ಚಿತ್ರದುರ್ಗ : ಮುರುಘಾ ಮಠದಲ್ಲಿ ಮಗು ಪತ್ತೆಯಾಗಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಮಗು ನಾಲ್ಕೂವರೆ ವರ್ಷದ ಹಿಂದೆ ಮಠದ ಮುಂದಿನ ಕಾಂಪೌಂಡ್ ನಲ್ಲಿ ಸಿಕ್ಕಿತ್ತು ಎಂಬ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಮಠದ ಮುಂದಿನ ಕಾಂಪೌಂಡ್ ನಲ್ಲಿ ನಾಲ್ಕೂವರೆ ವರ್ಷದ ಹಿಂದೆ ಈ ಮಗು ಸಿಕ್ಕಿತ್ತು ಎಂದು ಮಠದ ಬಳಿಯ ಹೋಟೆಲ್ ನ ಮಹಿಳೆಯೊಬ್ಬರು ಮಾಹಿತಿ ನೀಡಿದ್ದು, ಫೈರೋಜಾ ಎಂಬ ಮಹಿಳೆ ನಾಲ್ಕುವರೆ ವರ್ಷದ ಹಿಂದಿನ ಸತ್ಯವನ್ನು ಬಿಚ್ಚಿಟ್ಟಿದ್ದು, ಮಗು …
Read More »ಮೇಕ್ಕಾ ಉಮ್ರಾಗೆ ಹೋಗಿದ್ದ ಯಾತ್ರಾರ್ಥಿ ನಿಧನ : ಮೆಕ್ಕಾದಲ್ಲೇ ಅಂತ್ಯಕ್ರಿಯೆ
ಧಾರವಾಡ : ಮೇಕ್ಕಾಗೆ ಉಮ್ರಾಗೆ ಹೋಗಿದ್ದ ಯಾತ್ರಾರ್ಥಿ ಬೆಳಿಗ್ಗೆ ಹೃದಯಾಘಾತದಿಂದ ಸೌದಿಯ ಮೇಕ್ಕಾದಲ್ಲಿ ನಿಧನ ಹೊಂದಿದ್ದಾರೆ. ಧಾರವಾಡ ಜಿಲ್ಲೆಯ ವರವ ನಾಗಲಾವಿಯ ಸೈಯ್ಯದ ದಾದಾಪೀರ ಪೀರಜಾದೆ (70) ಎಂದು ತಿಳಿದು ಬಂದಿದೆ. ಕಳೆದ ಅಕ್ಟೋಬರ್ 9 ರಂದು ಧಾರವಾಡದಿಂದ ಉಮ್ರಾಗಾಗಿ ಸೌದಿಗೆ ಪೀರಜಾದೆ ಹೋಗಿದ್ದರು. ನಾಗಲಾವಿ ಗ್ರಾಮದಲ್ಲಿ ಇರುವ ಶರೀಫ್ ಸಜ್ಜಾದ ದರ್ಗಾದ ದಾದಾಪೀರ ಪೀರಜಾದೆ ಗುರುಗಳು ಆಗಿದ್ದರು. ಇವರ ಜೊತೆಯಲ್ಲಿ ಕುಟುಂಬದ ಕೆಲ ಸದಸ್ಯರು ಕೂಡಾ ಹೋಗಿದ್ದರು. ಪೀರಜಾದೆ …
Read More »ಇಂದು ಸಂಜೆ ಹಲಾಲ್ ಜಿಹಾದ್ ಕನ್ನಡ ಪುಸ್ತಕ ಬಿಡುಗಡೆ : ಮುತಾಲಿಕ್
ಹುಬ್ಬಳ್ಳಿ: ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಈ ಸಲದ ದೀಪಾವಳಿಯನ್ನು ಹಲಾಲ್ ಮುಕ್ತ ದೀಪಾವಳಿ ಎಂಬ ಅಭಿಯಾನವನ್ನು ಬೃಹತ್ ಪ್ರಮಾಣದಲ್ಲಿ ನಡೆಸಲಿದ್ದು, ಈ ಹಿನ್ನೆಲೆ ಇಂದು ಸಂಜೆ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹಲಾಲ್ ಜಿಹಾದ್ ಕನ್ನಡ ಪುಸ್ತಕವನ್ನು ಬಿಡುಗಡೆ ಮಾಡಲಾಗುವುದು ಎಂದು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು, ಹಲಾಲ್ ಉತ್ಪಾದನೆಗಳ ಕಡ್ಡಾಯಗೊಳಿಸುವಿಕೆಯ ವಿರುದ್ಧ ಅಂದೋಲನಗಳು ಬಹಿರಂಗ ಕಾರ್ಯಕ್ರಮಗಳು, ಕರಪತ್ರ ಆನ್ ಲೈನ್ …
Read More »ರಾಜ್ಯ ಮಟ್ಟದ ಕಾಯಕ ಸಮಾಜದ ಒಕ್ಕೂಟಗಳ ಚಿಂತನ ಮಂಥನ ಸಭೆಗೆ ಪಂಚನಸಾಲಿ ಸಮಾಜ ವಿರೋಧ
ಧಾರವಾಡ: ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ವಿರೋಧಿಸಿನಗರದ ಅಕ್ಕನ ಬಳಗದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಕಾಯಕ ಸಮಾಜದ ಒಕ್ಕೂಟಗಳ ಚಿಂತನ ಮಂಥನ ಸಭೆಗೆ ಪಂಚಾಮಸಾಲಿ ಸಮಾಜದ ಮುಖಂಡರು ವಿರೋಧ ವ್ಯಕ್ತಪಡಿಸಿದರು. ಸಭೆಯ ಹೊರಗಡೆ ಪಂಚಮಸಾಲಿ ಸಮಾಜದ ಮುಖಂಡರು, ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡಿದರು. ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಒಕ್ಕೂಟದ ಅಧ್ಯಕ್ಷ ಕೆ.ಸಿ.ಪುಟ್ಟಸಿದ್ದಶೆಟ್ಟಿ ವಿರುದ್ಧ ಘೋಷಣೆ ಕೂಗಿ ಪುಟ್ಟಸಿದ್ದಶೆಟ್ಟಿಯ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿ ಆಕ್ರೋಶ …
Read More »ಸರ್ಕಾರಕ್ಕೆ ಪತ್ರ ಬರೆದ ಬಸವರಾಜ ಹೊರಟ್ಟಿ
ಹುಬ್ಬಳ್ಳಿ: ದಸರಾಕ್ಕೆ ಶಾಲೆಗಳಿಗೆ ನೀಡುವ ಒಂದು ತಿಂಗಳ ರಜೆಯನ್ನು 15 ದಿನಕ್ಕೆ ಸೀಮಿತಗೊಳಿಸಿರುವ ಸರ್ಕಾರದ ನಡೆಗೆ ಮಾಜಿ ಸಭಾಪತಿ ಮತ್ತು ಹಾಲಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತು ಶಿಕ್ಷಣ ಸಚಿವರು, ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಬಸವರಾಜ ಹೊರಟ್ಟಿ ಪತ್ರ ಬರೆದಿದ್ದಾರೆ. ದಸರಾಗೆ ಈ ಮುಂಚೆ ಒಂದು ತಿಂಗಳು ರಜೆ ಕೊಡಲಾಗುತ್ತಿತ್ತು. ಹಾಗೇ ಎರಡು ತಿಂಗಳ ಬೇಸಿಗೆ ರಜೆ ನೀಡಲಾಗುತ್ತಿತ್ತು. ಆದ್ರೆ ಈ ಬಾರಿ …
Read More »ಪವರ್ ಸ್ಟಾರ್ ಮೊದಲ ವರ್ಷದ ಪುಣ್ಯಸ್ಮರಣೆ : ಸಮಾಧಿ ಬಳಿ 75 ಕಟೌಟ್ಗಳ ನಿರ್ಮಾಣ
ಬೆಂಗಳೂರು : ಪುನೀತ್ ರಾಜ್ಕುಮಾರ್ ಪುಣ್ಯಸ್ಮರಣೆ ಪ್ರಯುಕ್ತ ಸಮಾಧಿ ಬಳಿ 75 ಕಟೌಟ್ಗಳನ್ನು ನಿಲ್ಲಿಸಲು ಪ್ಲ್ಯಾನ್ ಮಾಡಲಾಗಿದೆ. ಚಿತ್ರಮಂದಿರಗಳ ಎದುರಲ್ಲೂ ‘ಪವರ್ ಸ್ಟಾರ್’ ಕಟೌಟ್ಸ್ ರಾರಾಜಿಸಲಿವೆ. ನಟ ಪುನೀತ್ ರಾಜ್ಕುಮಾರ್ ಅವರು ನಿಧನರಾಗಿ ಒಂದು ವರ್ಷ ಕಳೆಯುತ್ತ ಬಂದಿದೆ. ಅಕ್ಟೋಬರ್ 29ರಂದು ಮೊದಲ ವರ್ಷದ ಪುಣ್ಯಸ್ಮರಣೆ. ಅದಕ್ಕೂ ಒಂದು ದಿನ ಮುನ್ನ (ಅ.28) ‘ಗಂಧದ ಗುಡಿ’ ರಿಲೀಸ್ ಆಗಲಿದೆ. ಅ.21ರಂದು ‘ಪುನೀತ ಪರ್ವ’ ಕಾರ್ಯಕ್ರಮ ನಡೆಯಲಿದೆ. ಈ ಎಲ್ಲ ವಿಶೇಷ …
Read More »ತಂದೆಯ ಅಂತ್ಯ ಸಂಸ್ಕಾರ ನೆರವೇರಿಸಿದ ಪುತ್ರಿಯರುತು
ತುಮಕೂರು: ಹೆಣ್ಣು ಮಕ್ಕಳಿಬ್ಬರೇ ಮುಂದೆ ನಿಂತು ತಂದೆಯ ಅಂತ್ಯ ಸಂಸ್ಕಾರ ನೆರವೇರಿಸಿರುವ ಘಟನೆ ತುಮಕೂರಿನಲ್ಲಿ ನಿನ್ನೆ ನಡೆದಿದೆ. ಅನಾರೋಗ್ಯದಿಂದ ಗಂಗಾಧರ್ ಮೃತಪಟ್ಟಿದ್ದರು. ಇವರ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳನ್ನು ಇಬ್ಬರು ಪುತ್ರಿಯರಾದ ಸವಿತಾ ಮತ್ತು ಲಕ್ಷ್ಮಿ ನೆರವೇರಿಸಿ ಸಮಾಜಕ್ಕೆ ಹೊಸ ಸಂದೇಶ ರವಾನಿಸಿದ್ದಾರೆ. ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳು ಸಹ ಯಾವುದರಲ್ಲೂ ಕಡಿಮೆ ಇಲ್ಲ ಎನ್ನುವ ಕೊರಗು ನಿವಾರಿಸಿ, ಸಮಾಜಕ್ಕೆ ಮಾದರಿಯಾಗಿದ್ದಾರೆ. ಗಂಗಾಧರ್ ಅವರು ಜೀವಿತಾವಧಿಯಲ್ಲಿ ಅತ್ಯಂತ ಸರಳ, ಸಜ್ಜನಿಕೆಯ …
Read More »ಹೆಂಡತಿ ಮೇಲೆ ಪತಿ ಹಲ್ಲೆ : ಆಕಾಶದೀಪ ಧಾರವಾಹಿ ನಟಿ ಪತಿ ಬಂಧನ
ಕನ್ನಡತಿ, ನಟಿ ದಿವ್ಯಾ ಶ್ರೀಧರ್ ಮೇಲೆ ಹಲ್ಲೆ ಮಾಡಿದ್ದ ಆರೋಪ ಹೊತ್ತಿರುವ ಆಕೆಯ ಪತಿಯನ್ನು ಚೆನ್ನೈ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.ಪತಿ ಅರ್ನವ್ ಅಲಿಯಾಸ್ ಅಮ್ಜದ್ ಖಾನ್ ವಿರುದ್ಧ ಕನ್ನಡತಿ, ದಿವ್ಯಾ ಶ್ರೀಧರ್ ಚೆನ್ನೈ ಪೊಲೀಸರ ಬಳಿ ಹಲ್ಲೆ ಹಾಗೂ ವಂಚನೆ ದೂರು ದಾಖಲಿಸಿದ್ದರು.ಪ್ರಕರಣ ಸಂಬಂಧ ಸಮನ್ಸ್ಗಳನ್ನು ನೀಡಿದ್ದ ಚೆನ್ನೈ ಪೊಲೀಸರು ಅಂತಿಮವಾಗಿ ನಿನ್ನೆ ಅಮ್ಜದ್ ಖಾನ್ ಅನ್ನು ಬಂಧಿಸಿದ್ದಾರೆ. ಒಂದು ವಾರದ ಹಿಂದೆ (ಅಕ್ಟೋಬರ್ 06) ರಂದು ನಟಿ ದಿವ್ಯಾ …
Read More »ಹಿಂದು ಧರ್ಮ ತ್ಯಜಿಸಿ ಬೌದ್ಧ ಧರ್ಮಕ್ಕೆ ನೂರಾರು ಜನ ಸೇರ್ಪಡೆ
ಯಾದಗಿರಿ: ಹಿಂದು ಧರ್ಮ ತ್ಯಜಿಸಿ ದಲಿತ ಸಮುದಾಯದ ನೂರಾರು ಜನ ಬೌದ್ಧ ಧರ್ಮ ಸ್ವೀಕರ ಮಾಡಿರುವಂತಹ ಘಟನೆ ಜಿಲ್ಲೆಯ ಸುರಪುರ ನಗರದಲ್ಲಿ ನಡೆದಿದೆ. ಬಿ.ಆರ್.ಅಂಬೇಡ್ಕರ್ ಮೊಮ್ಮಗಳಾದ ರಮಾಬಾಯಿ ನೇತೃತ್ವದಲ್ಲಿ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಕಾರ್ಯಕ್ರಮ ನಡೆಯಿತು. ನೂರಾರು ಜನರಿಗೆ ವರಜ್ಯೋತಿ ಬಂತೆಜೀ ಸಾನಿಧ್ಯದಲ್ಲಿ ಬೌದ್ಧ ಧಮ್ಮ ದೀಕ್ಷೆ ನೀಡಲಾಯಿತು. ಹಿಂದು ಧರ್ಮದಲ್ಲಿ ಕೀಳಾಗಿ ಕಾಣುತ್ತಿರುವ ಹಿನ್ನಲೆ ದೀಕ್ಷೆ ಪಡೆಯಲಾಗಿದೆ ಎನ್ನಲಾಗುತ್ತಿದೆ. ತ್ರಿಸರಣ ಪಂಚಶೀಲ, ಅಷ್ಟಾಂಗ ