ಚಿಕ್ಕಮಗಳೂರು: ನಗರದಲ್ಲಿ ಪುಂಡರ ದಾಂಧಲೆ ಮಿತಿ ಮೀರಿ ಹೋಗುತ್ತಿದೆ. ನಗರದ ಹೃದಯಭಾಗ ಐ.ಜಿ ರಸ್ತೆಯಲ್ಲಿ 2 ಗುಂಪಿನ ನಡುವೆ ಮಾರಾಮಾರಿ ನಡೆದಿದ್ದು, ಸೌಟು, ಬಾಂಡ್ಲಿ, ಸೌದೆ, ಕುರ್ಚಿಯಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಪೊಲೀಸರ ಭಯವಿಲ್ಲದೇ ರೌಡಿಗಳಂತೆ ರಸ್ತೆ ಮಧ್ಯೆದಲ್ಲಿ ಪುಂಡರ ಬಡಿದಾಟ ನೋಡಿ ಜನರು ದಂಗಾಗಿದ್ದಾರೆ. ಯಾವ ಕಾರಣಕ್ಕಾಗಿ ಪುಂಡರು ಈ ರೀತಿ ಹೊಡೆದಾಡಿಕೊಂಡಿದ್ದಾರೆ, ಎಂಬುದು ತಿಳಿದು ಬಂದಿಲ್ಲ. ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಪೊಲೀಸರು ತನಿಖೆ …
Read More »ಪೆನ್ಸಿಲ್ ಕದ್ದ ವಿಚಾರಕ್ಕೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಪುಟಾಣಿಗಳು: ಮಕ್ಕಳ ಮಾತು ಕೇಳಿದ್ರೆ ನೀವೂ ನಗ್ತೀರಾ!
ಕರ್ನೂಲ್(ಆಂಧ್ರಪ್ರದೇಶ): ಪೊಲೀಸರೆಂದರೆ ಭಯ ಸಾಮಾನ್ಯ. ಅವರಿಂದ ಆದಷ್ಟು ದೂರ ಇರುವುದಕ್ಕೆ ಜನರು ಇಷ್ಟಪಡುತ್ತಾರೆ. ಏನಾದ್ರು ಸಣ್ಣಪುಟ್ಟ ಕಳ್ಳತನ ಪ್ರಕರಣಗಳು ನಡೆದರೂ ಕೂಡ ಕೆಲವರು ಪೊಲೀಸ್ ಠಾಣೆ ಮೆಟ್ಟಿಲೇರದೆ ಸುಮ್ಮನಾಗಿ ಬಿಡುತ್ತಾರೆ. ಆದರೆ, ಕೆಲವೊಬ್ಬರು ವಿಚಿತ್ರ ಕಾರಣಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ನೀಡಿರುವ ಉದಾಹರಣೆಗಳಿವೆ. ಆಂಧ್ರದ ಕರ್ನೂಲ್ನಲ್ಲಿ ಇದೇ ರೀತಿಯ ಕುತೂಹಲಕಾರಿ ಘಟನೆ ನಡೆದಿದೆ. ಇಲ್ಲಿ ಪೆನ್ಸಿಲ್ ಕದ್ದಿದ್ದಕ್ಕಾಗಿ 3ನೇ ತರಗತಿ ಬಾಲಕನೋರ್ವ ಶಿಕ್ಷಕರಿಗೆ ಹೇಳದೆ, ತನ್ನ ಸ್ನೇಹಿತನ ವಿರುದ್ಧವೇ ಪೊಲೀಸ್ …
Read More »ಜನರೇ ಎಚ್ಚರ: ಮತ್ತೆ ರಾಜ್ಯದಲ್ಲಿ ಮೂರು ದಿನಗಳ ಕಾಲ ಭಾರಿ ಮಳೆ!
