Breaking News

ಧಾರವಾಡ ಜೋಡಿ ಕೊಲೆ ಪ್ರಕರಣ ಮತ್ತೋರ್ವ ರೌಡಿ ಶೀಟರ್ ಬಂಧನ

ಧಾರವಾಡ : ಹುಬ್ಬಳ್ಳಿ ಧಾರವಾಡ ಅವಳಿನಗರವನ್ನೇ ಬೆಚ್ಚಿ ಬೀಳಿಸಿದ್ದ ಧಾರವಾಡ ಕಮಲಾಪುರ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮಿ ಮಹ್ಮದ್ ಕುಡಚಿ ಹತ್ಯೆಗೆ ಬಂದೂಕು ಸರಬರಾಜು ಮಾಡಿದ್ದ ಆರೋಪದ ಮೇಲೆ ಉಪನಗರ ಪೊಲೀಸ್ ಠಾಣೆಯ ಪೊಲೀಸರು ರೌಡಿಶೀಟರ್ ಮಂಜು ಸಾವಂತ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

ಮೇ 25 ರಂದು ಹಣದ ವಿಚಾರವಾಗಿ ಮಹ್ಮದ್ ಕುಡಚಿಯನ್ನು ಕೊಲೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಹತ್ಯೆ ಮಾಡಲು ಬಂದ ಗುಂಪಿನಲ್ಲಿದ್ದ ಗಣೇಶ ಕಮ್ಮಾರ ಎಂಬಾತನ ತೊಡೆಗೂ ಆಕಸ್ಮಿಕವಾಗಿ ಮಚ್ಚಿನೇಟು ಬಿದ್ದು, ಆತನೂ ಹತ್ಯೆಗೀಡಾಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಕೊಲೆಯಾಗಿದ್ದ ರೌಡಿಶೀಟರ್ ಫೂಟ್ ಇರ್ಫಾನ್ ಪುತ್ರ ಅರಬಾಜ್ ಬಳಿ ಕೊಲೆ ಮಾಡಲು ಬಳಸಲಾಗಿದ್ದ ಕಂಟ್ರಿ ಪಿಸ್ತೂಲ್ ಎಲ್ಲಿಂದ ಬಂತು ಎಂದು ಪೊಲೀಸರು ವಿಚಾರಣೆ ನಡೆಸಿದ್ದರು.

ವಿಚಾರಣೆ ಬಳಿಕ ಬಂದೂಕು ನೀಡಿದ್ದ ಆರೋಪದ ಮೇಲೆ ಉಪನಗರ ಠಾಣೆ ಪೊಲೀಸರು ರೌಡಿ ಶೀಟರ್ ಮಂಜು ಸಾವಂತ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಮಂಜು ಸಾವಂತ ಅರ್ಬಾಜ್ ತಂದೆ ಫೂಟ್ ಇರ್ಫಾನ್ ಜೀವಂತ ಇದ್ದಾಗ ಆತನ ಸಹಚರನಾಗಿದ್ದ.

Share News

About Shaikh BigTv

Check Also

ಗಸ್ತು ಪೊಲೀಸರ ಮೇಲೆ ದಾಳಿ: ಕಾನೂನಿಗೆ ಸವಾಲು ಹಾಕಿದ ದುಷ್ಕರ್ಮಿಗಳು!

ಪೊಲೀಸರೇ ಸುರಕ್ಷಿತ ಅಲ್ಲವಾ..? ಹುಬ್ಬಳ್ಳಿಯಲ್ಲಿ ಗೂಂಡಾಗಿರಿ ಮಿತಿ ಮೀರಿ! ಸ್ಮಶಾನದಲ್ಲೇ ದಾಳಿ: ಪೊಲೀಸರ ಮೇಲೆ ಚಾಕು ನಗರದಲ್ಲಿ ಭೀತಿ! ಕರ್ತವ್ಯದಲ್ಲಿದ್ದ …

Leave a Reply

Your email address will not be published. Required fields are marked *