Breaking News

ಕರ್ನಾಟಕ

ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದೊಯ್ಯುತ್ತಿದ್ದಾಗ ತಪ್ಪಿಸಿಕೊಂಡಿದ್ದ ವಿಚಾರಣಾ ಕೈದಿ…

ಚಾಮರಾಜನಗರ: ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದೊಯ್ಯುತ್ತಿದ್ದಾಗ ತಪ್ಪಿಸಿಕೊಂಡಿದ್ದ ವಿಚಾರಣಾ ಕೈದಿ ಮಹಿಳೆಯರ ಪರ್ಸ್ ಕದಿಯಲು ಹೋಗಿ ಸಿಕ್ಕಿ ಬಿದ್ದಿರುವ ಘಟನೆ ಚಾಮರಾಜನಗರ ಸಮೀಪದ ಕೌಲಂದೆ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಚಾಮರಾಜನಗರ ತಾಲೂಕಿನ ಸುರೇಶ್(30) ಪೊಲೀಸರ ಕೈಗೆ ಸಿಕ್ಕಿಬಿದ್ದ ವಿಚಾರಣಾ ಕೈದಿಯಾಗಿದ್ದು, ತಪ್ಪಿಸಿಕೊಂಡ 24 ತಾಸಲ್ಲೇ ಮತ್ತೇ ಖಾಕಿ ಬಲೆಗೆ ಈ ಖತರ್ನಾಕ್ ಬಿದ್ದಿದ್ದಾನೆ.

Read More »

ವಿಜಯೋತ್ಸವ ನಡೆಸುವ ವೇಳೆ ಕಾಂಗ್ರೆಸ್ ಮುಖಂಡರ ಯಡವಟ್ಟು: ಗುರುತು ಮರೆತ ನಾಯಕರು…

ಹುಬ್ಬಳ್ಳಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೂರತ್ ನ್ಯಾಯಾಲಯ ಅವರಿಗೆ ವಿಧಿಸಿದ್ದ ಶಿಕ್ಷೆಗೆ ತಡೆ ಕೋರಿ ಸುಪ್ರೀಂ ಕೋರ್ಟ್ ನಲ್ಲಿ ಮೆಲ್ಮನವಿ ಸಲ್ಲಿಸಿದ್ದರು ಈಗ ರಾಹುಲ್ ಗಾಂಧಿ ಪರ ಸುಪ್ರೀಂ ಕೋರ್ಟ್ ತಡೆಯಾಜ್ಞೆ ಕೊಟ್ಟಿದೆ.ಇವರ ಪರ ಹುಬ್ಬಳ್ಳಿಯ ಕಾಂಗ್ರೆಸ್ ನಾಯಕರಗಳು ರಾಹುಲ್ ಗಾಂಧಿ ಅವರ ಪರ ಖುಷಿ ಹಂಚಿಕೊಳ್ಳಲು ತಾರಾತುರಿಯಲ್ಲಿ ಪೋಸ್ಟರಗಳಲ್ಲಿ ಕಾಂಗ್ರೇಸ್ ಚಿಹ್ನೆಯನ್ನು ಬದಲಿಸಿ ಬಿಟ್ಟಿದ್ದಾರೆ. ತಮ್ಮ ಪಕ್ಷದ ಚಿಹ್ನೆಗಳನ್ನು ಸರಿಯಾಗಿ ಜವಾಬ್ಧಾರಿಯುತವಾಗಿ ನೋಡಿಕೊಳ್ಳಲು ಆಗದ ಕಾಂಗ್ರೆಸ್ …

Read More »

