Breaking News

ಕರ್ನಾಟಕ

ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ದಿವಾಳಿ ಮಾಡಲು ಬಂದಿದೆ..

ಬೆಂಗಳೂರು: ಕಾಂಗ್ರೆಸ್ ಕರ್ನಾಟಕವನ್ನು ಎಲ್ಲಾ ವಲಯಗಳಲ್ಲಿಯೂ ದಿವಾಳಿ ಮಾಡಲು ಅಧಿಕಾರಕ್ಕೆ ಬಂದಿದೆ. ರಾಜ್ಯದ ಆರ್ಥಿಕ ಸ್ಥಿತಿಯನ್ನು ಹದಗೆಡಿಸುವ ಜೊತೆ ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸುತ್ತಿರುವುದು ನಿಜಕ್ಕೂ ಆತಂಕಕಾರಿ ಎಂದು ರಾಜ್ಯ ಬಿಜೆಪಿ ಟ್ವೀಟ್‌ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಲಿಂದ ನೇಕಾರರ ಬದುಕಿಗೆ ಮರಣ ಶಾಸನ ಬರೆಯುತ್ತಿದೆ ಎಂಬುದಕ್ಕೆ ತುಮಕೂರು ಜಿಲ್ಲೆಯೊಂದರಲ್ಲೇ 150ಕ್ಕೂ ಹೆಚ್ಚು ನೇಕಾರರ ಕುಟುಂಬಗಳು ಬೀದಿಗೆ ಬಿದ್ದಿರುವುದು ತಾಜಾ ನಿದರ್ಶನ. ಕಾಂಗ್ರೆಸ್ ಸರ್ಕಾರ …

Read More »

ಕಾಂಗ್ರೆಸ್ ಸರ್ಕಾರ ಜನರ ನೋವನ್ನು ಕಡೆಗಣಿಸುತ್ತಿದೆ :ಸಿ ಟಿ ರವಿ..

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ನಲ್ಲಿ ಮುಖ್ಯಮಂತ್ರಿ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ರೋಮ್ ಹತ್ತಿ ಉರಿಯುತಿದ್ದರೆ ನಿರೋ ಪಿಟೀಲು ಬಾರಿಸುತ್ತಿದ್ದ” ಎಂಬಂತೆ ರಾಜ್ಯ ಬರದ ಬೇಗುದಿಯಲ್ಲಿ ನರಳುತ್ತಿದ್ದರೆ ರಾಜ್ಯದ ಕಾಂಗ್ರೆಸ್ ಸರ್ಕಾರ “ನಾನು ಮುಖ್ಯಮಂತ್ರಿ ನಾನು ಮುಖ್ಯಮಂತ್ರಿ” ಆಟ ಆಡಿ ಜನರ ನೋವನ್ನು ಕಡೆಗಣಿಸುತ್ತಿದೆ ಎಂದು ಮಾಜಿ ಸಚಿವ ಸಿ ಟಿ ರವಿ ಕಿಡಿಕಾರಿದ್ದಾರೆ. ಈ ಕುರಿತು ಮಾತನಾಡಿದ ಸಿ ಟಿ ರವಿ ಅವರು, ರಾಜ್ಯ ಸರ್ಕಾರ ತನ್ನ ಜವಾಬ್ದಾರಿ …

Read More »

ಕೃಷಿಕರ ಮನೆ ಬಾಗಿಲಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ: ಡಿ.31ರ ತನಕ ಅಭಿಯಾನ!

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ವಾರ್ಷಿಕ 6,000ರೂ. ಸಹಾಯಧನ ಪಡೆವ ದೇಶದ ಕೃಷಿಕರ ಮನೆ ಬಾಗಿಲಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ವಿತರಣಾ ಅಭಿಯಾನ ಆರಂಭವಾಗಿದ್ದು ಡಿ. 31ರ ತನಕ ನಡೆಯಲಿದೆ. ದೇಶದಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 11 ಕೋಟಿ ರೈತರ ನೋಂದಣಿಯಾಗಿದ್ದು 2.60 ಲಕ್ಷ ಕೋಟಿ ರೂ. ಖಾತೆಗೆ ಜಮೆಯಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಕೇವಲ 7.35 ಕೋಟಿ ರೈತರಿಗಷ್ಟೇ ಸಿಕ್ಕಿದ್ದು 8.85 ಲಕ್ಷ …

Read More »

