Breaking News

ಕರ್ನಾಟಕ

ಬಹುನಿರೀಕ್ಷಿತ ಕುರುಕ್ಷೇತ್ರ ಚಿತ್ರಕ್ಕೆ ಭರ್ಜರಿ ಓಪನಿಂಗ್ ದರ್ಶನ್ ಕಟೌಂಟ್ ಗೆ ಅಭಿಮಾನಿಗಳಿಂದ ಹಾಲಿನ ಅಭಿಷೇಕ

ಚಿತ್ರದುರ್ಗ: ಕನ್ನಡ ಚಲನಚಿತ್ರ ಅಭಿಮಾನಿಗಳಲ್ಲಿ ಬಹು ನಿರೀಕ್ಷೆಯನ್ನು ಹುಟ್ಟು ಹಾಕಿದ ಕುರುಕ್ಷೇತ್ರ ಚಿತ್ರ ಇಂದು ಬಿಡುಗಡೆಯಾಗಿದ್ದು, ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ.ಚಿತ್ರದುರ್ಗದಲ್ಲಿಯೂ ಸಹ ಚಿತ್ರಕ್ಕೆ ಸ‍ಕತ್ ಓಪನಿಂಗ್ ದೊರಕಿದೆ. ದರ್ಶನ್ ಅಭಿಮಾನಿಗಳು ಕುರುಕ್ಷೇತ್ರ ಚಿತ್ರ ನೋಡಲು ಮುಗಿಬಿದ್ದಿದ್ದಾರೆ. ಮುಂಜಾನೆ 4ಘಂಟೆಯಿಂದ ಆರಂಭವಾದ ಶೋ ಹೌಸ್ ಪುಲ್ ಆಗಿದ್ದು, ದಿನದ ಇನ್ನು ಮೂರು ಶೋದ ಟಿಕೆಟ್ ಸೋಲ್ಡ್ ಔಟ್ ಆಗಿದೆ.ದರ್ಶನ್ ಅಭಿಮಾನಿಗಳು ಕಟೌಟ್ ಗೆ ಪೂಜೆ ಮತ್ತು ಹಾಲಿನ ಅಭಿಷೇಕ ಮಾಡಿದರು.ಇನ್ನು …

Read More »

ಕುರುಕ್ಷೇತ್ರ ಚಿತ್ರಕ್ಕೆ ದಾವಣಗೆರೆಯಲ್ಲಿ ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್

ದಾವಣಗೆರೆ: ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯದ ಹಾಗೂ ಮುನಿರತ್ನ ನಿರ್ದೇಶನದ ಬಹು ನಿರೀಕ್ಷಿತ ಕುರುಕ್ಷೇತ್ರ ಚಿತ್ರ ಇಂದು ಬಿಡುಗಡೆ ಹೊಂದಿದ್ದು, ದಾವಣಗೆರೆಯಲ್ಲಿ ಅಭಿಮಾನಿಗಳಿಂದ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ದೊರೆಯುತ್ತಿದೆ.ದರ್ಶನ್ ಅಭಿನಯದ 50 ನೇ ಚಿತ್ರ ಇದಾಗಿರುವದರಿಂದ ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ. ದಾವಣಗೆರೆಯ ತ್ರಿನೇತ್ರ, ಅಶೋಕ ಎರಡು ಚಿತ್ರಮಂದಿರದಲ್ಲಿ ಚಿತ್ರ ತೆರೆಕಾಣುತ್ತಿದೆ.ಸಿನಿಮಾ ನೋಡಲು ಮಳೆಯನ್ನು ಲೆಕ್ಕಿಸದೇ ಬಂದ ಅಭಿಮಾನಿಗಳು ದುಂದುವೆಚ್ಚಕ್ಕೆ ಕಡಿವಾಣ ಹಾಕಿ, ಉತ್ತರ ಪ್ರದೇಶದ ನೆರೆ ಸಂತ್ರಸ್ಥರಿಗೆ ನೀಡಲು …

Read More »

