Breaking News

ಹುಬ್ಬಳ್ಳಿ-ಧಾರವಾಡ

ಹು-ಧಾರವಾಡ,ವಾರ್ಡ ಸಮಿತಿ ರಚಿಸಲು ಆಸಕ್ತಿಯುಳ್ಳ ಸಾರ್ವಜನಿಕರಿಂದ ಅರ್ಜಿ ಅಹ್ವಾನ,

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ 82 ವಾರ್ಡಗಳಲ್ಲಿ ತಲಾ ಒಂದು ವಾರ್ಡಗೆ ಒಂದು ವಾರ್ಡ ಸಮಿತಿಯನ್ನು ರಚಿಸಲು ಸರ್ಕಾರದ ನಿರ್ದೇಶನದಂತೆ, ಆಸಕ್ತಿಯುಳ್ಳ ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಈಗಾಗಲೇ ಅರ್ಜಿಗಳನ್ನು ಸಲ್ಲಿಸಿದ ಸಾರ್ವಜನಿಕರನ್ನು ಹೊರತು ಪಡಿಸಿ ಹೊಸದಾಗಿ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸುವವರು ವಾರ್ಡ ಪ್ರತಿನಿಧಿಸುವಂತಹ ಮಹಾನಗರ ಪಾಲಿಕೆಯ ಸದಸ್ಯನು ವಾರ್ಡ ಸಮಿತಿಯ ಅಧ್ಯಕ್ಷನಾಗಿರತಕ್ಕದ್ದು. ಇತರ ಹತ್ತು ಸದಸ್ಯರು ಮಹಾನಗರ ಪಾಲಿಕೆಯಿಂದ ನಾಮ ನಿರ್ದೇಶಿತರಾಗಿರತಕ್ಕದ್ದು, ಅವರ ಪೈಕಿ ಕನಿಷ್ಟ ಇಬ್ಬರು …

Read More »

ಹುಬ್ಬಳ್ಳಿಯಲ್ಲಿ ಮತ್ತೆ ನಾಯಿಕೊಡೆಗಳೆಂತೆ ಪುನರಾಂಭಗೊಂಡ ಸ್ಪಾಗಳು.[ಮಸಾಜ್‌ ಸೆಂಟರ್]

ಹುಬ್ಬಳ್ಳಿ ಬ್ರೇಕಿಂಗ್ ಹುಬ್ಬಳ್ಳಿಯಲ್ಲಿ ಸ್ಪಾಗಳ ಹಾವಳಿ ಕುಣ್ಣು ಮುಚ್ಚಿ ಕುಳಿತ ಮಹಾನಗರ ಪಾಲಿಕೆ ಹಾಗೂ ಪೋಲಿಸ್ ಇಲಾಖೆ ಅಧಿಕಾರಿಗಳು…? ನಾಮಕ ಅವಸ್ಥೆ ಎರಡು ದಿನ ಮಾತ್ರ ಸ್ಪಾ ಬಂದ್ ಮಾಡಿದ ಅಧಿಕಾರಿಗಳು..ಪುನರ್ ಆರಂಭಗೊಂಡ ಸ್ಪಾ ಮಾಲೀಕರು ಅವ್ಯವಹಾರ.. ಸ್ಪಾ ಮಾಲೀಕರ ಉಪಟಳಕ್ಕೆ ಸಾರ್ವಜನಿಕರ ಅಕ್ರೋಶ ಹುಬ್ಬಳ್ಳಿಯಲ್ಲಿ ವ್ಯಶ್ಯೆವಾಟಿಕೆ ತಾಣಗಳಾದ ಸ್ಪಾ ಸೆಂಟರ್ ಗಳು..? ಸ್ಪಾ ಸೆಂಟರ್ ಗಳಿಗೆ ಕಡಿವಾಣ ಹಾಕಲು ಅಧಿಕಾರಿಗಳು ನಿರ್ಲಕ್ಷ್ಯ..? ಅಧಿಕಾರಿಗಳು ನಿರ್ಲಕ್ಷ್ಯಕ್ಕೆ ಸಾರ್ವಜನಿಕ ಅಕ್ರೋಶ

Read More »

