Breaking News

ಕರ್ನಾಟಕ

ನೇಣು ಬಿಗಿದುಕೊಂಡು ಸಹೋದರಿಯರು ಆತ್ಮಹತ್ಯೆ

ಹುಬ್ಬಳ್ಳಿ: ಮನೆಯಲ್ಲಿ ನೇಣು ಬಿಗಿದುಕೊಂಡು ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಕಲಘಟಗಿಯಲ್ಲಿ ನಡೆದಿದೆ. ಕಾವೇರಿ ಹಡಪದ (17) ಭೂಮಿಕಾ ಹಡಪದ (19) ಆತ್ಮಹತ್ಯೆ ಮಾಡಿಕೊಂಡ ಸಹೋದರಿಯರು. ಕಲಘಟಗಿಯ ಬೆಂಡಿಗೇರಿ ಓಣಿಯಲ್ಲಿರುವ ಬಾಡಿಗೆ ಮನೆಯಲ್ಲಿ ತಾಯಿ ಇಲ್ಲದ ವೇಳೆ ಸಹೋದರಿಯರು ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read More »

ಗದಗ ಬೈಕ್ ಗೆ ಸರಕಾರಿ ಬಸ್ ಡಿಕ್ಕಿ;ಬೈಕ್ ಸವಾರ ಸ್ಥಳದಲ್ಲಿಯೇ ಸಾವು

ಗದಗ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ವೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಭಾನುವಾರ ಮುಂಜಾನೆ ಜರುಗಿದೆ. ಮೃತ ಸವಾರ ಸಮೀಪದ ಬ್ಯಾಲವಾಡಗಿ ನಿವಾಸಿ ಚಿಕನ್ ವ್ಯಾಪಾರಿ ಮಂಜುನಾಥ್ ಬಂಡಿ (45) ಮೃತಪಟ್ಟ ದುರ್ಧೈವಿ ಎಂದು ಗುರುತಿಸಲಾಗಿದೆ. ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಹೆಸ್ಕಾಂ ಕಚೇರಿ ಬಳಿ ಈ ದುರ್ಘಟನೆ ಜರುಗಿದ್ದು, ಡಿಕ್ಕಿಯ ರಭಸಕ್ಕೆ ಬೈಕ್ ಸವಾರನ ದೇಹ ನಜ್ಜು ಗುಜ್ಜಾಗಿದೆ. …

Read More »

ವಿದ್ಯುತ್ ಸ್ಪರ್ಶದಿಂದ ವಾಟರ್ ಮ್ಯಾನ್ ಸಾವು

ಧಾರವಾಡ ನವಲಗುಂದ: ವಿದ್ಯುತ್ ತಂತಿ ಸ್ಪರ್ಶಿಸಿ ವಾಟರ್ ಮ್ಯಾನ್ ಸಾವನ್ನಪ್ಪಿದ ಘಟನೆ ನವಲಗುಂದ ತಾಲೂಕಿನ ತಡಹಾಳ ಗ್ರಾಮದಲ್ಲಿ ನಡೆದಿದೆ. ತಡಹಾಳ ಗ್ರಾಮದ ನಿವಾಸಿ ರುದ್ರಪ್ಪ ಬಸಪ್ಪ ಬಡಿಗೇರ (38) ಮೃತ ವಾಟರ್ ಮ್ಯಾನ್, ತಡಹಾಳ ಗ್ರಾಮ ಪಂಚಾಯತಿ ವಾಟರ್ ಮ್ಯಾನ್ ಆಗಿದ್ದ ರುದ್ರಪ್ಪ ಕೆಲಸದ ವೇಳೆ ಗ್ರಾಮದ ರಸ್ತೆಯಲ್ಲಿರುವ ವಿದ್ಯುತ್ ಕಂಬದ ಲೈಟ್ ದುರಸ್ತಿ ನಡೆಸಿದ್ದ. ಈ ವೇಳೆ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ…

Read More »