ಉಕ್ಕಿ ಹರಿಯುತ್ತಿರುವ ಹಳ್ಳವನ್ನೆ ಈಜಿ ದಾಟಿದ ಶ್ವಾನ

ದಾವಣಗೆರೆ : ಅಪಾರ ಪ್ರಮಾಣದ ಮಳೆಯಿಂದ ತುಂಗಭದ್ರಾ ಬದಿ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಸಾರಥಿ ಗ್ರಾಮದ ಬಂಡಿಹಳ್ಳದಲ್ಲಿ ಸಾರಥಿ ಚಿಕ್ಕಬಿದರೆ ಗ್ರಾಮದ ಸಂಪರ್ಕ ಕಡಿತಗೊಂಡಿದೆ.ಸುರಕ್ಷಿತ ಸ್ಥಳಕ್ಕೆ ತೆರಳಲು ಗ್ರಾಮಸ್ಥರು ಹರಸಾಹಸ ಪಡುತ್ತಿರುವದು ಒಂದು ಕಡೆಯಾದರೆ,ತುಂಬಿ ಹರಿಯುತ್ತಿರುವ ಬಂಡಿಹಳ್ಳದಿಂದ ಶ್ವಾನ ಒಂದು ದಡದಿಂದ ಮತ್ತೊಂದು ದಡಕ್ಕೆ ಈಜಿ ದಡ ಸೇರುವ ಮೂಲಕ ಅಚ್ಚರಿ ಮೂಡಿಸಿತು.ಶ್ವಾನವೇನೋ ಈಜಿ ದಡ ಸೇರಿದೆ ಆದರೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ನದಿ …

Read More »

ಮಳೆಗೆ ಸಿಲುಕಿ ನಲುಗುತ್ತಿರುವ 200 ಕ್ಕೂ ಹೆಚ್ಚು ಕುಟುಂಬಗಳು

ಚಿಕ್ಕೋಡಿ: ಪ್ರವಾಹ ಭೀತಿ ನಿರ್ಮಿಸಿ ಸುರಿಯುತ್ತಿರುವ ಮಳೆಗೆ ಬೆಳಗಾವಿ ಜಿಲ್ಲೆಯ ಬಹುತೇಕ ಗ್ರಾಮದ ಜನರು ತತ್ತರಿಸಿ ಹೋಗಿದ್ದಾರೆ.ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರಗ್ರಾಮದಲ್ಲಿ 200 ಕ್ಕೂ ಹೆಚ್ಚು ಕುಟುಂಬಗಳು ಮಳೆಯಿಂದ ಸಿಲುಕಿಕೊಂಡಿವೆ.ನಿರಂತರ ಸುರಿಯುತ್ತಿರುವ ಮಳೆಯ ಪರಿಣಾಮಹೊರಗೆ ಬಾರಲು ದಾರಿ ಇಲ್ಲದೆ ಜನರ ಪರದಾಡುತ್ತಿದ್ದಾರೆ. ಬೋಟ್ ಕಳಿಸಿ ನಮ್ಮನ್ನ ಹೊರಗೆ ತೆಗೆಯಿರಿ ಎಂದು ಮನವಿ ಮಾಡಿದ್ದು, ಕಳೆದ ನಾಲ್ಕು ದಿನಗಳಿಂದ ಬೋಟ್ ಬರುವಿಕೆಗೆ ದಾರಿ ಕಾಯುತ್ತಿದ್ದಾರೆ.

Read More »

ಭಾರೀ ಮಳೆಯಿಂದಾಗಿ ಸಂಪೂರ್ಣ ಸಂಪರ್ಕ ಕಳೆದುಕೊಂಡ ಹರಪನಹಳ್ಳಿ ತಾಲೂಕಿನ ಗ್ರಾಮಗಳು

ದಾವಣಗೆರೆ: ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಹಲವಾಗಲು ಕಡತಿ ಗ್ರಾಮದ ಸಂಪರ್ಕ ಕಡಿತಗೊಂಡಿದೆ. ‌ಈಗಾಗಲೇ ಮಳೆ ಪ್ರಮಾಣದಲ್ಲಿ ವ್ಯಾಪಕ ಹೆಚ್ಚಳದಿಂದಾಗಿ ನೀರಿನಿಂದಾಗಿ ನೂರಾರು ಎಕರೆ ಭತ್ತದ ಗದ್ದೆಗಳು ಜಲಾವೃತಗೊಂಡಿವೆ.