ಆಕಸ್ಮಿಕ ಅಗ್ನಿಗೆ ಗುಜರಿ ಅಡ್ಡಾ ಆಹುತಿ

ಹುಬ್ಬಳ್ಳಿ:ನಗರದ ಪಿಬಿ ರಸ್ತೆಯ ನೇಕಾರ ನಗರದಲ್ಲಿ ಗುರಿ ಅಡ್ಡಾ ಗೆ ಆಕಸ್ಮಿಕವಾಗಿ ಬೆಂಕಿ ತಗಲಿದ ಪರಿಣಾಮ ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಕರಕಲಾದ ಘಟನೆ ನಡೆದಿದ್ದು, ದೊಡ್ಡ ಅವಘಡ ತಪ್ಪಿದಂತಾಗಿದೆ. ಆಕಸ್ಮಿಕವಾಗಿ ಬೆಂಕಿ ತಗಲಿದ್ದು, ಪಕ್ಕದಲ್ಲಿಯೇ ವಿದ್ಯುತ್ ಹೈಪರ್ ಲೈನ್ ಇದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ. ಅಗ್ನಿ ಅವಘಡದಿಂದಾಗಿ ಕೆಲ ಕಾಲ ಬಿಗುವಿನ ವಾತಾವರಣ ಮನೆಮಾಡಿತ್ತು, ನಂತರ ಅಗ್ನಿಶಾಮಕ ಸಿಬ್ಬಂದಿಗಳು ಬಂದು ಬೆಂಕಿ ನಂದಿಸುವಲ್ಲಿ ಮುಂದಾಗಿದ್ದಾರೆಂದು ತಿಳಿದು ಬಂದಿದೆ.

Read More »

ಅಂತರ ಮಹಾವಿದ್ಯಾಲಯಗಳ ಚರ್ಚಾ ಸ್ಪರ್ಧೆ

ಧಾರವಾಡ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಒಂದಾದ ಕಿಟೆಲ್ ವಿಜ್ಞಾನ ಕಾಲೇಜಿನಲ್ಲಿ “ಇಂದಿನ ರಾಷ್ಟ್ರೀಯ ಶಿಕ್ಷಣ ನೀತಿ-2020 ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕ” ಎಂಬ ವಿಷಯದ ಅಡಿಯಲ್ಲಿ ಅಂತರ ಮಹಾವಿದ್ಯಾಲಯಗಳ ಚರ್ಚಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಮುಖ್ಯ ಅಥಿತಿಗಳಾದ ಡಾ. ಎಸ್. ಎಮ್. ತುವಾರ, ನಿರ್ದೇಶಕರು, ಕಾಲೇಜು ಅಭಿವೃದ್ದಿ ಮಂಡಳಿ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ಇವರು ಕಾರ್ಯಕ್ರಮದಲ್ಲಿ “ರಾಷ್ಟಿಯ ಶಿಕ್ಷಣ ನೀತಿ-2020”, ಭಾರತದ ಇತಿಹಾಸದಲ್ಲಿ 4ನೇ ಮತ್ತು ಉತ್ತಮ ರಾಷ್ಟ್ರೀಯ ಶಿಕ್ಷಣ …

Read More »

ಸೋ ಕಾಲ್ಡ್ ಸೊಸೈಟಿಗಳಿಂದ ರೈತನ ಜಮೀನು ಕಬ್ಜಾ. ಲಂಚ ಪಡದೆ .ಬಿ. ರೀಪೋಟ್ ನೀಡಿದಿರಾ ಪೋಲಿಸರು ?

ಧಾರವಾಡ ಜಿಲ್ಲಾ ಕಲಘಟಗಿ ತಾಲ್ಲೂಕಿನಲ್ಲಿ ಭ್ರಷ್ಟಾಚಾರ ಮಾಡಿ ಕಾನೂನು ಬಾಹಿರ ಕೃತ್ಯಗಳ ಎಸಗಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ.ಕಲಘಟಗಿಯ ಬಡ ರೈತನ ( ರಿ.ಸ.ನಂ.275/1) ಜಮೀನು ವ್ಯವಹಾರದಲ್ಲಿ ಪೋಲಿಸ್ ಅಧಿಕಾರಿಗಳು ಕುಮ್ಮಕ್ಕು ಇದೆ. ಪೋಲಿಸರು ನನಗೆ ಮೋಸ ಮಾಡಿದ್ದಾರೆ ಎಂದು ರೈತ ಆರೋಪಿಸಿದ್ದಾನೆ. ಇನ್ನು ಈ ವಿಷಯದ ಬಗ್ಗೆ ಕಂಪ್ಲೀಟ್ ನೀಡಲು ಪೋಲಿಸ್ ಠಾಣೆಗೆ ಬೇಟಿ ನೀಡಿದರೆ ಪೋಲಿಸ್ ಅಧಿಕಾರಿಗಳು FiR ದಾಖಲು ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದ ರೈತ …

