Breaking News

ಕರ್ನಾಟಕ

ಮತದಾನ ಜಾಗೃತಿಗೆ ವಿನೂತನ ಅಭಿಯಾನ: ಅಂತರರಾಷ್ಟ್ರೀಯ ಶೂಟರ್ಸ್ ಈಗ ರಾಯಭಾರಿ..!

ಹುಬ್ಬಳ್ಳಿ: ಅದೆಷ್ಟೋ ಮಾತದಾನದ ಬಗ್ಗೆ ಜಾಗೃತಿ ಮೂಡಿಸಿದರು ಬಹುತೇಕ ಜನರು ಮತದಾನದಿಂದ ದೂರ ಉಳಿಯುತ್ತಿದ್ದರು‌.‌ ಈ ನಿಟ್ಟಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ನಾನಾ ಕಸರತ್ತು ನಡೆಸುತ್ತಿರುವ ಸ್ವಿಪ್‌ ಕಮಿಟಿ, ಇದೀಗ ಮತದಾನ ಹೆಚ್ಚಿಸುವುದಕ್ಕಾಗಿ ರಾಯಬಾರಿಗಳನ್ನಾಗಿ ಅಂತಾರಾಷ್ಟ್ರೀಯ ಪ್ಯಾರಾ ಶೂಟರ್ಸ್‌ಗಳನ್ನು ಆಯ್ಕೆ ಮಾಡಿದೆ. ಹೌದು..ಪ್ರತಿ ಚುನಾವಣೆಗಳಲ್ಲೂ ಮತದಾನದ ಪ್ರಮಾಣ ಮಾತ್ರ ಹೆಚ್ಚಿಗೆ ಆಗುತ್ತಲೇ ಇಲ್ಲ. ಅದರಲ್ಲೂ ಸುಶಿಕ್ಷಿತರೇ ಮತದಾನದಿಂದ ದೂರ ಉಳಿಯುವುದು ಮಾಮೂಲಿ ಎಂಬಂತಾಗಿದೆ. ಹೀಗಾಗಿ ಚುನಾವಣಾ …

Read More »

ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಆರೋಪಿಯ ಟ್ರಾವೆಲ್ ಹಿಸ್ಟರಿ ಇಲ್ಲಿದೆ..

ಬೆಂಗಳೂರಿನ ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಪ್ರಕರಣದ ಆರೋಪಿಯಾದ ಮುಸಾವಿರ್‌ ಕೃತ್ಯದ ಬಳಿಕ ಪಶ್ಚಿಮ ಬಂಗಾಳದವರೆಗೆ ಬಸ್‌ನಲ್ಲೇ ಪ್ರಯಾಣಿಸಿದ್ದ ಎನ್ನುವ ಮಾಹಿತಿ ಈಗ ಹೊರಬಿದ್ದಿದೆ.. ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟದ ಬಳಿಕ ಆರೋಪಿ ಗೊರಗುಂಟೆಪಾಳ್ಯದ ಮುಖಾಂತರ ತುಮಕೂರು ತಲುಪಿದ್ದಾನೆ. ಆನಂತರ ಬಳ್ಳಾರಿಯ ಮುಖಾಂತರ ಕಲಬುರಗಿಗೆ ಪ್ರಯಾಣಿಸಿದ್ದಾನೆ. ಬಳಿಕ ಆಂಧ್ರಪ್ರದೇಶದ ನೆಲ್ಲೂರಿಗೆ ಬಸ್‌ನಲ್ಲೇ ತಲುಪಿದ್ದಾನೆ. ಇದಾದ ಬಳಿಕ ಒಡಿಶಾ ಮೂಲಕವಾಗಿ ಆತ ಪಶ್ಚಿಮ ಬಂಗಾಳಕ್ಕೆ ಹೋಗಿದ್ದಾನೆ ಎಂಬ ಮಾಹಿತಿ ಹೊರಬಿದ್ದಿದೆ.ಕಳೆದ ರಾತ್ರಿ ಎನ್‌ಐಎ …

Read More »

ಅಂತರ ರಾಜ್ಯ ಮಹಿಳಾ ಆರೋಪಿ ಬಂಧನ: 9.5. ಲಕ್ಷ ಚಿನ್ನಾಭರಣ ವಶಕ್ಕೆ ಪಡೆದ ಗೋಕುಲ ಠಾಣೆ ಖಾಕಿ ಪಡೆ..

