Breaking News

ಕರ್ನಾಟಕ

ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ದನದ ಕೊಟ್ಟಿಗೆ.‌

ಕೋಲಾರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ದನದ ಕೊಟ್ಟಿಗೆಗೆ ಬೆಂಕಿ ಹೊತ್ತಿರುವ ಘಟನೆ ಕೋಲಾರದ ಬಂಗಾರಪೇಟೆ ತಾಲ್ಲೂಕಿನ ಕಾರಹಳ್ಳಿ ತೋಟದ ಮನೆಗಳ ಬಳಿ ನಡೆದಿದೆ.ಶ್ರೀನಿವಾಸ್ ಗೆ ಸೇರಿದ ದನದಕೊಟ್ಟಿಗೆಯಲ್ಲಿದ್ದ ಒಂದು ಹಸು ಜೀವಂತ ಸಮಾಧಿಯಾಗಿದ್ದು, ಟ್ರ್ಯಾಕ್ಟರ್ ಹಾಗೂ ಕೃಷಿ ಬಳಕೆ ಉಪಕರಣಗಳು ಭಸ್ಮಗೊಂಡಿವೆ.‌ ಬೆಸ್ಕಾಂತಾಲ್ಲೂಕಿನಾದ್ಯಂತ ವಿದ್ಯುತ್ ವ್ಯತ್ಯಯದ ಪ್ರಕಟಣೆ ಹೊರಡಿಸಿದ್ದರೂ ವಿದ್ಯುತ್ ಅವಘಡ ಹೇಗೆ ಸಂಭವಿಸಿತು ಎಂದು ಸ್ಥಳೀಯರು ಘಟನೆಗೆ ಕಾರಣ ಹುಡುಕಾಡುತ್ತಿದ್ದಾರೆ.ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ, ಬೆಂಕಿ …

Read More »

ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ.

ಮಂಡ್ಯ: ಮದ್ದೂರು ಕೆರೆ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬರುವ 14 ಹಳ್ಳಿಗಳಿಗೆ ನೀರು‌ ಒದಗಿಸಲು ಮದ್ದೂರು ಕೆರೆಯನ್ನು ಬಳಸಿ ಕೆರೆಯ ಸ್ವರೂಪವನ್ನು ಹಾಳುಗೆಡುವಿದ ಸರ್ಕಾರದ ನೀತಿಯನ್ನು ಖಂಡಿಸಿ ಇಂದು ಪ್ರತಿಭಟನೆ ಕೈಗೊಳ್ಳಲಾಯಿತು.ಮದ್ದೂರು ತಾಲೂಕಿನ ದೇಶಹಳ್ಳಿ,ಚಾಮನಹಳ್ಳಿ,ಶಿವಪುರ,ಮದ್ದೂರು,ಚನ್ನೇಗೌಡನದೊಡ್ಡಿ,ಗೊರವನಹಳ್ಳಿ,ಚನ್ನಸಂದ್ರ,ವೈದ್ಯನಾಥಪುರ,ನಗರೆಕೆರೆ,ಸೋಂಪುರ,ಮಾಲಗಾರನಹಳ್ಳಿ,ಅಜ್ಜಹಳ್ಳಿ,ಉಪ್ಪಿನಕೆರೆ,ತೊರೆಚಾಕನಹಳ್ಳಿ, ಇನ್ನು ಹಲವು ಗ್ರಾಮಗಳ ರೈತರು ತಮ್ಮ ಬೆಳೆಗಳಿಗೆ ಆಶ್ರಯಿಸಿದ್ದ ಮದ್ದೂರು ಕರೆಯ ನೀರನ್ನು ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ ಹೆಸರಿನಲ್ಲಿ ಕೆರೆಯ ಸ್ವರುಪವನ್ನ ಕೆಡಿಸಿ ಕೆರೆ ಅಚ್ಚುಕಟ್ಟು ವ್ಯಾಪ್ತಿಯ 14 ಹಳ್ಳಿಗಳ ರೈತರ ಬದುಕನ್ನು …

Read More »

ನೀರಿಗಾಗಿ ಬೆಂಗಳೂರಿಗರು ವಲಸೆ ಹೋಗುವ ಕಾಲ ದೂರವಿಲ್ಲ.

