Breaking News

ಕರ್ನಾಟಕ

ಫಲಿತಾಂಶಕ್ಕೂ ಮುನ್ನವೇ ಸಿದ್ಧವಾಯ್ತು ಜಯಭೇರಿ ಬ್ಯಾನರ್!

ರಾಮನಗರ: ರಾಮನಗರ ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ಮೈತ್ರಿ ಅಭ್ಯರ್ಥಿಯಾಗಿರುವ ಅನಿತಾ ಕುಮಾರಸ್ವಾಮಿ ಗೆಲುವು ಖಚಿತವಾಗಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಜಯಭೇರಿ ಬ್ಯಾನರ್ ಸಿದ್ಧವಾಗಿಸಿಕೊಂಡಿದ್ದಾರೆ.ಮೊದಲನೇ ಸುತ್ತಿನಿಂದಲೂ ಮುನ್ನಡೆ ಸಾಧಿಸಿರುವ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ನಾಲ್ಕನೇ ಸುತ್ತಿನ ಮತಎಣಿಕೆಯಲ್ಲಿ 20 ಸಾವಿರ ಮತಗಳ ಅಂತರ ಕಾಯ್ದುಕೊಂಡಿದ್ದಾರೆ. ಹೀಗಾಗಿ ಗೆಲುವು ಬಹುತೇಕ ಖಚಿತವಾಗಿದೆ.ಅನಿತಾ ಕುಮಾರಸ್ವಾಮಿ ಅವರಿಗೆ ಪ್ರಮುಖ ಸ್ಪರ್ಧಿಯಾಗಿದ್ದ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಲ್.ಚಂದ್ರಶೇಖರ್ ಅವರು, ಮತದಾನ ಇನ್ನೇನು ಎರಡೇ ದಿನಗಳಿರುವಾಗ ಚುನಾವಣಾ ಕಣದಿಂದ …

Read More »

ಕುಮಾರಸ್ವಾಮಿಯವ್ರೇ, ಟಿಪ್ಪು ಜಯಂತಿ ಆಚರಿಸಿ ಸಿದ್ದರಾಮಯ್ಯ ಅಧಿಕಾರ ಕಳೆದ್ಕೊಂಡರು’

ಮೈಸೂರು: ಟಿಪ್ಪು ಜಯಂತಿಯನ್ನ ಆಚರಣೆ ಮಾಡದಿರಲು ಈ ಹಿಂದೆ ಅಂದಿನ ಸಿಎಂ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಿದ್ದೆ. ಆದ್ರೆ ಅವರು ಟಿಪ್ಪು ಜಯಂತಿಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡು ಆಚರಣೆ ಮಾಡಿ ಅಧಿಕಾರ ಕಳೆದುಕೊಂಡರು. ಈಗಲೂ ಕಾಲ ಮಿಂಚಿಲ್ಲ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಎಚ್ಚೆತ್ತುಕೊಂಡು ಆಚರಣೆ ನಿಲ್ಲಿಸುತ್ತಾರೆ ಅಂತ ಅಂದ್ಕೊಂಡಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ಎಚ್ಚರಿಸಿದ್ದಾರೆ.ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು​, ಟಿಪ್ಪು ಜಯಂತಿ ಕಾರ್ಯಕ್ರಮದ ಆಮಂತ್ರಣ ಪತ್ರದಲ್ಲಿ ನನ್ನ …

Read More »

