Breaking News

admin

ಈಜಲು ಹೊಗಿ ನೀರು ಪಾಲಾದ ಯುವಕ

ಕುರಿ ತೊಳೆದು ಈಜಲು ಹೊಗಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪಿದ್ದ ಘಟನೆ ಚಿತ್ರದುರ್ಗದ ಚಳ್ಳಕೆರೆ ತಾಲ್ಲೂಕಿನ ಮಿರಸಾಭಿಹಳ್ಳಿಯ ರಾಣಿಕೆರೆಯಲ್ಲಿ ಘಟನೆ ನಡೆದಿದೆ. ಮೃತ ಮನೋಜ್ (೧೮) ಪರಶುರಾಂಪುರ ಹೋಬಳಿ ಬೋಮ್ಮನಕುಂಟೆ ಗ್ರಾಮದ ಯುವಕ ಇಂದು ಕುರಿ ಮೈತೊಳೆಯಲು ಹೋಗಿ ಕುರಿಗಳನ್ನು ಮೈ ತೊಳೆದು ಈಜಲು ಹೊದಾಗ ಗುಡಿಯೊಳಗೆ ಮುಳುಗಿ ಮೃತ ಪಟ್ಟಿದ್ದಾನೆ .ಸ್ಥಳಕ್ಕೆ ಪಿಎಸ್ ಐ ಕೆ.ಸತೀಶ್ ನಾಯ್ಕ ಭೇಟಿ ನೀಡಿದ್ದು ಪರಿಶೀಲಿನೆ ನಡೆಸಿದ್ದಾರೆ.

Read More »

ಚಾಮರಾಜೇಶ್ವರ ರಥದ ಕಾಮಗಾರಿಯ ವಿಳಂಬ ನೀತಿ ವಿರೋಧಿಸಿ ಪ್ರತಿಭಟನೆ

ಶಿಥಿಲಗೊಂಡಿರುವ ಚಾಮರಾಜೇಶ್ವರ ರಥದ ಕಾಮಗಾರಿಯ ವಿಳಂಬ ನೀತಿ ವಿರೋಧಿಸಿ ಕರ್ನಾಟಕ ಸೇನಾಪಡೆ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿತು.ನಗರದ ಜಿಲ್ಲಾಧಿಕಾರಿಗಳ ಕಛೇರಿ ಎದುರು ಧರಣಿ ನಡೆಸಿದ ಪ್ರತಿಭಟನಾಕಾರರು ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಚಾ.ರಂ.ಶ್ರೀನಿವಾಸಗೌಡ, ಇತಿಹಾಸ ಪ್ರಸಿದ್ದ ಚಾಮರಾಜೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಸುಮಾರು ತಿಂಗಳುಗಳೇ ಕಳೆದರೂ ಅಭಿವೃದ್ಧಿ ಕಾರ್ಯ ಪ್ರಾರಂಭಗೊಂಡಿಲ್ಲ ಎಂದು ಆರೋಪಿದರು. …

Read More »

ಲೋಕಸಭೆ ಚುನಾವಣೆಯಲ್ಲಿ ಗೆದ್ದ ಬಿಜೆಪಿಗೆ ಅಧಿಕಾರದ ಮದ ಏರಿದೆ,

ಲೋಕಸಭೆ ಚುನಾವಣೆಯಲ್ಲಿ ಗೆದ್ದ ಬಿಜೆಪಿಗೆ ಅಧಿಕಾರದ ಮದ ಏರಿದೆ, ಹಾಗಾಗಿ ಇಂತಹ ಅಸಭ್ಯ ಹೇಳಿಕೆಗಳನ್ನ ನೀಡುತ್ತಿದ್ದಾರೆಂದು ಗ್ರಾಮೀಣಾಭಿವೃದ್ದಿ ಸಚಿವ ಕೃಷ್ಣಬೈರೇಗೌಡ ಕೋಲಾರದಲ್ಲಿ ಹೇಳಿಕೆ ನೀಡಿದರು. ಕೈ ಕಡಿಯುವುದು, ತಲೆ ತೆಗೆಯುವುದು ಬಿಜೆಪಿ ಸಂಸ್ಕೃತಿಯನ್ನ ಬಿಂಬಿಸುತ್ತದೆ. ಮೇಲು ಕೀಳು ಎಂಬ ಭಾವನೆ ಅವರ ತಲೆಯಲ್ಲಿ ಹಾಗೆ ಉಳಿದಿದೆ. ಮನುಷ್ಯ ಜನ್ಮ ಸ್ವಾಭಾವಿಕವಾಗಿದ್ದು, ಹೀಗೆಲ್ಲ ಒಂದು ಸಮುದಾಯಕ್ಕೆ ನೋವಾಗುವ ರೀತಿ ಮಾತನಾಡಬಾರದು. ಸಂಸದೆ ಶೋಭಾ ಕರೆಂದ್ಲಾಜೆ ಅಸಭ್ಯ ಟ್ವಿಟ್ ಗೆ ಸಚಿವ ಕೃಷ್ಣ …

