admin
September 12, 2019
ಚಿತ್ರದುರ್ಗ, ಜಿಲ್ಲೆ
ಕುರಿ ತೊಳೆದು ಈಜಲು ಹೊಗಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪಿದ್ದ ಘಟನೆ ಚಿತ್ರದುರ್ಗದ ಚಳ್ಳಕೆರೆ ತಾಲ್ಲೂಕಿನ ಮಿರಸಾಭಿಹಳ್ಳಿಯ ರಾಣಿಕೆರೆಯಲ್ಲಿ ಘಟನೆ ನಡೆದಿದೆ. ಮೃತ ಮನೋಜ್ (೧೮) ಪರಶುರಾಂಪುರ ಹೋಬಳಿ ಬೋಮ್ಮನಕುಂಟೆ ಗ್ರಾಮದ ಯುವಕ ಇಂದು ಕುರಿ ಮೈತೊಳೆಯಲು ಹೋಗಿ ಕುರಿಗಳನ್ನು ಮೈ ತೊಳೆದು ಈಜಲು ಹೊದಾಗ ಗುಡಿಯೊಳಗೆ ಮುಳುಗಿ ಮೃತ ಪಟ್ಟಿದ್ದಾನೆ .ಸ್ಥಳಕ್ಕೆ ಪಿಎಸ್ ಐ ಕೆ.ಸತೀಶ್ ನಾಯ್ಕ ಭೇಟಿ ನೀಡಿದ್ದು ಪರಿಶೀಲಿನೆ ನಡೆಸಿದ್ದಾರೆ.
Read More »
admin
September 12, 2019
ಕೊಪ್ಪಳ, ಜಿಲ್ಲೆ
ಕೊಪ್ಪಳದಲ್ಲಿ ಹೋಳಿಗೆ ಊಟದ ಕಾಯ೯ಕ್ರಮಕ್ಕೆ ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ ಚಾಲನೆ ನೀಡಿದರು. ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿದರೆ ನಿಮಗೆ ಹೋಳಿಗೆ ಊಟ ಹಾಕಸ್ತಿನಿ ಎಂದಿದ್ದರು ಕೆ ಎಸ್ ಈಶ್ವರಪ್ಪ. ಈ ಹಿನ್ನೆಲೆಯಲ್ಲಿ ನಗರದ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಕಾಯ೯ಕತ೯ರಿಗೆ ಅಭಿನಂದನಾ ಸಮಾರಂಭ ಮಾಡಲಾಯಿತು.ಕೊಪ್ಪಳ ಕಾಯ೯ಕ್ರಮದಲ್ಲಿ ಸಂಸದ ಸಂಗಣ್ಣ ಕರಡಿ ಗೆಲುವಿಗೆ ಕಾರಣವಾದ ಕಾಯ೯ಕತ೯ರು ಬಿಜೆಪಿ ಶಾಸಕರು, ಸಂಸದ ಸಂಗಣ್ಣ ಕರಡಿ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ …
Read More »
admin
September 12, 2019
ಜಿಲ್ಲೆ, ಬೆಳಗಾವಿ