ಚಿತ್ರದುರ್ಗ: ನಾಳೆ ನೀರು ಸಿಗದ ಕಾರಣಕ್ಕಾಗಿಯೇ ಬೆಂಗಳೂರಿಗೆ ಹೋಗಿ ನೆಲೆಸಿರುವ ಜನ ವಾಪಾಸು ಬರುವ ಕಾಲ ದೂರವಿಲ್ಲ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಬರಮುಕ್ತ ಕರ್ನಾಟಕ ಆಂದೋಲನ ಸಮಿತಿ, ಶ್ರೀಮುರುಘಾಮಠ ಹಾಗು ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯ, ಚಿತ್ರದುರ್ಗ ಇವರುಗಳ ಸಹಯೋಗದಲ್ಲಿ ಮುರುಘಾಮಠದ ಅನುಭವ ಮಂಟಪದಲ್ಲಿ ಆಯೋಜಿಸಲಾಗಿದ್ದ ತುಂಗ-ಭದ್ರ ಕಣಿವೆ ಮಳೆನೀರು ಕೊಯ್ಲಿನ ಅರಿವಿಗಾಗಿ ಒಂದು ದಿನದ ಅಧ್ಯಯನ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿದ ಮುರುಘಾ ಶರಣರು, ರಾಜ್ಯದ ಕೆಲ …

Read More »

ರೈತರ ಸಂಕಷ್ಟ ಬಗೆಹರಿಸಲು ಟರ್ಮಿನಲ್ ಗೆ ಪ್ರಸ್ತಾವನೆ: ಡಿ.ಕೆ.ಸುರೇಶ

ಹೆನ್ನಾಗರ: ಈ ಬಾರಿ ರಾಜ್ಯದಲ್ಲಿ ಮಳೆ ಕೈ ಕೊಟ್ಟ ಕಾರಣ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಕೇಂದ್ರದ ಪ್ರಾಧಿಕಾರ ಟ್ರಿಮಿನಲ್ ನಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಿದ್ದೇವೆ,ಕೆಲವು ಸಂಸತ್ ಸದಸ್ಯರು ಸಹ ಹೆಚ್ಚುವರಿ ನೀರಿನ ಅವಶ್ಯಕತೆ ಇದೆ ಎಂದು ಲೋಕಸಭೆಯಲ್ಲಿ ಪ್ರಸ್ತಾವನೆಯನ್ನು ಮಾಡಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಸಂಸದರಾದಡಿಕೆ ಸುರೇಶ ತಿಳಿಸಿದರು.ಇಂದು ಬೆಂಗಳೂರು ಹೊರವಲಯ ಹೆನ್ನಾಗರ ಗ್ರಾಮಪಂಚಾಯಿತಿ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಈ ಬಾರಿ ರಾಜ್ಯದಲ್ಲಿ ಸರಿಯಾಗಿ ಮಳೆ ಇಲ್ಲದ ಕಾರಣ …

Read More »

ಗೋಕರ್ಣಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಜನಾರ್ದನ ಪೂಜಾರಿ.

ಮಂಗಳೂರು: ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಇಂದು ಸಂಜೆ ಮಾಜಿ ಕೇಂದ್ರ ಸಚಿವ ಹಾಗೂ ಮಂಗಳೂರು ದಸರಾ ರೂವಾರಿ ಜನಾರ್ಧನ ಪೂಜಾರಿ ಭೇಟಿ ನೀಡಿ ದೇವರ ದರ್ಶನ ಪಡೆದರು .ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು .ಗೋಕರ್ಣನಾಥ ದೇವರ ಮುಂದೆ ನಿಂತು ಮಾತನಾಡಿದ ಜನಾರ್ಧನ ಪೂಜಾರಿ ನಾನು ತಪ್ಪು ಮಾಡಿದ್ದೇನೆ ನನ್ನನ್ನು ಕ್ಷಮಿಸಿ ಎಂದು ಮೊರೆಯಿಟ್ಟರು.ಈ ಬಾರಿಯ ಲೋಕಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರು ಗೆಲ್ಲದಿದ್ದರೆ …

Read More »

ಜಮೀರ್ ನನ್ನು ಲಾಕಪ್ ಗೆ ಹಾಕಿದರೆ ಸತ್ಯ ಹೊರಬೀಳಲಿದೆ.