Read More »

ಹುಬ್ಬಳ್ಳಿಯಲ್ಲಿ ಅಮರ್ ಚಲನಚಿತ್ರ ತಂಡದಿಂದ ವಿಜಯಯಾತ್ರೆ

ಹುಬ್ಬಳ್ಳಿಯಲ್ಲಿ ಅಮರ್ ಚಲನಚಿತ್ರ ತಂಡದಿಂದ ವಿಜಯಯಾತ್ರೆ ನಡೆಯಿತು. ಕೆಎಲ್‌ಇ ಸಂಸ್ಥೆಯ ಬಿವಿಬಿ ಕಾಲೇಜಿನ ಆಡಿಟೋರಿಯಂನಲ್ಲಿ ಚಿತ್ರ ತಂಡದೊಂದಿಗೆ ವಿದ್ಯಾರ್ಥಿಗಳ ಸಂವಾದ ಏರ್ಪಡಿಸಲಾಗಿತ್ತು. ಸಂಸದೆ ಸುಮಲತಾ, ಚಿತ್ರದ ನಾಯಕ ನಟ ಅಭಿಷೇಕ, ರಾಕ್‌ಲೈನ್ ವೆಂಕಟೇಶ್, ನಾಗಶೇಖರ್, ದೊಡ್ಡಣ್ಣ ಮತ್ತು ಯೋಗರಾಜ್‌ ಭಟ್ ಉಪಸ್ಥಿತರಿದ್ದರು. ಚಿತ್ರದ ಟ್ರೈಲರ್ ವೀಕ್ಷಿಸಿದ ವಿದ್ಯಾರ್ಥಿಗಳು ಅಭಿಷೇಕ್‌ ಮತ್ತು ಅಂಬರೀಷ್ ನಟನೆಯ ಹಾಡುಗಳಿಗೆ ಕುಣಿದು ಕುಪ್ಪಳಿಸಿದ್ರು. ಸಂಸದೆ ಸುಮಲತಾ ಅವರು ವೇದಿಕೆಗೆ ಬರುತ್ತಿದ್ದಂತೆ, ನಿಖಿಲ್ ಎಲ್ಲಿದೀಯಪ್ಪ, ನಿಖಿಲ್ ಎಲ್ಲಿದೀಯಪ್ಪ …

Read More »

ಸಿಎಮ್ ಇದೇ 21 ರಂದು ಯಾದಗಿರಿಯ ಚಂಡರಕಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ

ಸಿಎಂ ಅವರು ಟ್ರೇನ್ ಮೂಲಕ ಬಂದು ಇದೇ 21 ರಂದು ಯಾದಗಿರಿಯ ಚಂಡರಕಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ ಎಂದು ಸಚಿವ ರಾಜಶೇಖರ ಪಾಟೀಲ ತಿಳಿಸಿದರು. ರಾಜ್ಯದಲ್ಲಿ ಮೊದಲ ಬಾರಿಗೆ ಯಾದಗಿರಿ ಜಿಲ್ಲೆಯಿಂದ ಗ್ರಾಮ ವಾಸ್ತವ್ಯ ಪ್ರಾರಂಭ ಮಾಡುತ್ತಿದ್ದು,ಯಶಸ್ವಿ ಕಾರ್ಯಕ್ರಮ ವಾಗಲು ಸಿದ್ದತೆ ಮಾಡಿಕೊಳ್ಳುತ್ತಿದ್ದೆವೆ, 10 ರಿಂದ 15 ಸಾವಿರ ಜನ ಆಗಮಿಸುವ ನಿರೀಕ್ಷೆ ಇದೆ, ಸಿಎಂ ಕುಮಾರಸ್ವಾಮಿ ಅವರು ಜನರ ಅಹ್ವಾಲು ಸ್ವೀಕಾರ ಮಾಡಲಿದ್ದಾರೆ, ಜನರ ಸಮಸ್ಯೆ ಪರಿಹರಿಸುವ …

