BigTv News
September 11, 2023
ಕರ್ನಾಟಕ, ಬೆಂಗಳೂರು, ಸುದ್ದಿ
ಬೆಂಗಳೂರು: ಖಾಸಗಿ ವಾಹನ ಚಾಲಕರ ಬೆಂಗಳೂರು ಬಂದ್ ರಾಜಕೀಯ ಪ್ರೇರಿತವಾಗಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಆರೋಪಿಸಿದ್ದಾರೆ. ಸದಾಶಿವನಗರ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಖಾಸಗಿ ವಾಹನದವರು ಎಲ್ಲರೂ ಬಂದು ಹೋರಾಟ ಮಾಡುವ ಅವಶ್ಯಕತೆ ಇಲ್ಲ. ಖಾಸಗಿ ಬಸ್ನವರಿಗೆ ತೊಂದರೆಯಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ನಮ್ಮ ಶಕ್ತಿ ಯೋಜನೆಯಡಿ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣ ಅವಕಾಶ ನೀಡುರುವುದರಿಂದ ಅವರಿಗೆ ಸಮಸ್ಯೆಯಾಗಿದೆ ಎಂದು ಹೇಳಿದರು. ಆದರೆ ಈ ಹೋರಾಟದಲ್ಲಿ ಓಲಾ, …
Read More »
BigTv News
September 9, 2023
ಕರ್ನಾಟಕ, ದಾವಣಗೆರೆ, ಸುದ್ದಿ
ದಾವಣಗೆರೆ: ವ್ಯಕ್ತಿಯೋರ್ವ ಮದ್ಯದ ಅಮಲಿನಲ್ಲಿ ಮೈ-ಕೈ ಮತ್ತು ಕತ್ತು ಕೊಯ್ದುಕೊಂಡು ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ವಡ್ನಾಳ್ ರಾಜಣ್ಣ ಬಡಾವಣೆಯಲ್ಲಿ ಕಳೆದ ದಿನ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಸವರಾಜ್ (31) ಕತ್ತು ಕೊಯ್ದುಕೊಂಡು ಮೃತಪಟ್ಟ ವ್ಯಕ್ತಿ. ಕ್ಷೌರದ ಅಂಗಡಿಯಲ್ಲಿ ಬ್ಲೇಡ್ ತೆಗೆದುಕೊಂಡು ಮೈ-ಕೈ ಮತ್ತು ಕತ್ತು ಕೊಯ್ದುಕೊಂಡು ಬಸವರಾಜಪ್ಪ, ರಕ್ತ ಸುರಿಯುತ್ತಿದ್ದರು ಬೀದಿ ಬದಿ ತಿರುಗಾಡುತ್ತಿದ್ದುದನ್ನು ಸ್ಥಳೀಯರು ಕಂಡು ತಕ್ಷಣ ಚಿಕಿತ್ಸೆಗೆಂದು ಆಸ್ಪತ್ರೆಗೆ ಸೇರಿಸಿದ್ದರು. ತೀವ್ರ …
Read More »
BigTv News
September 9, 2023
ಕರ್ನಾಟಕ, ಕಲಬುರಗಿ, ಸುದ್ದಿ
ಕಲಬುರಗಿ: ನವದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಗೆ ಆಹ್ವಾನ ಇಲ್ಲದೇ ನಾನು ಹೇಗೆ ಹೋಗಲಿ ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ. ಕಲಬುರಗಿ ಪ್ರವಾಸದಲ್ಲಿರುವ ಅವರು ಮಾಧ್ಯಮದವರ ಜೊತೆ ಮಾತನಾಡಿದರು. ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು, ಇಬ್ಬರು ಒಂದಾಗಿದ್ದಾರೆ ಎಂದು ಪೇಪರ್ನಲ್ಲಿ ನೋಡಿದೆ. ದೇವೇಗೌಡರು ಮತ್ತು ಮೋದಿ ಕೈ ಕೈ ಹಿಡಿದುಕೊಂಡಿರೋದು ನೋಡಿದ್ದೇನೆ. ಅವರಿಬ್ಬರು ಒಂದಾಗುವ ಪ್ರಯತ್ನ ಮಾಡ್ತಿದ್ದಾರೆ. …
Read More »
BigTv News
September 9, 2023
ಕರ್ನಾಟಕ, ಚಿಕ್ಕಮಗಳೂರು, ಸುದ್ದಿ
ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ನಲ್ಲಿ ಮಳೆ ಜೊತೆ ದಟ್ಟ ಮಂಜು ಕವಿದಿದ್ದು, ವಾಹನ ಸವಾರರು ಪಾರ್ಕಿಂಗ್ ಲೈಟ್, ಹೆಡ್‍ಲೈಟ್, ಫಾಗ್ ಲೈಟ್ ಹಾಕಿಕೊಂಡು ಹೋದರೂ ವಾಹನ ಸಂಚಾರ ದುಸ್ತರವಾಗುವಂತಹ ಸ್ಥಿತಿ ನಿರ್ಮಾಣವಾಗಿದೆ. 22 ಕಿ.ಮೀ. ವ್ಯಾಪ್ತಿಯ ಕೊಟ್ಟಿಗೆಹಾರ- ಚಾರ್ಮಾಡಿ ಮಾರ್ಗದಲ್ಲಿ ಭಾರಿ ಮಂಜು ಕವಿದಿದ್ದು, ಆ ಮಂಜಿನಲ್ಲಿ ವಾಹನ ಸಂಚರಿಸಲಾಗದೆ ಎರಡು ಅಪಘಾತಗಳು ಕೂಡ ಸಂಭವಿಸಿವೆ. ಬಿದಿರುತಳ ಗ್ರಾಮದ ಬಸ್ ನಿಲ್ದಾಣದ ಬಳಿ ಮಂಗಳೂರಿಗೆ ಹೋಗುತ್ತಿದ್ದ, ಬೊಲೆರೋ …
Read More »
BigTv News
September 9, 2023
ಕರ್ನಾಟಕ, ಸುದ್ದಿ, ಹುಬ್ಬಳ್ಳಿ, ಹುಬ್ಬಳ್ಳಿ ಸುದ್ದಿ
ಹುಬ್ಬಳ್ಳಿ: ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ‘ಮೈತ್ರಿ ಬಗ್ಗೆ ನನಗೇನು ಗೊತ್ತಿಲ್ಲ. ಈ ವಿಷಯದಲ್ಲಿ ಅಧಿಕೃತ ಮಾಹಿತಿ ಬರುವವರೆಗೆ ನಾನು ಏನು ಹೇಳುವುದಿಲ್ಲ’ ಎಂದರು ಶುಕ್ರವಾರ (ನಿನ್ನೆ) ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಡಿಎಂಕೆ ನಾಯಕ ಎ ರಾಜಾ ಮತ್ತು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ಖಂಡಿಸುವ ಪ್ರಯತ್ನ ಮಾಡಿಲ್ಲ. ಘಮಂಡಿಯಾ ಘಟಬಂಧನ ಪ್ರಚಾರ ಬಹಳಷ್ಟು ನಡೆಯುತ್ತಿದೆ. ಇದು ಅರ್ಥವಿಲ್ಲದ …
Read More »
BigTv News
September 9, 2023
ಕರ್ನಾಟಕ, ಬೆಳಗಾವಿ, ಸುದ್ದಿ
ಬೆಳಗಾವಿ: ಶ್ರಾವಣ ಮಾಸದ ನಿಮಿತ್ತ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಅವರು ಬೆಳಗಾವಿಯಲ್ಲಿ ನಡೆಸುತ್ತಿರುವ ಜನಜಾಗೃತಿ ಪಾದಯಾತ್ರೆಗೆ ಜಾತಿ, ಧರ್ಮಗಳ ಎಲ್ಲೆ ಮೀರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮುಸ್ಲಿಂ ಬಾಂಧವರು ಕೂಡ ಪಾದಯಾತ್ರೆ ಸ್ವಾಗತಿಸುವ ಮೂಲಕ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ. ಹೌದು, ಇಂದು ಮಠಗಳಿಗೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗುತ್ತಿದೆ. ಹಾಗಾಗಿ ಭಕ್ತರ ಕಡೆಗೆ ನಾವೇ ಹೋಗಬೇಕೆಂದು ಡಾ. ಅಲ್ಲಮಪ್ರಭು ಸ್ವಾಮೀಜಿ ನಿರ್ಧರಿಸಿ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ನಾಗನೂರು …
Read More »
BigTv News
September 9, 2023
ಕರ್ನಾಟಕ, ಬೆಂಗಳೂರು, ಸುದ್ದಿ
ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರಿಗೆ ಶೇ.50ರಷ್ಟು ರಿಯಾಯಿತಿ ದಂಡ ಪಾವತಿಗೆ ಇಂದು(ಶನಿವಾರ) ಕೊನೆ ದಿನವಾಗಿದ್ದು, ಫೆಬ್ರುವರಿ 11ರ ಮುನ್ನ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಸವಾರರಿಗೆ ಈ ಆದೇಶ ಅನ್ವಯವಾಗಲಿದೆ. ಸವಾರರು ಸದ್ಬಳಕೆ ಮಾಡಿಕೊಳ್ಳುವಂತೆ ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದಾರೆ. ರಾಜ್ಯ ಕಾನೂನು ಸೇವೆ ಪ್ರಾಧಿಕಾರ ಶಿಫಾರಸು ಮೇರೆಗೆ ರಾಜ್ಯ ಸರ್ಕಾರ ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಶೇ.50 ರಷ್ಟು ದಂಡ ಪಾವತಿಸುವ ಬಗ್ಗೆ ಆದೇಶ ಹೊರಡಿಸಿತ್ತು. ಮೊದಲ …
