Breaking News

ಕರ್ನಾಟಕ

ಪರಮೇಶ್ವರ್ ಹಾಗೂ ಸತೀಶ್ ಜಾರಕಿಹೊಳಿ ಭೇಟಿ ಮಾಡಿ ಮನವೊಲಿಕೆ ಯತ್ನ‌…

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದ ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ನಿವಾಸಕ್ಕೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಹಾಗೂ ಸಚಿವ ಸತೀಶ್ ಜಾರಕಿಹೊಳಿ ನಿನ್ನೆ(ಗುರುವಾರ) ಸಂಜೆ ಭೇಟಿ ನೀಡಿ ಮಾತುಕತೆ ನಡೆಸಿದರು. ಸಿಎಂ ವಿರುದ್ಧ ಬಹಿರಂಗ ಹೇಳಿಕೆ ನೀಡಿದ ಹಿನ್ನೆಲೆ ಎಐಸಿಸಿ, ಹಿರಿಯ ಮುಖಂಡ ಬಿ.ಕೆ ಹರಿಪ್ರಸಾದ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.‌ ಇದರ ಬೆನ್ನಲ್ಲೇ ಸಚಿವರಾದ ಪರಮೇಶ್ವರ್ ಹಾಗೂ ಸತೀಶ್ ಜಾರಕಿಹೊಳಿ ಭೇಟಿ ಮಾಡಿ ಮನವೊಲಿಕೆ …

Read More »

ಈದ್ಗಾ ಮೈದಾನದಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ನೀಡುವಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಆಗ್ರಹ…

ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ನೀಡುವಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಆಗ್ರಹಿಸಿದ್ದಾರೆ. ಅಲ್ಲದೇ ರಾಜ್ಯ ಸರ್ಕಾರದ ನಡೆಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶಾದ್ಯಂತ ಗಣಪತಿ ಉತ್ಸವ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿಯೂ ಕೂಡ ವಿನೂತನ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ. ಆದರೆ ಈದ್ಗಾ ಮೈದಾನದಲ್ಲಿ ಅನುಮತಿ ನೀಡಲು ಮೀನಮೇಷ ಎಣಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.

Read More »

ಕ್ಷುಲ್ಲಕ ಕಾರಣಕ್ಕಾಗಿ ವಿದ್ಯುತ್ ಕಂಬಕ್ಕೆ ಕಟ್ಟಿ ವ್ಯಕ್ತಿಯ ಥಳಿತ…

ಹಾವೇರಿ: ಕ್ಷುಲ್ಲಕ ಕಾರಣಕ್ಕಾಗಿ ವಿದ್ಯುತ್ ಕಂಬಕ್ಕೆ ಕಟ್ಟಿ ವ್ಯಕ್ತಿಯ ಥಳಿಸಿದ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಮೂಕಬಸರಿಕಟ್ಟಿ ಗ್ರಾಮದಲ್ಲಿ ನಡೆದಿದೆ. ಹಲ್ಲೆಗೆ ಒಳಗಾದ ವ್ಯಕ್ತಿಯನ್ನ ರಾಮಪ್ಪ ಹರಿಜನ ಎಂದು ಗುರುತಿಸಲಾಗಿದೆ. ಡಿಶ್ ಟಿವಿ ಕೇಬಲ್ ಕತ್ತರಿಸಿದ ಆರೋಪದ ಹಿನ್ನೆಲೆ ವ್ಯಕ್ತಿಯನ್ನ ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಏರಿಯಾದಲ್ಲಿ ಕೆಇಬಿ ಸಿಬ್ಬಂದಿ ಮರದ ಟೊಂಗೆಗಳನ್ನ ಕತ್ತರಿಸಿ ಹೋಗಿದ್ದಾರೆ. ಅದರ ಜೊತೆಗೆ ಕೇಬಲ್ ಟಿವಿ ವೈಯರ್ ಕತ್ತರಿಸಿ …

Read More »

ಅನುಮತಿ ಕೊಡದಿದ್ದರೂ ಈದ್ಗಾದಲ್ಲಿ ಗಣಪತಿ ಪ್ರತಿಷ್ಟಾಪನೆ ಮಾಡ್ತಿವಿ: ಶಾಸಕ ಬೆಲ್ಲದ ಎಚ್ಚರಿಕೆ..!