ಚಿತ್ರದುರ್ಗ: ಬಸ್ ಸ್ಟಾಂಡ್ ನಲ್ಲಿ ಪಿಕ್ ಪಾಕೇಟ್ ಮಾಡುವವರನ್ನು ಲಾಕಪ್ ನಲ್ಲಿ ಹಾಕಿ ಹೊಡೆದು ವಸೂಲಿ ಮಾಡ್ತಾರೆ. ಹಾಗೇ ಜಮೀರ್ ಅವರನ್ನ ಪೊಲೀಸರು ಲಾಕಪ್ ನಲ್ಲಿ ಹಾಕಿ ಹೊದ್ದರೆ ಸತ್ಯ ಹೊರ ಬರುತ್ತೆ ಎಂದು ಬಿಜೆಪಿ ನಾಯಕ ಕೆ.ಎಸ್ ಈಶ್ವರಪ್ಪ ಜಮೀರ್ ವಿರುದ್ಧ ವಾಗ್ದಾಳಿ ನಡೆಸಿದರು.ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು,ಕೇವಲ ಎಸ್ ಐಟಿ ತನಿಖೆಯಿಂದ ಸತ್ಯ ಹೊರ ಬರಲ್ಲ. ಹೀಗಾಗಿ ಕ್ಯಾಬಿನೆಟ್ ಯಿಂದ ಕೂಡಲೇ ಜಮೀರ್ ಅವರನ್ನ ಕೈ ಬಿಡಬೇಕು …

Read More »

ಚಿಕ್ಕೋಡಿ ಎಸಿ, ತಹಶಿಲ್ದಾರರಿಂದ ಕೃಷ್ಣಾ ನದಿ ಬ್ಯಾರೇಜ ಪರಿಶೀಲನೆ.

ಚಿಕ್ಕೋಡಿ: ಕೃಷ್ಣಾ ನದಿಗೆ ಒಳ ಹರಿವು ಜಾಸ್ತಿಯಾಗಿದ ಹಿನ್ನೆಲೆಯಲ್ಲಿ ಎಸಿ, ಮತ್ತು ತಹಶಿಲ್ದಾರ ಕೃಷ್ಣಾ ನದಿ ಮೇಲಿನ ಬ್ಯಾರೆಜಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿಕ್ಕೋಡಿ ತಹಸಿಲ್ದಾರ್ ಸಂತೋಷ ಬಿರಾದಾರ್ ಹಾಗೂ ಎಸಿ ರವೀಂದ್ರ ಕರಲಿಂಗನವರ ರಾಜಾಪುರ ಬ್ಯಾರೇಜ್ಗೆ ಭೇಟಿ ನೀಡಿದರು. ‌ ಮಹಾರಾಷ್ಟ್ರದ ಶಿರೋಳ ತಾಲೂಕಿನ ರಾಜಾಪುರ ಬ್ಯಾರೇಜ್, ಕೃಷ್ಣಾ ನದಿಯ ಒಳ ಹರಿವಿನ ಪ್ರಮಾಣ ಹೆಚ್ಚುತ್ತಲೇ ಇದೆ. ಸಧ್ಯ ನೀರಿನ ಪ್ರಮಾಣ ೨೦ ಸಾವಿರ ಕ್ಯೂಸೇಕ್ ನಷ್ಟು …

Read More »

ರಜೆ ಮಜಾ ಮಾಡಲು ಹೋಗಿ ವಿಧಿವಶರಾದ ವಿದ್ಯಾರ್ಥಿಗಳು.

