Breaking News

ಕರ್ನಾಟಕ

ವಿದ್ಯುತ್ ತಂತಿ ತಗುಲಿ ರೈತ ಸಾವು

ಚಿಕ್ಕೋಡಿ; ವಿದ್ಯುತ್ ತಂತಿ ತಗುಲಿ ರೈತ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಆಡಿ ಗ್ರಾಮದಲ್ಲಿ ಘಟನೆ ನಡೆದಿದೆ. ‌ಮುರಾರಿ ಬನ್ನೆ 60 ಮೃತ ದುರ್ದೈವಿ ರೈತ.ಜಮೀನಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಸಾವು ಸಂಭವಿಸಿದೆ. ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಮಂಡ್ಯ ಜಿಲ್ಲಾ ಕಾಂಗ್ರೆಸ್ ಮಹಿಳಾ ನಾಯಕಿ ಜಯಮ್ಮ ವಿಧಿವಶ

ಮಂಡ್ಯ: ಜಿಲ್ಲೆಯ ಅಕ್ಕಿಹೆಬ್ಬಾಳು ಕೃಷಿ ಪತ್ತಿನ ಸಹಕಾರ ಬ್ಯಾಂಕಿನ ಮಾಜಿ ಅಧ್ಯಕ್ಷರು, ಕಾಂಗ್ರೆಸ್ ಮಹಿಳಾ ನಾಯಕರಾದ ಜಯಮ್ಮ(72) ನಿವೃತ್ತ ಎಂಜಿನಿಯರ್ ನಂಜೇಗೌಡರ ಧರ್ಮಪತ್ನಿ ಅನಾರೋಗ್ಯದಿಂದ ನಿಧನರಾದರು. ಮೃತರ ನಿಧನಕ್ಕೆ ಮಾಜಿಶಾಸಕ ಕೆ.ಬಿ.ಚಂದ್ರಶೇಖರ್, ಕೆಯುಐಡಿಎಫ್ ಸಿ ಮಾಜಿಅಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ, ಎ.ಜೆ.ದಿವಾಕರ್, ರಾಮಸ್ವಾಮಿ, ಬಿ.ನಾಗೇಂದ್ರಕುಮಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.

Read More »

ಏತ ನೀರಾವರಿ ಅನುಮೋದನೆಗೆ ಒತ್ತಾಯಿಸಿ ಪ್ರತಿಭಟನೆ

ಚಿತ್ರದುರ್ಗ:ಸಾಸ್ವೆಹಳ್ಳಿ ಏತ ನೀರಾವರಿ 2ನೇ ಹಂತ ಅನುಮೋದನೆಗೆ ಒತ್ತಾಯಿಸಿ ಚಿತ್ರದುರ್ಗದಲ್ಲಿಂದು ರೈತರು ಬೃಹತ್ ಪ್ರತಿಭಟನೆ ನಡೆಸಿದರು. ಹೊಳಲ್ಕೆರೆ, ಚಿತ್ರದುರ್ಗ ತಾಲೂಕಿನ ನೂರಾರು ರೈತರು ಕನಕ ವೃತ್ತದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡರು. ‌ ನಗರದ ಗಾಂಧಿ ವೃತ್ತದಲ್ಲಿ ನೀರಿಗಾಗಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸುವ ಮೂಲಕ ಸರ್ಕಾರದ ವಿರುದ್ದ ರೈತರು ಆಕ್ರೋಶ ಹೊರಹಾಕಿದರು.

