Breaking News

ಹುಬ್ಬಳ್ಳಿ-ಧಾರವಾಡ

ವೀಡಿಯೊ ರೆಕಾರ್ಡ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಆಕ್ರೋಶ:ಪ್ರಮೋದ್ ಮುತಾಲಿಕ್

ಧಾರವಾಡ: ಉಡುಪಿಯ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ಮೊಬೈಲ್ ಇಟ್ಟು ವೀಡಿಯೊ ರೆಕಾರ್ಡ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಜುಲೈ 20ರಂದು ಉಡುಪಿಯಲ್ಲಿ ಅತ್ಯಂತ ಹೇಯ ಕೃತ್ಯ ನಡೆದಿದೆ. ಉಡುಪಿ ಕಾಲೇಜಿನ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೂವರು ವಿದ್ಯಾರ್ಥಿನಿಯರು ಮೊಬೈಲ್ ಇಟ್ಟು ವೀಡಿಯೊ ಮಾಡಿದ ಘಟನೆ ನಡೆದಿದೆ. ಅವರ ಮೇಲೆ ಕ್ರಮ ಆಗಬೇಕಿತ್ತು. ಒಂದು ವಾರದ ನಂತರ ಈ ಬಗ್ಗೆ …

Read More »

ನಮ್ಮ ಜಿಲ್ಲೆಯಲ್ಲಿಯೂ ನಿರೀಕ್ಷೆಗಿಂತ ಹೆಚ್ಚು ಮಳೆಯಾಗಿದೆ: ಸಚಿವ ಸಂತೋಷ ಲಾಡ್

ಧಾರವಾಡ: ನಮ್ಮ ಜಿಲ್ಲೆಯಲ್ಲಿಯೂ ನಿರೀಕ್ಷೆಗಿಂತ ಹೆಚ್ಚು ಮಳೆಯಾಗಿದೆ ಇದರಿಂದ ಬಹಳ ರೈತರಿಗೆ ಅನಾನುಕೂಲ ಆಗಿದೆ ಎಂದು ಧಾರವಾಡ ಜಿಲ್ಲೆ ನವಲಗುಂದದಲ್ಲಿ ಸಚಿವ ಸಂತೋಷ ಲಾಡ್ ಹೇಳಿಕೆ ನೀಡಿದ್ದಾರೆ. ನವಲಗುಂದ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಳ್ನಾವರ ಭಾಗಕ್ಕೆ ಈಗಾಗಲೇ ಭೇಟಿ ನೀಡಿದ್ದೇನೆ. ಇವತ್ತು ನವಲಗುಂದ ಕ್ಷೇತ್ರದಲ್ಲಿ ಪರಿಶೀಲನೆ ಮಾಡುತ್ತೇನೆ. ಮುಂದೆ ಕುಂದಗೋಳ ಕ್ಷೇತ್ರಕ್ಕೆ ಹೋಗುತ್ತೇನೆ ಎಂದು ಹೇಳಿದರು. ಈಗಗಾಲೇ ಮನೆ ಬಿದ್ದ ಸ್ಥಳಕ್ಕೆ …

Read More »

ಅತಿವೃಷ್ಟಿ ಬೆಳೆ ಹಾನಿ ಪರಿಹಾರಕ್ಕೆ ಅಗ್ರಹಿಸಿ ಬಿದಿಗೆ ಇಳಿದು ರೈತರ ಪ್ರತಿಭಟನೆ

ಧಾರವಾಡ: ಅತಿವೃಷ್ಟಿ ಬೆಳೆ ಹಾನಿ ಪರಿಹಾರಕ್ಕೆ ಅಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ರೈತರು ಪ್ರತಿಭಟನೆ ಮಾಡಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅತೀಯಾದ ಮಳೆಯಿಂದ ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಬೆಳೆ ಹಾನಿಯಾಗಿದೆ. ಮಳೆ ನೀರು ನಿಂತು ಬೆಳೆ ಹಾನಿಯಾಗುತ್ತಿದ್ದರು ಅಧಿಕಾರಿಗಳು ಸಮೀಕ್ಷೆ ಮಾಡುತ್ತಿಲ್ಲ ಆದ್ದರಿಂದಲೇ ನಿರಂತರ ಮಳೆಯಿಂದಾಗಿ ರೈತರು ಬಿದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. …