ಹುಬ್ಬಳ್ಳಿ: ಬಸ್ಸು ಹತ್ತುವಾಗ ಮಹಿಳೆಯೊಬ್ಬರ ಬ್ಯಾಗನಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಅಂತರ ರಾಜ್ಯ ಮಹಿಳಾ ಆರೋಪಿತಳನ್ನು ಬಂಧಿಸುವಲ್ಲಿ ಗೋಕುಲ ರೋಡ್ ಪೊಲೀಸ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತಳಿಂದ ಕಳ್ಳತನ ಮಾಡಿದ 9,50,000 ಮೌಲ್ಯದ 139 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.ಹೌದು..ಹುಬ್ಬಳ್ಳಿ ಗೋಕುಲ ರೋಡ ಹೊಸ ಬಸ್ ನಿಲ್ದಾಣದ ಪ್ಲಾಟ ಫಾರ್ಮ್ ನಂ 4ರಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ಸನ್ನು ಹತ್ತುವಾಗ ಮಹಿಳೆಯೊಬ್ಬರು ಹೆಗಲಿಗೆ ಹಾಕಿಕೊಂಡಿದ್ದ ವ್ಯಾನಟಿ ಬ್ಯಾಗದ …

Read More »
Featured Video Play Icon

ಪ್ರಚಾರದ ತೆವಲಿಗಾಗಿ ಪ್ರಧಾನಿ ವಿರುದ್ಧ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡ್ತಾರೆ – ಕೇಂದ್ರ ಸಚಿವ ಜೋಶಿ ಕಿಡಿ…

ಹುಬ್ಬಳ್ಳಿ : ಮೋದಿ ಪ್ರಧಾನ ಮಂತ್ರಿಯಲ್ಲ, ಪ್ರಚಾರಮಂತ್ರಿ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿರುಗೇಟು ನೀಡಿದ್ದಾರೆ. ಕೇವಲ ಪ್ರಚಾರದ ತೆವಲಿಗಾಗಿ ಸಚಿವರು ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಟಾಂಗ್ ನೀಡಿದರು. ನಿಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯ ಕಾಂಗ್ರೆಸ್ ಪಕ್ಷವು ಇದೀಗ ಯಾವ ಸ್ಥಿತಿಯಲ್ಲಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಇಂತಹ ಹೇಳಿಕೆಗಳನ್ನು ನೀಡುವುದನ್ನು ಬಿಡಬೇಕು ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವಪ್ರಹ್ಲಾದ ಜೋಶಿ …

Read More »
Featured Video Play Icon

ದಿಂಗಾಲೇಶ್ವರರ ಮೇಲೆ ಅಪಾರ ಗೌರವವಿದೆ, ಹೈಕಮಾಂಡ್ ಚರ್ಚೆ ಬಗ್ಗೆ ಗೊತ್ತಿಲ್ಲ: ಸಚಿವ ಸಂತೋಷ ಲಾಡ್..

