Breaking News

ಕರ್ನಾಟಕ

ಹುಬ್ಬಳ್ಳಿಯಲ್ಲಿ ಅಂಗಡಿಗಳಿಗೆ ಕನ್ನಾ ಹಾಕುತ್ತಿದ್ದ ಅಂತರ್‌ರಾಜ್ಯ ಕಳ್ಳನ ಬಂಧಿಸುವಲ್ಲಿ ಯಶಸ್ವಿ…

ಹುಬ್ಬಳ್ಳಿ: ವಾಣಿಜ್ಯ ಹುಬ್ಬಳ್ಳಿಯ ಉಪನಗರ ಠಾಣೆ ಪೊಲೀಸರ ಕಾರ್ಯಾಚರಣೆ ನಡೆಸಿದ್ದು, ಅಂಗಡಿಗಳಿಗೆ ಕನ್ನಾ ಹಾಕುತ್ತಿದ್ದ ಅಂತರ್‌ರಾಜ್ಯ ಕಳ್ಳನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹರಾಷ್ಟ್ರದ ಅಕ್ಕಲಕೋಟೆಯ ಮಹೇಶ್‌ ಪೂಜಾರಿ ಬಂಧಿತ ಆರೋಪಿಯಾಗಿದ್ದು, ಪುಣೆಯಲ್ಲಿ ತಲೆಮರೆಸಿಕೊಂಡಿದ್ದ ಮಹೇಶ್ ಪೂಜಾರಿಯನ್ನು ಅರೆಸ್ಟ್ ಮಾಡಿದ್ದಾರೆ.ಹುಬ್ಬಳ್ಳಿಯ ವಿವಿದೆಡೆ ಅಂಗಡಿಗಳ ಬೀಗ ಒಡೆದು ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಯಶಸ್ವಿ ಕಾರ್ಯಾಚರಣೆ ಮೂಲಕ ವಶಕ್ಕೆ ಪಡೆದಿದ್ದು, ಬಂಧಿತನಿಂದ ಎರಡು ಲಕ್ಷ ನಗದು, ಕಳ್ಳತನಕ್ಕೆ ಬಳಸಿದ್ದ ವಸ್ತುಗಳು ಜಪ್ತಿ ಮಾಡಲಾಗಿದೆ. ಉಪನಗರ …

Read More »

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಗೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಕಿಡಿ..

ಬೆಳಗಾವಿ: ಬಿಜೆಪಿ ಮುಖಂಡ ಪೃಥ್ವಿ ಸಿಂಗ್ ಬೋಗಸ್ ವ್ಯಕ್ತಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಗೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಕಿಡಿಕಾರಿದ್ದು, ಲಕ್ಷ್ಮೀ ಹೆಬ್ಬಾಳಕರ ಬೆಳೆದು ಬಂದಿರುವುದು ಯಾವ ರೀತಿ ಎಂಬುವುದು ಬೆಳಗಾವಿಯ ಮೂಲೆ ಮೂಲೆಗೂ ಗೊತ್ತಿದೆ ಎಂದು ರಮೇಶ್‌ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.ಲಾಟರಿ ಮಂತ್ರಿ, ಲಾಟರಿ ಎಂಎಲ್ಸಿ ಸಧ್ಯದಲ್ಲೆ ಅವರು ಮಾಜಿ ಆಗುತ್ತಾರೆ. ಇನ್ನು ಪೃಥ್ವಿ ಸಿಂಗ್ ಬೆನ್ನಿಗೆ ನೂರಕ್ಕೆ ನೂರು ನಾನು ನಿಲ್ಲುತ್ತೇನೆ. ಒಂದು ವೇಳೆ …

Read More »

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳಾಗಡ್ಡಿ ನೆಹರು ಮೈದಾನ ಸಮೀಕ್ಷೆ….

ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಅಡಿಯಲ್ಲಿ ತಯಾರಾಗುತ್ತಿರುವ ನೆಹರು ಮೈದಾನವನ್ನು ಬೆಳ್ಳಂಬೆಳಗ್ಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳಾಗಡ್ಡಿ ಸಮೀಕ್ಷೆ ಮಾಡಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಈಗಾಗಲೇ ಅಲ್ಪ ಪ್ರಮಾಣದಲ್ಲಿ ತಯಾರಾದ ನೆಹರು ಮೈದಾನಕ್ಕೆ ದಿನಂಪ್ರತಿ ವಾಕಿಂಗ್ ಮಾಡಲು ನೂರಾರು ಜನರು ಬರುತ್ತಿದ್ದಾರೆ. ಬೆಳಗಿನ ಜಾವ ಕ್ರೀಡಾ ಪ್ರೇಮಿಗಳು, ಕ್ರಿಕೆಟ್, ವಾಲಿಬಾಲ್, ಫುಟ್‌ಬಾಲ್ ಮುಂತಾದ ದೈನಂದಿನ ಚಟುವಟಿಕೆಗಳಿಗೆ ಮೈದಾನಕ್ಕೆ ಆಗಮಿಸಲು ಪ್ರಾರಂಭಿಸಿದ್ದಾರೆ. ಆದರೆ ಒಂದು ವರ್ಷದ ಕೆಲಸದ ನಂತರ …

Read More »

I.N.D.I. ಮೈತ್ರಿಕೂಟಕ್ಕೆ ಕೊಟ್ಟಿರುವ ಎಚ್ಚರಿಕೆಗಳು ಎಂದು ರಾಜ್ಯ ಬಿಜೆಪಿ ಟ್ವೀಟ್‌….

ಬೆಂಗಳೂರು: ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವು ಕಂಡಿದ್ದು, ತೆಲಂಗಾಣದಲ್ಲಿ ಮಾತ್ರ ಕಾಂಗ್ರೆಸ್‌ ಗೆಲುವು ಸಾಧಿಸಿದ್ದು, I.N.D.I. ಮೈತ್ರಿಕೂಟಕ್ಕೆ ಕೊಟ್ಟಿರುವ ಎಚ್ಚರಿಕೆಗಳು ಎಂದು ರಾಜ್ಯ ಬಿಜೆಪಿ ಟ್ವೀಟ್‌ ಮೂಲಕ ಕಿಡಿಕಾರಿದೆ. ದೇಶದ ಜನತೆಗೆ ಅಭಿವೃದ್ಧಿಯೊಂದಿಗೆ ಭಾರತದ ಕೀರ್ತಿ ಪತಾಕೆ ಹಾರಿಸುವವರು ಬೇಕಾಗಿದ್ದಾರೆ. ಭಾರತ್ ತೋಡೋ ಮಾಡುವವರು ಬೇಕಿಲ್ಲ..! ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಸಲಿ ಗ್ಯಾರಂಟಿ ಎದುರು ಚೆಲ್ಲಾಪಿಲ್ಲಿ ಯಾದ I.N.D.I. ಮೈತ್ರಿಕೂಟ ಎಂದು ಕಾಂಗ್ರೆಸ್‌ ವಿರುದ್ದ ಕರ್ನಾಟಕ …

Read More »

ಅಲ್ಪಸಂಖ್ಯಾತರನ್ನೂ ಸೇರಿದಂತೆ ಎಲ್ಲರಿಗೂ ರಕ್ಷಣೆ: ಸಿದ್ದರಾಮಯ್ಯ.