ಶಾಂತಿಗಾಗಿ ಹಂಬಲಿಸುತ್ತಿರುವ ಬೆಳಗಾವಿ ಜಿಲ್ಲೆಯಲ್ಲಿ ಎಂಇಎಸ್ ಸಂಘಟನೆಯ ಕಾರ್ಯಕರ್ತರು ಮತ್ತೆ ಪುಂಡಾಟ ಆರಂಭಸಿದ್ದಾರೆ. ನಗರದಲ್ಲಿ ಕನ್ನಡ ನಾಮಫಲಕ ಹಾಕಿ ಎಂದ ಕರವೇ ಕಾರ್ಯಕರ್ತರಿಗೆ ಎಮ್ ಈ ಎಸ್ ನಿಂದನೆ ಮಾಡಿದ್ದಾರೆ. ಬೆಳಗಾವಿ ಟಿಳಕವಾಡಿ ಭಾಗದಲ್ಲಿ ಇಂಗ್ಲಿಷ್ ನಾಮಫಲಕಗಳಿದ್ದವು. ಆದ್ರೇ ಕಳೆದ ರಡುವಾರಗಳ ಹಿಂದೆ 10 ದಿನಗಳಲ್ಲಿ ಕನ್ನಡ ನಾಮಫಲಕ ಹಾಕುವಂತೆ ಕರವೇ ಕಾರ್ಯಕರ್ತರು ಮನವಿ ಮಾಡಿದ್ದರು. ನಂತರ ಇದೇ ಸ್ಥಳಕ್ಕೆ ಹೋಗಿ ಎಂಇಎಸ್ ಕಾರ್ಯಕರ್ತನಿಂದ ಫೆಸ್ ಬುಕ್ ಲೈವ್ ಮಾಡಿ …
Read More »
admin
September 12, 2019
ಜಿಲ್ಲೆ, ಬೆಂಗಳೂರು ಗ್ರಾಮಾಂತರ
ವೈಧ್ಯರ ಮೇಲಿನ ಹಲ್ಲೆ ಖಂಡಿಸಿ ಇಂದು ರಾಜ್ಯಾದಾದ್ಯಂತ ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆ ಆನೇಕಲ್ನ ಚಂದಾಪುರದಲ್ಲಿರುವ ನಾರಾಯಣ ಹೃದಯಾಲಯ, ಸೇರಿದಂತೆ ಬಹುತೇಕ ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಮಾಡಿ ಪ್ರತಿಭಟನೆಗೆ ವೈದ್ಯರು ಬೆಂಬಲ ಸೂಚಿಸಿದ್ದಾರೆ. ಸುಮಾರು ೩೦೦ ಕ್ಕು ನಾರಾಯಣ ಹೃದಯಲಯದ ವೈದ್ಯರು ಬೆಂಬಲ ನೀಡಿದ್ದಾರೆ, ಇನ್ನೂ ತುರ್ತು ಪರಿಸ್ಥಿಯಲ್ಲಿ ಹೃದಯಾಘಾತ, ಅಪಘಾತದಂತಹ ಪ್ರಕರಣಗಳಿಗೆ ಕೂಡಲೆ ಚಿಕಿತ್ಸೆ ನೀಡುವುದಾಗಿ ನಾರಾಯಣ ಹೃದಯಲದ ಆಡಳಿತ ಮಂಡಳಿ ಮಾಹಿತಿ ನೀಡಿದ್ದಾರೆ.
Read More »
admin
September 12, 2019
ಜಿಲ್ಲೆ, ಬೆಂಗಳೂರು ಗ್ರಾಮಾಂತರ
ವೈದ್ಯರ ನಿರ್ಲಕ್ಷ್ಯ ದಿಂದ ನವಜಾತ ಶಿಶು ಸಾವಾನ್ನಪ್ಪಿದ ಘಟನೆ ಆನೇಕಲ್ ತಾಲ್ಲೂಕಿನ ಹಾರಗದ್ದೆಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ದಾವಣಗೆರೆಯಿಂದ ಬಂದು ವಡ್ಡರಪಾಳ್ಯದಲ್ಲಿ ನೆಲೆಸಿದ್ದ ದಂಪತಿಗಳಾದ ಶಶಿಧರ್ ಮತ್ತು ರಂಜಿತಾ ಎಂಬುವರಿಗೆ ಸೇರಿದ ಮಗುವಾಗಿದೆ. ನಿನ್ನೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರು.ಆದ್ರೇ ವೈದ್ಯರಿಲ್ಲದೆನೆ ನರ್ಸ್ ಕಡೆಯಿಂದ ಹೆರಿಗೆ ಮಾಡಿಸಿದ್ದರು. ಮಗು ಉಸಿರಾಟದ ತೊಂದರೆ ಇದೇ ಎಂದು ನರ್ಸ್ ಬೇರೆ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದ್ದರು. ಆದ್ರೇ ಖಾಸಗಿ …