Read More »

ಬೇವಿನ ಮರ ಬಿದ್ದು ಓರ್ವ ಬಾಲಕಿ ಸಾವು, ಇಬ್ಬರಿಗೆ ಗಾಯ,

ಗಾಳಿಗೆ ಬೇವಿನ ಮರ ಬಿದ್ದು ಓರ್ವ ಬಾಲಕಿ ಸಾವು, ಇಬ್ಬರಿಗೆ ಗಾಯಗೊಂಡ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೊಸೂರು ಗ್ರಾಮದಲ್ಲಿ ಸಂಭವಿಸಿದೆ. ಅಜ್ಜ ಮೊಮ್ಮಕ್ಕಳು ಮರದ ಕೆಳಗೆ ಆಟವಾಡುವಾಗ ನಡೆದ ದುರ್ಘಟನೆಯಾಗಿದ್ದು, ಕೂಡಲೇ ಸ್ಥಳೀಯರು, ಮಕ್ಕಳು ಅಜ್ಜ ಮರದ ಕೆಳೆಗೆ ಸಿಲುಕಿ ನರಳಾಡುತ್ತಿದ್ದನ್ನು ಕಂಡು ಮರದ ಬಡ್ಡಿಯನ್ನ ಸ್ಥಾಳಂತರಿಸಿ ಇಬ್ಬರನ್ನ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಈ ಒಂದು ದುರ್ಘಟನೆ ಮುರಗೋಡ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಯಾಗಿದೆ.

Read More »

ಸಮಸ್ಯೆಗೆ ಸ್ಪಂಧನೆ ಮಾಡದಿದ್ದರೆ ಸಿಎಂ ಕುಮಾರಸ್ವಾಮಿ ಅವರಿಗೆ ಘೇರಾವ್ ಇಲ್ಲವೇ ಕಪ್ಪು ಪಟ್ಟಿ ಪ್ರದರ್ಶನ

ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಗೌಡ ಮಾಗನೂರ,ಗುರುಮಠಕಲ್ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಗೆ ಸಿಎಂ ಕುಮಾರಸ್ವಾಮಿ ಅವರು ಇದೆ 21 ರಂದು ಬರುತ್ತಿರುವದು ಸಂತೋಷದ ವಿಷಯ, ಸಿಎಂ ಒಂದು ವರ್ಷದ ಮೇಲೆ ಯಾದಗಿರಿ ಬಗ್ಗೆ ಕಣ್ಣು ತೆರೆದಿದ್ದಾರೆ, ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಇದೆ, ಸಿಎಂ ಕುಮಾರಸ್ವಾಮಿ ಶಾಲೆಯಲ್ಲಿ ವಾಸ್ತವ್ಯ ಮಾಡಬೇಕೆಂದ್ರೆ ಯೋಚನೆ ಮಾಡಬೇಕಿತ್ತು, ಚಂಡರಕಿ ಶಾಲೆಯು ಅತಿ ಹೈಟೇಕ್ ಸೌಕರ್ಯವಿದೆ, ಕೇವಲ ಒಂದು ಶಾಲೆಯಲ್ಲಿ ವಾಸ್ತವ್ಯ ಮಾಡಿದ್ರೆ ಶಾಲೆಯ ಸಮಸ್ಯೆ ಪರಿಹಾರವಾಗುತ್ತದಾ?. …

Read More »

