Breaking News

ಕರ್ನಾಟಕ

Featured Video Play Icon

ಪೊಲೀಸ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಸಚಿವ ಪ್ರಲ್ಲಾದ್ ಜೋಶಿ…..

ಹುಬ್ಬಳ್ಳಿ: ಬಿಜೆಪಿ ಕಾರ್ಯಕರ್ತರಿಗೆ ಅನಾವಶ್ಯಕ ತೊಂದರೆ ನೀಡುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಧಾರವಾಡದಲ್ಲಿ ಬೆವರಿಳಿಸಿದ್ದಾರೆ.ಧಾರವಾಡದ ಗೊಲ್ಲರ ಓಣಿ ನಿವಾಸಿ ರವಿ ಗೊಲ್ಲರ ಎಂಬುವವರು ಕಟ್ಟರ್ ಬಿಜೆಪಿ ಕಾರ್ಯಕರ್ತ. ಕಾಂಗ್ರೆಸ್ ಅಧಿಕಾರಕ್ಕೆ ಬಂತ ತಕ್ಷಣ ಅಲ್ಲಿನ‌ ಕೆಲವರ ಮಾತು ಕೇಳಿಕೊಂಡು ರವಿ ಮೇಲೆ ಧಾರವಾಡ ಶಹರ ಠಾಣೆಯ ಇನ್ಸಪೆಕ್ಟರ್ ಕಾಡದೇವರಮಠ ಕೆಂಡ ಕಾರುತ್ತಿದ್ದಾರೆ. ಸುಮ್ಮ ಸುಮ್ಮನೆ ಠಾಣೆಗೆ ಕರೆಸಿ, ಇಲ್ಲ ಸಲ್ಲದ ಆರೋಪ ಹೊರಿಸಿ ಮನಬಂದಂತೆ ಥಳಿಸಿದ್ದಾರೆ. …

Read More »

ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮರಾ ಮೊದಲು ಅಳವಡಿಸಬೇಕು…

ನವಲಗುಂದ: ಪಟ್ಟಣದ ಬಸ್ ನಿಲ್ದಾಣದಲ್ಲಿ ಮಾಂಗಲ್ಯ ಸರ, ಓಲೆ ಸೇರಿದಂತೆ ಇನ್ನಿತರೇ ವಸ್ತುಗಳು ಕಳ್ಳತನ ಆಗುತ್ತಿವೆ. ಈ ಕುರಿತು ಹಲವಾರು ಬಾರಿ ಪತ್ರಿಕೆಯಲ್ಲಿ ಬಂದರೂ ಬಸ್ ನಿಲ್ದಾಣದ ಘಟಕ ವ್ಯವಸ್ಥಾಪಕರಿಗೆ ಕಳ್ಳತನ ಆಗುವುದು ಗಮನಕ್ಕೆ ಬಂದರೂ ಕೂಡ ನಿರ್ಲಕ್ಷ್ಯ ವಹಿಸಿದ್ದಾರೆ. ಅಂತಹ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನವಲಗುಂದ ತಾಲ್ಲೂಕು ವಿಷ್ಣು ಸೇನಾ ಸಮಿತಿಯಿಂದ ತಹಶೀಲ್ದಾರ್ ಸುಧೀರ ಸಾಹುಕಾರ ಅವರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ತಾಲ್ಲೂಕಾ …

Read More »

ಚಾಮರಾಜನಗರ ಜಿಲ್ಲೆಯ ಈ 6 ಊರುಗಳು ಮಾತ್ರ ಹಬ್ಬವನ್ನು ಒಂದು ವಾರ ಮುಂದಕ್ಕೆ ಹಾಕಿದ್ದಾರೆ…..

ಚಾಮರಾಜನಗರ: ಬೆಳಕಿನ ಹಬ್ಬ ದೀಪಾವಳಿಯನ್ನು ಇಡೀ ದೇಶಾದ್ಯಂತ ಆಚರಣೆ ಮಾಡಲು ಜನರು ಕಾತರದಿಂದ ಕಾಯುತ್ತಿದ್ದರೇ, ಚಾಮರಾಜನಗರ ಜಿಲ್ಲೆಯ ಈ 6 ಊರುಗಳು ಮಾತ್ರ ಹಬ್ಬವನ್ನು ಒಂದು ವಾರ ಮುಂದಕ್ಕೆ ಹಾಕಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಏನೆಂದು ಇಲ್ಲಿ ತಿಳಿಯಿರಿ. ‌ಗುಂಡ್ಲುಪೇಟೆ ತಾಲೂಕಿನ 6 ಗ್ರಾಮಗಳಲ್ಲಿ ಹಬ್ಬದ ಸಂತಸವೇ ಇಲ್ಲ. ಕಾರಣ ಈ ಬಾರಿ ಹಬ್ಬ ಮಂಗಳವಾರ ಬಂದಿರುವುದು. ಗುಂಡ್ಲುಪೇಟೆ ತಾಲೂಕಿನ ವೀರನಪುರ, ಬನ್ನಿತಾಳಪುರ, ಇಂಗಲವಾಡಿ, ಮಾಡ್ರಹಳ್ಳಿ, ಮಳವಳ್ಳಿ ಹಾಗೂ ನೇನೆಕಟ್ಟೆ …

Read More »

ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಶಾಸಕರಾದ ಬಿವೈ ವಿಜಯೇಂದ್ರ ಆಯ್ಕೆ…

ಬೆಂಗಳೂರು: ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರ ಪುತ್ರ ಹಾಗೂ ಶಿಕಾರಿಪುರ ಶಾಸಕರಾದ ಬಿವೈ ವಿಜಯೇಂದ್ರ ಅವರನ್ನು ಶುಕ್ರವಾರ ಬಿಜೆಪಿ ಹೈಕಮಾಂಡ್‌ ಆಯ್ಕೆ ಮಾಡಿದ್ದು, ರಾಜ್ಯಾಧ್ಯಕ್ಷರಾದ ಬಳಿಕ ದೊಡ್ಡ ದೊಡ್ಡ ನಾಯಕರ ಮನೆಗೆ ತೆರಳುವ ಬದಲು ಕಾರ್ಯಕರ್ತರ ಮನೆಗೆ ಬಿ ವೈ ವಿಜಯೇಂದ್ರ ತೆಳಿದ್ದು, ಕುತೂಹಲಕಾರಿ ಹೆಜ್ಜೆ ಇಟ್ಟಿದ್ದಾರೆ. ಗಾಂಧಿನಗರ ಬೂತ್ 40ರ ಅಧ್ಯಕ್ಷ ಶಶೀಂದ್ರ ಅವರ ಮನೆಗೆ ಭೇಟಿ ಕೊಟ್ಟ ಬಳಿಕ ಮಾಧ್ಯಮಗಳ ಜೊತೆಗೆ …

Read More »

ಮಟ್ಕಾ ದಂಧೆಯ ಹಿಂದೆ ಬಿದ್ದ ಕಾರ್ಮಿಕರು ಹಾಗು ತರಕಾರಿ ವ್ಯಾಪಾರಿಗಳ ಬದಕು ಬೀದಿಪಾಲು…!!!!!

ರಾಜಾರೋಷವಾಗಿ ಮಟ್ಕಾ ದಂದೆ. ಇದು ನಡೀತಿರೋದು ಹಲವು ಕಡೆ. ಎಗ್ಗಿಲ್ಲದೇ ನಡೀತಿದೆ ಮಟ್ಕಾ ದಂದೆ. ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಯಾವ ಸಂಬಂಧ ಇಲ್ಲದ ಹಾಗೆ ನಡ್ಕೋತಿದಾರೆ. ಪೊಲೀಸ್ ಇಲಾಖೆ ಕಣ್ಣು ಮುಚ್ಕೊಂಡು ಕೂತಿರಬೇಕು. ಆದರೆ ಜನರ ಜೀವದ ಜೊತೆ ಆಟ ಆಡ್ತಿರೋರು ಮಾತ್ರ ಒಸಿ ಕೋರರು. ಇಷ್ಟಕ್ಕೂ ಇವರು ಟಾರ್ಗೆಟ್ ಮಾಡಿದ್ದು ಮಾತ್ರ ರೈತರು ಮತ್ತು ಸಣ್ಣ ಪುಟ್ಟ ವ್ಯಾರಿಗಳು, ಮಟ್ಕಾ ದಂದೆಯಲ್ಲಿ ಮನೆ ಮಠ ಕಳ್ಕೊಂಡಿರೋ ಉದಾಹರಣೆ …

Read More »

2019 ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಿದ್ದ ಸಮಲತಾ ಹಾಗೂ ನಿಖಿಲ್‌ ಕುಮಾರಸ್ವಾಮಿ ನಡುವೆ ತೀವ್ರ ಸ್ಪರ್ಧೆ…

ಮಂಡ್ಯ: 2019 ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಿದ್ದ ಸಮಲತಾ ಹಾಗೂ ನಿಖಿಲ್‌ ಕುಮಾರಸ್ವಾಮಿ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟು, ಚುನಾವಣೆಯಲ್ಲಿ ಸುಮಲತಾ ಅಂಬರೀಶ್‌ ಗೆಲುವು ಸಾಧಿಸಿದ್ರು. ಆದರೆ, ನಾನು ಮಂಡ್ಯ ಕ್ಷೇತ್ರವನ್ನ ಬಿಟ್ಟು ಕೊಡಲ್ಲ, ಮುಂದೆ ಮಂಡ್ಯ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದ ಸುಮಲತಾ ಇದೀಗ ಇಕ್ಕಟ್ಟಿಗೆ ಸಿಲುಕಿದ್ದಾರೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನ ಗೆಲ್ಲುವ ಮೂಲಕ ಸರ್ಕಾರ ರಚಿಸಿರುವ ಕಾಂಗ್ರೆಸ್‌ ಇದೀಗ, ಲೋಕಸಭಾ ಚುನಾವಣೆಯಲ್ಲಿ …

Read More »

ಜೈಲರ್’ ಸಕ್ಸಸ್ ಸಂಭ್ರಮದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ….

ಜೈಲರ್’ ಸಕ್ಸಸ್ ಸಂಭ್ರಮದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಗಳು ಐಶ್ವರ್ಯ ನಿರ್ದೇಶನದ ‘ಲಾಲ್ ಸಲಾಂ’ ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. ಚಿತ್ರದ ಮುಖ್ಯ ಪಾತ್ರದಲ್ಲಿ ರಜನಿಕಾಂತ್ ಬಣ್ಣ ಹಚ್ಚಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ‘ಲಾಲ್ ಸಲಾಂ’ ವಿಷ್ಣು ವಿಶಾಲ್ ಹೀರೊ ಆಗಿ ನಟಿಸಿದ್ದಾರೆ. ರಜನಿಕಾಂತ್ ಜೊತೆಗೆ ನಿರೋಷ, ಜೀವಿತಾ ರಾಜಶೇಖರ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಪಿಲ್ ದೇವ್ ತಾವಾಗಿಯೇ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. …

Read More »

ಮಿನಿ ಬಸ್ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಡುವೆ ಸಂಭವಿಸಿರುವ ಭೀಕರ ಅಪಘಾತ….

