Breaking News

ಸಿಎಂ ಗೆ ಲೇವಡಿ ಮಾಡಿದ ಜೋಶಿ

ಹುಬ್ಬಳ್ಳಿ: ಸಿದ್ರಾಮಣ್ಣನವರು ರಾಜ್ಯದ ಜನರಿಗಾಗಿ ಇದ್ದಾರೊ..? ಅಥವಾ ಮುಸ್ಲಿಮ್ರಿಗಾಗಿ ಮಾತ್ರ ಇದ್ದಾರೋ ಎಂಬುವುದನ್ನು ಅವರೇ ಸ್ಪಷ್ಟ ಪಡಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿಯವರು ಲೇವಡಿ ಮಾಡಿದ್ದಾರೆ.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಇಟ್ಬಾಲ್ ಅನ್ಸಾರಿಯವರ ಮಾತನ್ನು ನೋಡಿದರೇ ಎಲ್ಲ ಆಸ್ತಿಯನ್ನು ಬರೆದುಕೊಳ್ಳಿ ಎಂದು ಸಿಎಂ ಅವರೇ ಹೇಳಿರುವ ಹಾಗಿದೆ. ಈ ಬಗ್ಗೆ ಸಿದ್ರಾಮಣ್ಣನವರೇ ಸ್ಪಷ್ಟನೆ ನೀಡಬೇಕು. ನೀವು ರಾಜ್ಯದ ಜನರಿಗಾಗಿ ಸಿಎಂ ಆಗಿದ್ದೀರೋ..? ಮುಸ್ಲಿಮ್‌ರಿಗಾಗಿ ಸಿಎಂ ಆಗಿದ್ದೀರೋ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯನವರು ಇರುವ ತನಕ ಏನೇ ಮಾಡಿದರೂ ನಡೆಯುತ್ತದೆ. ಭಯೋತ್ಪಾದನೆಯ ಬಗ್ಗೆ ಕಾಂಗ್ರೆಸ್‌ ಸರ್ಕಾರ ಹಾಗೂ ಸಿಎಂ ಸಿದ್ಧರಾಮಯ್ಯನವರದು ಮೃದುಧೋರಣೆ ಇದ್ದೆ ಇದೆ. ಯಾವುದೇ ದೇಶದ್ರೋಹದ ಕೇಸ್ ಮಾಡಿದರೂ ಕೇಸ್ ಹಿಂಪಡೆಯುವುದು, ಕೆಜಿ ಹಳ್ಳಿ, ಡಿಜಿ ಹಳ್ಳಿಯಲ್ಲಿನ ಪ್ರಕರಣದಲ್ಲಿ ಭಾಗಿಯಾದವರನ್ನು ಬಿಡುಗಡೆ ಮಾಡುವುದನ್ನು ನೋಡಿದರೇ ದೇಶದ್ರೋಹದ ಪ್ರಕರಣದಲ್ಲಿ ಮೃದು ಧೋರಣೆ ಇರುವುದು ಗೊತ್ತಾಗುತ್ತದೆ ಎಂದು ಅವರು ಕಿಡಿಕಾರಿದರು.

Share News

About Shaikh BigTv

Check Also

ಬೆಂಗಳೂರು | ಸಿಕ್ಕವರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು: ಎಂಟು ಮಂದಿಗೆ ಗಾಯ

ಬೆಂಗಳೂರು: ಮಾಸ್ಕ್ ಧರಿಸಿ ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಎಂಟು ಮಂದಿ ದುಷ್ಕರ್ಮಿಗಳು ಉತ್ತರಹಳ್ಳಿ ಮುಖ್ಯರಸ್ತೆ ಹಾಗೂ ಅರಹಳ್ಳಿ ಗೇಟ್ ಬಳಿ …

Leave a Reply

Your email address will not be published. Required fields are marked *