ಹುಬ್ಬಳ್ಳಿ: ದಿಂಗಾಲೇಶ್ವರ ಸ್ವಾಮೀಜಿಗೆ ಕಾಂಗ್ರೆಸ್ ಬಾಹ್ಯ ಬೆಂಬಲದ ಬಗ್ಗೆ ಹೈಕಮಾಂಡ್ ಚರ್ಚೆ ನಡೆಸಿರುವ ಬಗ್ಗೆ ನನಗೆ ಗೊತ್ತಿಲ್ಲ. ಸುಮಾರು ಹದಿನೈದು ದಿನದಿಂದ ನಾನು ಧಾರವಾಡದಲ್ಲಿಯೇ ಠಿಕಾಣಿ ಹೂಡಿದ್ದೆ. ದಿಂಗಾಲೇಶ್ವರರ ಬಗ್ಗೆ ನನಗೆ ಅಪಾರವಾಗಿ ಗೌರವವಿದೆ. ಸ್ವಾಮೀಜಿಗಳು ರಾಜಕೀಯಕ್ಕೆ ಬಂದಿದ್ದು, ಏನು ಬೇಕಾದರೂ ಬದಲಾವಣೆ ಆಗಬಹುದು ಎಂದು ಸಚಿವ ಸಂತೋಷ ಲಾಡ್ ಹೇಳಿದರು.ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನಮಗೆ ದಿಂಗಾಲೇಶ್ವರ ಶ್ರೀಗಳ ಬಗ್ಗೆ ಅಪಾರವಾದ ಗೌರವವಿದೆ. ರಾಜಕೀಯಕ್ಕೆ ಬಂದಿರುವುದರಿಂದ ಬಹುದೊಡ್ಡ …

Read More »

ಗದಗ ರಸ್ತೆಯ ಚೆಕ್ ಪೊಸ್ಟ್ ನಲ್ಲಿ ದಾಖಲೆ ರಹಿತ 2 ಲಕ್ಷ ರೂಪಾಯಿ ಪತ್ತೆ; ವಶಕ್ಕೆ ಪಡೆದ ಅಧಿಕಾರಿಗಳು…

ಹುಬ್ಬಳ್ಳಿ: ಜಿಲ್ಲೆಯ ಎಲ್ಲ ಚೆಕ್ ಪೋಸ್ಟ್ ಗಳಲ್ಲಿ ವಾಹನ ತಪಾಸಣೆ ತೀವ್ರಗೊಳಿಸಿದ್ದು, ಸಹಾಯಕ ಚುನಾವಣಾ ಅಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ಅವರ ನೇತೃತ್ವದಲ್ಲಿ ಗದಗ ರಸ್ತೆ ಚೆಕ್ ಪೋಸ್ಟ್ ದಲ್ಲಿ ವಾಹನ ತಪಾಸಣೆ ಸಂದರ್ಭದಲ್ಲಿ ದಾಖಲೆ ರಹಿತ ರೂ. 2 ಲಕ್ಷ ನಗದು ಹಣ ಪತ್ತೆ ಆಗಿದ್ದು, ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಗದಗ ರೋಡ್ ಚೆಕ್ ಪೋಸ್ಟ್ ನಲ್ಲಿ ವಾಹನಗಳ ತಪಾಸಣೆ ಸಂದರ್ಭದಲ್ಲಿ ಕೆಎ-05 ಎಇ-3422 ನಂಬರ ಕಾರಿನಲ್ಲಿ ತಿಪಟೂರು ನಿಂದ …

Read More »

ಹಳೇ ಹುಬ್ಬಳ್ಳಿ ಪೊಲೀಸರ ಖಡಕ್ ಕಾರ್ಯಾಚರಣೆ: ಐವರು ಕಳ್ಳರನ್ನು ಬಂಧಿಸಿದ ಖಾಕಿ…!

ಹುಬ್ಬಳ್ಳಿ; ಹಳೇಹುಬ್ಬಳ್ಳಿ ಪೊಲೀಸರು ಕಾರ್ಯಾಚರಣೆ ಮೂಲಕ 2 ಜನ ಸರಗಳ್ಳರ ಹಾಗೂ 3 ಜನ ಮನೆ ಕಳ್ಳರ ಬಂಧಿಸಿದ್ದು, 4,02,250 ರೂ ಮೌಲ್ಯದ 78 ಗ್ರಾಂ ಚಿನ್ನ, 65 ಗ್ರಾಂ ಬೆಳ್ಳಿ ಹಾಗೂ ಒಂದು ಮೋಟಾರ ಸೈಕಲ್ ವಶಕ್ಕೆ ತೆಗೆದುಕೊಂಡಿದ್ದಾರೆ. ಹೌದು.. ಇತ್ತೀಚೆಗೆ ಹಳೇಹುಬ್ಬಳ್ಳಿ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಹಾಗೂ ಮನೆ ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಪ್ರಕರಣಗಳು ದಾಖಲಾಗಿದ್ದವು. ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಪೊಲೀಸ್ …

Read More »
Featured Video Play Icon

ಲೋಕಸಭಾ ಚುನಾವಣೆ: ಚೆಕ್ ಪೋಸ್ಟ್ ಪರಿಶೀಲನೆ ವೇಳೆ 1.23 ಕೋಟಿ ಮೌಲ್ಯದ ವಸ್ತುಗಳ ವಶಕ್ಕೆ..!