ಚಿಕ್ಕಬಳ್ಳಾಪುರ: ಮಿನಿ ಬಸ್ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಡುವೆ ಸಂಭವಿಸಿರುವ ಭೀಕರ ಅಪಘಾತದಲ್ಲಿ ಓರ್ವ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಚಿಂತಾಮಣಿ ಚಿನ್ನಸಂದ್ರ ಗೇಟ್ ಬಳಿ ನಡೆದಿದೆ. ಮಿನಿ ಬಸ್‌ನಲ್ಲಿದ್ದ ಕೈವಾರ ಮೂಲದ ನಿವಾಸಿ 40 ವರ್ಷದ ಇಲ್ಲು ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಪ್ರಯಾಣೀಕರಿದ್ದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಮಿನಿ ಬಸ್ ಚಿನ್ನಸಂದ್ರ ಗೇಟ್ ಬಳಿ ಚಾಲಕರ ನಿಯಂತ್ರಣ ತಪ್ಪಿ ಮುಖಾಮುಖಿ ಡಿಕ್ಕಿಯಾಗಿದೆ. ಘಟನೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನ ಮುಂಭಾಗ ಸಂಪೂರ್ಣ …

Read More »

75 ಲಕ್ಷಕ್ಕೂ ಹೆಚ್ಚು ಮೌಲ್ಯದ 133 ಲ್ಯಾಪ್‌ಟಾಪ್‌ಗನ್ನು ವಶಪಡಿಸಿಕೊಳ್ಳಲಾಗಿದೆ…..

ಬೆಂಗಳೂರಿನ ಸದಾಶಿವನಗರ ಪ್ರದೇಶದಲ್ಲಿ ಪೇಯಿಂಗ್ ಗೆಸ್ಟ್ (ಪಿಜಿ) ಮತ್ತು ಬ್ಯಾಚುಲರ್ ವಸತಿಗಳನ್ನು ಗುರಿಯಾಗಿಸಿಕೊಂಡ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್ ಕಳ್ಳನನ್ನು ಬಂಧಿಸಿದ ಎರಡು ವಾರಗಳ ನಂತರ, 75 ಲಕ್ಷಕ್ಕೂ ಹೆಚ್ಚು ಮೌಲ್ಯದ 133 ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. 39 ವರ್ಷದ ಟೆಕ್ಕಿ, ಶ್ರೀನಾಥ್ ಕಂಪ್ಯೂಟರ್ ಸೈನ್ಸ್ ಪದವೀಧರನಾಗಿದ್ದು, ಸುಲಭವಾಗಿ ಹಣ ಸಂಪಾದನೆ ಮಾಡಲು ಕಳ್ಳತನಕ್ಕೆ ಇಳಿದಿದ್ದ, ಇದಕ್ಕೂ ಮೊದಲು ಮಾಹಿತಿ ತಂತ್ರಜ್ಞಾನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ …

Read More »

ಗ್ರಾಮೀಣ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಕಣ್ಣಪ್ಪಿಸಿ ತಿರುಗುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧನ….

ಹುಬ್ಬಳ್ಳಿ : ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಕಣ್ಣಪ್ಪಿಸಿ ತಿರುಗುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಬಕಾರಿ ಪ್ರಕರಣದಲ್ಲಿ 14 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ಹಾಗೂ ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಲ್ಲಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಹುಬ್ಬಳ್ಳಿಯ ಜನತಾ ಬಜಾರ ಬಳಿಯ ಚಾಂಗದೇವ ಮಹಾರಾಜ ಗುಡಿ ಹತ್ತಿರ ಮುಕುಂದಪ್ಪ ನಾರಾಯಣ ಓತಾಲಿ (ಹೊರಾಲಿ) ಎಂಬಾತನನ್ನು ಬಂಧಿಸಲಾಗಿದೆ. ಮತ್ತೋರ್ವ ಮಹಿಳೆ ಬಂಧನ 2010 ರಲ್ಲಿ ಹುಬ್ಬಳ್ಳಿ ತಾಲೂಕಿನ ಚನ್ನಾಪುರ ಗ್ರಾಮದಲ್ಲಿ …

Read More »