admin
September 12, 2019
ಕರ್ನಾಟಕ, ಸುದ್ದಿ
ಮಂಗಳೂರು: ನಿರಂತರ ಸುರಿಯುತ್ತಿರುವ ಮಳೆಗೆ ಇಂದು ಸ್ವಲ್ಪ ಮಟ್ಟಿಗೆ ಬ್ರೇಕ್ ಬಿದ್ದಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಪ್ರಮಾಣ ಇಳಿಕೆಯಾಗಿದೆ. ನಿನ್ನೆ ಮಳೆಯಿಂದ ಉಕ್ಕಿ ಹರಿಯುತ್ತಿರುವ ನೇತ್ರಾವತಿ, ಕುಮಾರಧಾರ, ಬಿಸಿರೋಡ್ ನೇತ್ರಾವತಿ ನದಿ ನೀರಿನ ಮಟ್ಟ 8.4 ಮೀ ಗೆ ಇಳಿಕೆಯಾಗಿದೆ. ಜೊತೆಗೆ ಉಪ್ಪಿನಂಗಡಿ ನೇತ್ರಾವತಿ ನದಿ ನೀರಿನ ಮಟ್ಟ 29.7 ಮೀ., ಉಪ್ಪಿನಂಗಡಿ ಕುಮಾರಧಾರ ನದಿ ನೀರಿನ ಮಟ್ಟ 25.0 ಮೀ, ಗುಂಡ್ಯ ನದಿ ನೀರಿನ ಮಟ್ಟ 4.9 …
Read More »
admin
September 12, 2019
ಕರ್ನಾಟಕ, ಸುದ್ದಿ
ಚಿಕ್ಕೋಡಿ: ಭಾರೀ ಮಳೆಯಿಂದಾಗಿ ಈಗಾಗಲೇ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಈ ವೇಳೆ ನದಿ ದಾಟಲು ಯತ್ನಿಸಿ ವೇದಗಂಗಾ ನದಿಯಲ್ಲಿ ಸಿಲುಕಿದ್ದ 3 ಜನರ ರಕ್ಷಣೆ ಮಾಡುವಲ್ಲಿ ಎನ್.ಡಿ.ಆರ್.ಎಫ್. ತಂಡ ಯಶಸ್ವಿಯಾಗಿದೆ. ಚೆತನ ಯಲಗುಡೆ, ಅಕ್ಷಯ ಪೊಕಲೆ, ಪ್ರಶಾಂತ ಕಾಂಬಳೆ ನದಿಯಲ್ಲಿ ಸಿಲುಕಿದ್ದ ವ್ಯಕ್ತಿಗಳು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೋರಗಾವ ಕಾರದಗಾ-ಬೋಜ ಸೇತುವೆಯಲ್ಲಿ ಸಿಲುಕಿದ್ದ ಮೂವರನ್ನು ರಕ್ಷಣಾ ತಂಡ ಹಾಗೂ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ.
Read More »
admin
September 12, 2019
ಕರ್ನಾಟಕ, ಸುದ್ದಿ
ಬೆಳಗಾವಿ: ಇಲ್ಲಿನ ಗ್ರಾಮೀಣ ಭಾಗದಲ್ಲಿ ಮಳೆ ನಿರಂತರ ಸುರಿಯುತ್ತಿರುವ ಕಾರಣ ಬಹುಭಾಗದಲ್ಲಿ ನೀರು ನಿಂತು ಜನಜೀವನ ಅಸ್ಥವ್ಯಸ್ಥವಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಶಾಸಕಿ ಲಕ್ಷ್ಮೀಹೆಬ್ಬಾಳ್ಕರ್ ರವರು ಇಂದು ಜಲಾವೃತಗೊಂಡ ಸ್ಥಳಗಳನ್ನು ಖುದ್ದು ಪರಿಶೀಲಿಸಿದರು. ಮತ್ತು ಅಗತ್ಯ ಸ್ಥಳಗಳಲ್ಲಿ ಗಂಜೀಕೇಂದ್ರಗಳನ್ನು ತೆರೆಯುವಂತೆ ಹಾಗೂ ತಾತ್ಕಾಲಿಕ ಪುನವ೯ಸತಿ ಕಲ್ಪಿಸುವಂತೆ ತಾಲೂಕು ಆಡಳಿತಾಧಿಕಾರಿಗಳಿಗೆ ಸೂಚಿಸಿದರು. ಸ್ಥಳೀಯ ಆಡಳಿತಾಧಿಕಾರಿಗಳು ಹಾಗೂ ತಾಲೂಕು ಆಡಳಿತಾಧಿಕಾರಿಗಳೊಂದಿಗೆ ತೆರಳಿ ನೆರೆ ಸಂತ್ರಸ್ಥರನ್ನು ಖುದ್ದು ಭೇಟಿಯಾದ ಶಾಸಕಿ ಲಕ್ಷ್ಮೀಹೆಬ್ಬಾಳಕರ್ …
Read More »
admin
September 12, 2019
ಕರ್ನಾಟಕ, ಸುದ್ದಿ