ಹುಬ್ಬಳ್ಳಿ: ಧಾರವಾಡ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ಚೆಕ್ ಪೋಸ್ಟ್’ಗಳಲ್ಲಿ ಪರಿಶೀಲನೆ ವೇಳೆ ನಗದು ಸೇರಿದಂತೆ 1.23 ಕೋಟಿ ರೂ ಮೌಲ್ಯದ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಜೆ.ಆರ್.ಜೆ ಹೇಳಿದರು.ನಗರದಲ್ಲಿಂದು ಪಾಲಿಕೆ ಆವರಣದ ಸಭಾ ಭವನದಲ್ಲಿ ಪತ್ರಕರ್ತರಿಗೆ ಮಾಧ್ಯಮ ಕಾರ್ಯಗಾರ ನಡೆಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 38.50 ಲಕ್ಷ ಮೌಲ್ಯದ ಬಂಗಾರ, 18.71 ಲಕ್ಷ ರೂ ಮೌಲ್ಯದ ನಗದು, 28.29 ಲಕ್ಷ ಮೌಲ್ಯದ …

Read More »
Featured Video Play Icon

ಕಾಂಗ್ರೆಸ್ ತಮ್ಮ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ; ಸಚಿವ ಪ್ರಹ್ಲಾದ ಜೋಶಿ…

ಹುಬ್ಬಳ್ಳಿ: ಕಾಂಗ್ರೆಸ್ಸಿನವರು ಎಂದಿಗೂ ಕೂಡ ತಮ್ಮ ತಪ್ಪನ್ನು ತಾವು ಒಪ್ಪಿಕೊಳ್ಳುವುದಿಲ್ಲ. ಇವರ ಅರವತ್ತು ವರ್ಷದ ಸರ್ಕಾರದ ರೂಪುರೇಷೆಗಳನ್ನು ನೋಡಿದರೇ ನಿಜಕ್ಕೂ ನಮಗೆ ಒಂಥರ ನಗುಬರುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕೋಟ್ಯಾಂತರ ಹಣವನ್ನು ಲೂಟಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಐಟಿ ಅಧಿಕಾರಿಗಳು ನೋಟಿಸ್ ಕೊಡದೇ ಏನ ಮಾಡುತ್ತಾರೆ. 2016 ಹಾಗೂ 2019ರಲ್ಲಿ ದೊಡ್ಡ ಮಟ್ಟದ ಕ್ಯಾಶ್ ತೆಗೆದುಕೊಂಡಿದ್ದಾರೆ. …

Read More »
Featured Video Play Icon

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ಗ್ರಹಿಕೆಯಾಗಿದೆ. ಜೋಶಿಯವರಿಂದ ಅನ್ಯಾಯವಾಗಿಲ್ಲ; ಟೆಂಗಿನಕಾಯಿ…

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಂದ ಯಾವುದೇ ರೀತಿಯ ಅನ್ಯಾಯ ಆಗಿಲ್ಲ. ಶಿರಹಟ್ಟಿ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅವರಿಗೆ ತಪ್ಪು ಗ್ರಹಿಕೆ ಆಗಿದೆ ಎಂದು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಶಿರಹಟ್ಟಿ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅವರಿಗೆ ತಪ್ಪು ಮಾಹಿತಿ ಇದೆ ಯಾವುದೇ ರೀತಿಯ ಅನ್ಯಾಯ ಆಗಿಲ್ಲ ಲಿಂಗಾಯತ ನಾಯಕರಿಗೆ …

Read More »