Breaking News

ಕರ್ನಾಟಕ

ಕಿಮ್ಸ್ ಕರ್ಮಕಾಂಡ…

ಹುಬ್ಬಳ್ಳಿ ಬ್ರೇಕಿಂಗ್…Exclusive ಬಡವರ ಆರೋಗ್ಯ ಅಂದ್ರೆ ಕಿಮ್ಸ್ ವೈದ್ಯರಿಗೆ ಬೆಲೆನೆ ಇಲ್ವಾ…ಬಡವರ ಮೇಲೆ ಕಿಮ್ಸ್ ವೈದ್ಯರಿಗೆ ಯಾಕಿಷ್ಟು ನಿರ್ಲಕ್ಷ್ಯವೃದ್ಧೆಗೆ ಬೆಡ್ ನೀಡದೆ ನೆಲೆದ ಮೇಲೆ ಕೂರಿಸಿ ಚಿಕಿತ್ಸೆ…ಗ್ಲೂಕೋಸ್‌ ಬಾಟಲಿ ಹಾಕಲು ಸ್ಟಾಂಡ್ ಸಹ ನೀಡಿದೆ ಅನಾಗರಿಕತೆ ಪ್ರದರ್ಶನ…ನೆಲದ ಮೇಲೆಯೇ ವೃದ್ಧೆ ನರಳಾಡುತ್ತಿದ್ದರೂ ತಲೆ ಕೆಡಿಸಿಕೊಳ್ಳದ ಕಿಮ್ಸ್ ವೈದ್ಯರು..ಚೆನ್ನವ್ವ ಎಂಬ 67 ವರ್ಷದ ವೃದ್ಧೆ ಚಿಕಿತ್ಸೆಗೆಂದು ಹುಬ್ಬಳ್ಳಿ ಕಿಮ್ಸ್ ಬಂದಿದ್ದರು..ನೆಲದ ಮೇಲೆ ಕೂರಿಸಿ ಚೆನ್ನವ್ವಗೆ ಚಿಕಿತ್ಸೆ ನೀಡಿದ ಕಿಮ್ಸ್ ವೈದ್ಯರು‌‌…ವೈದ್ಯರ ನಡೆಗೆ …

Read More »

ಶಿವಾಜಿ ಜಯಂತಿ, ಮಹಾಶಿವರಾತ್ರಿ ಆಚರಣೆ ಹಿನ್ನಲೆ ಹುಬ್ಬಳ್ಳಿಯಲ್ಲಿ ಪೊಲೀಸ್ ಫಥಸಂಚಲನ…

ಹುಬ್ಬಳ್ಳಿ: ಛತ್ರಪತಿ ಶಿವಾಜಿ ಜಯಂತಿ, ಮಹಾ ಶಿವರಾತ್ರಿ ಆಚರಣೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ನಿಂದ ಹುಬ್ಬಳ್ಳಿಯ ಆಯಕಟ್ಟಿನ ಜಾಗಗಳಲ್ಲಿ ಪಥಸಂಚಲನ ಮಾಡುವ ಮೂಲಕ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಾಗೃತಿ ಮೂಡಿಸಲಾಯಿತು.ಹೌದು… ಹುಬ್ಬಳ್ಳಿ ಧಾರವಾಡ ಕಮೀಷನರೇಟ್ ವ್ಯಾಪ್ತಿಯಲ್ಲಿನ ಹುಬ್ಬಳ್ಳಿಯ ಎಲ್ಲ ಠಾಣೆಯ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಿಂದ ಪಥ ಸಂಚಲನಕ್ಕೆ ಚಾಲನೆ ನೀಡಲಾಯಿತು. ಇನ್ನೂ ಚೆನ್ನಮ್ಮ ವೃತ್ತದಿಂದ ರೈಲ್ವೆ ನಿಲ್ದಾಣ, ಗಣೇಶ …

Read More »