ರೈತ ಸಂಪರ್ಕ ಕೇಂದ್ರ ಬಂದ್,ಸ್ಥಳೀಯವಾಗಿ ಸಿಗದ ಬೀಜ ಗೊಬ್ಬರ ರೈತ ಸಂಘದ ಪ್ರತಿಭಟನೆ

ರೈತ ಸಂಪರ್ಕ ಕೇಂದ್ರ ಬಂದ್,ಸ್ಥಳೀಯವಾಗಿ ಸಿಗದ ಬೀಜ, ಗೊಬ್ಬರ : ರೈತ ಸಂಘದ ಪ್ರತಿಭಟನೆ ಗದಗ ಮುಳಗುಂದ: ಇಲ್ಲಿನ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ ಬಂದ್ ಮಾಡಿರುವುದನ್ನ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆ ಸದಸ್ಯರು ಶುಕ್ರವಾರ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ಪ್ರತಿ ವರ್ಷ ಮುಂಗಾರು ಆರಂಭಕ್ಕು ಮುನ್ನ ಕೃಷಿ ಸ್ಥಳೀಯವಾಗಿ ರೈತರಿಗೆ ರಿಯಾಯತಿ ದರದ ಬೀಜ,ಗೊಬ್ಬರ,ಕ್ರಿಮಿನಾಶಕ ಸೇರಿದಂತೆ ಕೃಷಿ …

Read More »

ಪ್ರಾಚಾರ್ಯರಾಗಿ ನೂತನವಾಗಿ ನೇಮಕವಾದ ಡಾ|| ಜೆ.ಎಲ್‌ ಕಲ್ಯಾಣ ಅವರಿಗೆ DSS ಸಂಘಟನೆ ವತಿಯಿಂದ ಸನ್ಮಾನ

ಪ್ರಾಚಾರ್ಯರಾಗಿ ನೂತನವಾಗಿ ನೇಮಕವಾದ ಡಾ|| ಜೆ.ಎಲ್‌ ಕಲ್ಯಾಣ ಅವರಿಗೆ DSS ಸಂಘಟನೆ ವತಿಯಿಂದ ಸನ್ಮಾನ ಧಾರವಾಡ ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ನೂತನ ಪ್ರಾಚಾರ್ಯರಾಗಿ ಅಧಿಕಾರ ಸ್ವೀಕರಿಸಿದ ಡಾಕ್ಟರ್ ಜೆ ಎಲ್ ಕಲ್ಯಾಣ ಅವರನ್ನು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳಾದ ಲಕ್ಷ್ಮಣ್ ಬ ದೊಡ್ಡಮನಿ,ನಾರಾಯಣ್ ಮಾದರ ಶಬ್ಬೀರ್ ಅತ್ತಾರ್,ಹನುಮಂತ್ ಮೋರಬ್, ಸಾಬಣ್ಣ ಹಟ್ಟಿ,ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು

Read More »

ಬ್ರಹ್ಮಪುರಿ ಸಾಂಸ್ಕೃತಿಕ ಬಳಗ ಹೆಬ್ಬಳ್ಳಿ ಹಾಗೂ ಸುವರ್ಣ ಕರ್ನಾಟಕ ಗಾಣಿಗ ಮಹಾಸಭಾದ ವತಿಯಿಂದ ಸರಕಾರಿ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರಗಳ ವಿತರಣೆ.

ಬ್ರಹ್ಮಪುರಿ ಸಾಂಸ್ಕೃತಿಕ ಬಳಗ ಹೆಬ್ಬಳ್ಳಿ ಹಾಗೂ ಸುವರ್ಣ ಕರ್ನಾಟಕ ಗಾಣಿಗ ಮಹಾಸಭಾದ ವತಿಯಿಂದ ಸರಕಾರಿ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರಗಳ ವಿತರಣೆ. ಹೆಬ್ಬಳ್ಳಿ :ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಸರಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಯ ಎಲ್ಲಾ ಮಕ್ಕಳಿಗೆ ಮತ್ತು ಜನತಾ ಪ್ಲಾಟನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದು ಮತ್ತು ಎರಡನೇ ತರಗತಿಯ ಮಕ್ಕಳಿಗೆ, ಸ್ಥಳೀಯ ಬ್ರಹ್ಮಪುರಿ ಸಾಂಸ್ಕೃತಿಕ ಬಳಗ ಹಾಗೂ ಧಾರವಾಡದ ಸುವರ್ಣ ಕರ್ನಾಟಕ ಗಾಣಿಗ ಮಹಾಸಭಾದ …

Read More »

