Breaking News

ಗ್ರಾಮ ಪಂಚಾಯತ್‌ ಅಧಿಕಾರಿಯನ್ನು ಶಾಸಕರು ಬಹಿರಂಗ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡ ಶಾಸಕ..

ಹಾಸನ: ಲಂಚ ತೆಗೆದುಕೊಳ್ಳುತ್ತಾರೆ ಎನ್ನುವ ಆರೋಪ ಹೊತ್ತಿರುವ ಗ್ರಾಮ ಪಂಚಾಯತ್‌ ಅಧಿಕಾರಿಯನ್ನು ಶಾಸಕರು ಬಹಿರಂಗ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡು ಪ್ರಶ್ನಿಸಿರುವ ಘಟನೆ ಹಾಸನದಲ್ಲಿ ನಡೆದಿದೆ.ಶಾಸಕ ಹುಲ್ಲಹಳ್ಳಿ ಸುರೇಶ್ ನೇತೃತ್ವದಲ್ಲಿ ಬೇಲೂರು ಪಟ್ಟಣದಲ್ಲಿ ಸಾಮಾನ್ಯ ಸಭೆ ನಡೆದಿದೆ. ಸಭೆಯಲ್ಲಿ ಜಿಲ್ಲಾ ಪಂಚಾಯತಿ ಸಿಇಓ ಪೂರ್ಣಿಮಾ ಕೂಡ ಭಾಗಿಯಾಗಿದ್ದಾರೆ. ಈ ಸಭೆಯಲ್ಲಿ ಅಧಿಕಾರಿಗಳ ಮುಂದೆ ಜಾವಗಲ್ ವ್ಯಾಪ್ತಿಯ ಮಹಿಳಾ ಪಿಡಿಓ ಒಬ್ಬರನ್ನು ಶಾಸಕ ಹುಲ್ಲಳ್ಳಿ ಸುರೇಶ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.ಏನಮ್ಮ ಲಂಚಕೊಟ್ಟರೆ ಮಾತ್ರಾನಾ ನೀನು ಈ ಸ್ವತ್ತು ಮಾಡಿಕೊಡುವುದು, ದುಡ್ಡು ಕೊಟ್ಟರೆ ಮಾತ್ರ ಜನರ ಕೆಲಸ ಮಾಡಿಕೊಡುವುದಾ ಎಂದು ಶಾಸಕರು ಪ್ರಶ್ನಿಸಿದ್ದಾರೆ. ಎಷ್ಟು ಲಂಚ ತೆಗೆದುಕೊಂಡಿದ್ದಿಯಾ ಸಾಕ್ಷಿಯನ್ನು ಕರೆಸಲಾ..? ಎಂದು ಸಭೆಯಲ್ಲಿ ಕೇಳಿದ್ದಾರೆ.

Share News

About BigTv News

Check Also

ಸಿವಿಲ್ ವ್ಯಾಜ್ಯದಲ್ಲಿ ಖಾಕಿ ದರ್ಬಾರ್‌ಗೆ ಹೈಕೋರ್ಟ್ ಬ್ರೇಕ್..! ಅಧಿಕಾರ ಮೀರಿದರೆ ಪೊಲೀಸರಿಗೇ ಶಿಸ್ತು ಕ್ರಮದ ಬಿಸಿ..!!

ಆಸ್ತಿ ವ್ಯಾಜ್ಯದಲ್ಲಿ ಪೊಲೀಸರ ಆಟಕ್ಕೆ ಕಡಿವಾಣ..! ಸುತ್ತೋಲೆ ಉಲ್ಲಂಘಿಸಿದರೆ ಅಧಿಕಾರಿಗಳೇ ನೇರ ಹೊಣೆ — ಇಲಾಖೆಯ ಖಡಕ್ ವಾರ್ನಿಂಗ್..! ಸಿವಿಲ್ …

Leave a Reply

Your email address will not be published. Required fields are marked *