ಸಾರಿಗೆ ಇಲಾಖೆ ನಿರ್ಧಾರ?ಶಕ್ತಿ ಯೋಜನೆ ಎಫೆಕ್ಟ್:ಬಸ್ ದರ ಏರಿಕೆಗೆ

ಬೆಂಗಳೂರು: ವರ್ಷಕ್ಕೊಂದು ಬಾರಿ ಕೆಇಆರ್‌ಸಿ ಮೂಲಕ ಇಂಧನ ಇಲಾಖೆ ದರ ಏರಿಕೆ ಮಾಡಿ, ಇದರಿಂದ ಗ್ರಾಹಕರಿಗೆ ಹೊರೆಯಾಗುವುದನ್ನು ನೋಡಿದ್ದೇವೆ. ಆದರೀಗ ಬಸ್‌ದರ ಏರಿಕೆಗೂ ಇದೇ ಮಾಡೆಲ್ ಅನುಸರಿಸುವಂತೆ ಸಾರಿಗೆ ಇಲಾಖೆಗೆ ಗಂಭೀರ ಸಲಹೆ ಬಂದಿದೆ. ಇಂಧನ ಇಲಾಖೆಯಲ್ಲಿ ಎಸ್ಕಾಂಗಳು ವರ್ಷಕ್ಕೊಮ್ಮೆ ಕೆಇಆರ್‌ಸಿ ಮುಂದೆ ದರ ಪ್ರಸ್ತಾಪ ಇಡುತ್ತದೆ. ಕೆಇಆರ್‌ಸಿ ಕೂಡ ಒಪ್ಪಿಗೆ ನೀಡಿ ವರ್ಷಕ್ಕೊಮ್ಮೆ ದರ ಏರಿಕೆ ಮಾಡುತ್ತಿದೆ. ಇದೇ ಮಾಡೆಲ್‌ನ್ನು ಈಗ ಸಾರಿಗೆ ಇಲಾಖೆಗೂ ಅನ್ವಯ ಮಾಡುವಂತೆ ಹಿರಿಯ …

Read More »

ಧಾರವಾಡ ರಸ್ತೆ ಕಾಮಗಾರಿಯ ಗುದ್ದಲಿ ಪೂಜೆ

ಧಾರವಾಡ: ವಿನಯ್ ಕುಲಕರ್ಣಿ ಇವರ ಅನುದಾನದಡಿಯಲ್ಲಿ ವಾರ್ಡ್ ನಂಬರ 8 ರ ಹಾಶ್ಮಿ ನಗರದಲ್ಲಿ ರಸ್ತೆ ಕಾಮಗಾರಿಯ ಪೂಜೆಗೆ ಶ್ರೀಮತಿ ಶಿವಲೀಲಾ ವಿನಯ್ ಕುಲಕರ್ಣಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಬಸವರಾಜ ಜಾದವ,ಆನಂದ ಸಿಂಗನಾಥ, ಸಂಜು ಲಕಮನಹಳ್ಳಿ,ಅಜ್ಜಪ್ಪ ಗುಲಾಲದವರ,ನಾರಾಯಣ ಸುಳ್ಳದ,ಸಿ,ಎಸ,ಸಾಲಿಗೌಡ್ರ ಮಹ್ಮದಲಿ ಗುಡುಬಾಯಿ, ಶಂಕರಪ್ಪ ಅಂಚಟಗೇರಿ ಗುರು ನಸಬಿ,ರಾಜೆಸಾಬ ಕಲಬುರ್ಗಿ, ದಾವಲಸಾಬ ನದಾಪ, ಮಹಬುಬಸಾಬ ಮುಲ್ಲಾ, ಯುನುಸ ಅಬ್ಯಾಳ,ದುದನಾನಾ ನಧಾಪ,ಶಕಿಲ ಮನ್ನಾನಾಯ್ಕ, ಮಂಜು …

Read More »
Featured Video Play Icon

ಆತ್ಮಹತ್ಯೆ ಕೇಸ್ ನಲ್ಲಿ ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಕಟ್ಟಿಟ್ಟಬುತ್ತಿ: ಕಮೀಷನರ್ ಭರವಸೆ…!

ಹುಬ್ಬಳ್ಳಿ: ಕೇಶ್ವಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ನಡೆದ ನಿಖಿಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಶ್ವಾಪೂರದ ಪಿಐ ಹಾಗೂ ಎಎಸ್ಐ ವಿರುದ್ಧ ಕೂಡ ದೂರು ದಾಖಲಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುತ್ತದೆ ಎಂದು hubli ಆತ್ಮಹತ್ಯೆ ಕೇಸ್ ನಲ್ಲಿ ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಕಟ್ಟಿಟ್ಟಬುತ್ತಿ: ಕಮೀಷನರ್ ಭರವಸೆ…! @112Hubdwd @compolhdc @DgpKarnataka @KarnatakaCops @CMofKarnataka @HMOIndia @HMOKarnataka @BIGTVNEWS3 …

Read More »

ರಾಜಕೀಯ ನಿವೃತ್ತಿ ಪಡೆಯುತ್ತಾರಾ ಡಿ.ವಿ.ಸದಾನಂದಗೌಡ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುವ ಸುಳಿವು ನೀಡಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಚುನಾವಣೆ ಸ್ಪರ್ಧೆ ಹಾಗೂ ಪದವಿಯಲ್ಲಿ ಆಸಕ್ತಿಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಕುಗ್ರಾಮದಲ್ಲಿದ್ದ ನನ್ನನ್ನು ಪಕ್ಷ ಶಾಸಕ, ಸಂಸದ, ಕೇಂದ್ರ ಸಚಿವ, ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಮಾಜಿ ಸಿಎಂ ಡಾ.ಬಿ.ಎಸ್. ಯಡಿಯೂರಪ್ಪರ ಬಳಿಕ ಪಕ್ಷದಲ್ಲಿ ಇಷ್ಟೊಂದು ಸ್ಥಾನಗಳನ್ನು ಪಡೆದ ವ್ಯಕ್ತಿ ನಾನೊಬ್ಬನೇ. …

Read More »

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯಲ್ಲಿ ದುರಾಡಳಿತವಿದೆ: ರಾಬಿನ್‌ ಉತ್ತಪ್ಪ.