ಕಿವಿ ಮೇಲೆ ಹೂವಿಟ್ಟ ಬಜೆಟ್, ಸುಳ್ಳಿನ ಸರಮಾಲೆಯ ಬಜೆಟ್: ಸುರ್ಜೆವಾಲಾ ವ್ಯಂಗ್ಯ…

ಹುಬ್ಬಳ್ಳಿ: ಬಜೆಟ್ ಅಂದರೆ ಕಿವಿ ಮೇಲೆ ಹೂವು. ಬಿಜೆಪಿಯವರು ಸುಳ್ಳನ್ನೇ ವ್ಯವಸ್ಥಿತವಾಗಿ ಹೇಳುತ್ತಾರೆ. ಸಿಎಂ ಬಂಜೆಟ್ ಮಂಡನೆ ಸುಳ್ಳು ಕಂತೆಯಾಗಿದೆ. ಬಜೆಟ್ ಸುಳ್ಳು.. ಸುಳ್ಳು.. ಸುಳ್ಳು… ಪ್ರಧಾನಿ ಮೋದಿ ಅವರಿಂದ ಬೊಮ್ಮಾಯಿ ಸುಳ್ಳು ಹೇಳುವುದನ್ನು ಚೆನ್ನಾಗಿ ಕಲಿತಿದ್ದಾರೆ. ಸುಳ್ಳನ್ನೇ ವ್ಯವಸ್ಥಿತವಾಗಿ ಹೇಳಿದ್ದಾರೆ. ಆದರೇ ನಕಲು ಮಾಡಲು ಕೂಡ ಅಕ್ಕಲು ಬೇಕು ಆದರೆ ಬಿಜೆಪಿಯವರು ಕಳ್ಳಬೇಕ್ಕಿನಂತೆ ಕಾಂಗ್ರೆಸ್ ಯೋಜನೆ ಕಾಪಿ ಮಾಡಿದ್ದಾರೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ …

Read More »

57 ಕೇಸ್‌ಗೆ 14,250 ರೂ.ದಂಡ ಪಾವತಿ ಮಾಡಿದ ದ್ವಿಚಕ್ರ ವಾಹನ ಸವಾರ….

ಹುಬ್ಬಳ್ಳಿ ರಾಜ್ಯ ಸರ್ಕಾರದ ಆದೇಶದ ಮೇರೆಗೆ ವಾಹನ ಚಾಲಕರು ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿದಂತ ಇ- ಚಲನ್ ಮೇಲೆ ನೀಡಿದ 50% ರಿಯಾಯಿತಿ ಅವಕಾಶವನ್ನು ಸದುಪಯೋಗ ಪಡೆಸುಕೊಳ್ಳುತ್ತಿದ್ದು, ವಾಹನ ಸವಾರನೊಬ್ಬ ಸ್ವ ಇಚ್ಛೆಯಿಂದ ಬಂದು 57 ಕೇಸ್ ಗೆ ದಂಡವನ್ನು ನಗರದ ಹಳೆ ಕೋರ್ಟ್ ಸರ್ಕಲ್ ಬಳಿ ದಂಡ ಪಾವತಿ ಮಾಡಿದ್ದಾನೆ.ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ನಿಂದ ಸಾರ್ವಜನಿಕರ ದಂಡ ಪಾವತಿಗೆ 50% ರಿಯಾಯಿತಿ ನೀಡಿದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ನಿವಾಸಿ ಸೂರಜ್ …

Read More »

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವೈಫಲ್ಯ ಖಂಡಿಸಿ ಬೃಹತ್ ಪ್ರತಿಭಟನೆ