Read More »

ನಿರಾಶ್ರಿತರಿಗಾಗಿ ಮಿಡಿದ ಕನ್ನಡ ಪರ ಸಂಘಟನೆಯ ಯುವಕರ ಹೃದಯ

ಚಿಕ್ಕೋಡಿ: ಕಳೆದ ಹಲವು ದಿನಗಳಿಂದ ನಿರಂತರವಾಗಿ ಭಾರೀ ಮಳೆ ಸುರಿಯುತ್ತಿದ್ದು, ಬೆಳಗಾವಿ ಜಿಲ್ಲೆಯ ಜನತೆ ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಇಂತಹ ನಿರಾಶ್ರಿತರಿಗೆ ನಿರಾಶ್ರಿತರಿಗೆ ಊಟ ಹಾಗೂ ಬಿಸ್ಕೇಟ್ ವಿತರಣೆ ಮಾಡುವ ಮೂಲಕ ಕರ್ನಾಟಕ ನವ ನಿರ್ಮಾಣ ಪಡೆಯ ಯುವಕರು ಮಾನವೀಯತೆ ಮೆರೆದಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಬಾಗದ ನಿರಾಶ್ರಿತರಿಗೆ ಯುವಕರು ಸಹಾಯ ಹಸ್ತ ಚಾಚಿದ್ದಾರೆ. ಜನರಿಗೆ ಒಂದು ದಿನದ ಊಟ ಹಾಗೂ ಮಕ್ಕಳಿಗೆ ಬಿಸ್ಕೇಟ ನೀಡಿ ಸಹಾಯ ಮಾಡಿದ್ದಾರೆ. ಅಷ್ಟೇ …

Read More »

ಮುಖ್ಯಮಂತ್ರಿಗೆ ಪಠ್ಯಪುಸ್ತಕ ಕೇಳಿದ ವಿದ್ಯಾರ್ಥಿನಿ! ಚಪ್ಪಾಳೆ ತಟ್ಟಿ ಸ್ವಾಗತ ಕೋರಿದ ಸಂತ್ರಸ್ತರು

ಬೆಳಗಾವಿ: ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಸ್ಥಾಪಿಸಲಾಗಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ವಿದ್ಯಾರ್ಥಿನಿಯೊಬ್ಬಳು ಪಠ್ಯಪುಸ್ತಕ ಕೊಡಿಸುವಂತೆ ಕೇಳಿದಳು.ಒಂದು ಕ್ಷಣ ಆಶ್ಚರ್ಯಚಕಿತಗೊಂಡ ಮುಖ್ಯಮಂತ್ರಿಗಳು, ನಾಳೆ ಸಂಜೆಯೊಳಗೆ ಅಗತ್ಯ ಪಠ್ಯಪುಸ್ತಕಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.ಹಿರಣ್ಯಕೇಶಿ ನದಿ ಪ್ರವಾಹದಿಂದ ನಿರಾಶ್ರಿತರಾಗಿರುವ ಸಂಕೇಶ್ವರ ಪಟ್ಟಣದ ರಾಮಚಿತ್ರ ಮಂದಿರದಲ್ಲಿ ಸ್ಥಾಪಿಸಿರುವ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಸಿ.ಎ. ಮೊದಲ ವರ್ಷದ ವಿದ್ಯಾರ್ಥಿನಿ ಸೀಮಾ ಇಂಗಳಿ ಪಠ್ಯಪುಸ್ತಕ ನೀರಿನಲ್ಲಿ ಹಾಳಾಗಿರುವುದರಿಂದ ಓದುವುದಕ್ಕೆ ತೊಂದರೆಯಾಗಿದೆ ಎಂದು …

Read More »

ಉಕ್ಕಿ ಹರಿಯುತ್ತಿರುವ ನೇತ್ರಾವತಿ ನದಿ ದೇವಾಲಯ, ಮಸೀದಿ ಜಲಾವೃತ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಕಡೇ ಶಿವಾಲಯ ಅಜಿಲ ಮೊಗರು ಮಧ್ಯೆ ಹರಿಯುವ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಏರಿಕೆ ಯಾಗಿದ್ದು, ಪರಿಣಾಮ ಅಜಿಲಮೊಗರು ಮಸೀದಿಯ ಆವರಣದವರೆಗೆ ನುಗ್ಗಿದ ನೆರೆ ನೀರು ನುಗ್ಗಿದೆ. ‌ಅಲ್ಲದೇ ಕಡೇಶಿವಾಲಯ ದೇವಸ್ಥಾನದ ಸನಿಹವೂ ನದಿ ನೀರು ನುಗ್ಗಿ ಸಂಪೂರ್ಣ ಜಲಾವೃತಗೊಂಡಿವೆ.ಅಲ್ಲದೇ ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದಲ್ಲಿ ಗಾಳಿ ರಭಸಕ್ಕೆ ತೆಂಗಿನ ಮರ ಮನೆ ಮೇಲೆ ಮುರಿದು ಬಿದ್ದು ಮನೆ ಸಂಪೂರ್ಣ ಜಖಂಗೊಂಡಿದೆ.ಕೆದಿಲ ಗ್ರಾಮದ ಚಂದ್ರಪ್ಪ ಎನ್ನುವವರ …