ನವದೆಹಲಿ: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ)ಯಲ್ಲಿ ದುರಾಡಳಿತವಿದೆ ಎಂದು ಮಾಜಿ ಕ್ರಿಕೆಟಿಗ ರಾಬಿನ್‌ ಉತ್ತಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ರಾಜ್ಯದಲ್ಲಿ ಪ್ರತಿಭೆಗಳನ್ನು ಬೆಳೆಯಲು ಬಿಡಲ್ಲ ಎಂದು ಕಿಡಿಕಾರಿದ್ದಾರೆ. ರಾಜ್ಯದಲ್ಲಿ ಹಿರಿಯ ಕ್ರಿಕೆಟಿಗರನ್ನು ಕಡೆಗಣಿಸಿದ ರೀತಿ, ಹಲವರು ವಲಸೆ ಹೋಗುವಂತೆ ಮಾಡಿದ್ದರ ಬಗ್ಗೆ ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಕರ್ನಾಟಕದಲ್ಲಿ ಬಹಳಷ್ಟು ಪ್ರತಿಭೆಗಳು ದುರಾಡಳಿತಕ್ಕೆ ಬಲಿಯಾಗಿದ್ದಾರೆ. ಕೊನೆ ಬಾರಿ(2014-15)ರಣಜಿ ಟ್ರೋಫಿ ಗೆದ್ದ ತಂಡದಲ್ಲಿದ್ದ ಆಟಗಾರರು ವಿಭಜನೆಗೊಂಡು ಬೇರೆಡೆ ವಲಸೆ ಹೋಗಿದ್ದಾರೆ. …

Read More »

ಐದು ವರ್ಷ ಸಮರ್ಥ ಆಡಳಿತ ನಡೆಸಲಿರುವ ಕಾಂಗ್ರೆಸ್…..

ಹುಬ್ಬಳ್ಳಿ: ಮುಖ್ಯಮಂತ್ರಿ ಬದಲಾವಣೆ ಮಾಧ್ಯಮ ಸೃಷ್ಟಿ. ಇದೀಗ ಸಿದ್ದರಾಮಯ್ಯ ಸಿಎಂ ಇದ್ದಾರೆ. ಅವರೇ ಮುಖ್ಯಮಂತ್ರಿ. ಮುಂದಿನ ಐದು ವರ್ಷ ಸಮರ್ಥವಾಗಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸಲಿದೆ ಎಂದು ನವಲಗುಂದ ಮತಕ್ಷೇತ್ರದ ಶಾಸಕ ಎನ್.ಹೆಚ್.ಕೊನರೆಡ್ಡಿ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಕುದುರೆ ತರಹ ಕೆಲಸ ಮಾಡುತ್ತಿದ್ದಾರೆ. ಉದ್ಯೋಗ ಇಲ್ಲದವರು ಯಾರೋ ಸಿಎಂ ಬದಲಾವಣೆ ಬಗ್ಗೆ ಮಾತನಾಡುತ್ತಾರೆ. ಸರ್ಕಾರ ಬಿಳಿಸುವ ಬಗ್ಗೆ ಬಿಜೆಪಿಯವರ ಹಗಲು ಕನಸು ಕಾಣುತ್ತಿದ್ದಾರೆ ಎಂದು …

Read More »

ಐಷಾರಾಮಿ ಟೊಯೊಟಾ ವೆಲ್‌ಫೈರ್ ಕಾರಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್…

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಸಿನಿಮಾದ ಶೂಟಿಂಗ್ ಬಹುತೇಕ ಮುಕ್ತಾಯಗೊಂಡಿದ್ದು, ಕೇವಲ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಹೊಸ ಸಿನಿಮಾಕ್ಕಾಗಿ ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ನಿನ್ನೆ ಸದ್ದಿಲ್ಲದೇ ಮಹೂರ್ತ ನೆರವೇರಿಸಲಾಗಿದೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಮಿಲನ ಪ್ರಕಾಶ್ ಆಕ್ಷನ್ ಕಟ್ ಹೇಳುತ್ತಿದ್ದು, ಅಜನೀಶ್ ಲೋಕನಾಥ್ ಅವರ ಮ್ಯೂಸಿಕ್ ಇರಲಿದೆಯಂತೆ. ಸದ್ಯ, ಸಿನಿಮಾಕ್ಕೆ ತಾತ್ಕಾಲಿಕವಾಗಿ ‘ಡಿ-57’ ಎಂಬ ಹೆಸರಿಡಲಾಗಿದೆ. ಇದು ಪಕ್ಕಾ ಮಾಸ್ ಎಂಟರ್‌ಟೈನರ್‌ …

Read More »