ಹುಬ್ಬಳ್ಳಿ: ಈದ್ಗಾದಲ್ಲಿ ಗಣಪತಿ ಪ್ರತಿಷ್ಟಾಪನೆಗೆ ಅನುಮತಿ ಕೊಟ್ಟರೂ ಮಾಡ್ತಿವಿ. ಅನುಮತಿ ಕೊಡದೇ ಇದ್ದರೂ ಗಣಪತಿ ಪ್ರತಿಷ್ಟಾಪನೆ ಮಾಡಿಯೇ ಮಾಡ್ತಿವಿ ಎಂದು ಶಾಸಕ ಅರವಿಂದ ಬೆಲ್ಲದ ಎಚ್ಚರಿಕೆ ಗಂಟೆ ಬಾರಿಸಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.ಪ್ರತಿಭಟನೆ ವೇಳೆಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, https://fb.watch/n3EdiUgbaR/?mibextid=RUbZ1f ಬೆಳಿಗ್ಗೆಯಿಂದಲೂ ಹೋರಾಟ ಮಾಡುತ್ತಿದ್ದೇವೆ. ಆದರೆ ಇದುವರೆಗೂ ಕಮೀಷನರ್ ಮಾತ್ರ ಅನುಮತಿ ನೀಡಿಲ್ಲ. ಈ ನಿಟ್ಟಿನಲ್ಲಿ ನಮ್ಮ ಹೋರಾಟ ಶಾಂತಿಯುತವಾಗಿ ಮುಂದುವರೆಯಲಿದೆ ಎಂದರು.ಕೋರ್ಟ್ ಸ್ಪಷ್ಟವಾಗಿಯೇ ಹೇಳಿದ್ದರೂ ಕೂಡ ಅನುಮತಿ …

Read More »

ಕಸಭಾ ಪೊಲೀಸ್ ಠಾಣೆಯಲ್ಲಿ ನಡೆದ ಕರ್ಮ ಕಾಂಡ…?

ನಮಸ್ತೆ ಕರ್ನಾಟಕ……14/7/2023 ರಂದು ಈಗ ಸಮಯ ರಾತ್ರಿ 21 ಗಂಟೆ 20 ನಿಮಿಷ 54 ಸೆಕೆಂಡ್ ಠಾಣೆಗೆ ಸಾಹೇಬ್ರ ಎಂಟ್ರಿ…ಇನ್ಸ್ಪೆಕ್ಟರ್ ರಾಘವೇಂದ್ರ ಹಳ್ಳೂರು ಪೆಟ್ರೋಲಿಂಗ್ ಹೋಗಿರುವುದು ಸುಳ್ಳು, ಯಾಕೆಂದರೆ ಅವರು ಠಾಣೆಯ ಸ್ಟೇಷನ್ ನಲ್ಲಿಯೇ ಇದ್ದಾರೆ. ಸಿಬ್ಬಂದಿ ಕರೆದುಕೊಂಡು ಹೋಗುತ್ತೇನೆ ಎಂದಿದ್ದು ಸುಳ್ಳು. ಈಗ ಸಮಯ 21 ಗಂಟೆ 45 ನಿಮಿಷ ಸ್ಟೇಷನ್ ನಲ್ಲಿ ಇದ್ದುಕೊಂಡೆ ಕಂಪ್ಲೇಟ್ ನೀಡಿರುತ್ತಾರೆ. ಸಮಯ 22ಗಂಟೆ 16 ಸೆಕೆಂಡ್ ಈಗಲೂ ಪೊಲೀಸ್ ಸಿಬ್ಬಂದಿ ಇನ್ಸ್ಪೆಕ್ಟರ್ …

Read More »

ಮುಂದೊಂದು ದಿನ ದಲಿತರಿಗೆ ಅವಕಾಶ ಸಿಕ್ಕೇ ಸಿಗುತ್ತದೆ: ಸತೀಶ್ ಜಾರಕಿಹೊಳಿ.