Read More »

ಕೋಲಾರದಲ್ಲಿ ಹೆಚ್ಚಿದ ಸರಣಿ ದರೋಡೆಕೋರರ ಕೈಚಳಕ

ಕೋಲಾರ: ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಸರಣಿ ಕಳ್ಳತನ ಹೆಚ್ಚಾಗಿದ್ದು, ಒಂದು ತಿಂಗಳಿನಿಂದ ನಡೆಯುತ್ತಿರುವ ಸರಣಿ ಕಳ್ಳತನದಿಂದ ನಗರದ ಜನರು ಬೆಚ್ಚಿ ಬಿದ್ದಿದ್ದಾರೆ. ‌ಈ ಹಿನ್ನೆಲೆಯಲ್ಲಿ ನಿವಾರ ರಾತ್ರಿ ಮತ್ತೆ ನಾಲ್ಕು ಮನೆಗಳಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಚೋರರು ನಗರದ ಕಾರಂಜಿಕಟ್ಟೆ ಮತ್ತು ಮುನೇಶ್ವರ ನಗರದ ಶಿಕ್ಷಕ ಸತೀಶ್, ವಕೀಲ ಶ್ರೀನಿವಾಸ್, ಚಾಲಕ ಹನುಮೇಶ್, ಸೌಮ್ಯ ಬಾರ್ ಮಾಲೀಕ ಗೋವರ್ಧನ ಎಂಬುವವರ‌ ಮನೆಗಳನ್ನು ಟಾರ್ಗೆಟ್ ಮಾಡಿ ಮನೆಗಳ ಬಾಗಿಲನ್ನು ಮೀಟಿ …

Read More »

ರಾಜೀನಾಮೆ ನೀಡಿದ ಶಾಸಕರಿಗೆ ಛೀ… ತೂ..

ದಾವಣಗೆರೆ: ರಾಜ್ಯ ಮೈತ್ರಿ ಕೂಟಕ್ಕೆ ರಾಜೀನಾಮೆ ನೀಡಿದ ಶಾಸಕರಿಗೆ ದಾವಣಗೆರೆಯಲ್ಲಿ ರೈತ ಸಂಘ ವತಿಯಿಂದ ಛೀಮಾರಿ ಹಾಕಲಾಯಿತು.ದಾವಣಗೆರೆ ಬಸ್ ನಿಲ್ದಾಣದ ಬಳಿ ರಾಜೀನಾಮೆ ನೀಡಿದ ೧೫ ಶಾಸಕರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಆಕ್ರೋಶ ಹೊರಹಾಕಿದರು. ಅಲ್ಲದೇ ಕಾರ್ಯಕರ್ತರು ಎಲೆ ಅಡಿಕೆ ತಿಂದು ಶಾಸಕರ ಭಾವಚಿತ್ರಕ್ಕೆ ಉಗುಳಿದರು.ಶಾಸಕರು ತಮ್ಮ ಸ್ವಾರ್ಥಕ್ಕೆ ರಾಜೀನಾಮೆ ನೀಡಿದ್ದಾರೆ. ಇವರಿಗೆ ಜನರ ಕೆಲಸಗಳ ಬಗ್ಗೆ ಕಾಳಜಿ ಇಲ್ಲ. ಕೆಲಸ ಮಾಡುವುದನ್ನು ಬಿಟ್ಟು ರಾಜೀನಾಮೆ ಕೊಟ್ಟಿದ್ದಕ್ಕೆ ಆಕ್ರೋಶ …

Read More »