ಬೆಂಗಳೂರು: ಮೂರು ದಿನ ಮತ್ತೆ ರಾಜ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿದ್ದು, ಸೈಕ್ಲೋನ್ನಿಂದಾಗಿ ಬೆಂಗಳೂರಿನ ಸುತ್ತಮುತ್ತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಕಳೆದರೆಡು ದಿನಗಳಿಂದ ಕೊಂಚ ಮಟ್ಟಿಗೆ ಬಿಡುವು ಕೊಟ್ಟಿದ್ದ ಮಳೆರಾಯ, ಇಂದಿನಿಂದ ಮೂರು ದಿನಗಳ ಕಾಲ ಮತ್ತೆ ಅಬ್ಬರಿಸಲಿದ್ದಾನೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಹಿಗಾಗಿ ರಾಜ್ಯದ ಜನರು ಎಚ್ಚರದಿಂದ ಇರಬೇಕೆಂದು ಹವಾಮಾನ ಇಲಾಖೆ ತಿಳಿಸಿದೆ.
Read More »ಬೈಕ್ ಗಳ ನಡುವೆ ಡಿಕ್ಕಿ: ಸವಾರರಿಗೆ ಗಂಭೀರ ಗಾಯ
ಹುಬ್ಬಳ್ಳಿ: ಎರಡು ಬೈಕ್ ಗಳಿಗೆ ಮತ್ತೊಂದು ಡಿಕ್ಕಿ ಸಂಭವಿಸಿ ಸವಾರರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನವನಗರದ ಹು-ಧಾ ರಸ್ತೆಯ ಸಿಗ್ನಲ್ ಬಳಿ ನಡೆದಿದೆ. ಧಾರವಾಡದಿಂದ ಬರುತ್ತಿದ್ದ ಬೈಕ್ ಸವಾರರು ನವನಗರದ ಬಳಿ ಬಂದಾಗ ಸಿಗ್ನಲ್ ಬಿದ್ದಿದೆ. ಆಗ ಹಿಂದಿನಿಂದ ವೇಗವಾಗಿ ಬಂದ ಕೆಟಿಎಮ್ ಬೈಕ್ ಸವಾರ ನಿಂತಿದ್ದ ಎರಡು ಬೈಕ್ ಗಳಿಗೆ ಗುದ್ದಿದ್ದಾನೆ. ಪರಿಣಾಮ ಬೈಕ್ ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದು ಬೈಕ್ ಸವಾರರಿಗೆ ಗಂಭೀರವಾಗಿ ಗಾಯಗಳಾಗಿವೆ. ಇನ್ನು ಗಾಯಗೊಂಡವರ ಮಾಹಿತಿ …
Read More »ಬಿಜೆಪಿಗೆ ಮತ ಕೇಳೋ ನೈತಿಕತೆಯಿಲ್ಲ- ಸಲೀಂ ಅಹ್ಮದ
ಹುಬ್ಬಳ್ಳಿ : ವಿಧಾನ ಪರಿಷತ್ ಚುನಾವಣಾ ಪ್ರಚಾರ ಬಿರುಸು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರ ಸಭೆ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಗೆಲುವಿಗೆ ಕಾರ್ಯತಂತ್ರ ಸಭೆ ನಂತರ ಕೈ ಅಭ್ಯರ್ಥಿ ಸಲೀಮ್ ಅಹ್ಮದ್ ಸುದ್ದಿಗೋಷ್ಠಿ ನಡೆಸಿ ಹೇಳಿಕೆ ಧಾರವಾಡ ಕ್ಷೇತ್ರದಲ್ಲಿ ಬಿಜೆಪಿ ಜೊತೆ ಯಾವುದೇ ಹೊಂದಾಣಿಕೆ ರಾಜಕಾರಣ ಮಾಡ್ತಿಲ್ಲ ಈ ಹಿಂದೆಯೂ ಕಾಂಗ್ರೆಸ್ ನಿಂದ ಒಂದೇ ಅಭ್ಯರ್ಥಿಯನ್ನು ಹಾಕಲಾಗಿತ್ತು ಈ ಬಾರಿಯೂ ಪಕ್ಷ ಒಬ್ಬ ಅಭ್ಯರ್ಥಿಯನ್ನು ಅಖಾಡಕ್ಕಿಳಿಸಿದೆ ಬಿಜೆಪಿಗೆ ಮತ …