ಚಿಕ್ಕಬಳ್ಳಾಪುರ: ದಂಡಿಗಾನಹಳ್ಳಿ ಜಲಾಶಯದಲ್ಲಿ ಮುಳುಗಿ ವಿದ್ಯಾರ್ಥಿಗಳಿಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನಲ್ಲಿ ನಡೆದಿದೆ.ಬೆಂಗಳೂರು ಮೂಲದ ಸತೀಶ ಶಿವಕುಮಾರ್ (23),ಕೇರಳ ಮೂಲದ ಅಭಿಲಾಶ(23) ಸಾವನ್ನಪ್ಪಿರುವ ವಿದ್ಯಾರ್ಥಿಗಳು.ಶಾಲಾ ಕಾಲೇಜುಗಳು ರಜೆ ಇರುವ ಕಾರಣ ಇಂದು ದಂಡಿಗಾನಹಳ್ಳಿ ಜಲಾಶಯಕ್ಕೆ ಐವರು ಸ್ನೇಹಿತರು ಮಜಾ ಮಾಡಲು ತೆರಳಿದ್ದಾರೆ. ಈ ವೇಳೆ ನಡು ನೀರಿನಲ್ಲಿ ಮುಳುಗಿ ಶಿವಕುಮಾರ ಮತ್ತು ಅಭಿಲಾಶ ಮೃತಪಟ್ಟಿದ್ದು, ರಕ್ಷಿತಾ, ಕೇವಿನ್, ಭುವನ್ ಪ್ರಾಣಾಪಯದಿಂದ ಪಾರಾಗಿದ್ದಾರೆ.ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ …

Read More »

ಪೈಲಟ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

ಮಂಗಳೂರು: ಮಂಗಳೂರಿನಲ್ಲಿ ಲ್ಯಾಂಡಿಂಗ್ ವೇಳೆ ರನ್ ವೇಯಿಂದ ಹೊರಜಾರಿದ ವಿಮಾನವೊಂದು ಭಾರೀ ಅನಾಹುತದಿಂದ ಪಾರಾಗಿದೆ.‌ದುಬೈನಿಂದ ಮಂಗಳೂರಿನ ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ – 380 ವಿಮಾನವು ಲ್ಯಾಂಡಿಂಗ್ ಆಗುವ ವೇಳೆ ರನ್ ವೇಯಿಂದ ಹೊರಕ್ಕೆ ಜಾರಿದೆ.‌ ಈ ವೇಳೆ ಸಮಯಪ್ರಜ್ಞೆ ಮೆರೆದ ವಿಮಾನದ ಪೈಲಟ್ ಆಗುತ್ತಿದ್ದ ಅನಾಹುತವನ್ನು ತಪ್ಪಿಸಿದ್ದಾರೆ. ದುಬೈನಿಂದ 183 ಪ್ರಯಾಣಿಕರನ್ನು ಹೊತ್ತು ತರುತ್ತಿದ್ದ ವಿಮಾನವು ಮಂಗಳೂರು ಏರ್ ಪೋರ್ಟ್ ನಲ್ಲಿ ಲ್ಯಾಂಡ್ …

Read More »

ಭದ್ರಾ ನೀರಿಗಾಗಿ ಆಗ್ರಹಿಸಿ ಪ್ರತಿಭಟನೆ. ‌

ಚಿತ್ರದುರ್ಗ:ವಿವಿ ಸಾಗರ ಅಣೆಕಟ್ಟು ರಕ್ಷಣೆ ,ಹಾಗೂ ಭದ್ರಾ ನೀರು ಪೂರೈಕೆಗಾಗಿ ಆಗ್ರಹಿಸಿ ಇಂದು ವಿವಿಧ ರೈತಸಂಘ ಗಳು,ಕನ್ನಡಪರ ಸಂಘಟನೆಹಳಿಂದ ಬಂದ್ ಗೆ ಖರೆ ನೀಡಿದ್ದು, ಚಿತ್ರದುರ್ಗದ ಹಿರಿಯೂರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.ಬೇಡಿಕೆ ಈಡೇರಿಕೆಗೆ ಆಗ್ರಹಿಸಿದ ಪ್ರತಿಭಟನಾಕಾರರು ಹಿರಿಯೂರು ನಗರದಲ್ಲಿ ಬಂದ್ ಮಾಡುವ ಮೂಲಕ ಪ್ರತಿಭಟಿಸಿದರು. ಬಂದ್ ಹಿನ್ನೆಲೆಯಲ್ಲಿ ಬಿಇಒ ನಗರ ವ್ಯಾಪ್ತಿಯ ಶಾಲೆಗಳಿಗೆ ಇಂದು ರಜೆ ಘೋಷಣೆ ಮಾಡಿದ್ದಾರೆ.ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಬಂದ್ ಗೆ ಬೆಂಬಲ ಸೂಚಿಸಿದ್ದಾರೆ.

Read More »