ಹೆಜ್ಜೇನು ದಾಳಿಯಿಂದ ವ್ಯಕ್ತಿ ಅಸ್ವಸ್ಥ

ಮಂಡ್ಯ: ಜಿಲ್ಲೆಯ ಭಾರತೀಪುರ ಗ್ರಾಮದಲ್ಲಿ ಹೆಜ್ಜೇನು ದಾಳಿಯಿಂದಾಗಿ ಕೆ.ಆರ್.ಪೇಟೆ ಬಾರ್ ಬೆಂಡರ್ ನಾಸೀರ್ ಅಸ್ವಸ್ಥಗೊಂಡಿದ್ದಾರೆ. ಕೃಷ್ಣರಾಜಪೇಟೆ ಪಟ್ಟಣದ ಹೇಮಾವತಿ ಬಡಾವಣೆಯ ನಿವಾಸಿ ಬಾರ್ ಬೆಂಡರ್ ನಾಸೀರ್(45) ಅವರ ಮೇಲೆ ಹೆಜ್ಜೇನು ಹಿಂಡು ದಾಳಿ ಮಾಡಿ, ಜೇನು ನೊಣಗಳ ಕಡಿತದಿಂದ ತೀವ್ರವಾಗಿ ಅಸ್ವಸ್ಥಗೊಂಡಿರುವ ನಾಸೀರ್ ಕೆ.ಆರ್ ಪೇಟೆಯ ದುಂಡಶೆಟ್ಟಿಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಲ್ಲೂಕಿನ ಭಾರತೀಪುರ ಗ್ರಾಮಕ್ಕೆ ಹೋಗಿ ಕೆ.ಆರ್.ಪೇಟೆ ಪಟ್ಟಣಕ್ಕೆ ಹಿಂತಿರುಗಿ ಬರುವಾಗ ನಿನ್ನೆ ಸಂಜೆ ಈ …

Read More »

ಶಾಸಕ ನಾರಾಯಣಗೌಡ ವಿರುದ್ಧ ಕಾರ್ಯಕರ್ತರ ಪ್ರತಿಭಟನೆ

ಮಂಡ್ಯ: ಶಾಸಕ ನಾರಾಯಣಗೌಡರ ಸ್ವಗೃಹದಲ್ಲಿದ್ದ ಮಂಡ್ಯ ಜಿಲ್ಲೆ ಮಂಡ್ಯ ಕೆ.ಆರ್.ಪೇಟೆ ಜೆಡಿಎಸ್ ನಗರ ಘಟಕದ ಕಛೇರಿಯೊಳಗೆ ನುಗ್ಗಲು ಯತ್ನಿಸಿದ ಜೆಡಿಎಸ್ ಕಾರ್ಯಕರ್ತರು ಕಛೇರಿಯ ನಾಮ ಫಲಕ ಕಿತ್ತು ಧ್ವಂಸಪಡಿಸಿ ಶಾಸಕರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೃಷ್ಣರಾಜಪೇಟೆ ಕ್ಷೇತ್ರದ ಶಾಸಕ ನಾರಾಯಣಗೌಡರ ಗೃಹ ಕಛೇರಿ ಕೆ.ಆರ್.ಪೇಟೆ ಪಟ್ಟಣದ ಜೆಡಿಎಸ್ ನಗರ ಘಟಕದ ಕಛೇರಿಗೆ ಅಳವಡಿಸಿದ್ದ ನಾಮಫಲಕವನ್ನು ದ ಉದ್ರಿಕ್ತ ಜೆಡಿಎಸ್ ಕಾರ್ಯಕರ್ತರು ಕಿತ್ತು ಧ್ವಂಸಪಡಿಸಿದರು.ಶಾಸಕ ನಾರಾಯಣಗೌಡರ ಪ್ರತಿಕೃತಿಯನ್ನು …

Read More »

ರಾಜಿನಾಮೆಗೂ ಮುನ್ನ ಭವಿಷ್ಯ ಕೇಳಲು ಹೋದ್ರಾ ಅಥಣಿ ಶಾಸಕ ಮಹೇಶ್ ಕುಮಠಳ್ಳಿ???

