Breaking News

ಜಿಲ್ಲೆ

ಆರ್.ವಿ.ದೇಶಪಾಂಡೆ ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸ ನಡೆಸಿ, ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ

ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವ್ರು ಇಂದು ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸ ನಡೆಸಿ, ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.ಮೊದಲಿಗೆ ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಗೇಟ್‍ನಲ್ಲಿ ಸ್ಥಳೀಯ ಮುಖಂಡರಿಂದ ಸ್ವಾಗತ ಸ್ವೀಕರಿಸಿದ ಸಚಿವರು, ಬಳಿಕ ತುಂಬಿದ ಬೆಂಡರವಾಡಿ ಕೆರೆಯನ್ನು ವೀಕ್ಷಿಸಿದ್ರು. ನಂತ್ರ ಬದನಗುಪ್ಪೆ ಗ್ರಾಮದ ರೈತ ನಾಗರಾಜು ಎಂಬುವವರಿಗೆ ಸೇರಿದ, ಮಳೆಗೆ ನೆಲಕಚ್ಚಿದ ಬಾಳೆ ಬೆಳೆಯನ್ನು ವೀಕ್ಷಿಸಿ, ಸ್ಥಳದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ, ರೈತ ನಾಗರಾಜು, ಜಿಲ್ಲಾಧಿಕಾರಿ ಕಾವೇರಿಯವರೊಂದಿಗೆ …

Read More »

ಈತನ ವರ್ತನೆ ನೋಡುಗರಿಗೆ ಪುಕ್ಕಟೆ ಮನರಂಜನೆ

ಮಂಗಳೂರು:ಯೋಗ ದಿನಾಚರಣೆ ನಾಳೆ ನಡೆಯುತ್ತೆ. ಅದಕ್ಕಿಗಾಗಲ್ಲೇ ಹಲವು ವಿದ್ಯಾಸಂಸ್ಥೆಗಳಲ್ಲಿ ಹಾಗೂ ಮೈದಾನಗಳಲ್ಲಿ ತರಭೇತಿ ನಡೆಯುತ್ತಿದೆ. ಆದ್ರೇ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ವ್ಯಕ್ತಿಯೊರ್ವ ತರಭೇತಿ ಕೇಂದ್ರಗಳನ್ನು ಬಿಟ್ಟು ರಸ್ತೆ ಮದ್ಯೆದಲ್ಲಿ ಯೋಗಾಭ್ಯಾಸ ನಡೆಸಿದ್ದಾನೆ. ಇಷ್ಟೇ ಅಲ್ಲದೇ ಯೋಗದ ಜೊತೆಗೆ ಕರಾಟೆಯ ಒಂದೆರಡು ಜಲಕ್ ಸಹ ನೀಡಿದ್ದಾನೆ. ಈತನ ಈ ಹುಚ್ಚು ವರ್ತನೆ ನೆರೆದಿದ್ದ ಜನರಿಗೆ ಒಂದಿಷ್ಟು ಕಾಲ ಮನರಂಜನೆ ತಂದಿತ್ತು. ಈತ ಮದ್ಯಪಾನ ಮಾಡಿದ್ದನಾ ಅಥವಾ ಮಾನಸಿಕ …

Read More »

‌ಬಸ್ ನಿಲ್ದಾಣದ ಕಾಮಗಾರಿಯಲ್ಲೂ ಅನುದಾನ ದುರ್ಬಳಕೆ.

ಗ್ರಾಮಕ್ಕೊಂದು ಬಸ್ ನಿಲ್ದಾಣ ಇದ್ರೆ ಸಾಕು. ಆದ್ರೆ ಇಲ್ಲೋಂದು ಗ್ರಾಮದಲ್ಲಿ ಒಂದು ಉತ್ತಮವಗಿರೋ ಬಸ್ ನಿಲ್ದಾಣ ಇದ್ರೂ ಕೂಡಾ ಇನ್ನೊಂದು ಬಸ್ ನಿಲ್ದಾಣ ಮಡಲಾಗಿದೆ. ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಭರಮಣ್ಣ ನಾಯಕ ದುರ್ಗದಲ್ಲಿ ನಡೆದಿದೆ.ಜಿಲ್ಲಾಪಂಚಾಯತಿ ಅನುದಾನದಲ್ಲಿ 4ಲಕ್ಷ ವೆಚ್ಚದಲ್ಲಿ ಒಂದು ಉತ್ತಮವಾದ ಬಸ್ ತಂಗುದಾಣವಿದೆ.ಅದರ ಪಕ್ಕದಕ್ಕಿ ಕೇವಲ ಜಂಕ್ ಶೀಟ್ ಹಾಕಿದ ಯಾವುದೇ ಉಪಯೋಗವಿಲ್ಲದ 5ಲಕ್ಷದ ಬಸ್ ನಿಲ್ದಾಣವನ್ನು ಭೂಸೇನಾ ನಿಗಮದವರು ನಿರ್ಮಸಿದ್ದಾರೆ.ಮಳೆ ಬಿಸಿಲಿಗೆ ತಡೆ ಇಲ್ಲದ …