Read More »

ಉಕ್ಕಿ ಹರಿಯುತ್ತಿರುವ ನೇತ್ರಾವತಿ, ಕುಮಾರಧಾರ ನದಿಗಳು ಐತಿಹಾಸಿಕ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇಗುಲದಲ್ಲಿ ಸಂಗಮ ಸಾಧ್ಯತೆ

ಮಂಗಳೂರು: ನಿರಂತರ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನೇತ್ರಾವತಿ, ಕುಮಾರಧಾರ ನದಿಗಳು ಉಕ್ಕಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಉಭಯ ನದಿಗಳು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಐತಿಹಾಸಿಕ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇಗುಲದ ಬಳಿ ಸಂಗಮ ಸಾಧ್ಯತೆ ಹೆಚ್ಚಾಗಿದೆ. ಈ ಐತಿಹಾಸಿಕ ಕ್ಷಣ ನೋಡಲು ಭಕ್ತಾಧಿಗಳ ಕಾತುರದಿಂದ ಕಾಯುತ್ತಿದ್ದಾರೆ. ನೇತ್ರಾವತಿ ನದಿಗಳ ಅಪಾಯದ ಮಟ್ಟ 30.5 ಮೀ ಮೀರಿದ್ದು, ಸದ್ಯ ನೇತ್ರಾವತಿ ನದಿಯಲ್ಲಿ 30 ಮೀಟರ್ ನಲ್ಲಿ ನೀರು …

Read More »

ಮಹಾಮಳೆಗೆ ತುಂಬಿದ ತುಂಗಭದ್ರೆ. ಅಲ್ಲಲ್ಲಿ ರಸ್ತೆ ಸಂಪರ್ಕ ಕಟ್, ಅಧಿಕಾರಿಗಳ ದೌಡು, ಬೋಟ್ ವ್ಯವಸ್ಥೆ.

ದಾವಣಗೆರೆ: ದಾವಣಗೆರೆ ಯಲ್ಲಿ ವರುಣನ ಆರ್ಭಟ ಮುಂದುವರೆದಿದೆ. ಸತತ ಐದು ದಿನಗಳಿಂದಲು ಎಡೆಬಿಡದೆ ಮಳೆ ಸುರಿಯುತ್ತಿದೆ. ಇದ್ರಿಂದ ದಾವಣಗೆರೆಯ ಜೀವನಾಡಿ ಭದ್ರ ಜಲಾಶಯದಲ್ಲಿ ನೀರಿನ ಶೇಕರಣೆ ಹೆಚ್ಚಾಗಿದ್ದು. ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದೆ. ಹರಿಹರದ ಉಕ್ಕಡಗಾತ್ರಿಯ ಕರಿಬಸವೇಶ್ವ ದೇವಸ್ಥಾನದ ಮೆಟ್ಟಿಲು ಭಾಗದ ವರೆಗೂ ನದಿ ನೀರು ಬಂದಿದ್ದು. ಉಕ್ಕಡಗಾತ್ರಿ- ಪತ್ತೆಪುರ, ಸಾರಧಿ- ಚಿಕ್ಕಬಿದರೆ, ಹರಪನಹಳ್ಳಿಯ ಹಲುವಾಗಲು – ಕಡತಿ ರಸ್ತೆ ಮಾರ್ಗ ಕಡಿತಗೊಂಡಿದೆ. ಕಡಿತಗೊಂಡ ಗ್ರಾಮಸ್ಥರಿಗೆ ದಿಕ್ಕುತೋಚದಂತಾಗಿದ್ದು ನಾಯಿಗಳು ಈಜಿಕೊಂಡು …

Read More »