ಬೆಳಗಾವಿ: ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರದ ಶಾಸಕ ಮಹೇಶ್ ಕುಮಠಳ್ಳಿ ಸ್ವಾಮೀಜಿ ಎದುರು ಕುಳಿತಿರುವ ಪೋಟೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೆಬೆಲ್ ಶಾಸಕ‌ ರಮೇಶ್ ಜಾರಕಿಹೋಳಿ ಅವರ ಆಪ್ತರಾಗಿರುವ ಮಹೇಶ ರಾಜೀನಾಮೆ ನೀಡುವದಾಗಿ ಘೋಷಿಸಿದ್ದರಿಂದ ಕಳೆದ ಎರಡು ದಿನಗಳ ಹಿಂದಷ್ಟೆ ರಾಜೀನಾಮೆಗೆ ಕಾಂಗ್ರೆಸ್ ಕಾರ್ಯಕರ್ತರುವಿರೋಧ ವ್ಯಕ್ತಪಡಿಸಿದ್ದರು.ರಾಜೀನಾಮೆ ಕುರಿತು ತೀವ್ರ ಗೊಂದಲದಲ್ಲಿ ಇರುವದಾಗಿ ಹೇಳಿದ ಬೆನ್ನಲ್ಲೆ ಇಂತಹದ್ದೊಂದು ಫೋಟೋ ಹರಿದಾಡುತ್ತಿರುವದು ಹಲವಾರು ಊಹಾಪೋಹಗಳಿಗೆ ಸಾಕ್ಷಿಯಾಗಿದೆ.

Read More »

ಪೋಲೀಸರ ವಿರುದ್ದ ಪ್ರಕರಣ ದಾಖಲು

ಮಂಡ್ಯ: ಕಳೆದ ಎರಡು ವರ್ಷದ ಹಿಂದೆ ನನ್ನನ್ನು ಠಾಣೆಗೆ ಕರೆದೊಯ್ದು ಹಲ್ಲೆ ಮಾಡಿದ್ದ ಕಿಕ್ಕೇರಿ ಠಾಣೆಯ ಅಂದಿನ ಠಾಣೆಯ ಎಸ್ಐ ಸಿದ್ಧರಾಜು, ಈಗಲೂ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಪೇದೆಗಳಾದ ರೇವಣ್ಣ, ದೇವರಾಜೇಗೌಡ ಮತ್ತು ನಿಂಗರಾಜು ವಿರುದ್ಧ ಕೋರ್ಟ್ ಮೂಲಕ ಖಾಸಗಿ ದೂರು ಸಲ್ಲಿಸಿದ ಹಿನ್ನಲೆ ಕೋರ್ಟ್ ಆದೇಶದಂತೆ ನಾಲ್ವರು ಪೊಲೀಸರ ವಿರುದ್ಧ ಕಿಕ್ಕೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಚುಜ್ಜಲಕ್ಯಾತನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಾಲಯದ ಅರ್ಚಕ ಪೃಥ್ವಿ ಪ್ರವೀಣ್ ಕುಮಾರ್ ತಿಳಿಸಿದ್ದಾರೆ.ಪಟ್ಟಣದ …

Read More »

ಹೂವಿನ ರಾಮಣ್ಣ ಹೃದಯಾಘಾತದಿಂದ ನಿಧನ

ಮಂಡ್ಯ: ಪಟ್ಟಣದ ಕೃಷ್ಣರಾಜಪೇಟೆ ತಾಲ್ಲೂಕಿನ ಶಾತ್ತದ ವೈಷ್ಣವ ಮಹಾಸಭಾದ ಮುಖಂಡರು, ಪಟ್ಟಣದ ಜನಪ್ರಿಯ ಹೂವಿನ ವ್ಯಾಪಾರಿಗಳಾದ ಊಚನಹಳ್ಳಿ ರಾಮಣ್ಣ(74) ಅವರು ಹೃದಯಾಘಾತದಿಂದ ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ನಿಧನರಾದರು.ಇಂದು ಬೆಳಿಗ್ಗೆ 10 ಗಂಟೆಗೆ ಮೃತ ರಾಮಣ್ಣನವರ ಶವ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ… ಮೃತರು ಪತ್ನಿ ಜಯಮ್ಮ ಪುತ್ರರಾದ ಯೋಗೇಶ್, ಶ್ರೀನಿವಾಸ್ ಮತ್ತು ಪುತ್ರಿ ಪದ್ಮಾ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಸಮಾಜಸೇವಕರು, ಪುರಸಭೆ ಕುವೆಂಪು ವಾಣಿಜ್ಯ ಮಳಿಗೆಗಳ …

Read More »