್ಯಕ್ಷರ ನೇಮಕವಾಗಿರಲಿಲ್ಲ. ಇದೇ ಸಮಯದಲ್ಲಿ ಕೊಪ್ಪಳದ ವಿವಿಧ ಬ್ಯಾಂಕ್‌ಗಳಲ್ಲಿ ನಕಲಿ ಖಾತೆಗಳನ್ನು ತೆರೆದು ₹8.43 ಕೋಟಿ ವರ್ಗಾವಣೆ ಮಾಡಲಾಗಿದೆ ಎನ್ನಲಾಗಿದ್ದು, …
Read More »