Read More »ರಾಜ್ಯಾದ್ಯಂತ ಭ್ರಷ್ಟರಿಗೆ ಬಲೆ.. ಕೋಟ್ಯಂತರ ಮೌಲ್ಯದ ಚಿನ್ನಾಭರಣ ಪತ್ತೆ, ಮುಂದುವರೆದ
ಬೆಂಗಳೂರು: ಅಧಿಕಾರ ಪ್ರಭಾವ ಬಳಸಿ ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಇಂದು ಬೆಳ್ಳಂಬೆಳ್ಳಗೆ ರಾಜ್ಯದೆಲ್ಲೆಡೆ 15 ಸರ್ಕಾರಿ ಅಧಿಕಾರಿಗಳ ಮನೆ-ಕಚೇರಿ ಸೇರಿದಂತೆ 60 ಕಡೆಗಳಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು ಪರಿಶೀಲನೆ ಚುರುಕುಗೊಳಿಸಿದ್ದಾರೆ. ಮೂವರು ಎಸ್ಪಿಗಳ ನೇತೃತ್ವದಲ್ಲಿ 400ಕ್ಕೂ ಹೆಚ್ಚು ಮಂದಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ವಿಶೇಷ ತಂಡಗಳಾಗಿ ಪ್ರತ್ಯೇಕ ಕಡೆಗಳಲ್ಲಿ ರಾಜ್ಯಾದ್ಯಂತ ದಾಳಿ ನಡೆಸಿ, ಶೋಧ ನಡೆಸುತ್ತಿದ್ದಾರೆ. ದಾಳಿ ವೇಳೆ ಹಲವರ ಮನೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ …
Read More »ಡ್ರೈನೇಜ್ ಪೈಪಲ್ಲಿ ಹರಿದು ಬಂತು ಹಣ.. ಪಿಡಬ್ಲ್ಯೂಡಿ ಜೆಇ ಪ್ಲಾನ್ಗೆ ಎಸಿಬಿ ಅಧಿಕಾರಿಗಳೇ ದಂಗು
ಕಲಬುರಗಿ : ಇಲ್ಲಿ ಬುಧವಾರ ನಡೆದ ಎಸಿಬಿ ದಾಳಿ ವೇಳೆ ನೀರಿನ ಪೈಪಿನಲ್ಲಿ ಕಂತೆ ಕಂತೆ ನೋಟುಗಳನ್ನು ಕಂಡು ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ.ಪಿಡಬ್ಲೂಡಿ ಇಲಾಖೆಯ ಶಾಂತಗೌಡ ಅವರ ಮನೆಯ ಬಾತ್ ರೂಂ ಮತ್ತು ವಾಶ್ ಬೇಸಿನ್ ಪೈಪ್ನಲ್ಲಿ ದುಡ್ಡಿನ ಕಂತೆ ಅಡಗಿಸಿಟ್ಟಿರುವುದು ಎಸಿಬಿ ಅಧಿಕಾರಿಗಳ ದಾಳಿ ವೇಳೆ ಬೆಳಕಿಗೆ ಬಂದಿದೆ. ಕಲಬುರಗಿ ಜಿಲ್ಲೆಯ ಗುಬ್ಬಿ ಕಾಲೋನಿಯಲ್ಲಿರುವ ಮನೆಯ ಪೈಪ್ನಲ್ಲಿ ಹಣ ಪತ್ತೆಯಾಗಿದೆ.ಅಲ್ಲದೆ ಯಡ್ರಾಮಿಯಲ್ಲಿರುವ ತೋಟದ ಮನೆಯ ಮೇಲೆ ದಾಳಿ ಮಾಡಿದ್ದಾರೆ. …
Read More »ನ.25ರಂದು ಬಿಗ್ ಬಾಸ್ ಖ್ಯಾತಿಯ, ವಿಶ್ವನಾಥ ಮತ್ತು ಅವರ ತಂಡದ ಹೊಸ ಸಾಂಗ್ ರಿಲೀಸ್