ಹುಬ್ಬಳ್ಳಿ:ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವೈಫಲ್ಯಗಳು, ಕಡಲೆ ಬೆಳಗೆ , ಹತ್ತಿ ಬೆಲೆ ಏರಿಕೆ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮಾಜಿ ಸಚಿವರಾದ ಕೆ.ಎನ್.ಗಡ್ಡಿ ಹಾಗೂ ಜಿ.ಪಂ. ಮಾಜಿ ಉಪಾಧ್ಯಕ್ಷ ಮತ್ತು ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಶಿವಾನಂದ ಕರಿಗಾರ ಅವರ ನೇತೃತ್ವದಲ್ಲಿ ಬೃಹತ್ ರೈತ ಪ್ರತಿಭಟನೆಯನ್ನು ನಗರದ ಚೆನ್ನಮ್ಮ ವೃತ್ತದಲ್ಲಿಂದು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಿವಾನಂದ ಕರಿಗಾರ, ಜಿಲ್ಲೆಯ ರೈತರು ಬೆಳೆದ ಕಡಲೆ …

Read More »

ಪತ್ರಕರ್ತರಾದ ಯಲ್ಲಪ್ಪ ಸೋಲಾರಗೊಪ್ಪ, ಶಿವಕುಮಾರ ಪತ್ತಾರಗೆ ರಾಯಣ್ಣ ಪ್ರಶಸ್ತಿ

ಹುಬ್ಬಳ್ಳಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 229ನೇ ಹುತಾತ್ಮ ದಿನಾಚರಣೆ ಅಂಗವಾಗಿ ಪತ್ರಿಕೋದ್ಯಮ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜನವರಿ 26ರಂದು ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದೆ. ಸಂಯುಕ್ತ ಕರ್ನಾಟಕದ ಷಣ್ಮುಖ ಕೋಳಿವಾಡ, ಟಿವಿ 5 ಕನ್ನಡ ವರದಿಗಾರರಾದ ಯಲ್ಲಪ್ಪ ಸೋಲಾರಗೊಪ್ಪ, ಟಿವಿ 9 ವರದಿಗಾರರಾದ ಶಿವಕುಮಾರ್ ಪತ್ತಾರ, ಪ್ರಜಾವಾಣಿಯ ಗೋವಿಂದ ಜವಳಿ, ಸಂಯುಕ್ತ ಕರ್ನಾಟಕದ ವಿನಾಯಕ ದೇಶಪಾಂಡೆ ಅವರಿಗೆ ಮಾಧ್ಯಮ ಕ್ಷೇತ್ರದಲ್ಲಿಯ ಗಣನೀಯ ಸೇವೆಯನ್ನು …

Read More »

ಚಿರತೆ ದಾಳಿ: ತೀವ್ರ ಹುಡುಕಾಟಕ್ಕೆ ವಿಶೇಷ ಪಡೆ ರಚನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮೈಸೂರು: ತೀವ್ರ 12 ವರ್ಷದ ಬಾಲಕನನ್ನು ಕೊಂಡಿರುವ ಚಿರತೆಯನ್ನು ಸೆರೆ ಹಿಡಿಯಲು ತೀವ್ರ ಹುಡುಕಾಟ ನಡೆಸಲು ಸೂಚಿಸಲಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ನಂಜನಗೂಡಿನ ಹೆಲಿಪ್ಯಾಡಿನ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು. ಇನ್ನು ಹೆಚ್ಚಿನ ಬಳಿ ನೀಡಲು ಸಾಧ್ಯವಿಲ್ಲನಿನ್ನೆ ಮತ್ತೊಂದು ಚಿರತೆ 12 ವರ್ಷದ ಮಗುವಿನ ಮೇಲೆ ದಾಳಿ ಮಾಡಿ ಇಂದು ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಚಿರತೆ ಕಳೆದ ಮೂರು ಬಾರಿ ದಾಳಿ …

Read More »