Read More »

ಪೋಷಕರ ಮೇಲೆ ಹರಿದ ಲಾರಿ

ರಸ್ತೆಬದಿ ಬೈಕ್ ನಿಲ್ಲಿಸಿ ಮಗುವನ್ನು ಮೂತ್ರ ವಿಸರ್ಜನೆ ಮಾಡಿಸುತ್ತಿದ್ದ ಪೋಷಕರ ಮೇಲೆ ಲಾರಿ ಹರಿದ ಘಟನೆ ಚಾಮರಾಜನಗರ ತಾಲೂಕಿನ ಮುತ್ತಿಗೆ ಗ್ರಾಮದ ಬಳಿ ನಡೆದಿದೆ. ಬೈಕ್ ನಲ್ಲಿದ್ದ ದಂಪತಿಗಳಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಐದು ವರ್ಷದ ಮಗು ಪಾರಾಗಿದೆ. ಮಾದೇಶ್(೫೦), ಮಣಿ(೩೫) ಮೃತ ದಂಪತಿಗಳು. ಚಾಮರಾಜನಗರದ ಕಾಗಲವಾಡಿಯಿಂದ ಮೈಸೂರಿಗೆ ತೆರಳುವಾಗ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು.

Read More »

ಸಹಾಯ ಹಸ್ತ ನೀಡಿದ ಶಾಸಕಿ ಅಂಜಲಿ ನಿಂಬಾಳಕರ್

ಬರಿ ಗುಡಿ, ಮಠಗಳಿಗೆ ನೆರವು ಹಸ್ತ ನೀಡುವ ರಾಜಕಾರಣಿಗಳು ಜನರ ಸಮಸ್ಯೆಗೆ ಸ್ಪಂದಿಸುವುದು ಅತೀ ವಿರಳ. ಆದ್ರೇ ಕುಂದಾನಗರೀಯಲ್ಲಿ ಬಡ ರೋಗಿಯ ನೆರವಿಗೆ ಶಾಸಕಿ ಮುಂದಾಗಿದ್ದಾರೆ. ಖಾನಾಪುರ ಶಾಸಕಿ ಅಂಜಲಿ ನಿಂಬಾಳಕರ್ ರವರು ತಾಲೂಕಿನ ಮೆಂಡೆಗಾಳಿ ಗ್ರಾಮದ ರೋಗಿ ಮುರಳಿಧರ್ ಕಾಕತಕರಗೆ ಸಹಾಯ ಹಸ್ತ ನೀಡಿದ್ದಾರೆ. ಮೂತ್ರಪಿಂಡ ಚಿಕಿತ್ಸೆಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 2 ಲಕ್ಷ ಪರಿಹಾರ ನೀಡಿದರು. ತುರ್ತು ಚಿಕಿತ್ಸೆಗಾಗಿ ಖುದ್ದು ಸಿಎಂ ಭೇಟಿ ಮಾಡಿ ಪರಿಹಾರ ಒದಗಿಸುವಲ್ಲಿ …

Read More »

ಪಕ್ಷದಲ್ಲಿ ನನ್ನನ್ನು ಕಡೆಗಣಿಸಲು ನಾನೇನು ಯುವಕನೇ?