ಧಾರವಾಡ : ಬಿಗ್ ಬಾಸ್ ಖ್ಯಾತಿಯ ಮತ್ತು ಅಪ್ಪಟ ಉತ್ತರ ಕರ್ನಾಟಕದ ಪ್ರತಿಬೆ ವಿಶ್ವನಾಥ ಹಾವೇರಿ ಹಾಗೂ ತಂಡದವರು ಹೊಸ ಗೀತೆಯೊಂದನ್ನ ರಚಿಸಿದ್ದು, ಈ ಅಲ್ಬಮ್ ಸಾಂಗ್ ಇದೇ ನ.25ರಂದು ಯ್ಯೂಟ್ಯೂಬ್ ಮೂಲಕ, ವಿಶ್ವದಾದ್ಯಂತ ರಿಲೀಸ್ ಮಾಡಲಾಗ್ತಿದೆ. ವಿಶ್ವನಾಥ ಹಾಗೂ ತಂಡದವರ ಬಹುನಿರೀಕ್ಷಿತ ಈ ದೃಶ್ಯಕಾವವನ್ನ (ಹಾಡು) ಸ್ಯಾಮ್ಯುಯೆಲ್ .ಎನ್ ಬರೆದು , ಸಂಯೊಜೀಸಿದ್ದಾರೆ ಎಂದು ವಿಶ್ವನಾಥ ಹಾವೇರಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಂಡದ ಸದಸ್ಯರು, ಧಾರವಾಡದ ಈ ಪುಣ್ಯ …
Read More »ಜೂಜಾಟದ ಅಡ್ಡೆಯ ಮೇಲೆ ದಾಳಿ- ನಾಲ್ವರ ಬಂಧನ, ನಗದು ವಶ
ಹುಬ್ಬಳ್ಳಿ: ಇಲ್ಲಿನ ಉಣಕಲ್ ಟಿಂಬರ್ ಯಾರ್ಡ್ನಲ್ಲಿ ಸೋಮವಾರ ಇಸ್ಪೀಟ್ ಜೂಜಾಡುತ್ತಿದ್ದ ನಾಲ್ವರನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಜೂಜಾಟದ ಖಚಿತ ಮಾಹಿತಿಯನ್ನು ಕಲೆ ಹಾಕಿದ ಖಾಕಿ ಪಡೆ ಜೂಜಾಟದ ಅಡ್ಡೆಯ ಮೇಲೆ ದಾಳಿ ನಡೆಸಿ ನಾಲ್ವರು ಜೂಜುಕೋರರನ್ನು ವಶಕ್ಕೆ ಪಡೆದಿದೆ. ಬಂಧಿತರಿಂದ 8,260 ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ವಿದ್ಯುತ್ ತಗುಲಿ ಯುವತಿ ಸಾವು
ಧಾರವಾಡ: ಗೃಹ ಬಳಕೆಯ ನೀರಿನ ಮೊಟಾರ್ಗೆ ವಿದ್ಯುತ್ ಸಂಪರ್ಕ ಮಾಡಲು ಹೋಗಿ, ವಿದ್ಯುತ್ ತಗುಲಿ ಯುವತಿಯೋರ್ವಳು ಸಾವನಪ್ಪಿರುವ ಘಟನೆ ಧಾರವಾಡ ತಾಲ್ಲೂಕಿನ ಹಳೇ ತೆಗೂರು ಗ್ರಾಮದಲ್ಲಿ ನಡೆದಿದೆ. ದಿವ್ಯಾ ಮಡಿವಾಳಪ್ಪ ಹಡಪದ (21)ಮೃತ ಯುವತಿ ಎಂದು ಗುರುತಿಸಲಾಗಿದೆ. ನಿನ್ನೆ ಮನೆಗೆ ನೀರಿನ ಮೋಟಾರ್ ಸಾಹಾದಿಂದ ಮನೆಗೆ ನೀರು ತುಂಬಿಸಲು ಮುಂದಾಗಿದ್ದಾರೆ. ಈ ವೇಳೆ ನೀರಿನ ಮೋಟಾರಗೆ ವಿದ್ಯುತ್ ಕನೆಕ್ಷನ್ ಕೊಟ್ಟಿದ್ದಾರೆ. ಹಾಗೇ ನೀರಿನ ಮೋಟಾರ್ನ್ನು ಎತ್ತಿ ಇಡಲು ಮುಂದಾದಾಗ ವಿದ್ಯುತ್ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





