Breaking News

ಕರ್ನಾಟಕ

ಆರ್​ಎಸ್​ಎಸ್​ನ ಹಿರಿಯ ಪ್ರಚಾರಕ ಮದನ್ ದಾಸ್ ದೇವಿ ನಿಧನ..

ಬೆಂಗಳೂರು: ಆರ್​ಎಸ್​ಎಸ್​ನ ಹಿರಿಯ ಪ್ರಚಾರಕ ಮದನ್ ದಾಸ್ ದೇವಿ (81 ವರ್ಷ ವಯಸ್ಸು) ಇಂದು ಮುಂಜಾನೆ 5 ಗಂಟೆಗೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮದನ್ ದಾಸ್ ದೇವಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಇಂದು ಮಧ್ಯಾಹ್ನ 1.30ರಿಂದ 4ರ ತನಕ ಬೆಂಗಳೂರಿನ ಆರ್​ಎಸ್​ಎಸ್​ ಕಾರ್ಯಾಲಯ ಕೇಶವ ಕೃಪಾದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಂಗಳವಾರ ಮಹಾರಾಷ್ಟ್ರದ ಪುಣೆಯಲ್ಲಿ ಅಂತ್ಯಕ್ರಿಯೆ ಜರುಗಲಿದೆ.‌ ಜ್ಯೇಷ್ಠ ಪ್ರಚಾರಕರಾಗಿದ್ದ …

Read More »

ಹುಮನಾಬಾದ್ : ಮಳೆಗೆ ಐದು ಮನೆ ಗೋಡೆ ಕುಸಿತ

ಬೀದರ್,ಹುಮನಾಬಾದ್: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಶುಕ್ರವಾರ ಸಂಜೆ ಸುರಿದ ಮಳೆಗೆ ‌ 5 ಮನೆಗಳ ಗೋಡೆ ಕುಸಿದಿವೆ ಎಂದು ತಹಶೀಲ್ದಾರ್ ಅಂಜುಂ ಲಸ್ಕರ್ ತಿಳಿಸಿದರು. ತಾಲ್ಲೂಕಿನ ಸೀತಾಳಗೇರಾ ಗ್ರಾಮ ಸೇರಿದಂತೆ ಒಟ್ಟು ಐದು ಮನೆಗಳ ಗೋಡೆ ಕುಸಿದಿವೆ. ಶನಿವಾರ ತಾಲ್ಲೂಕಿನಾದ್ಯಂತ ಮೋಡ ಕವಿದ ವಾತಾವರಣವಿತ್ತು. ಹುಮನಾಬಾದ್ ಪಟ್ಟಣದಲ್ಲಿ 14 ಮಿ.ಮೀ, ದುಬಲಗುಂಡಿಯಲ್ಲಿ 6 ಮಿ.ಮೀ. ಹಳ್ಳಿಖೇಡ್ ಬಿ. ಪಟ್ಟಣದಲ್ಲಿ 14.2 ಮಿ.ಮೀ ಮಳೆ ದಾಖಲಾಗಿದೆ.

Read More »

ರಸ್ತೆ ಕುಸಿದು ಸಿಲುಕಿಕೊಂಡ ಕಟ್ಟಿಗೆ ತುಂಬಿದ್ದ ಲಾರಿ

ಕಲಘಟಗಿ: ಬೇಡ್ತಿ ನಾಲಾ ಪೈಪ್‌ಲೈನ್ ಕಾಮಗಾರಿ ಮಾಡಲಾಗಿದ್ದು ಸ್ಥಳದಲ್ಲಿ ರಸ್ತೆ ಕುಸಿದು ಲಾರಿ ಸಿಲುಕಿಕೊಂಡ ಘಟನೆ ತಾಲ್ಲೂಕಿನ ಮಲಕನಕೊಪ್ಪ ಗ್ರಾಮದ ಹತ್ತಿರದ ರಾಜ್ಯ ಹೆದ್ದಾರಿ ನಡು ರಸ್ತೆಯಲ್ಲಿ ನಡೆದಿದೆ. ಲಾರಿಯೊಂದು ಕಟ್ಟಿಗೆ ತುಂಬಿಕೊಂಡು ತಡಸ ಕಡೆಯಿಂದ ಹಳಿಯಾಳಕ್ಕೆ ಹೋಗುವಾಗ ಕಲಘಟಗಿ ತಡಸ ರಸ್ತೆ ಮಾರ್ಗ ಮಧ್ಯೆ ಕುಸಿದು ಅಲ್ಲೇ ಸಿಲುಕಿಕೊಂಡಿದೆ. ಲಾರಿ ಟೈಯರ್‌ಗಳು ಕುಸಿದು ಪಲ್ಟಿಯಾಗುವ ಸಂಭವ ಕೂಡ ಇದ್ದು, ಈ ರಸ್ತೆಯಲ್ಲಿ ಸಣ್ಣ ಪುಟ್ಟ ವಾಹನ ಬಿಟ್ಟರೆ ಬಸ್ …

Read More »

ನಾಳೆ ಜು.24 ರಂದು ಜಿಲ್ಲೆಯ ಎಲ್ಲ ಶಾಲ್ ಗಳು ಒಂದು ದಿನ ರಜೆ ನೀಡಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ

ಧಾರವಾಡ ಜಿಲ್ಲೆ ಆದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿರುವದರಿಂದ ನಾಳೆ ಜುಲೈ 24 ರಂದು ಜಿಲ್ಲೆಯ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಒಂದು ದಿನದ ರಜೆ ಘೋಷಿಸಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಇಂದು ಸಂಜೆ ಆದೇಶಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕಳೆದ ಎರಡಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಮಕ್ಕಳ ರಕ್ಷಣೆ ಹಿತದೃಷ್ಟಿಯಿಂದ ನಾಳೆ ಒಂದು ದಿನ ಮಾತ್ರ ಜಿಲ್ಲೆಯ ಎಲ್ಲ ಪ್ರಾಥಮಿಕ …

Read More »

ಹುಬ್ಬಳ್ಳಿ ಯಲ್ಲಿ ಖಾಸಗಿ ಬಸ್ ಡಿಕ್ಕಿ ಪಾದಾಚಾರಿ ಸಾವು

ಹುಬ್ಬಳ್ಳಿ: ಖಾಸಗಿ ಬಸ್ಸವೊಂದು ಪಾದಾಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಭೀಕರವಾಗಿ ಸಾವನ್ನಪ್ಪಿದ ಘಟನೆ ಇಂದು ಬೆಳಿಗ್ಗೆ ನಗರದ ಗದಗ ರಸ್ತೆಯ ರೈಲ್ವೆ ಕಲ್ಯಾಣ ಕೇಂದ್ರದ ಬಳಿ ನಡೆದಿದೆ. ಭೀಕರವಾಗಿ ಸಾವನ್ನಪ್ಪಿದ ವ್ಯಕ್ತಿಯು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದ್ದು, ಸಾವನ್ನಪ್ಪಿದ ವ್ಯಕ್ತಿಯ ಹೆಸರು ಇನ್ನೂ ತಿಳಿದು ಬಂದಿಲ್ಲ. ಘಟನೆ ನಡೆಯುತ್ತಿದಂತೆ ಬಸ್ ಚಾಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಘಟನೆ ಕುರಿತಂತೆ ಪೂರ್ವ ಸಂಚಾರ ಪೊಲೀಸ್ ಠಾಣೆಯಲ್ಲಿ …

Read More »

ಕಂಬಾರಗಣವಿ ಗ್ರಾಮದ ಸೇತುವೆ ಶಾಶ್ವತ ಪರಿಹಾರ

ಧಾರವಾಡ : ಕಂಬಾರ ಗಣವಿ ಗ್ರಾಮದ ಸೇತುವೆ ಮಳೆಯಿಂದ ಮುಳುಗಡೆಯಾದ ಹಿನ್ನೆಲೆಯಲ್ಲಿ ಸಚಿವ ಸಂತೋಷ ಲಾಡ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಕಂಬಾರಗಣವಿ ಗ್ರಾಮಸ್ಥರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಭರವಸೆಯನ್ನು ನೀಡಿದರು. ಧಾರವಾಡ ಜಿಲ್ಲೆಯ ಅಳ್ಳಾವರ ತಾಲೂಕಿನ ಕಂಬಾರ ಗಣವಿ ಗ್ರಾಮದ ಸೇತುವೆ ಸಮಸ್ಯೆಯಿಂದ ಪ್ರತಿನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಈ ಕುರಿತು ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಈಗಲಾದರೂ ನಮ್ಮ ಗ್ರಾಮಕ್ಕೆ ಸುಸಜ್ಜಿತ ಸೇತುವೆ ನಿರ್ಮಾಣ …

Read More »

ಇಬ್ಬರು ಇಲಾಖಾ ಸಿಬ್ಬಂದಿಗಳು ಸುಪಾರಿ ಮಟ್ಟಕ್ಕೆ ಹೋಗಿದು ಸುಳ್ಳು..? ಇದು ಅಂದರ್ ಬಾಹರ್ ಮಾಮುಲಿ…!