ಧಾರವಾಡ ರೈಲ್ವೆ ಮೇಲ್ವೇತುವೆ ಉದ್ಘಾಟನಾ ಕಾರ್ಯಕ್ರಮ ರದ್ದು

.ರೈಲ್ವೆ ಮೇಲ್ವೇತುವೆ ಉದ್ಘಾಟನಾ ಕಾರ್ಯಕ್ರಮ ರದ್ದು ಧಾರವಾಡ: ಧಾರವಾಡದ ಕಲ್ಯಾಣನಗರದಲ್ಲಿ ನಿರ್ಮಾಣಗೊಂಡಿರುವ ರೈಲ್ವೆ ಮೇಲ್ವೇತುವೆ ಉದ್ಘಾಟನಾ ಕಾರ್ಯಕ್ರಮವನ್ನು ರದ್ದು ಪಡಿಸಲಾಗಿದೆ. ಓಡಿಸಾದ ಬಾಲಸೋರ್‌ನಲ್ಲಿ ನಡೆದ ರೈಲು ದುರಂತದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ. ಲೆವೆಲ್ ಕ್ರಾಸಿಂಗ್ ಗೇಟ್ ಹಾಗೂ ರೈಲ್ವೆ ಮೇಲ್ವೇತುವೆಯ ಉದ್ಘಾಟನಾ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿತ್ತು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಈ ಕಾರ್ಯಕ್ರಮದ ಉದ್ಘಾಟನೆ ಮಾಡಬೇಕಿತ್ತು. ಅಲ್ಲದೇ ರಾಜ್ಯದ ಸಚಿವರು, ಶಾಸಕರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವವರಿದ್ದರು. …

Read More »

ಕೇಂದ್ರ ಸರ್ಕಾರದ ಅಕ್ಕಿ ಬದಲಿಗೆ ಹಣ ಹಾಕುವುದು ಸೂಕ್ತ: ಶಾಸಕ ಬೆಲ್ಲದ

ಕೇಂದ್ರ ಸರ್ಕಾರದ ಅಕ್ಕಿ ಬದಲಿಗೆ ಹಣ ಹಾಕುವುದು ಸೂಕ್ತ: ಶಾಸಕ ಬೆಲ್ಲದ ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಜಾರಿ ಮಾಡಿದೆ. ಆದರೆ ಕೇಂದ್ರ ಸರ್ಕಾರ ನೀಡುವ ಐದು ಕೆಜಿ ಅಕ್ಕಿಯಲ್ಲಿಯೇ ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಐದು ಕೆಜಿ ಅಕ್ಕಿ ಕೊಡುವ ಬದಲಿಗೆ ಅರ್ಹ ಪಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡುವ ಕಾರ್ಯ ಮಾಡಬೇಕು ಅಂದಾಗ ಜನರಿಗೆ ಯಾರು ಎಷ್ಟು ಅಕ್ಕಿ ಕೊಡುತ್ತಾರೆ ಗೊತ್ತಾಗುತ್ತದೆ …

Read More »

ಜೂನ್ 3 ರಂದು ನಗರದಲ್ಲಿ ಸೈಕಲ್ ಜಾಥಾ ಆಯೋಜನೆ

ಜೂನ್ 3 ರಂದು ನಗರದಲ್ಲಿ ಸೈಕಲ್ ಜಾಥಾ ಆಯೋಜನೆ ಧಾರವಾಡ : ಅಸಾಂಕ್ರಾಮಿಕ ರೋಗಗಳ ಮತ್ತು ವಾಯು ಮಾಲಿನ್ಯ ಕುರಿತು ಜಾಗೃತಿ ಮೂಡಿಸಲು ಜೂನ್ 3 ರಂದು ವಿಶ್ವ ಬೈಸಿಕಲ್ ದಿನಾಚಾರಣೆ ಅಂಗವಾಗಿ ಆರೋಗ್ಯ ಇಲಾಖೆಯಿಂದ ಸೈಕಲ್ ಜಾಥಾ ಆಯೋಜಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪಾಟೀಲ ಶಶಿ ಅವರು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು ಪ್ರತಿವರ್ಷದಂತೆ ಬರುವ ಜೂನ್ 3 ರಂದು ಎಲ್ಲೆಡೆ ವಿಶ್ವ ಬೈಸಿಕಲ್ …

Read More »

ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕಾಗಿ ಕೈ ಜೋಡಿಸಿ- ಸಿಇಓ ಸ್ವರೂಪ ಟಿ.ಕೆ.

ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕಾಗಿ ಕೈ ಜೋಡಿಸಿ- ಸಿಇಓ ಸ್ವರೂಪ ಟಿ.ಕೆ. ಧಾರವಾಡ : ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ. ಅವರು ಸಹಿ ಹಾಕುವ ಮೂಲಕ ಸಹಿ ಆಂದೋಲನಕ್ಕೆ ಚಾಲನೆ ನೀಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಜಿಲ್ಲಾ ತಂಬಾಕು ನಿಯಂತ್ರಣ …

Read More »