ಯಡಿಯೂರಪ್ಪಗೆ ಮನಸುಗಳನ್ನು ಕಟ್ಟಲು ಆಗೋಲ್ಲ’ ರಾಜ್ಯ ಬಿಜೆಪಿ ಉಪಾಧ್ಯಕ್ಷ

ಶಿವಮೊಗ್ಗ: ಯಡಿಯೂರಪ್ಪ ಅವರು ಸರ್ಕಾರ ಉಳಿಸಬಹುದು ಹಾಗೆಯೇ ಕೆಡವಬಹುದು. ಆದ್ರೆ, ಮನಸುಗಳನ್ನು ಕಟ್ಟಲು ಆಗುವುದಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ. ಭಾನುಪ್ರಕಾಶ್ ಹೇಳಿದ್ದಾರೆ.ಶಿವಮೊಗ್ಗ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ. ಭಾನುಪ್ರಕಾಶ್ ಹಾಗೂ ಕ್ರೀಡಾ ಪ್ರಾಧಿಕಾರದ ಮಾಜಿ ಉಪಾಧ್ಯಕ್ಷ ಗಿರೀಶ್ ಪಟೇಲ್ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಎಂ.ಬಿ. ಭಾನುಪ್ರಕಾಶ್, ನಾನು ರಾಜ್ಯ ಉಪಾಧ್ಯಕ್ಷ ಸ್ಥಾನವನ್ನು ಇಂದಿಗೂ ಒಪ್ಪಿಕೊಂಡಿಲ್ಲ. ಇದ್ದಕ್ಕಿದ್ದಂತೆ ಒಂದೂವರೆ …

Read More »

ಸಾಲ ರೈತರಿಗೆ ಬ್ಯಾಂಕಿನಿಂದ ಅರೆಸ್ಟ್ ವಾರೆಂಟ್; ಪ್ರತಿಭಟನೆ

ಬೆಳಗಾವಿಯ ಸವದತ್ತಿ ರೈತರಿಗೆ ಕೋಲ್ಕತ್ತಾ ಕೋರ್ಟ್ ವಾರೆಂಟ್ ಜಾರಿಗೊಳಿಸಿದ್ದು, ಫೆ.18, 2019 ರ ವೇಳೆಗೆ ಕೋರ್ಟ್ ಎದುರು ಹಾಜರುಪಡಿಸುವಂತೆ ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಿದೆ.ಬೆಳಗಾವಿ: ಬ್ಯಾಂಕಿನಿಂದ ಸಾಲ ಪಡೆದು ಮರುಪಾವತಿಸದ ರೈತರಿಗೆ ಆಕ್ಸಿಸ್ ಬ್ಯಾಂಕ್ ಕೋರ್ಟ್ ಮೂಲಕ ಅರೆಸ್ಟ್ ವಾರೆಂಟ್ ಜಾರಿಮಾಡಿರುವುದನ್ನು ವಿರೋಧಿಸಿ ಬೈಲಹೊಂಗಲದ ಆಕ್ಸಿಸ್ ಬ್ಯಾಂಕ್ ಗೆ ಬೀಗ ಜಡಿದು ರೈತರು ಪ್ರತಿಭಟನೆ ನಡೆಸಿದರು.ಈಗಾಗಲೇ ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿ ಆದೇಶ ಹೊರಡಿಸಿದ್ದರೂ, ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ …

Read More »

ಸಿಸಿಬಿ ಪೊಲೀಸರಿಂದ ನಟ ಅರೆಸ್ಟ್

ಬೆಂಗಳೂರು: ಅಕ್ರಮ ಪಿಸ್ತೂಲ್​ ಹೊಂದಿದ್ದ ಆರೋಪದ ಅಡಿ ಸರ್ಕಾರ್​ ಸಿನಿಮಾದ ನಟ ಜಗದೀಶ್​ ಹೊಸ್ಮಠ ಸೇರಿದಂತೆ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅಕ್ಟೋಬರ್ 23 ರಂದು ಸಂಜೆ ಖಚಿತ ಮಾಹಿತಿ ಆಧರಿಸಿ ಜಗದೀಶ್ ನಗರದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಜಗದೀಶ್ ಹೊಸ್ಮಠ ಅಲಿಯಾಸ್​ ಜಾಗ್ವಾರ್ ಜಗ್ಗ ಹಾಗೂ ಮೊಹಮ್ಮದ್ ನಿಜಾಮ್​ನನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಂದು ಪಿಸ್ತೂಲ್ ಸೇರಿ 10 ಬುಲೆಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ.ಇನ್ನು ಬಂಧಿತ ಜಗದೀಶ್, ನಿಜಾಮ್​ ವಿಚಾರಣೆ ನಡೆಸಿದ …

Read More »

ವಾಚ್ ಬಿಗ್ ಟ್ವಿಸ್ಟ್, ಪ್ರಕರಣ ಮುಚ್ಚಿ ಹಾಕಲು ಸಿದ್ದರಾಮಯ್ಯ ಯತ್ನ?