Read More »

ಧಾರವಾಡ ತಡಕೋಡ ಅವ್ಯವಸ್ಥೆ ಕಾಮಗಾರಿ ಗ್ರಾಮಸ್ಥರು ಆಕ್ರೋಶ

ಧಾರವಾಡ :ತಾಲೂಕಿನ ತಡಕೋಡ ಗ್ರಾಮದಲ್ಲಿ ಕೈಗೊಂಡಿರುವ ಜೆ ಜೆ ಎಂ ಕುಡಿಯುವ ನೀರಿನ ಯೋಜನೆಯುಕಾಮಗಾರಿಯು ಅವ್ಯವಸ್ಥೆಯಿಂದ ಕೂಡಿದ್ದು ಏಲ್ಲಿ ಬೇಕಾದಲ್ಲಿ ರಸ್ತೆಗಳನ್ನು ಅಗೆದಿದ್ದರಿಂದ ಸಾರ್ವಜನಿಕರಿಗೆ ಅತೀವ ತೊಂದರೆ ಆಗುವದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯತ್ ಸದಸ್ಯರಾದ ಭೀಮಪ್ಪ ಕಾಸಾಯಿ ನೇತೃತ್ವದಲ್ಲಿ ಗ್ರಾಮಸ್ಥರು ಜಿಲ್ಲಾಪಂಚಾಯತ್ ಸಿ.ಇ.ಓ ಗಳಾದ ಶ್ರೀಮತಿ ಕೆ ಟಿ ಸ್ವರೂಪ್ ಕೌರ್ ಅವರಿಗೆ ಮನವಿ ಅಪಿ೯ಸಿದರು. ಗ್ರಾಮದ ಸರಕಾರಿ ಶಾಲೆಗಳ ದುಸ್ಥಿತಿ ಮತ್ತು ಪ್ರೌಡಶಾಲೆಗೆ. …

Read More »

ಸಿಬಿಟಿ ಬಳಿ ಅಪರಿಚಿತ ಹೆಣ ಪತ್ತೆ, ಯಾರು ಇವರು? ಗುರುತಿಗಾಗಿ ಪೋಲಿಸರ ಹುಡುಕಾಟ

ಧಾರವಾಡ: ನಗರದ ಸಿಬಿಟಿ ಬಳಿಯ ಅಂಜುಮನ್ ಕಾಂಪ್ಲೆಕ್ಸ್ ಎದುರಿನ ಆಕಳವಾಡಿ ಅಂಗಡಿ ಮುಂದಿನ ಫುಟ್‌ಪಾತ್‌ನಲ್ಲಿ ಅಪರಿಚಿತ ವ್ಯಕ್ತಿಯೋರ್ವ ಸಾವಿಗೀಡಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಧಾರವಾಡ ಶಹರ ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು, ಅಪರಿಚಿತ ವ್ಯಕ್ತಿಯ ಮಾಹಿತಿ ಪತ್ತೆ ಹಚ್ಚಲು ಪ್ರಕಟಣೆಯನ್ನ ಹೊರಡಿಸಿದ್ದಾರೆ. ಸಾರ್ವಜನಿಕರು ಸಾವಿಗೀಡಾಗಿರುವ ವ್ಯಕ್ತಿಯ ಬಗ್ಗೆ ಮಾಹಿತಿ ಇದ್ದರೇ ಪೊಲೀಸರಿಗೆ ತಿಳಿಸಲು ಕೋರಲಾಗಿದೆ.

Read More »

ನವಲಗುಂದದಲ್ಲಿ ನೆರೆ ವೀಕ್ಷಿಸಿ ಜನರೊಂದಿಗೆ ಚರ್ಚೆಸಿದ ಸಚಿವ ಲಾಡ್

ಧಾರವಾಡ ಮುಂಗಾರು ಮಳೆ ಆರಂಭವಾದಗಲು ನವಲಗುಂದ ತಾಲೂಕಿನ ಜನತೆ ಪ್ರವಾಹದ ಭೀತಿ ಎದುರಿಸುತ್ತಾರೆ ಏಕೆಂದರೆ ಇಲ್ಲಿನ ಬೆಣ್ಣೆ ಹಳ್ಳ ಹಾಗೂ ತುಪ್ಪರಿ ಹಳ್ಳದ ಆರ್ಭಟ ಅಷ್ಟು ಜೋರಾಗಿರುತ್ತದೆ ಕಳೆದ ಹತ್ತು ದಿನಗಳಿಂದ ಧಾರವಾಡ ಜಿಲ್ಲೆಯಲ್ಲಿ ಬಿಟ್ಟೂ ಬಿಡದೇ ಮಳೆ ಸುರಿಯುತ್ತಿದ್ದು ನವಲಗುಂದ ಭಾಗದ ಜನತೆ ಮತ್ತೆ ಪ್ರವಾಹದ ಭೀತಿ ಎದುರಿಸುವಂತಾಗಿದೆ. ಇಂದು ನವಲಗುಂದ ತಾಲೂಕಿನ ಯಮನೂರು ಗ್ರಾಮದ ಬಳಿ ಇರುವ ಬೆಣ್ಣೆ ಹಳ್ಳದ ನೀರಿನ ತೀವ್ರತೆಯನ್ನು ಧಾರವಾಡ ಜಿಲ್ಲಾ ಉಸ್ತುವಾರಿ …

Read More »

ಸಿಕ್ಕ ಮೊಬೈಲ್ ಪೊಲೀಸ್ ಠಾಣೆಗೆ ತಂದುಕೊಟ್ಟು ಆಟೋ ಚಾಲಕ

ಧಾರವಾಡ: ಇತ್ತೀಚೆಗೆ ಮೊಬೈಲ್ ಸಿಕ್ಕರೆ ಸಾಕು ಅದರಲ್ಲಿನ ಸಿಮ್ ತೆಗೆದೊಗೆದು ತಾವೇ ಬಳಸಿಕೊಳ್ಳುವವರ ಮಧ್ಯೆ ಇಲ್ಲೊಬ್ಬ ಆಟೋ ಚಾಲಕ ತನಗೆ ಸಿಕ್ಕ ಸ್ಮಾರ್ಟ್‌ ಫೋನ್‌ನ್ನು ಪೊಲೀಸ್ ಠಾಣೆಗೆ ತಂದು ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾನೆ. ಧಾರವಾಡದ ಆಟೋ ಚಾಲಕ ಪ್ರಕಾಶ ಎಂಬುವವರಿಗೆ ಆಟೋ ನಿಲ್ದಾಣದ ಬಳಿ ಸ್ಮಾರ್ಟ್ ಫೋನ್ ಸಿಕ್ಕಿತ್ತು. ಕೂಡಲೇ ಅದನ್ನು ಅವರು ಧಾರವಾಡದ ಉಪನಗರ ಠಾಣೆಗೆ ತಂದು ಪೊಲೀಸರಿಗೆ ಒಪ್ಪಿಸಿ, ಫೋನ್ ಮಾಲೀಕರಿಗೆ ಅದನ್ನು ಮರಳಿಸುವಂತೆ ಮನವಿ …

Read More »

ಬೆಣ್ಣೆಹಳ್ಳ ಸೇತುವೆ ಪ್ರದೇಶಕ್ಕೆ ಲಾಡ್ ಭೇಟಿ

ಧಾರವಾಡ ಮಾನ್ಯ ಕಾರ್ಮಿಕ ಸಚಿವ ಹಾಗೂ ಜಿಲ್ಲಾ ಉಸ್ತವಾರಿ ಸಚಿವರಾದ ಸಂತೋಷ್ ಲಾಡ್ ಅವರು, ಜಿಲ್ಲೆಯ ಹೆಮ್ನೂರ್‌ ಗ್ರಾಮದ ಬೆಣ್ಣೆಹಳ್ಳ ಸೇತುವೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಶಾಸಕ ಎನ್‌ ಎಚ್‌ ಕೋನರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ನದಿಗಳು ಭಾರಿ ಪ್ರಮಾಣದಲ್ಲಿ ಹರಿಯುತ್ತಿವೆ. ಸೇತುವೆಗಳ ಮೇಲೆ ಸಂಚರಿಸುವಾಗ ಸಾರ್ವಜನಿಕರು ಎಚ್ಚರ ವಹಿಸುವುದು ಅಗತ್ಯ ಎಂದು ಲಾಡ್ ಅವರು ತಿಳಿಸಿದರು.