ಕಾಂಗ್ರೆಸ್ ಪಕ್ಷದಲ್ಲಿ ನನ್ನನ್ನು ಕಡೆಗಣಿಸಲು ನಾನೇನು ಯುವಕನೇ? ಎಂದು ಚಾಮರಾಜನಗರದಲ್ಲಿ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿಕೆ ನೀಡಿದರು. ಪ್ರತಿಯೊಬ್ಬರಿಗೂ ಒಂದು ಕಾಲವಿರ್ತದೆ. ಅದರ ಆಧಾರದ ಮೇಲೆ ಕೆಲಸ ಮಾಡ್ತಾರೆ. ಯಾವಾಗಲೂ ಕಂಪ್ಲೇಂಟ್ ಮಾಡೋ ದೃಷ್ಟಿಯಲ್ಲಿ ಇರಬಾರದು. ಅಡ್ಜಸ್ಟ್ ಮಾಡ್ಕೊಂಡು ಹೋಗ್ಬೇಕು. ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡೋರು ಯಾರು? ಅವರು ಸೇಫ್ ಲೀಡರ್. ಅವ್ರು ನಮ್ಮ ನಾಯಕರಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಅಧ್ಯಕ್ಷರಿದ್ದಾರೆ. ಮೇಜರ್ ಸರ್ಜರಿ ನಡೆಯುವ ಪ್ರಶ್ನೆಯೇ …

Read More »

ರೇಣುಕಾ ದೇವಿಯ ಹುಂಡಿ‌ ಎಣಿಕೆ ಕಾರ್ಯ ಆರಂಭ

ಉತ್ತರ ‌ಕರ್ನಾಟಕ‌ ಭಾಗದ ಪ್ರಸಿದ್ಧ ‌ದೇವಸ್ಥಾನಗಳಲ್ಲಿ ಒಂದಾದ ದೇವಸ್ಥಾನ ಬೆಳಗಾವಿ ಜಿಲ್ಲೆಯ ಸವದತ್ತಿ ರೇಣುಕಾ ದೇವಿಯ ಹುಂಡಿ‌ ಎಣಿಕೆ ಕಾರ್ಯ ನಡೆಯಿತು. ದೇವಸ್ಥಾನದ ಟ್ರಸ್ಟ್‌ ಸಮಿತಿ ಸಿಇಒ ರವಿ‌ ಕೊಟಾರಗಸ್ತಿ, ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿ ಎಂ.ಬಿ. ವಾಲಿ ನೇತೃತ್ವದಲ್ಲಿ ಎಣಿಕೆ ಕಾರ್ಯ ಆರಂಭವಾಗಿದೆ. ಮೊದಲನೇ ದಿನ 38,32,029 ರೂ ಹಣ 197 ಗ್ರಾಂ ಚಿನ್ನ, ಒಂದುವರೆ ಕೆಜಿ ಬೆಳ್ಳಿ, ಸಂಗ್ರಹವಾದ ದೇಣಿಗೆಯಾಗಿದೆ. ಮೇ ತಿಂಗಳಲ್ಲಿ ಭಕ್ತರು ಹುಂಡಿಗೆ ಹಾಕಿದ …

Read More »

ಅಹಿಂಸೆ ಪ್ರತಿಪಾದನೆಗಾಗಿ 19 ಸಾವಿರ ಕಿಲೋಮೀಟರ್ ಪಾದಯಾತ್ರೆ ಮಾಡುತ್ತಿರುವ ಜೈನ ಮುನಿ.

ಪ್ರಪಂಚದಲ್ಲಿ ಅಹಿಂಸೆ ಸಮರತೆ ನೈತಿಕತೆ ವ್ಯಸನಮುಕ್ತಿಗಾಗಿ ಜೈನ ಮುನಿಯೊಬ್ಬರು ಮೂರು ದೇಶ 19 ರಾಜ್ಯಗಳಲ್ಲಿ ಉಪದೇಶ ಮಾಡುತ್ತ ಸುಮಾರು19 ಸಾವಿರ ಕಿಲೋಮೀಟರ್ ಪಾದಯಾತ್ರೆ ಹಮ್ಮಿಕೊಂಡಿದ್ದು ಇಂದು ಆ ಜೈನ ಮುನಿ ಕರ್ನಾಟಕ ಗಡಿಭಾಗ ಅತ್ತಿಬೆಲೆಗೆ ಪ್ರವೇಶಿಸಿದ್ದಾರೆ.ಇನ್ನು ಜೈನ ಮುನಿ ಆಚಾರ್ಯ ಮಾಹಾಶ್ರಮಣ್ ಸ್ವಾಮಿಜಿಯವರನ್ನು ಇಲ್ಲಿನ ಜೈನ ಧರ್ಮದ ಸುಮಾರು 10,000 ಜನರು ಬರಮಾಡಿಕೊಂಡಿದ್ದು ಮಹಾಶ್ರಮಣ್ ಜೈನ ಮುನಿ 2014 ರ ನವಂಬರ್ 14 ರಂದು ದೆಹಲಿಯ ಕೆಂಪುಕೋಟೆಯಿಂದ ಪ್ರಪಂಚದಲ್ಲಿ ಸಮರಸತೇ …