Read More »
BigTv News
September 8, 2023
ಕರ್ನಾಟಕ, ಬೆಂಗಳೂರು, ಸುದ್ದಿ
ಬೆಂಗಳೂರು : ಯೂಟರ್ನ್ ಪಡೆಯುತ್ತಿದ್ದಾಗ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಶಾಲಾ ಮಕ್ಕಳಿದ್ದ ವ್ಯಾನ್ ಪಲ್ಟಿಯಾದ ಘಟನೆ ಬನಶಂಕರಿಯ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಇಂದು ನಡೆದಿದೆ. ಬೆಳಗ್ಗೆ ಕಾಮಾಕ್ಯ ಕಡೆಯಿಂದ ಪದ್ಮನಾಭ ನಗರದ ಖಾಸಗಿ ಶಾಲೆಗೆ ತೆರಳುತ್ತಿದ್ದ ವ್ಯಾನ್ ಚಾಲಕ ರಸ್ತೆ ಸಿಗ್ನಲ್ ಫ್ರೀ ಇದ್ದುದರಿಂದ ದಿಢೀರ್ ಯೂಟರ್ನ್ ಪಡೆದಿದ್ದಾರೆ. ಈ ವೇಳೆ ವ್ಯಾನ್ ಚಕ್ರ ರಸ್ತೆ ವಿಭಜಕದ ಮೇಲೆ ಹತ್ತಿ, ಪಲ್ಟಿಯಾಗಿದೆ. ವ್ಯಾನ್ನಲ್ಲಿ ಹತ್ತಕ್ಕೂ ಹೆಚ್ಚು ಮಕ್ಕಳಿದ್ದರು. …
Read More »
BigTv News
September 8, 2023
ಕರ್ನಾಟಕ, ಮೈಸೂರು, ಸುದ್ದಿ
ಮೈಸೂರು: ಬರಡು ಭೂಮಿಯಲ್ಲಿ ಮಲೆನಾಡಿನ ವಾತಾವರಣ ಸೃಷ್ಟಿಸಿದ ಕನ್ನಡ ಉಪನ್ಯಾಸಕರೊಬ್ಬರ ಕಾರ್ಯವೈಖರಿಗೆ ಇಲ್ಲಿನ ದೊಡ್ಡ ಕವಲಂದೆ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ವಿದ್ಯಾರ್ಥಿಗಳ ಪ್ರಗತಿಗೆ ಕಾಲೇಜಿನ ಉತ್ತಮ ವಾತಾವರಣವೂ ಪೂರಕ ಎಂಬ ಮಾತಿಗೆ ನಂಜನಗೂಡು ತಾಲೂಕಿನ ದೊಡ್ಡಕವಲಂದೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಾಕ್ಷಿಯಾಗಿದೆ. ಬರಡು ಬಯಲಾಗಿದ್ದ ಈ ಕಾಲೇಜು ಆವರಣವೀಗ ಸಸ್ಯಕಾಶಿಯಾಗಿ ರೂಪುಗೊಂಡಿದೆ. ಕನ್ನಡ ಉಪನ್ಯಾಸಕ ಹಾಗೂ ಎನ್.ಎಸ್.ಎಸ್ ಅಧಿಕಾರಿಯೂ ಆಗಿರುವ ವೆಂಕಟರಮಣ ಮತ್ತು ವಿದ್ಯಾರ್ಥಿಗಳು, …
Read More »
BigTv News
September 8, 2023
ಕರ್ನಾಟಕ, ರಾಮನಗರ, ಸುದ್ದಿ
ರಾಮನಗರ: ಕನಕಪುರಕ್ಕೆ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಮೆಡಿಕಲ್ ಕಾಲೇಜು ಸ್ಥಳಾಂತರ ವಿರೋಧಿಸಿ ಇಂದು ಕರೆ ನೀಡಿದ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಬಂದ್ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿದೆ. ವಿವಿಧ ರಾಜಕೀಯ ಪಕ್ಷಗಳು, ಕನ್ನಡಪರ ಸಂಘಟನೆಗಳು ಹಾಗೂ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಬಂದ್‌ಗೆ ಕರೆ ನೀಡಲಾಗಿತ್ತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ರಾಮನಗರ ಜನತೆ ಸ್ವಯಂಪ್ರೇರಣೆಯಿಂದ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ, ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು ನಮಗೆ ಬೇಕು ಎನ್ನುವ …
Read More »