Read More »
admin
September 12, 2019
ಜಿಲ್ಲೆ, ರಾಯಚೂರು
ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿದ್ಯುತ್ ತಗುಲಿ ಮಹಿಳೆ ಸಾವಾನ್ನಪ್ಪಿದ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಸಿಂಗಪೂರ್ ಗ್ರಾಮದಲ್ಲಿ ನಡೆದಿದೆ. ಹೊಲದಲ್ಲಿ ಕೆಲಸ ಮಾಡುವಾಗ ಹರಿದು ಬಿದ್ದ ವಾಯರ್ ತುಳಿದು ಮಹಿಳೆ ಸಾವನಾಪ್ಪಿದ್ದಾಳೆ. ಈ ಕುರಿತು ಸಿಂಧನೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »
admin
September 12, 2019
ಜಿಲ್ಲೆ, ದಕ್ಷಿಣ ಕನ್ನಡ
ವೈದ್ಯರ ಮೇಲಿನ ಹಲ್ಲೆ ಖಂಡಿಸಿ ದೇಶಾದ್ಯಂತ ಮುಷ್ಕರಕ್ಕೆ ಮಂಗಳೂರಿನಲ್ಲೂ ಉತ್ತಮ ಬೆಂಬಲ ವ್ಯಕ್ತವಾಗಿದೆ. ಹಲವೆಡೆ ಇಂದು ಬೆಳಿಗ್ಗೆಯಿಂದಲ್ಲೆ ಓಪಿಡಿಗಳು ಸಂಪೂರ್ಣ ಬಂದ್ ಮಾಡಲಾಗಿದ್ದು ವೈದ್ಯರು ಪ್ರತಿಭಟನೆ ಮಾಡುತ್ತಿದ್ದರೇ ಇತ್ತ ವೈದ್ಯರನ್ನೇ ನಂಬಿದ ರೋಗಿಗಳು ಬಂದ್ ನಿಂದಾಗಿ ಪರದಾಡುತ್ತಿದ್ದಾರೆ. ಆದ್ರೇ ತುರ್ತು ಚಿಕಿತ್ಸೆ, ಒಳ ರೋಗಿಗಳಿಗೆ ಮಾತ್ರ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಲಾಗಿದೆ.
Read More »
admin
September 12, 2019
ಚಾಮರಾಜನಗರ, ಜಿಲ್ಲೆ
ಶಿಥಿಲಗೊಂಡಿರುವ ಚಾಮರಾಜೇಶ್ವರ ರಥದ ಕಾಮಗಾರಿಯ ವಿಳಂಬ ನೀತಿ ವಿರೋಧಿಸಿ ಕರ್ನಾಟಕ ಸೇನಾಪಡೆ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿತು.ನಗರದ ಜಿಲ್ಲಾಧಿಕಾರಿಗಳ ಕಛೇರಿ ಎದುರು ಧರಣಿ ನಡೆಸಿದ ಪ್ರತಿಭಟನಾಕಾರರು ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಚಾ.ರಂ.ಶ್ರೀನಿವಾಸಗೌಡ, ಇತಿಹಾಸ ಪ್ರಸಿದ್ದ ಚಾಮರಾಜೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಸುಮಾರು ತಿಂಗಳುಗಳೇ ಕಳೆದರೂ ಅಭಿವೃದ್ಧಿ ಕಾರ್ಯ ಪ್ರಾರಂಭಗೊಂಡಿಲ್ಲ ಎಂದು ಆರೋಪಿದರು. …
Read More »
admin
September 12, 2019
ಕೋಲಾರ, ಜಿಲ್ಲೆ
ಲೋಕಸಭೆ ಚುನಾವಣೆಯಲ್ಲಿ ಗೆದ್ದ ಬಿಜೆಪಿಗೆ ಅಧಿಕಾರದ ಮದ ಏರಿದೆ, ಹಾಗಾಗಿ ಇಂತಹ ಅಸಭ್ಯ ಹೇಳಿಕೆಗಳನ್ನ ನೀಡುತ್ತಿದ್ದಾರೆಂದು ಗ್ರಾಮೀಣಾಭಿವೃದ್ದಿ ಸಚಿವ ಕೃಷ್ಣಬೈರೇಗೌಡ ಕೋಲಾರದಲ್ಲಿ ಹೇಳಿಕೆ ನೀಡಿದರು. ಕೈ ಕಡಿಯುವುದು, ತಲೆ ತೆಗೆಯುವುದು ಬಿಜೆಪಿ ಸಂಸ್ಕೃತಿಯನ್ನ ಬಿಂಬಿಸುತ್ತದೆ. ಮೇಲು ಕೀಳು ಎಂಬ ಭಾವನೆ ಅವರ ತಲೆಯಲ್ಲಿ ಹಾಗೆ ಉಳಿದಿದೆ. ಮನುಷ್ಯ ಜನ್ಮ ಸ್ವಾಭಾವಿಕವಾಗಿದ್ದು, ಹೀಗೆಲ್ಲ ಒಂದು ಸಮುದಾಯಕ್ಕೆ ನೋವಾಗುವ ರೀತಿ ಮಾತನಾಡಬಾರದು. ಸಂಸದೆ ಶೋಭಾ ಕರೆಂದ್ಲಾಜೆ ಅಸಭ್ಯ ಟ್ವಿಟ್ ಗೆ ಸಚಿವ ಕೃಷ್ಣ …
Read More »
admin
September 12, 2019
ಜಿಲ್ಲೆ, ಧಾರವಾಡ
ಹುಬ್ಬಳ್ಳಿಯಲ್ಲಿ ಅಮರ್ ಚಲನಚಿತ್ರ ತಂಡದಿಂದ ವಿಜಯಯಾತ್ರೆ ನಡೆಯಿತು. ಕೆಎಲ್‌ಇ ಸಂಸ್ಥೆಯ ಬಿವಿಬಿ ಕಾಲೇಜಿನ ಆಡಿಟೋರಿಯಂನಲ್ಲಿ ಚಿತ್ರ ತಂಡದೊಂದಿಗೆ ವಿದ್ಯಾರ್ಥಿಗಳ ಸಂವಾದ ಏರ್ಪಡಿಸಲಾಗಿತ್ತು. ಸಂಸದೆ ಸುಮಲತಾ, ಚಿತ್ರದ ನಾಯಕ ನಟ ಅಭಿಷೇಕ, ರಾಕ್‌ಲೈನ್ ವೆಂಕಟೇಶ್, ನಾಗಶೇಖರ್, ದೊಡ್ಡಣ್ಣ ಮತ್ತು ಯೋಗರಾಜ್ ಭಟ್ ಉಪಸ್ಥಿತರಿದ್ದರು. ಚಿತ್ರದ ಟ್ರೈಲರ್ ವೀಕ್ಷಿಸಿದ ವಿದ್ಯಾರ್ಥಿಗಳು ಅಭಿಷೇಕ್ ಮತ್ತು ಅಂಬರೀಷ್ ನಟನೆಯ ಹಾಡುಗಳಿಗೆ ಕುಣಿದು ಕುಪ್ಪಳಿಸಿದ್ರು. ಸಂಸದೆ ಸುಮಲತಾ ಅವರು ವೇದಿಕೆಗೆ ಬರುತ್ತಿದ್ದಂತೆ, ನಿಖಿಲ್ ಎಲ್ಲಿದೀಯಪ್ಪ, ನಿಖಿಲ್ ಎಲ್ಲಿದೀಯಪ್ಪ …
Read More »