ಬೆಂಗಳೂರು: ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಬೆಂಕಿ ಬಿರುಗಾಳಿ ಎಬ್ಬಿಸಿದ್ದ ಹ್ಯೂಬ್ಲೋಟ್ ವಾಚ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್​ ಸಿಕ್ಕಿದೆ. ಹ್ಯೂಬ್ಲೋಟ್ ವಾಚ್ ಕೊಡುಗೆ ಸಂಬಂಧ ಸಿದ್ದರಾಮಯ್ಯ ವಿರುದ್ಧ ನಟರಾಜ್ ಶರ್ಮಾ ಎಂಬುವವರು ACBಗೆ ದೂರು ನೀಡಿದ್ದರು. ದೂರುದಾರ ಶರ್ಮಾ ಅವರು ಇದೀಗ ಗಿರೀಶ್ ಚಂದ್ರವರ್ಮಾ ಸಲ್ಲಿಸಿದ ವಾಚ್ ಬಿಲ್ ನಕಲಿ ಎಂದು ಆರೋಪಿಸಿದ್ದಾರೆ.ಇದರಿಂದ ಹ್ಯೂಬ್ಲೋಟ್ ವಾಚ್ ಹಗರಣ ಮುಚ್ಚಿ ಹಾಕಲು ಸಿದ್ದರಾಮಯ್ಯ ಯತ್ನಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. …

Read More »

ಎರಡು ವಿಧಾನಸಭೆ, ಮೂರು ಲೋಕಸಭಾ ಕ್ಷೇತ್ರಗಳ ಉಪಸಮರಕ್ಕೆ ಕ್ಷಣಗಣನೆ; 40 ಅಭ್ಯರ್ಥಿಗಳು ಕಣದಲ್ಲಿ..

ಬೆಂಗಳೂರು: ಎರಡು ವಿಧಾನಸಭೆ ಮತ್ತು ಮೂರು ಲೋಕಸಭಾ ಕ್ಷೇತ್ರಗಳ ಉಪಸಮರಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ. ಒಟ್ಟು ಐದು ಕ್ಷೇತ್ರಗಳಿಗೆ ಶನಿವಾರ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದ್ದು, ಒಟ್ಟು 40 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.ಎರಡು ವಿಧಾನಸಭಾ ಕ್ಷೇತ್ರಜಮಖಂಡಿ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆ ಕಣದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಆನಂದ್ ನ್ಯಾಮೇಗೌಡ, ಬಿಜೆಪಿಯ ಶ್ರೀಕಾಂತ್ ಕುಲಕರ್ಣಿ ಸೇರಿದಂತೆ 10 ಮಂದಿ ಕಣದಲ್ಲಿದ್ದಾರೆ. ಇನ್ನು, ರಾಮನಗರದಲ್ಲಿ ಮೈತ್ರಿ …

Read More »

ವಿಜಿಗೆ ತೀರದ ಸಂಕಷ್ಟ, ಡಿಸಿಪಿ ಅಣ್ಣಾಮಲೈಯಿಂದ ವಿಚಾರಣೆ..!