Read More »

ಹೈಕೋರ್ಟ್ 6 ಜಡ್ಜ್ ಗಳಿಗೆ ಕೊಲೆ ಬೆದರಿಕೆ : ದುಬೈ ಗ್ಯಾಂಗ್ ಹೆಸರಲ್ಲಿ ಅನಾಮಧೇಯನ ಕೃತ್ಯ…

ಕರ್ನಾಟಕ ಹೈಕೋರ್ಟ್ ನ್ 6 ಜನ ನ್ಯಾಯಧಿಶರಿಗೆ ದುಬೈ ಗ್ಯಾಂಗ್ ಎಂಬ ತಂಡದ ಸದಸ್ಯ ಎಂದುಕೊಂಡು ಅನಮಧೇಯ ವ್ಯಕ್ತಿಯಿಂದ ಕೊಲೆ ಬೆದರಿಕೆ ಬರಲಾಗಿದೆ.ನಾನು ದುಬೈ ಗ್ಯಾಂಗ್ ನ ಸದಸ್ಯನಾಗಿದ್ದು, 6 ಜನ ನ್ಯಾಯಧೀಶರನ್ನು ಕೊಲೆ ಮಾಡುವುದಾಗಿ whatsapp ಮೆಸ್ಸೇಜ್ ಮೂಲಕ ಅಪರಿಚಿತ ವ್ಯಕ್ತಿಯೊಬ್ಬ ಕೊಲೆ ಬೆದರಿಕೆ ಹಾಕಿದ್ದಾನೆ.ಅದಲ್ಲದೇ 50ಲಕ್ಷ ರೂ ಗಳ ಬೇಡಿಕೆಯನ್ನು ಇಟ್ಟಿದ್ದಾನೆ. ಹೈಕೋರ್ಟ್ ನ ನ್ಯಾಯಧೀಶರಿಗೆ ಈ ರೀತಿ ಆದರೆ ಸಾಮಾನ್ಯ ಜನರ ಪರಸ್ಥಿತಿ ಹೇಗೆ ಎನ್ನುವ …

Read More »

ನಿರಂತರ ಮಳೆಗೆ ಕುಸಿದ ಮನೆಯ ಮೇಲ್ಬಾವಣಿ

ನವಲಗುಂದ: ನವಲಗುಂದ ತಾಲೂಕಿನಲ್ಲಿ ಕಳೆದ ಒಂದು ವಾರಗಳಿಂದ ಸತತ ಸುರಿಯುತ್ತಿರುವ ಮಳೆ ಜನ ಜೀವನವನ್ನೇ ಹೈರಾನ್ ಮಾಡಿದೆ. ಮಳೆ ಆಗಾಗ ಜೋರು ಮಳೆ ಹಾಗೂ ನಿರಂತರ ಜಿಟಿಜಿಟಿಯಾಗಿ ಮಳೆ ಸುರಿಸುತ್ತಿರುವುದು ಹಳೆಯ ಮಣ್ಣಿನ ಗೋಡೆಯ ಮನೆಗಳು ಸತತ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಬೆಳವಟಗಿ ಗ್ರಾಮದ ಮಂಜುಳಾ ಜಾವೂರ ಎಂಬುವರ ಮನೆ ಮೇಲ್ಟಾವಣಿ ಕುಸಿದು ಬಿದ್ದಿದೆ ಇದರಿಂದ ಆ ಬಡ ಕುಟುಂಬ ಮುಂದೇನು ಮಾಡುವುದು ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. ಇನ್ನು ತಾಲೂಕಿನಲ್ಲಿ …

Read More »