ಇಲಾಖೆಯ CPI & PSI ವಿರುದ್ಧ ಕರ್ನಾಟಕ ಲೋಕಾಯುಕ್ತಗೆ ದೂರು…

ಹು -ಧಾ CPI&PSI ಗೆ ಡವ ಡವ.. ಯಾವುದೇ ಕಾನೂನು ಬಾಹಿರ ಕ್ರತ್ಯಗೆ ಭಾಗಿಯಾಗದಿದ್ದರೂ ಲಂಚದ ಹಣ ಪಡೆದು ದೂರಿನಲ್ಲಿ ಹಾಗೂ ಆರೋಪ ಪಟ್ಟಿಯಲ್ಲಿ ಹೆಸರು ಸೇರಿಸಿದ ಬಗ್ಗೆ ಕ್ರಮ ಕೈಗೊಳ್ಳುವ ಕುರಿತು ಹು -ಧಾ ಪೊಲೀಸ ಠಾಣೆಯಿಂದ ಆದ ಅನ್ಯಾಯದ ವಿರುದ್ಧ ಕರ್ನಾಟಕ ಲೋಕಾಯುಕ್ತ ಮೊರೆ ಹೋದ ವ್ಯಕ್ತಿ.ಮಾನ್ಯ ಉಚ್ಚ ನ್ಯಾಯಾಲಯ ಧಾರವಾಡ ಬೆಂಚ್ W. P. No 10415/2022 ಆದೇಶ ದಿನಾಂಕ :30/05/2023ರಲ್ಲಿ ದಾಖಲೆ ಸಾಕ್ಷ್ಯ ಇಲ್ಲದೆ …

Read More »

ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ!

ಬೆಂಗಳೂರು: ಕೌಟುಂಬಿಕ ಕಲಹಕ್ಕೆ ಬೇಸತ್ತು ಮಕ್ಕಳನ್ನ ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ವಿದ್ರಾವಕ ಘಟನೆ ಕಾಡುಗೋಡಿಯ ಠಾಣಾ ವ್ಯಾಪ್ತಿ ಶೀಗೇಹಳ್ಳಿಯ ಸಾಯಿ ಗಾರ್ಡನ್ ಅಪಾರ್ಟ್’ ಮೆಂಟ್’ನಲ್ಲಿ ನಡೆದಿದೆ. ಆಂಧ್ರ ಮೂಲದ ದಂಪತಿಗಳಾದ ಪತಿ ವೀರಾರ್ಜುನ ವಿಜಯ್ (31), ಪತ್ನಿ ಹೇಮಾವತಿ(29) ಹಾಗೂ ಇಬ್ಬರು ಹೆಣ್ಣುಮಕ್ಕಳಾದ 1 ವರ್ಷದ ಮಗು, ಮೂರು ವರ್ಷದ ಮಗುವನ್ನು ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ನಿನ್ನೆ ರಾತ್ರಿ ನಡೆದಿದ್ದರು ತಡವಾಗಿ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೂ ಮುನ್ನ …

Read More »

’ಸ್ಕಂದ’ ಸಿನಿಮಾದ ಮೊದಲ ಹಾಡು ಬಂತು.. ಉಸ್ತಾದ್ ರಾಮ್ ಪೋತಿನೇನಿ-ಶ್ರೀಲೀಲಾ ಡ್ಯಾನ್ಸ್ ಫ್ಲೋರ್

ಉಸ್ತಾದ್ ರಾಮ್ ಪೋತಿನೇನಿ ಹಾಗೂ ಬೋಯಾಪಾಟಿ ಶ್ರೀನು ಕಾಂಬಿನೇಷನ್ ಮಾಸ್ ಆಕ್ಷನ್ ಎಂಟರ್ ಟೈನರ್ ಸ್ಕಂದ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ನಿನ್ ಸುತ್ತ ಸುತ್ತ ತಿರುಗಿದೆ ಎಂಬ ಗಾನಬಜಾನಕ್ಕೆ ವರದರಾಜು ಚಿಕ್ಕಬಳ್ಳಾಪುರ ಸಾಹಿತ್ಯ ಬರೆದಿದ್ದು, ಸಂತೋಷ್ ವೆಂಕಿ ಹಾಗೂ ಶ್ರೀನಿಧಿ ತಿರುಮಲ ಕಂಠ ಕುಣಿಸಿದ್ದಾರೆ. ಎಸ್ ಎಸ್ ತಮನ್ ಟ್ಯೂನ್, ರಾಮ್ ಎನರ್ಜಿ, ಶ್ರೀಲೀಲಾ ಗ್ಲಾಮರ್ ರಂಗು, ಅದ್ಧೂರಿ ಸೆಟ್ ಹಾಡಿನ ಶ್ರೀಮಂತಿಕೆಯನ್ನು ಹೆಚ್ಚಿಸಿದೆ. ಐದು ಭಾಷೆಯಲ್ಲಿಯೂ ಸ್ಕಂದ …

Read More »

ಯುವತಿಯನ್ನು ಡ್ರಾಪ್ ಮಾಡಿದ್ದಕ್ಕೆ ಆಟೋ ಚಾಲಕನ ಮೇಲೆ ಹಲ್ಲೆ..