ಹುಬ್ಬಳ್ಳಿಯ ರಾಣೆಯಲ್ಲಿ ಇಬ್ಬರ Pcಗಳ ಗುದ್ದಾಟ,, ನ್ಯಾಯ ಅನ್ಯಾಯಕ್ಕಾಗಿ ಇಬ್ಬರ ಹೋರಾಟ . ಅಂದರ ಬಾಹರ್ ವಿಷಯದ ಕಾಸು ನಂದು ನಿಂದು ಎಂದು. A Pc ಮತ್ತು B Pc ಮದ್ಯ ಜಗಳ .ಈ ಜಗಳ ಸುಪಾರಿ ಮಟ್ಟಕ್ಕೆ ಹೋಗಿದ್ದು ಸುಳ್ಳು,ಆದರೆ ಜಗಳ 100 ಕ್ಕೆ 100 ಸತ್ಯಾ.ಅಂದರ್ ಬಾಹರ್ ನೀಲಿಸ ಬೇಕಾದ ಪೊಲೀಸರೇ ಅಂದರ್ ಬಾಹರ್ ಕಾಸಿಗಾಗಿ ತಾವೇ ಕಿತ್ತಾಡಿದರೂ, ಅಂದರ್ ಬಾಹರ್ ನಿಲಿಸದೆ ಎಷ್ಟು ಜನರ ಮನೆ …

Read More »

ನಿರಂತರ ಮಳೆಯಿಂದ ಜಿಲ್ಲೆಯಲ್ಲಿ ಮನೆಗಳು ಕುಸಿತ

ಧಾರವಾಡ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವದರಿಂದ ಜುಲೈ 20 ರ ರಾತ್ರಿಯಿಂದ ಜುಲೈ 22 ರ ಬೆಳಿಗ್ಗೆ 8 ಗಂಟೆಯವರೆಗೆ ಜಿಲ್ಲೆಯ ವಿವಿಧ ತಾಲೂಕಿನ ಗ್ರಾಮಗಳಲ್ಲಿನ ಸುಮಾರು 30 ಮನೆಗಳಿಗೆ ಹಾನಿ ಆಗಿದ್ದು, ಗೊಡೆ ಕುಸಿದು 5 ಕುರಿಮರಿಗಳ ಜೀವ ಹಾನಿ ಆಗಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ. ನಿರಂತರ ಮಳೆಯಿಂದಾಗಿ ಧಾರವಾಡ ತಾಲೂಕಿನಲ್ಲಿ ೨೫ ಹುಬ್ಬಳ್ಳಿ ಗ್ರಾಮೀಣ ತಾಲೂಕಿನಲ್ಲಿ 3, ಅಳ್ನಾವರ ತಾಲೂಕಿನಲ್ಲಿ 3, ಹುಬ್ಬಳ್ಳಿ ಶಹರ ತಾಲೂಕಿನಲ್ಲಿ …

Read More »

ಭಾರಿ ಮಳೆಗೆ ಮನೆ ಕುಸಿದು ಬಿದ್ದು ಒಂದೇ ಕುಟುಂಬದ 13 ಮಂದಿ ಗಾಯ…

ಬೆಳಗಾವಿ : ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ. ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಭಾರಿ ಮಳೆಗೆ ಮನೆ ಕುಸಿದು ಬಿದ್ದು ಒಂದೇ ಕುಟುಂಬದ 13 ಮಂದಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಬುಡರಕಟ್ಟಿ ಗ್ರಾಮದಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಶುಕ್ರವಾರ ಮನೆಯ ಸದಸ್ಯರೆಲ್ಲ ಮನೆಯಲ್ಲಿ ಟಿವಿ ನೋಡುತ್ತ ಕುಳಿತಿದ್ದರು. ಈ ವೇಳೆ ಏಕಾಏಕಿ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಸದ್ದು …

Read More »

ರೈತರ ಆತ್ಮಹತ್ಯೆ ತಡೆಯಲು ಧಾರವಾಡದಲ್ಲಿ ಸಮಾವೇಶ

ಧಾರವಾಡ: 43ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಧಾರವಾಡದ ರಪಾಟಿ ಕಲ್ಯಾಣ ಮಂಟಪದಲ್ಲಿ ರೈತರ ಮುಂದಿನ ಘೋಷಣಾ ಸಮಾವೇಶ ಶುಕ್ರವಾರ ಜರುಗಿತು. ನವಲಗುಂದದಲ್ಲಿನ ಬಸಪ್ಪ ಲಕ್ಕುಂಡಿ‌ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿದ ಬಳಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಸಭೆಯ ನಿರ್ಣಯ ಮಂಡನೆ ಬಳಿಕ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾಧ್ಯಮದೊಂದಿಗೆ ಮಾತನಾಡಿ, ಸಮಾವೇಶದಲ್ಲಿ ಒಟ್ಟು 16 ನಿರ್ಣಯ ಮಂಡನೆ ಮಾಡಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸುವ ಸಂಕಲ್ಪ ಮಾಡಲಾಗಿದೆ. ರಾಜ್ಯ …

Read More »