Read More »

ಎಸ್.‌ ಎಸ್.ಎಲ್.ಸಿ ಪೊರಕ ಪರೀಕ್ಷೆ ಫಲಿತಾಂಶ ಇಂದು

ಬೆಂಗಳೂರು ; ಎಸ್.ಎಸ್.ಎಲ್‌.ಸಿ. ಪೂರಕ ಪರೀಕ್ಷ ಫಲಿತಾಂಶ ಇಂದು ಬೆಳ್ಳಗ್ಗೆ 11 ಗಂಟೆಗೆ ಪ್ರಕಟವಾಗಲಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಈ ಕುರಿತು ಪ್ರಕಟನೆಯಲ್ಲಿ ತಿಳಿಸಿದೆ. ಇದರಂತೆ ,ಕರ್ನಾಟಕ ಎಸ್,ಎಸ್‌,ಎಲ್‌,ಸಿ ಪೂರಕ ಫಲಿತಾಂಶ 2023ರ ಫಲಿತಾಂಶವನ್ನು ಜೂನ್‌ 30 ರಂದು ಬೆಳ್ಳಗ್ಗೆ 11 ಗಂಟೆಗೆ ಘೋಷಿಸಲಾಗುತ್ತಿದ್ದು, ಪೊರಕ ಪರೀಕ್ಷೆಗಳಿಗೆ ಹಾಜರಾದ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ವೆಬ್‌ ಸೈಟ್‌ karresults .nic.in ನಲ್ಲಿ ಪರಿಶೀಲಿಸಬಹುದು. ಆದ್ದರಿಂದ ಎಲ್ಲಾ …

Read More »

ಹುಬ್ಬಳ್ಳಿಯಲ್ಲಿ ತಂದೆ ಮಗನ ಜಗಳ ವಿದ್ಯಾನಗರ ಪೋಲಿಸ್‌ ಠಾಣೆಯಲ್ಲಿ ಪ್ರಕರಣ

ಹುಬ್ಬಳ್ಳಿಯ ಲೋಕಪ್ಪನ ಹಕ್ಕಲದಲ್ಲಿ ತಂದೆ ಮಗ ಪರಸ್ಪರ ಜಗಳವಾಡುತ್ತಿರುವ ಬಗ್ಗೆ 112 ಗೆ ಕರೆ ಬಂದಿದ್ದು ತಕ್ಷಣ ಹೊಯ್ಸಳ 09 ದವರು ಸ್ಥಳಕ್ಕೆ ತೆರಳಿ ಅವರಿಗೆ ಸೂಕ್ತ ತಿಳಿಹೇಳಿದ್ದು ಜಗಳ ಬಗೆಹರಿಯದ ಕಾರಣ ಅವರನ್ನು ಮುಂದಿನ ಕ್ರಮಕ್ಕಾಗಿ ವಿದ್ಯಾನಗರ ಠಾಣೆಗೆ ಒಪ್ಪಿಸಿರುತ್ತಾರೆ. ಎಂದು ತಿಳಿದು ಬಂದಿದೆ. ಅಪ್ಪ ಮಗ ಕ್ಷುಲ್ಲಕ ಕಾರಣಕ್ಕಾಗಿ ಜಗಳ ಮಾಡುತ್ತಿದ್ದ ಹಿನ್ನಲೆಯಲ್ಲಿ ಸ್ಥಳೀಯರು 112 ತುರ್ತು ಸಹಾಯವಾನಿಗೆ ಕರೆ ಬಂದ ಹಿನ್ನಲೆಯಲ್ಲಿ ಪೋಲಿಸರು ಸಮಸ್ಯೆ ಬಗೆಹರಿಸಲು …

Read More »

