ಹುಬ್ಬಳ್ಳಿ: ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ‘ಮೈತ್ರಿ ಬಗ್ಗೆ ನನಗೇನು ಗೊತ್ತಿಲ್ಲ. ಈ ವಿಷಯದಲ್ಲಿ ಅಧಿಕೃತ ಮಾಹಿತಿ ಬರುವವರೆಗೆ ನಾನು ಏನು ಹೇಳುವುದಿಲ್ಲ’ ಎಂದರು
ಶುಕ್ರವಾರ (ನಿನ್ನೆ) ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಡಿಎಂಕೆ ನಾಯಕ ಎ ರಾಜಾ ಮತ್ತು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ಖಂಡಿಸುವ ಪ್ರಯತ್ನ ಮಾಡಿಲ್ಲ. ಘಮಂಡಿಯಾ ಘಟಬಂಧನ ಪ್ರಚಾರ ಬಹಳಷ್ಟು ನಡೆಯುತ್ತಿದೆ. ಇದು ಅರ್ಥವಿಲ್ಲದ ಘಟಬಂಧನ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರ
ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಕಮ್ಯೂನಿಸ್ಟ್ ವಿರುದ್ಧ ಕಾಂಗ್ರೆಸ್ ಸಾಕಷ್ಟು ಕಡೆ ಸ್ಪರ್ಧೆ ಮಾಡಿದೆ. ಮುಂಬೈ, ಪಾಟ್ನಾ, ದೋಸ್ತಿ. ಕೇರಳದಲ್ಲಿ ಕುಸ್ತಿ. ಇದು ಅವರ ನೀತಿಯಾಗಿದೆ. ಮಮತಾ ಬ್ಯಾನರ್ಜಿಯವರು ಕಮ್ಯೂನಿಸ್ಟ್ ವಿರುದ್ಧವಾಗಿ ಸ್ಪರ್ಧೆ ಮಾಡಿದ್ದಾರೆ. ಇದು ತುಷ್ಟೀಕರಣದ ಘಟಬಂಧನ. ಇದರಿಂದ ದೇಶದ ಸನಾತನ ಧರ್ಮ ಹಾಗೂ ಸಂಸ್ಕೃತಿಗಳನ್ನು ಹಿಯಾಳಿಸುವ ಕೆಲಸವಾಗಿದೆ ಎಂದು ಜೋಶಿ ಹರಿಹಾಯ್ದರು. ಕೇವಲ ವೋಟಗಾಗಿ ಹಿಂದೂ ಧರ್ಮವನ್ನು ಹಿಯಾಳಿಸಲಾಗುತ್ತಿದೆ. ದೇಶದ ಜನರನ್ನು ಇವರು ಬೇಕೆಂದೇ ಹಿಯಾಳಿಸುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತಿದೆ. ರಾಹುಲ್ ಗಾಂಧಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿ ಡ್ರಾಮಾ ಮಾಡುತ್ತಾರೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