Read More »

ಹೌದಿನಿ ಸ್ಟಂಟ್‌ ಮಾಡಲು ಹೋದ ಜಾದೂಗಾರ ಹೆಣವಾಗಿ ಪತ್ತೆ

ಕೋಲ್ಕೊತಾ: ಸಂಪೂರ್ಣ ಬಂಧಿತರಾಗಿ ನೀರಿನೊಳಗೆ ಧುಮುಕಿ, ನೆರೆದವರು ನಿಬ್ಬೆರಗಾಗುವಂತೆ ಕ್ಷಣದಲ್ಲಿ ಬಂಧನ ಬಿಡಿಸಿಕೊಂಡು ನೀರಿನಿಂದ ಮೇಲೆಳುವ ಹ್ಯಾರಿ ಹೌದಿನಿ ಸ್ಟಂಟ್‌ ಮಾಡಲು ವಿಫಲವಾದ ಪಶ್ಚಿಮ ಬಂಗಾಳದ ಜಾದೂಗಾರ ಮಾಂಡ್ರೇಕ್‌ ಶವ ಕೊನೆಗೂ ಪತ್ತೆಯಾಗಿದೆ. 40 ವರ್ಷದ ಜಾದೂಗಾರ್‌ ಮಾಂಡ್ರೆಕ್‌ ಅಲಿಯಾಸ್‌ ಚಂಚಲ್‌ ಲಹಿರಿ ಹೂಗ್ಲಿ ನದಿಗೆ ತಮ್ಮ ಕೈಗಳು ಮತ್ತು ಕಾಲುಗಳಿಗೆ ಸರಪಳಿ ಬಿಗಿದುಕೊಂಡು ಸ್ಟಂಟ್‌ ತೋರಿಸುವುದಾಗಿ ಹೇಳಿ ಭಾನುವಾರ ಧುಮುಕಿದರು. ನಿಮಿಷದೊಳಗೆ ಬಂಧನ ಕಳಚಿ ನೀರಿನಿಂದ ಹೊರಬರಬೇಕಿದ್ದ ಲಹಿರಿ …

Read More »

ಮದುವೆಗೆ ಬನ್ನಿ ಎಣ್ಣೆ ವ್ಯವಸ್ಥೆ ಮಾಡಲಾಗಿದೆ…!

ಮದುವೆಗೆ ಬಂದು ಆಶೀರ್ವಾದ ಮಾಡಿ ಎಂಬುದು ಹಿಂದಿನಿಂದಲೂ ಕರೆಯೋಲೆ ಕೊಡುವುದು ಸಾಮಾನ್ಯ. ಆದ್ರೇ ಇಲ್ಲೊಬ್ಬರು ಮಾತ್ರ ಡಿಫೆರೆಂಟ್ ಆಗಿ ಕರೆಯೋಲೆ ನೀಡಿದ್ದಾರೆ. ಅಂತಹ ಕೂತಹಲ ಎನಾಪ್ಪ ಅಂದರೆಮದುವೆಗೆ ಬನ್ನಿ ಎಣ್ಣೆ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಿಂಟ್ ಮಾಡಿಸಿದ್ದಾರೆ. ಈ ರೀತಿ ಪ್ರಿಂಟ್ ಮಾಡಿಸಿರುವುದು ಚಿತ್ರದುರ್ಗದಲ್ಲಿ ನಡೆದಿದೆ.ಚಳ್ಳಕೆರೆಯ ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯಲಿದ್ದು ಆರತಕ್ಷತೆಯ ಸಮಯದಲ್ಲಿ ಗುಂಡು ಪಾರ್ಟಿ ವ್ಯವಸ್ಥೆ ಕಲ್ಪಿಸಲಾಗಿ ಎಂದು ನಮೂದಿಸಲಾಗಿದೆ.ಎಣ್ನೆಗಾಗಿ ಕೆಲವು ವ್ಯಕ್ತಿಗಳನ್ನು ಸಂಪರ್ಕಸಿ ಎಂದು ಪ್ರಿಂಟ್ …

Read More »