admin
January 13, 2022
Breaking News, ಕರ್ನಾಟಕ
ರಾಮನಗರ: ಮೇಕೆದಾಟು ಯೋಜನೆಗೆ ಪಾದಯಾತ್ರೆ ಇದೀಗ 4 ದಿನ ಸಂಪೂರ್ಣವಾಗಿ ಮುಗಿಸಿ 5 ನೇ ದಿನಕ್ಕೆ ಕಾಲಿಟ್ಟಿದೆ. ಪಾದಯಾತ್ರೆಯನ್ನು ತಡೆಯಲು ರಾಜ್ಯ ಸರ್ಕಾರ ಸಕಲ ಸಿದ್ಧತೆ ನಡೆಸಿದೆ. ಪಾದಯಾತ್ರೆಗೆ ಹೋರಟ್ಟಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಮದ್ದೂರಿನ ನಿಡಘಟ್ಟ ಚೆಕ್ ಪೋಸ್ಟ್ ಬಳಿ ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಪೊಲೀಸರು ಹಾಗೂ ಕೈ ಕಾರ್ಯಕರ್ತರ ನಡುವೆ ವಾಗ್ವಾದ ಮಾತಿನ ಚಕಮಕಿ ನಡೆದಿದೆ. ಪಾದಯಾತ್ರೆಗೆ ತೆರಳಲು ಅವಕಾಶವಿಲ್ಲ. ವಾಹನಗಳನ್ನು ಪಕ್ಕಕ್ಕೆ ಹಾಕುವಂತೆ ಶ್ರೀರಂಗಪಟ್ಟಣದ ಮಾಜಿ ಬ್ಲಾಕ್ ಕಾಂಗ್ರೆಸ್ …
Read More »
admin
January 13, 2022
Breaking News, ಕರ್ನಾಟಕ, ಧಾರವಾಡ
ಧಾರವಾಡ: ಉಪವಿಭಾಗಾಧಿಕಾರಿಯಾಗಿದ್ದ ಗೋಪಾಲಕೃಷ್ಣ ಅವರು ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಾಗಿ ವರ್ಗಾವಣೆಗೊಂಡಿದ್ದು, ಅವರ ಜಾಗಕ್ಕೆ ಇದೀಗ ಕೆಎಎಸ್ ಅಧಿಕಾರಿ ಅಶೋಕ ತೇಲಿ ಅವರನ್ನು ಸರ್ಕಾರ ನಿಯುಕ್ತಿಗೊಳಿಸಿದೆ. ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಇಂದು ಗೋಪಾಲಕೃಷ್ಣ ಅವರು ಅಶೋಕ ತೇಲಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಅಶೋಕ ತೇಲಿ ಅವರು ಮೂಲತಃ ವಿಜಯಪುರ ಜಿಲ್ಲೆಯ ಬಳ್ಳೊಳ್ಳಿ ಗ್ರಾಮದವರಾಗಿದ್ದು, 2014ನೇ ಬ್ಯಾಚಿನ ಕೆಎಎಸ್ ಅಧಿಕಾರಿಯಾಗಿದ್ದಾರೆ. ಬಿಇ ಕಂಪ್ಯೂಟರ್ ಸೈನ್ಸ್ ಮುಗಿಸಿರುವ ಇವರು 8 ವರ್ಷ ಎಂಜಿನಿಯರ್ …
Read More »
admin
January 13, 2022
Breaking News, ಕರ್ನಾಟಕ, ಹುಬ್ಬಳ್ಳಿ
ಹುಬ್ಬಳ್ಳಿ: ಹು – ಧಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಒಟ್ಟು 532 ಜನರಿಂದ 1,29,050 ಲಕ್ಷ ರೂ . ದಂಡ ವಸೂಲಿ ಮಾಡಲಾಗಿದೆ. ಪಾಲಿಕೆಯಿಂದ ಇದುವರೆಗೆ ಒಟ್ಟು 77,41,100 ಲಕ್ಷ ರೂ. ದಂಡ ವಿಧಿಸಿದಂತಾಗಿದೆ. ಬುಧವಾರ ಪಾಲಿಕೆಯ ವಲಯಗಳ ವ್ಯಾಪ್ತಿಯಲ್ಲಿ ಪರಿಸರ ಅಭಿಯಂತರರು ಹಾಗೂ ಆರೋಗ್ಯ ನಿರೀಕ್ಷಕರು ಮಾಸ್ಕ್ ಧರಿಸದೆ ತಿರುಗಾಡುತ್ತಿದ್ದ 468 ಜನರಿಗೆ 1,16,250 ಲಕ್ಷ ರೂ. ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದ 64 …
Read More »
admin
January 13, 2022
Breaking News, ಕರ್ನಾಟಕ