ಹುಬ್ಬಳ್ಳಿ: ಸಚಿವ ಜಿ. ಪರಮೇಶ್ವರ್​ ಮುಖ್ಯಮಂತ್ರಿ, ಸತೀಶ್ ಜಾರಕಿಹೊಳಿ ಉಪಮುಖ್ಯಮಂತ್ರಿ ಆಗಬೇಕೆಂದು ವಿಧಾನ ಪರಿಷತ್​ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ಸಾಂದರ್ಭಿಕವಾಗಿ ಹೇಳಿರಬಹುದು. ಆದರೆ ಮುಂದೊಂದು ದಿನ ದಲಿತರಿಗೆ ಅವಕಾಶ ಸಿಕ್ಕೇ ಸಿಗುತ್ತದೆ. ಅದಕ್ಕೆ ಕಾಯಬೇಕಷ್ಟೇ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.ನಗರದಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿ.ಕೆ.ಹರಿಪ್ರಸಾದ್ ಅವರು ಒಳ್ಳೆಯ ದೃಷ್ಟಿಯಿಂದ ಹೇಳಿದ್ದಾರೆ. ಹೇಳಿದ ತಕ್ಷಣ ಯಾವುದು ಆಗೋದಿಲ್ಲ. ಈ ಬಗ್ಗೆ ಪಕ್ಷ ನಿರ್ಧಾರ ತೆಗೆದುಕೊಳ್ಳುತ್ತದೆ. ಸದ್ಯ ರಾಜ್ಯದಲ್ಲಿ …

Read More »

ಸೌಭಾಗ್ಯ ಲಕ್ಷ್ಮಿ ಕಾರ್ಖಾನೆಯ ಜೊತೆಗೆ ಸೌರಿನ್ ಶುಗರ್ ಫ್ಯಾಕ್ಟರಿಯೂ ಕೂಡ ಸಾಲ ಮರುಪಾವತಿ ಮಾಡಿಲ್ಲ…

ಶಿರಸಿ (ಉತ್ತರಕನ್ನಡ): ಉತ್ತರ ಕನ್ನಡ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ( ಕೆಡಿಸಿಸಿ ) ನಿಂದ ಮಾಜಿ ಸಚಿವ ರಮೇಶ ಜಾರಕಿಹೊಳಿ ಒಡೆತನದಸೌಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆಗೆ ನೀಡಿದ ಸಾಲ ಮರುಪಾವತಿ ಆಗಿಲ್ಲ ಎಂದು ಮಧ್ಯವರ್ತಿ ಬ್ಯಾಂಕಿನ ಅಧ್ಯಕ್ಷ, ಶಾಸಕ ಶಿವರಾಮ ಹೆಬ್ಬಾರ್ ಹೇಳಿದ್ದಾರೆ. ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೌಭಾಗ್ಯ ಲಕ್ಷ್ಮಿ ಕಾರ್ಖಾನೆಯ ಜೊತೆಗೆ ಸೌರಿನ್ ಶುಗರ್ ಫ್ಯಾಕ್ಟರಿಯೂ ಕೂಡ ಸಾಲ ಮರುಪಾವತಿ ಮಾಡಿಲ್ಲ. ಆದರೆ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಇತರರಿಗೆ …

Read More »

ನಾಳೆ‌ಗೆ ಶಿಕ್ಷೆ ಪ್ರಮಾಣದ ಬಗ್ಗೆ ತೀರ್ಪು ನೀಡಲಿದೆ….

ಬೆಂಗಳೂರು: ನೋಟು ಬ್ಯಾನ್ ಬಳಿಕ ಖೋಟಾನೋಟು ಜಾಲದಲ್ಲಿ ಬಂಧಿತೆಯಾಗಿದ್ದ ಮಹಿಳೆಗೆ ಎನ್ಐಎ ವಿಶೇಷ ನ್ಯಾಯಾಲಯವು ಅಪರಾಧಿ ಎಂದು ತೀರ್ಪು ನೀಡಿದೆ. 53 ವರ್ಷದ ಜೆ.ವನಿತಾ ಆಲಿಯಾಸ್ ತಂಗಂ ರಾಮಚಂದ್ರಪುರ ಎಂಬಾಕೆ ಸುದೀರ್ಘ ವಿಚಾರಣೆ ವೇಳೆ ನಕಲಿ ನೋಟು ಸರಬರಾಜು ಮಾಡಿರುವುದು ರುಜುವಾತಾದ ಹಿನ್ನೆಲೆಯಲ್ಲಿ ಅಪರಾಧಿ ಎಂದು ತೀರ್ಪು ನೀಡಿದ್ದು ನಾಳೆ ಶಿಕ್ಷೆ ಪ್ರಮಾಣ ಘೋಷಿಸಿದೆ. ನೋಟು ಅಮಾನ್ಯಿಕರಣ ವೇಳೆ 2 ಸಾವಿರ ಮುಖಬೆಲೆಯ 6.40 ಲಕ್ಷ ಹಣವನ್ನ ಸಾಗಾಟ ಹಿನ್ನೆಲೆಯಲ್ಲಿ …