ಹುಬ್ಬಳ್ಳಿಯಲ್ಲಿ ಹೊಯ್ಸಳ ವಾಹನದ ಪೋಲಿಸ್‌ ಸಿಬ್ಬಂದಿಗಳಿಂದ ಜಾಗೃತಿ ಕಾರ್ಯಕ್ರಮ

ಹೊಯ್ಸಳ ವಾಹನದ ಸಿಬ್ಬಂದಿ-ಅಧಿಕಾರಿಗಳು ಹುಬ್ಬಳ್ಳಿ ಧಾರವಾಡದ ವಿವಿಧ ಪ್ರದೇಶ, ಹಾಗೂ ಶಾಲಾ ಕಾಲೇಜು ಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಿದರು. ನಾಗರಿಕರಿಗೆ, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ 112 ಸಹಾಯವಾಣಿ ಸ್ಪಂದನ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು. ತುರ್ತು ಸಂದರ್ಭಗಳಲ್ಲಿ ಯಾವುದೇ ಸಹಾಯಕ್ಕಾಗಿ 112 ಸಂಖ್ಯೆಗೆ ಕರೆ ಮಾಡುವಂತೆ ಜಾಗೃತಿ ಮೂಡಿಸಿದರು. 112 ತುರ್ತು ಸಹಾಯವಾಣಿ ಯಾವ ರೀತಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತದೆ ಎನ್ನುವುದನ್ನು ಈ ಸಂದರ್ಭದಲ್ಲಿ ತಿಳಿಸಿದರು. ಈ ಸಮಯದಲ್ಲಿ …

Read More »

ಧಾರವಾಡ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ 16 ರಂದು

ಧಾರವಾಡ:ಕರ್ನಾಟಕ ರಾಜ್ಯ ಸಮಗಾರ ಹರಳಯ್ಯ ಸಮಾಜದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ಕರ್ನಾಟಕ ರಾಜ್ಯ ಸಮಗಾರ ಅಭಿವೃದ್ಧಿ ಸಂಘದ ವತಿಯಿಂದ ಬರುವ ಜು.16 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಕರ್ನಾಟಕ ಕುಲ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಸುಭಾಷ್ ನೇತ್ರೇಕರ ತಿಳಿಸಿದರು. ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಘದ ಜಂಟಿ ಕಾರ್ಯದರ್ಶಿಗಳಾದ ಚಂದ್ರಕಾಂತ ಪೂಜಾರ ಅವರ ತಂದೆ ತಾಯಿಯವರ ಸ್ಮರಣಾರ್ಥವಾಗಿ ಎಸ್ …

Read More »

ಧಾರವಾಡದಲ್ಲಿ ಕಳೆಗಟ್ಟಿದ ಬಕ್ರೀದ್ ಹಬ್ಬದ ಸಂಭ್ರಮ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ

ಧಾರವಾಡ: ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿ ಇಂದು ಬಕ್ರೀದ್ ಹಬ್ಬದ ಸಂಭ್ರಮ ಜೋರಾಗಿದೆ. ಧಾರವಾಡದ ಮೆಹಬೂಬ್ ನಗರದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಾಮೂಹಿಕ ಪ್ರಾರ್ಥನೆ ನಡೆಯುತ್ತಿದ್ದು, ಮುಸ್ಲಿಂ ಧರ್ಮ ಗುರುಗಳಿಂದ ಬಕ್ರೀದ್ ಪ್ರಾರ್ಥನೆ ಬೋಧನೆ ಮಾಡಲಾಯಿತು. ಬಕ್ರೀದ್ ಹಬ್ಬದ ಪ್ರಾರ್ಥನೆಯೊಂದಿಗೆ ಮಳೆಗಾಗಿ ವಿಶೇಷ ಪ್ರಾರ್ಥನೆ ಮಾಡಿದರು. ಪುರುಷರು ಮಕ್ಕಳು ಸೇರಿ ಮುಸ್ಲಿಂ ಸಮುದಾಯದ ಹಿರಿಯರು ಪ್ರಾರ್ಥನೆಯಲ್ಲಿ ಭಾಗಿಯಾಗಿ ಸಾಮೂಹಿಕ ಪ್ರಾರ್ಥನೆ ಬಳಿಕ ಒಬ್ಬರಿಗೊಬ್ಬರು ಹಬ್ಬದ ಶುಭಾಶಯಗಳ ವಿನಿಮಯ ಮಾಡಿಕೊಂಡರು. ಹೊಸ …

Read More »