ಮೇಷ : ವಿಶ್ವವು ಪ್ರಣಯದ ಆಸಕ್ತಿಯತ್ತ ಕೊಂಡೊಯ್ಯುತ್ತಿದೆ. ನೀವು ಪ್ರಲೋಭನೆಗೆ ಒಳಗಾಗುತ್ತೀರಿ, ಮತ್ತು ನಿಮ್ಮ ಬಯಕೆಗಳನ್ನು ನಿರ್ಲಕ್ಷಿಸುತ್ತೀರಿ. ಬಿಕ್ಕಟ್ಟಿನ ಸಂಬಂಧದಲ್ಲಿದ್ದರೆ, ನೀವು ಕೆಲ ಪರಿಹಾರವಾಗದ ಸಮಸ್ಯೆಗಳ ಕುರಿತು ಕೊಂಚ ಜ್ಞಾನ ಪಡೆಯುತ್ತೀರಿ.ವೃಷಭ: ನೀವು ಇಂದು ಪ್ರಾರಂಭಿಸುವ ಪ್ರತಿಯೊಂದರಲ್ಲೂ ಯಶಸ್ವಿಯಾಗುತ್ತೀರಿ. ಹಣಕಾಸಿನ ವಹಿವಾಟುಗಳು ಸಂಜೆಯ ವೇಳೆಗೆ ಸಂತೃಪ್ತಿಕರ ಮತ್ತು ಅನುಕೂಲಕರವಾಗಿರುತ್ತವೆ. ಈ ದಿನ ನೀವು ನಿರೀಕ್ಷಿಸಿದಂತೆ ಶಕ್ತಿಯುತವಾಗಿರುವುದಿಲ್ಲ. ಕೊಂಚ ದಣಿವಿನ ದಿನಕ್ಕೆ ಉತ್ಸಾಹದ ರಾತ್ರಿ ಸಮಾಧಾನ ನೀಡುತ್ತದೆ.ಮಿಥುನ: ನೀವು ನಿಮ್ಮ ಪ್ರೀತಿಪಾತ್ರರನ್ನು …
Read More »
admin
September 12, 2019
ಕರ್ನಾಟಕ, ಸುದ್ದಿ
ಚಿಕ್ಕೋಡಿ : ಜಾನುವಾರುಗಳು ನಿಲ್ಲುವ ಸ್ಥಳದಲ್ಲಿ ಜಲ್ಲಿಕಲ್ಲು (ಗರಸು) ಹಾಕಬೇಕೆಂದು ತಾಯಿ ಮಗಳು ಹೋದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿವನೂರು ಗ್ರಾಮದಲ್ಲಿ ನಡೆದಿದೆ.ಪಾರ್ವತಿ ರೂಪನೂರ (68) ತಾಯಿ ಕೃಷ್ಣಾಬಾಯಿ ವಾಗ್ಮುಡೆ (48) ಮಗಳು ಮೃತ ದುರ್ದೈವಿಗಳು.ಜಾನುವಾರು ನಿಲ್ಲುವ ಜಾಗ ಮಳೆಯಿಂದ ಕೆಸರಾಗಿದ್ದರಿಂದ ಜಲ್ಲಿ ತರಲು ಹೋಗಿದ್ದ ತಾಯಿ ಮಗಳು ಜಲ್ಲಿಯ ಮೇಲೆ ಬಿದ್ದಿದ್ದ ತಂತಿಯನ್ನು ಸರಿಸುವಾಗ ವಿದ್ಯುತ ಸ್ಪರ್ಶಿಸಿ ಸ್ಥಳದಲ್ಲೇ ಮಗಳು …
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಗಳೂರು: ನಿರಂತರ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ. ಭಾರೀ ಮಳೆ ಸುರಿಯುವ ಹಿನ್ನೆಲೆಯಲ್ಲಿ ರಜೆ ಘೋಷಣೆ ಮಾಡಲಾಗಿದ್ದು, ಆಗಸ್ಟ್ 9 ರವರೆಗೆ ದಕ್ಷಿಣ ಕನ್ನಡದಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದ್ದಾರೆ. ಕಳೆದ 24 ಗಂಟೆಗಳಲ್ಲಿ ಬೆಳ್ತಂಗಡಿ, ಸುಳ್ಯ, ಪುತ್ತೂರು, ಕಡಬ ತಾಲೂಕುಗಳಲ್ಲಿ ಅತಿ ಹೆಚ್ಚಿನ ಮಳೆ ದಾಖಲಾಗಿದೆ. …
Read More »
admin
September 12, 2019
ಕರ್ನಾಟಕ, ಸುದ್ದಿ
ಬೆಳಗಾವಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಿನ್ನೆಲೆಯಲ್ಲಿಬೆಂಗಳೂರಿನಿಂದ ಬೆಳಗಾವಿ ಮಾರ್ಗವಾಗಿ ಪುಣೆಗೆ ಸಂಪರ್ಕಿಸುತ್ತಿದ್ದ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಭಾರಿ ಪ್ರಮಾಣದ ಭೂಕುಸಿತ ಉಂಟಾಗಿದೆ. ಇದರಿಂದ ಪುಣೆ ಬೆಂಗಳೂರು ರಸ್ತೆ ಸಂಪರ್ಕ ಕಡಿತಗೊಂಡಿದೆ. ಈ ಪರಿಣಾಮನಾಳೆ ಮಧ್ಯಾಹ್ನದ ವರೆಗೂ ರಸ್ತೆ ಸಂಚಾರ ಸ್ಥಗಿತಗೊಳಿಸಲು ಸೂಚಿಸಲಾಗಿದೆ.ಬೆಳಗಾವಿಯಿಂದ ಕೊಲ್ಲಾಪುರ ಕಡೆಗೆ ಯಾರು ಪ್ರಯಾಣ ಮಾಡದಂತೆ ಉತ್ತರ ಐಜಿಪಿ ರಾಘವೇಂದ್ರ ಸುಹಾಸ್ ಮನವಿ ಮಾಡಿದರು.ಬೆಳಗಾವಿ ಪೊಲೀಸರು ರಾಜ್ಯದ ಗಡಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿದ್ದಾರೆ.