Read More »

ಹಂಪಿಯ ಬೀದಿಬದಿ ವ್ಯಾಪಾರಿಗಳ ಮಕ್ಕಳು ಥಾಯ್ಲೆಂಡ್‌ನಲ್ಲಿ ನಡೆಯುವ ಸ್ಪರ್ಧೆಗೆ ಆಯ್ಕೆ…

ಈ ಇಬ್ಬರು ಬಾಲ ಪ್ರತಿಭೆಗಳು ಹಂಪಿಯ ಬೀದಿಬದಿ ವ್ಯಾಪಾರಿಗಳ ಮಕ್ಕಳು. ಇಲ್ಲಿನ ರಂಜು ಆರ್ಟ್ಸ್ ಯೋಗ ಟ್ರಸ್ಟ್​ನಲ್ಲಿ ಅಂದಾಜು 100 ಮಕ್ಕಳಿಗೆ ಉಚಿತವಾಗಿದ್ದ ಯೋಗಾಭ್ಯಾಸದಲ್ಲಿ ಭಾಗಿಯಾಗುತ್ತಿದ್ದರು. ಮಕ್ಕಳ ಪ್ರತಿಭೆ ಗುರುತಿಸಿ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆ ಮಾಡಲಾಗಿತ್ತು. ಇಲ್ಲಿ ವಿಜೇತರಾಗಿ ಥಾಯ್ಲೆಂಡ್‌ನಲ್ಲಿ ನಡೆಯುವ ಸ್ಪರ್ಧೆಗೆ ಆಯ್ಕೆಯಾಗಿದ್ದರು. ಈ ಇಬ್ಬರು ಬಾಲ ಪ್ರತಿಭೆಗಳು ಹಂಪಿಯ ಬೀದಿಬದಿ ವ್ಯಾಪಾರಿಗಳ ಮಕ್ಕಳು. ಇಲ್ಲಿನ ರಂಜು ಆರ್ಟ್ಸ್ ಯೋಗ ಟ್ರಸ್ಟ್​ನಲ್ಲಿ ಅಂದಾಜು 100 …

Read More »

ರಿಕ್ಷಾದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋಮಾಂಸ ಪತ್ತೆ…

ಮಂಗಳೂರು: ನಗರದ ಉರ್ವಸ್ಟೋರ್​ನ ಚಿಲಿಂಬಿ ಬಳಿ ರಿಕ್ಷಾದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋಮಾಂಸವನ್ನು ಪತ್ತೆಹಚ್ಚಿದ ಬಜರಂಗದಳದ ಕಾರ್ಯಕರ್ತರು ಆರೋಪಿಗಳ ಸಹಿತ ಮಾಂಸವನ್ನು ಉರ್ವ ಠಾಣಾ ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಳವಾರ ಗ್ರಾಮದ ದಾವೂದ್, ಜೋಕಟ್ಟೆ ಗ್ರಾಮದ ಬದ್ರುದ್ದೀನ್ ಮತ್ತು ಯಾಸೀನ್ ಎಂಬವರನ್ನು ಬಂಧಿಸಲಾಗಿದೆ. ಭಾನುವಾರ ಬೆಳಗ್ಗೆ ಗೋಮಾಂಸವನ್ನು ಜೋಕಟ್ಟೆಯಿಂದ ರಿಕ್ಷಾದಲ್ಲಿ ನಗರದ ಬೀಫ್ ಸ್ಟಾಲ್​ಗಳಿಗೆ ಸಾಗಣೆ ಮಾಡುತ್ತಿದ್ದ ವೇಳೆ ಅವರನ್ನು ಹಿಡಿಯಲಾಗಿದೆ. ಗೋಮಾಂಸ ಸಾಗಣೆಯ ಮಾಹಿತಿ ತಿಳಿದು ಬಜರಂಗದಳದ ಕಾರ್ಯಕರ್ತರು …

Read More »