ಬೆಳ್ತಂಗಡಿ(ದಕ್ಷಿಣ ಕನ್ನಡ): ಯುವತಿಯನ್ನು ಡ್ರಾಪ್ ಮಾಡಿದ್ದಕ್ಕೆ ಆಟೋ ಚಾಲಕನ ಮೇಲೆ ಹಲ್ಲೆ ನಡೆದ ಘಟನೆ ಧರ್ಮಸ್ಥಳ ಬಸ್ ನಿಲ್ದಾಣದ ಬಳಿ ನಡೆದಿದೆ. ಬೆಂಗಳೂರಿನ ನಿವಾಸಿಯ ವಿದ್ಯಾರ್ಥಿನಿಯೊಬ್ಬಳು ಉಜಿರೆ ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದಳು. ಕಳೆದ ವಾರ ಕಾಲೇಜು ಕೊನೆಗೊಂಡಿದ್ದು, ಆ.02ರಂದು ರಾತ್ರಿ ತನ್ನ ಊರಾದ ಬೆಂಗಳೂರಿಗೆ ತೆರಳಲು ಉಜಿರೆಯಿಂದ ಪರಿಚಯಸ್ಥ ಆಟೋ ಚಾಲಕನಿಗೆ ಕರೆ ಮಾಡಿದ್ದಳು. ಆತ ಬಂದು ಉಜಿರೆಯಿಂದ ಧರ್ಮಸ್ಥಳ ಬಸ್ ನಿಲ್ದಾಣಕ್ಕೆ ರಾತ್ರಿ ಸುಮಾರು 9 ಗಂಟೆಗೆ …

Read More »

ಕಟ್ಟಡದ ಮೇಲಿದ್ದ ನೀರಿನ ಟಾಕಿ ಬಿದ್ದು 2 ಜನ ಸಾವು….

ಬೆಂಗಳೂರು :ನಾಲ್ಕು ಅಂತಸ್ತಿನ ಕಟ್ಟಡದ ಮೇಲಿದ್ದ ನೀರಿನ ಟ್ಯಾಂಕ್​ ಕುಸಿದು ಬಿದ್ದು ಫಾಸ್ಟ್ ಫುಡ್ ಅಂಗಡಿ ಮಾಲೀಕ ಹಾಗೂ ಗ್ರಾಹಕ ಸಾವನ್ನಪ್ಪಿರುವ ಘಟನೆ ತಡರಾತ್ರಿ ರಾಜಧಾನಿಯ ಶಿವಾಜಿನಗರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದರೆ, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೃತರಲ್ಲಿ ಒಬ್ಬ ಅರುಳ್ (40) ಹಾಗೂ ಮತ್ತೊಬ್ಬನ ಗುರುತು ಇನ್ನೂ ಪತ್ತೆಯಾಗಿಲ್ಲ. ನಾಲ್ಕು ಅಂತಸ್ತಿನ ಕಟ್ಟಡದ ಮೇಲೆ ವಾಟರ್ ಟ್ಯಾಂಕ್ (ಸಿಂಟ್ಯಾಕ್ಸ್) ಇತ್ತು. ಅದೇ …

Read More »

ಕಾಫಿ ತೋಟದಲ್ಲಿ ಕಾಡಾನೆ ಹಿಂಡು.

ಚಿಕ್ಕಮಗಳೂರು:ರಾಜ್ಯದ ಪ್ರವಾಸಿಗರ ಸ್ವರ್ಗವೆಂದೇ ಹೇಳಲಾಗುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸ ಬಂದು ಹೋಗಲಷ್ಟೇ ಸ್ವರ್ಗವೆನಿಸುತ್ತದೆ. ಆದರೆ, ಇಲ್ಲಿ ನೆಲೆಗೊಂಡು ಜೀವನ ಮಾಡುವವರಿಗೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗತೊಡಗಿದೆ. ಮೂಡಿಗೆರೆಯ ಒಂದೇ ಕಾಫಿ ಎಸ್ಟೇಟ್‌ನಲ್ಲಿ 16 ಕಾಡಾನೆಗಳು ಒಂದು ವಾರದಿಂದ ಬೀಡು ಬಿಟ್ಟಿದ್ದು, ಎಲಿಫ್ಯಾಂಟ್‌ ಟಾಸ್ಕ್‌ ಫೋರ್ಸ್‌ನ ಆನೆ ಓಡಿಸುವ ಪ್ರಯತ್ನ ಸಂಪೂರ್ಣ ವ್ಯರ್ಥವಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆಗಳು ಹಾಗೂ ಮಾನವನ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಕಾಡಾನೆಗಳು ಪದೇ ಪದೆ ದಾಳಿ …