 ಕಾಮಗಾರಿ, ನೇಮಕಾತಿಯಲ್ಲಿ ಬಿಜೆಪಿ ಸರ್ಕಾರ ಕಮಿಷನ್ ಹೊಡೆಯುತ್ತಿದೆ-ಡಿ.ಕೆ.ಶಿವಕುಮಾರ್ ಆರೋಪ

ಹುಬ್ಬಳ್ಳಿ: ಪಿ.ಎಸ್.ಐ ನೇಮಕಾತಿ, ಲೋಕೋಪಯೋಗಿ ಇಲಾಖೆ ಹೀಗೆ ಪ್ರತಿಯೊಂದು ಇಲಾಖೆಯ ಕಾಮಗಾರಿ, ನೇಮಕಾತಿಯಲ್ಲಿ ಬಿಜೆಪಿ ಸರ್ಕಾರ ಕಮಿಷನ್ ಹೊಡೆಯುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಾಕಷ್ಟು ಭ್ರಷ್ಟಾಚಾರ ಹಾಗೂ ಹಗರಣಗಳಿಗೆ ಸಂಬಂಧಿಸಿದಂತೆ ಇನ್ನೂ ಬಿಜೆಪಿ ಸರ್ಕಾರ ಉತ್ತರ ನೀಡಿಲ್ಲ. ಈ ಪ್ರಶ್ನೆ ಮಾಡಿದ ಕೆಂಪಣ್ಣ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ ಎಂದ ಅವರು, ಈ ಎಲ್ಲಾ ಪ್ರಶ್ನೆಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉತ್ತರ …

Read More »

30 ವರ್ಷಗಳ ನಂತರ ಅಲ್ಪಸಂಖ್ಯಾತರ ಕಾಂಗ್ರೇಸ್ ಅಭ್ಯರ್ಥಿ ಕಣಕ್ಕೆ-ಫಾರೂಕ್ ಅಬೂನವರಗೆ ಸಿಗುತ್ತಾ ಹೈಕಮಾಂಡ್ ಗ್ರೀನ್ ಸಿಗ್ನಲ್..?

ಹುಬ್ಬಳ್ಳಿ : ವಿಧಾನಸಭೆ ಚುನಾವಣೆ ಕಾವು ರಂಗೆರುತ್ತಿದ್ದು ಹುಬ್ಬಳ್ಳಿ -ಧಾರವಾಡದ ಕ್ಷೇತ್ರಗಳು ಇದಕ್ಕೆ ಕಮ್ಮಿ ಇಲ್ಲ‌ ಅಂತಲೇ ಹೇಳಬಹುದು ..ಈಗಾಗಲೇ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಭಾರಿ ಪೈಪೋಟಿ ನಡೆದಿದ್ದು .ಕಾಂಗ್ರೆಸ್ ನ ಹಲವು ನಾಯಕರು ಮಾಜಿ ಮಂತ್ರಿ ಜಗದೀಶ್ ಶೆಟ್ಟರ್ವಿ ರುದ್ದ ಸೆಣಸಾಡಲು ಮುಂದೆ ಬರುತ್ತಿದ್ದಾರೆ ಸತತ 6 ಭಾರಿ ಸ್ಪರ್ಧಿಸಿ ಜಯಗಳಿಸಿರುವ ಜಗದೀಶ್ ಶೆಟ್ಟರ್ ಅವರ ಈ ಕ್ಷೇತ್ರದಲ್ಲಿ ಈ ಮೊದಲು ಕಾಂಗ್ರೆಸ್ ಅಭ್ಯರ್ಥಿಗಳನ್ನ ಇಳಿಸಲು ಹುಡುಕಾಟ …

Read More »

ಪೊಲೀಸ ಪೇದೆಗಳಿಬ್ಬರು ಶವವಾಗಿ ಪತ್ತೆ…!

ಗಜೇಂದ್ರಗಡದಲ್ಲಿ ಬಂದೋಬಸ್ತ ಕರ್ತವ್ಯ ಮುಗಿಸಿಕೊಂಡು ಬರುವಾಗ ಮುಂಡರಗಿ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್ ಪೇದೆಗಳು ರಾತ್ರಿ ಸುರಿದ ಮಳೆಗೆ ಹಳ್ಳವೊಂದು ದಾಟುವಾಗ ಹಳ್ಳದ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದು ದುರ್ವಿಧಿ ಇಂದು ಶವದ ರೂಪದಲ್ಲಿ ಪತ್ತೆಯಾಗಿದ್ದಾರೆ.

Read More »