ಬೆಂಗಳೂರು: ಪತ್ನಿಯರ ಗಲಾಟೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್​​​ಗೆ ಇನ್ನೂ ಸಂಕಷ್ಟ ತೀರಿಲ್ಲ. ದುನಿಯಾ ವಿಜಯ್​ ಪತ್ನಿ ನಾಗರತ್ನ ಹಾಗೂ ಕೀರ್ತಿ ಗೌಡ ಗಲಾಟೆ ಪ್ರಕರಣದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ವಿಜಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಶಾಂತಿ, ಕಾನೂನು ಸುವ್ಯವಸ್ಥೆ ಹದಗಡೆಸಿದ ಆರೋಪದ ಮೇಲೆ ದುನಿಯಾ ವಿಜಯ್​ ಹಾಗೂ ನಾಗರತ್ನ ವಿರುದ್ಧ ಸಿಆರ್​ಪಿಸಿ ಸೆಕ್ಷನ್ 107 ಹಾಕಲಾಗಿದೆ. ಸೆಕ್ಷನ್ ಹಾಕಿ ವಾರ ಕಳೆದರೂ ದುನಿಯಾ ವಿಜಯ್ ಬಂದು ಮುಚ್ಚಳಿಕೆ …

Read More »

ಕ್ಷೇತ್ರದಲ್ಲೇ ಇವರಿಗಿಲ್ಲ ಮತದಾನ ಭಾಗ್ಯ; ಯಾಕೆ ಗೊತ್ತಾ?

ರಾಮನಗರ ವಿಧಾನಸಭೆ ಉಪಚುನಾವಣೆ ಅಖಾದಲ್ಲಿರುವ ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಹಾಗೂ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಅವರು ತಮ್ಮ ಸ್ವ ಕ್ಷೇತ್ರದಲ್ಲಿಯೇ ಮತದಾನ ಹಕ್ಕು ಚಲಾಯಿಸಲು ಸಾಧ್ಯವಾಗದಂತಾಗಿದೆ.ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಹಾಗೂ ಇತ್ತೀಚೆಗಷ್ಟೇ ಬಿಜೆಪಿ ತೊರೆದು ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಹೇಳಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದ ಅಭ್ಯರ್ಥಿ ಎಲ್.ಚಂದ್ರಶೇಖರ್ ಅವರ ಮತಗಳು ಮಾಗಡಿ ವಿಧಾನಸಭಾ ಕ್ಷೇತ್ರದ ಬಿಡದಿ ಹೋಬಳಿ ವ್ಯಾಪ್ತಿಯಲ್ಲಿ ಬರುವುದರಿಂದ ರಾಮನಗರ ಕ್ಷೇತ್ರದಲ್ಲಿ ಮತದಾನ …

Read More »

ಪೊಲೀಸರ ಬಗ್ಗೆ ನಿಮ್ಮ ಅಭಿಪ್ರಾಯವೇನು..?, ಐಜಿಪಿ ರೂಪಾ ಪ್ರಶ್ನೆಗೆ ಜನರ ಉತ್ತರವೇನು

ಬೆಂಗಳೂರು: ಐಪಿಎಸ್ ಅಧಿಕಾರಿ ಐಜಿಪಿ ಡಿ.ರೂಪಾ ಪೊಲೀಸರ ಬಗ್ಗೆ ಸರ್ವೇ ನಡೆಸಿದ್ದಾರೆ. ತಮ್ಮ ಟ್ವಿಟರ್​ ಖಾತೆಯಲ್ಲಿ ನಿನ್ನೆ ಸರ್ವೇ ಮಾಡಿದ್ದರು.ಪೊಲೀಸರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದ ಡಿ.ರೂಪಾ ಪ್ರಶ್ನೆ ಒಂದನ್ನು ಪೋಸ್ಟ್​ ಮಾಡಿದ್ದರು. ಅವರು ಕೇಳಿದ್ದ ಪ್ರಶ್ನೆಗೆ 24 ಗಂಟೆಯಲ್ಲಿ 11,544 ಮಂದಿ ವೋಟ್ ಮಾಡಿದ್ದರು. ವೋಟ್​ ಮಾಡಿದ ಹೆಚ್ಚಿನವರಿಂದ ಪೊಲೀಸರ ಬಗ್ಗೆ ನಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನಲಾಗಿದೆ.ಶೇ. 51 ರಷ್ಟು ಮಂದಿ ಪೊಲೀಸರ ಜತೆ ಸಂಪರ್ಕ ನಕಾರಾತ್ಮಕ ಎಂದು …

Read More »