Read More »

ಮೈದುಂಬಿ‌‌ ಹರಿಯುತ್ತಿರುವ ಎತ್ತಿಪೋತಾ ಜಲಪಾತ…

ಕಲಬುರಗಿ:ಬಿಸಿಲಿನ ತಾಪಕ್ಕೆ ಹೆಸರುವಾಸಿಯಾದ ಕಲಬುರಗಿ ಜಿಲ್ಲೆ ಈಗ‌ ಅಕ್ಷರಶಃ ಮಲೆ‌ನಾಡಿನ ವಾತಾವರಣದಂತೆ ಭಾಸವಾಗುತ್ತಿದೆ. ಕಳೆದೊಂದು ವಾರದಿಂದ‌ ಅಬ್ಬರದ ಮಳೆಯಾಗಿದೆ. ಜೊತೆಗೆ ಮಹಾರಾಷ್ಟ್ರ, ತೆಲಂಗಾಣದಲ್ಲಿ ಸುರಿದಿದ್ದ ಭಾರಿ ಮಳೆ ಹಿನ್ನೆಲೆ ಜಿಲ್ಲೆಯಲ್ಲಿ ತಂಪಿನ ವಾತಾವರಣ ಕಂಡುಬರುತ್ತಿದೆ. ಚಿಂಚೋಳಿ ತಾಲೂಕಿನ‌ ಎತ್ತಿಪೋತಾ ಜಲಪಾತ ಮೈದುಂಬಿ‌‌ ಹರಿಯುತ್ತಿದೆ. ಜಲಪಾತದ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ನೂರಾರು ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೆರಳೆಣಿಕೆಯಷ್ಟು ಚಿಕ್ಕಪುಟ್ಟ ಜಲಪಾತಗಳು ಇವೆ. ಬೆಸಿಗೆಯಲ್ಲಿ ಇವು‌ ಸೊರಗಿ ಹೋಗುತ್ತವೆ. …

Read More »

ಇದೆಂಥಾ ಗಂಡ- ಹೆಂಡತಿ ಸಾಮರಸ್ಯ ನೋಡಿ…..

ಕಲಬುರಗಿ: ಗಂಡ – ಹೆಂಡತಿ ಮಧ್ಯೆ ಸಾಮರಸ್ಯವಿದ್ದಷ್ಟು ಜೀವನ‌ ಸುಖಕರವಾಗಿರುತ್ತದೆ. ಆದರೆ, ಈ ದಂಪತಿ ನಡುವೆ ಕೊಂಚ ಸಾಮರಸ್ಯ ಹೆಚ್ಚಾಗಿಯೇ ಇದ್ದಂತಿದೆ. ಏಕೆಂದರೆ, ಜೈಲಿನಲ್ಲಿ ಖೈದಿಯಾಗಿರುವ ಗಂಡನಿಗೆ ಗಾಂಜಾ ಕೊಡಲು ಹೋಗಿ ಮಹಿಳೆಯೊಬ್ಬರು ಸಿಕ್ಕಿಬಿದ್ದಿದ್ದಾರೆ. ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಖೈದಿಯಾಗಿರುವ ಗಂಡನನ್ನು ಭೇಟಿಯಾಗುವ ಸೋಗಿನಲ್ಲಿ ಬಂದು ಗಾಂಜಾ ಕೊಡಲು ಯತ್ನಿಸಿದ್ದಾರೆ. ಬಳಿಕ ಸಿಬ್ಬಂದಿಗೆ ತನ್ನ ಕೈಚಳಕ ಗೊತ್ತಾಗುತ್ತಿದ್ದಂತೆ ಪರಾರಿಯಾಗಿದ್ದಾಳೆ. ಪ್ರಕರಣವೊಂದರಲ್ಲಿ ಜೈಲುವಾಸ ಅನುಭವಿಸುತ್ತಿರುವ ಜಾಲೇಂದ್ರನಾಥ ಕಾವಳೆ ಎಂಬಾತನಿಗೆ ಗಾಂಜಾ ಪೂರೈಕೆ …

Read More »