ನೂತನವಾಗಿ ಆಯ್ಕೆಯಾದ ಅಕ್ಷರದಾಸೋಹ ಯೋಜನೆಯ ಸಹಾಯಕ ನಿರ್ದೇಶಕನ್ನು ಗೌರವಿಸಿದ ಶಾಸಕ ನಾರಾಯಣಗೌಡ

ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕರಾಗಿ ಪ್ರೌಢಶಾಲಾ ವಿಭಾಗದಿಂದ ಆಯ್ಕೆಯಾದ ಅಕ್ಷರದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಮಂಜುನಾಥ್ ಅವರನ್ನು ಶಾಸಕ ನಾರಾಯಣಗೌಡ ಸನ್ಮಾನಿಸಿ ಗೌರವಿಸಿದರು. ಜಿಲ್ಲಾ ಪಂಚಾಯತ ಮಾಜಿಉಪಾಧ್ಯಕ್ಷ ಕೆ.ಎಸ್.ಪ್ರಭಾಕರ್, ಮಂಡ್ಯ ಜಿಲ್ಲಾ ಸಹಕಾರ ಯೂನಿಯನ್ ಮಾಜಿಅಧ್ಯಕ್ಷ ಕೆ.ಜೆ.ತಮ್ಮಣ್ಣ, ಪುರಸಭೆಯ ಮಾಜಿಸದಸ್ಯ ವಿನೋದ್ ಕುಮಾರ್ ಮತ್ತು ಪ್ರೌಢಶಾಲಾ ವಿಭಾಗದ ಶಿಕ್ಷಕರು ಉಪಸ್ಥಿತರಿದ್ದರು.

Read More »

ಅಪರಿಚಿತ ವಾಹನ ಡಿಕ್ಕಿ 35 ಕುರಿಗಳು ಸಾವು

ತಡ ರಾರ್ತಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ 35 ಕುರಿಗಳು ಸಾವನ್ನಪ್ಪಿದ ಘಟನೆಹಿರಿಯೂರು ನಗರದ ವಿವಿ ಕ್ರಾಸದ ಬಳಿ ನಡೆದಿದೆ.ಶಿರಾ ತಾಲ್ಲೂಕಿನ ಗೌಡಗೇರೆ ಗೊಲ್ಲರಹಟ್ಟಿ ಶಿವಣ್ಣ ,ಕೃಷ್ಣಪ್ಪ ಅವರಿಗೆ ಸೇರಿದ ಕುರಿಗಳಾಗಿವೆ. ಲಕ್ಷಾಂತರ ಮೌಲ್ಯದ ಕುರಿಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಕುರಿಗಾರರಿಗೆ ದೊಡ್ಡ ಪ್ರಮಾಣದ ನಷ್ಟವಾಗಿದೆ. ಅಪಘಾತ ವೆಸಗಿದವರನ್ನು ಬಂಧಿಸಿ ಸೂಕ್ತ ಪರಿಹಾರಕ್ಕಾಗಿ ಕುರಿಗಾರರು ಕಣ್ಣಿರು ಹಾಕಿದ್ದಾರೆ. ಈ ಕುರಿತು ಹಿರಿಯೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಐ ಎಮ್ ಎ ವಂಚನೆ, ದಾವಣಗೆರೆಯಲ್ಲಿ ಐದು ನೂರಕ್ಕೂ ಹೆಚ್ಚು ಪ್ರಕರಣ

ಐ ಎಮ್ ಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ದಾವಣಗೆರೆಯಲ್ಲಿ ಐದು ನೂರಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ. ದಾವಣಗೆರೆ ವಿವಿಧ ಠಾಣೆಗಳಲ್ಲಿ ಇನ್ನೂ ದೂರುಗಳ ಸರಣಿ ಮುಂದುವರೆದಿದೆ. ೧೮ ಕೋಟಿ ರೂಪಾಯಿಗೂ ಹೆಚ್ಚು ವಂಚನೆ ಪ್ರಕರಣ ದಾಖಲಾಗಿವೆ. ಈ ಕುರಿತು ಐ ಎಮ್ ಎ ಕಚೇರಿಯಿಂದ ನಾಲ್ಕು ಕಂಪ್ಯೂಟರ್, ಮತ್ತು ಹಲವು ದಾಖಲೆಗಳನ್ನ ವಷಪಡಿಸಕೊಳ್ಳಲಾಗಿದೆ. ಮಹತ್ವದ ದಾಖಲೆಗಳ ಬಗ್ಗೆ ಇನ್ನೂ ತನಿಖೆ ಮುಂದುವರೆದಿದೆ.ವಶಪಡಿಸಿಕೊಂಡ ದಾಖಲೆಗಳನ್ನ ಎಸ್ ಐ ಟಿ ಗೆ …

Read More »