ಬೆಳಗಾವಿ: ನಾನು ಹೇಳಿದ್ದರಲ್ಲಿ ತಪ್ಪು ಏನಿದೆ. ಮುಸ್ಲಿಂ ಸೇರಿದಂತೆ ಎಲ್ಲಾ ಸಮುದಾಯಗಳ ರಕ್ಷಣೆಗೆ ನಮ್ಮ ಸರ್ಕಾರ ಬದ್ದ ಅಂತ ನಾನು ಹೇಳಿರೋದು, ನೀವು ಅದಕ್ಕೆ ಉಪ್ಪು ಕಾರ ಹಾಕಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಗರಂ ಆಗಿದ್ದಾರೆ.ಈ ಕುರಿತು ಮಂಗಳವಾರ ಬೆಳಗಾವಿಯ ಸುವರ್ಣ ಸೌಧದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತರನ್ನೂ ಸೇರಿದಂತೆ ಎಲ್ಲರಿಗೂ ರಕ್ಷಣೆ ನೀಡುವುದಾಗಿ ಹೇಳಿದ್ದೇನೆ. ಅಲ್ಪಸಂಖ್ಯಾತರಿಗೆ 4 ರಿಂದ 5 ಸಾವಿರ …

Read More »

ಕೋಣಕ್ಕೆ ಗುದ್ದಿ ಕೆಳಗಡೆ ಬಿದ್ದ ಬುಲೆಟ್ ಬೈಕ್ ಚಾಲಕ…..

ರೋಡ್ ಮೇಲೆ ಬೈಕ್ ಸವಾರಿ ಮಾಡುವಾಗ ಮೈ ತುಂಬಾ ಕಣ್ಣು ಇರಬೇಕು ಅಂತಾರೆ ವೃತ್ತಿಪರ ಚಾಲಕರು. ಯಾಕಂದ್ರೆ ಅಕಸ್ಮಾತ್ ಒಂದು ಚೂರು ಏನಾದ್ರೂ ಎಡವಟ್ಟು ಮಾಡಿಕೊಂಡ್ರೆ ಜೀವ ಹೋಗೋದು ಗ್ಯಾರಂಟಿ. ಅದರಲ್ಲೂ ನಾಯಿ, ಎಮ್ಮೆ, ಹಸು ಅಡ್ಡ ಬಂದ್ರೆ ಬೈಕ್ ಸವಾರರ ಕಥೆ ಮುಗಿದೇ ಹೋಯ್ತು ಅನ್ನಬೇಕು. ಇಲ್ಲೂ ಅಷ್ಟೇ ತನ್ನಪಾಡಿಗೆ ಬುಲೆಟ್‌ನ ಹತ್ತಿ, ಬೈಕ್ ಸವಾರಿ ಹೊರಟಿದ್ದ ಸವಾರನಿಗೆ ಕೋಣ ಒಂದು ಬಂದು ಗುದ್ದೇ ಬಿಟ್ಟಿದೆ! ಬೆಂಗಳೂರು ನಗರದಂಥ …

Read More »

ಕನ್ನಡಿಗ ರಾಹುಲ್ ದ್ರಾವಿಡ್ ಅವರು ಭಾನುವಾರ ಚಾಮುಂಡಿಬೆಟ್ಟಕ್ಕೆ ದಂಪತಿ ಸಹಿತ ಭೇಟಿ….

ಮೈಸೂರು: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್, ಕನ್ನಡಿಗ ರಾಹುಲ್ ದ್ರಾವಿಡ್ ಅವರು ಭಾನುವಾರ ಚಾಮುಂಡಿಬೆಟ್ಟಕ್ಕೆ ದಂಪತಿ ಸಹಿತ ಭೇಟಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು. ಬೆಳಗ್ಗೆ ಪತ್ನಿ ಡಾ. ವಿಜೇತಾ ಅವರೊಂದಿಗೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ರಾಹುಲ್ ದ್ರಾವಿಡ್ ತಾಯಿ ದರ್ಶನ ಪಡೆದರು. ನಗರದ ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ 19 ವರ್ಷದೊಳಗಿನವರ ಕೂಚ್ ಬೆಹಾರ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯು ಉತ್ತರಾಖಂಡದ ವಿರುದ್ಧ ನಡೆಯುತ್ತಿದೆ. ಈ ಪಂದ್ಯದಲ್ಲಿ …

Read More »

ದಸರಾ ಆನೆ ಅರ್ಜುನ ಸಾವು ಕನ್ನಡಿಗರನ್ನ ದುಃಖದ ಕಡಲಲ್ಲಿ ಮುಳುಗುವಂತೆ ಮಾಡಿದೆ….

ದಸರಾ ಆನೆ ಅರ್ಜುನ ಸಾವು ಕನ್ನಡಿಗರನ್ನ ದುಃಖದ ಕಡಲಲ್ಲಿ ಮುಳುಗುವಂತೆ ಮಾಡಿದೆ. ಅದರಲ್ಲೂ 8 ಬಾರಿ ಜಂಬೂ ಸವಾರಿಯಲ್ಲಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆಯ ಬಗ್ಗೆ ಕನ್ನಡಿಗರು ಪ್ರೀತಿಯನ್ನ ಹೊಂದಿದ್ದರು. ನಿನ್ನೆ ಕಾಡಾನೆ ಜೊತೆ ಸೆಣೆಸಾಟ ನಡೆಸಿ, ಕನ್ನಡ ನಾಡಿನ ಜನರ ರಕ್ಷಣೆ ಮಾಡುವಾಗ ಅರ್ಜುನ ಮೃತಪಟ್ಟಿದ್ದಾನೆ. ಹೀಗಿದ್ದಾಗ ಮಾವುತರು, ಅರ್ಜುನನ ಜೊತೆ ನಮ್ಮನ್ನೂ ಮಣ್ಣು ಮಾಡಿ’ ಎಂದು ಹಠ ಹಿಡಿದಿದ್ದಾರೆ. ನಿನ್ನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಯಸಳೂರು, …

Read More »

ಕರ್ನಾಟಕ ಸರ್ಕಾರ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಸಿಹಿಸುದ್ದಿ ನೀಡಿದೆ….

ಬೆಂಗಳೂರು: ಕರ್ನಾಟಕ ಸರ್ಕಾರ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಸಿಹಿಸುದ್ದಿ ನೀಡಿದೆ. ಕನಿಷ್ಠ ವೇತನ ಕಾಯ್ದೆ ಅನ್ವಯ ವೇತನ ಪಾವತಿಸುವಂತೆ ಪಂಚಾಯತ್‌ರಾಜ್ ಆಯುಕ್ತಾಲಯ ಸುತ್ತೋಲೆಯನ್ನು ಹೊರಡಿಸಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆ ಕನಿಷ್ಠ ವೇತನದ ಕುರಿತು ಸುತ್ತೋಲೆ ಮೂಲಕ ಮಾಹಿತಿ ನೀಡಿದೆ. ಸುತ್ತೋಲೆಯಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳು ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ಕಾಯ್ದೆ ದರಗಳ ಅನ್ವಯ ಮಾತ್ರ ಸಿಬ್ಬಂದಿ ವೇತನ ಪಾವತಿಸಬೇಕು ಎಂದು ಹೇಳಿದೆ. ಯಾವುದೇ ಕಾರಣಕ್ಕೂ …

Read More »

ಸಚಿವ ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಕಾರಿಗೆ ಬೈಕ್ ಡಿಕ್ಕಿ….

ಮೈಸೂರು: ಮಾಜಿ ಜಿಲ್ಲಾ ಪಂಚಾಯತಿ ಸದಸ್ಯೆ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಕಾರಿಗೆ ಬೈಕ್ ಡಿಕ್ಕಿಯಾಗಿದ್ದು, ಈ ವೇಳೆ ಭವಾನಿ ರೇವಣ್ಣ ಬೈಕ್ ಸವಾರನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ ಘಟನೆ ಮೈಸೂರು ಜಿಲ್ಲೆಯ ಸಾಲಿಗ್ರಾಮದ ಬಳಿ ನಡೆದಿದೆ. ಬೈಕ್ ಸವಾರ ಶಿವಣ್ಣ ಎಂಬಾತ ಭವಾನಿ ರೇವಣ್ಣ ಅವರ KA-03-NK-5 ನಂಬರ್‌ನ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ರೋಷವೇಷಗೊಂಡ ಭವಾನಿ ರೇವಣ್ಣ ಅವರು, ಬೋರ್ಡು …

Read More »