Read More »
admin
September 12, 2019
ಕರ್ನಾಟಕ, ಸುದ್ದಿ
ಚಿತ್ರದುರ್ಗ: ನಿವೇಶನ ಕೊಡಿಸುವುದಾಗಿ ಹೇಳಿ ಪೊಲೀಸರು ಸೇರಿದಂತೆ ಸುಮಾರು 40ಕ್ಕೂ ಜನರಿಗೆ ವಂಚನೆ ಮಾಡಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಚಿತ್ರದುರ್ಗ ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ.ನಗರದ ಬಿ.ಎಲ್.ಗೌಡ ಬಡಾವಣೆಯ ಸಿದ್ದೇಶ್ ಬಂಧಿತ ಆರೋಪಿ. ಈತ ನಗರದ ಡಿಎಆರ್ ಪೊಲೀಸರು ಸೇರಿದಂತೆ ಸಾರ್ವಜನಿಕರಿಂದ ಹಣ ಪಡೆದು ಕಡಿಮೆ ದರದಲ್ಲಿ ಹಲವೆಡೆ ಬಡಾವಣೆ ನಿರ್ಮಿಸುತ್ತಿರುವುದಾಗಿ ನಿವೇಶನ ಕೊಡಿಸುವುದಾಗಿ ಹೇಳಿ 2014ರಿಂದ ಸುಮಾರು ಒಂದು ಕೋಟಿ ರೂಪಾಯಿಗೂ ಹೆಚ್ಚು ಹಣ ಸಂಗ್ರಹಿಸಿ ನಂತರ ಪರಾರಿಯಾಗಿದ್ದ.ಸತೀಶ್ …
Read More »
admin
September 12, 2019
ಕರ್ನಾಟಕ, ಸುದ್ದಿ
ಚಿತ್ರದುರ್ಗ: ಅಧಿಕಾರಿಗಳು ಹಾಲಿನ ಗುಣಮಟ್ಟದ ನೆಪ ಒಡ್ಡಿ ಹಲವು ದಿನಗಳಿಂದ ರೈತರ ಹಾಲನ್ನು ರಿಜೆಕ್ಟ್ ಮಾಡುತ್ತಿದ್ದ ಹಿನ್ನಲೆಯಲ್ಲಿ ಇಂದು ರೈತರು ಹಾಲು ಉತ್ಪಾದಕರ ಸಂಘದ ಕಚೇರಿ ಅವರಣದಲ್ಲಿ ಹಾಲು ಚೆಲ್ಲಿ ಪ್ರತಿಭಟನೆ ನಡೆಸಿದರು. ಚಳ್ಳಕೆರೆ ನಗರದ ನರಹರಿ ನಗರದ ನರಹರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಕಚೇರಿ ಬಳಿ ಸುಮಾರು 450 ಲೀಟರ್ ಹಾಲು ಚೆಲ್ಲಿದ ಹಾಲು ಉತ್ಪಾದಕರು ಪ್ರತಿಭಟಿಸಿದರು.
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ: ಯುವಕನೊಬ್ಬನನ್ನು ಹಾಡಹಗಲೇ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ದಾಳಿಂಬ ಗ್ರಾಮದಲ್ಲಿ ನಡೆದಿದೆ.ಬಿ.ಕೆ. ಪ್ರಾವಿಷನ್ಸ್ ಸ್ಟೋರ್ ನಲ್ಲಿ ಕೆಲಸ ಮಾಡುತ್ತಿದ್ದ ರಾಮು(30) ಎಂಬುವವರನ್ನು ದುಷ್ಕರ್ಮಿಗಳು ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾರೆ.
Read More »