ವಿಜಯಪುರ: ಜಿಲ್ಲೆಯವಲ್ಲಿ ಜನವರಿ 1ರಿಂದ ಇಲ್ಲಿಯವರೆಗೆ 18ವರ್ಷದ ಒಳಗಿನ 50 ಮಕ್ಕಳಿಗೆ ಕೋವಿಡ್ ಸೋಂಕು ಹರಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ಜಿಲ್ಲಾಧಿಕಾರಿ ಕಚೇರಿ ಸಂಭಾಗಣದಲ್ಲಿ ಕೋವಿಡ್ ಕುರಿತು ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಮಾಹಿತಿ ನೀಡಿದ ಅವರು, ಒಂದು ವರ್ಷದಿಂದ 18 ವರ್ಷದ ಒಳಗಿನ 50 ಮಕ್ಕಳಲ್ಲಿ ಕೊವಿಡ್ ಸೋಂಕು ಧೃಡಪಟ್ಟಿದೆ. ಇವರು ಸದ್ಯ ಹೋಂ ಐಸೋಲೇಷನ್ನಲ್ಲಿ ಆರೈಕೆ ಮಾಡಲಾಗುತ್ತಿದ್ದು, ಅವರಲ್ಲಿ ಯಾರಿಗೂ ಆಸ್ಪತ್ರೆಗೆ …
Read More »
admin
January 13, 2022
Breaking News, ಕರ್ನಾಟಕ, ಬೆಂಗಳೂರು
ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಈ ನಡುವೆ ಸಚಿವ ಕೆ.ಸಿ.ನಾರಾಯಣಗೌಡ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸದ್ಯ ಕೆ.ಸಿ.ನಾರಾಯಣಗೌಡ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.😢
Read More »
admin
January 13, 2022
Breaking News, ಕರ್ನಾಟಕ, ಬೆಂಗಳೂರು
ಬೆಂಗಳೂರು : ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ನಿರ್ಬಂಧ ವಿಧಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಕುರಿತು ರಾಜ್ಯ ಸರ್ಕಾರದ ಕಾರ್ಯದರ್ಶಿ ಸಿ.ಎಸ್ ರವಿಕುಮಾರ್ ಆದೇಶ ಹೊರಡಿಸಿದ್ದಾರೆ. ಈ ಕೂಡಲೇ ಪಾದಯಾತ್ರೆಯನ್ನು ನಿಲ್ಲಿಸುವಂತೆ ಕಾಂಗ್ರೆಸ್ ನಾಯಕರಿಗೆ ಸೂಚನೆ ನೀಡಿ ಆದೇಶ ಹೊರಡಿಸಿದೆ. ಪಾದಯಾತ್ರೆಯ ವಾಹನ ಸಂಚಾರ,ಜನಸಂಚಾರ ನಿಷೇಧಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.ಸರ್ಕಾರದ ಆದೇಶ ಉಲ್ಲಂಘಿಸಿ ಪಾದಯಾತ್ರೆ ಮುಂದುವರೆಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ.
Read More »
admin
January 12, 2022
Breaking News, ಕರ್ನಾಟಕ, ಬೆಂಗಳೂರು
ಬೆಂಗಳೂರು: ನಗರದಲ್ಲಿ 15,617 ಸೇರಿದಂತೆ ರಾಜ್ಯಾಧ್ಯಂತ 21,390 ಜನರಿಗೆ ಕೋವಿಡ್ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ರಾಜ್ಯದಲ್ಲಿ ಮತ್ತೆ ಇಂದು ಕೊರೋನಾ ಮಹಾಸ್ಪೋಟವೇ ಉಂಟಾಗಿದೆ. ಈ ಕುರಿತಂತೆ ಟ್ವಿಟ್ಟರ್ ನಲ್ಲಿಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದು, ಕಳೆದ 24 ಗಂಟೆಯಲ್ಲಿ 1,95,047 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ.ಇವರಲ್ಲಿ ಬೆಂಗಳೂರಿನಲ್ಲಿ 15,617 ಸೇರಿದಂತೆ ರಾಜ್ಯದಲ್ಲಿ 21,390 ಜನರಿಗೆ ಕೋವಿಡ್ ದೃಢಪಟ್ಟಿರೋದಾಗಿ ತಿಳಿಸಿದೆ.
Read More »
admin
January 12, 2022
Breaking News, ಕರ್ನಾಟಕ, ಕಲಬುರಗಿ
ಕಲಬುರಗಿ: ದಿನೇ ದಿನೇ ಮಹಾಮಾರಿ ತನ್ನ ಅಟ್ಟಹಾಸ ವನ್ನು ಮುಂದುವರೆಸುತ್ತೇಲೆ ಇದೆ. ಈಗಾಗಲೇ ವಿಕೆಂಡ್ ಲಾಕ್ ಕೂಡಾ ಮಾಡಲಾಗಿದ್ದು, ಯಾವುದೇ ಇಳಿಕೆ ಕ್ರಮ ಕಾಣುತ್ತೀಲ್ಲಾ. ಅಷ್ಟೇ ಅಲ್ಲದೇ ನಗರದ. ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಯೊಬ್ಬನಿಗೆ ಕೋವಿಡ್ ತಗುಲಿದೆ. ಕೆಮ್ಮು, ಶೀತ, ಜ್ವರದಿಂದ ಬಳಲುತ್ತಿದ್ದ ಈ ಬಾಲಕನನ್ನು ಆತನ ಪಾಲಕರು ಆಸ್ಪತ್ರೆಗೆ ಕರೆದೊಯ್ದಿದ್ದರು. ತಪಾಸಣೆ ನಡೆಸಿದಾಗ ಕೋವಿಡ್ ದೃಢಪಟ್ಟಿದೆ.ಈ ಶಾಲೆಯ ಇನ್ನೂ ಕೆಲ ಮಕ್ಕಳು ಶೀತದಿಂದ ಬಳಲುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
Read More »
admin
January 12, 2022
Breaking News, ಕರ್ನಾಟಕ
ಕೋವಿಡ್ ಹೆಚ್ಚುತ್ತಿರುವ ವೇಳೆಯಲ್ಲಿ ಪಾದಯಾತ್ರೆ ನಡೆಸುತ್ತಿದ್ದೀರಾ, ಪಾದಯಾತ್ರೆಗೆ ಮುನ್ನ ನೀವು ಅನುಮತಿ ಪಡೆದಿದ್ದೀರಾ ಎಂದು ಕೆಪಿಸಿಸಿ ನಾಯಕರನ್ನ ಪ್ರಶ್ನಿಸಿರುವ ವಿಭಾಗೀಯ ಪೀಠ, ಈ ಬಗ್ಗೆ ಉತ್ತರಿಸಲು ನಾಳೆವರೆಗೆ ಕಾಲಾವಕಾಶ ನೀಡಿದೆ. ಮೇಕೆದಾಟು ಪಾದಯಾತ್ರೆ ವಿರುದ್ಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಿಸಿದ ಹೈಕೋರ್ಟ್ ನ ವಿಭಾಗೀಯ ನ್ಯಾಯಪೀಠ ರಾಜ್ಯ ಸರ್ಕಾರ ಹಾಗೂ ಕೆಪಿಸಿಸಿಯನ್ನ ತರಾಟೆಗೆ ತೆಗೆದುಕೊಂಡಿದೆ. ಪಿಐಎಲ್ ವಿಚಾರಣೆ ವೇಳೆ ಪಾದಯಾತ್ರೆ ವಿರುದ್ಧ ಸಲ್ಲಿಕೆಯಾಗಿರುವ ದೂರುಗಳ ಬಗ್ಗೆ ಚರ್ಚೆ ನಡೆಸಿದ್ದು. …
Read More »
admin
January 12, 2022
Breaking News, ಕರ್ನಾಟಕ
ಪುತ್ತೂರು(ದಕ್ಷಿಣ ಕನ್ನಡ): ಇದು ವಿಪಕ್ಷ ನಾಯಕ ಸಿದ್ಧರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವೆ ನಡೆಯುತ್ತಿರುವ ಕುರ್ಚಿ ಹೋರಾಟವಾಗಿದ್ದು, ಕಾಂಗ್ರೆಸ್ ರಾಜ್ಯದ ಜನತೆಯ ಆರೋಗ್ಯದ ವಿಚಾರದಲ್ಲಿ ಚೆಲ್ಲಾಟವಾಡುತ್ತಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಆರೋಪಿಸಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು,ಮೇಕೆದಾಟಿಗೂ ಈ ಪಾದಯಾತ್ರೆಗೂ ಯಾವುದೇ ಸಂಬಂಧವಿಲ್ಲ ಎಂದರು. ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಸಮಯದಲ್ಲಿ ಕಾಂಗ್ರೆಸ್ ಪಾದಯಾತ್ರೆ ಮಾಡುವ ಮೂಲಕ ಮತ್ತಷ್ಟು ಕೊರೊನಾ ಹರಡುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ …
Read More »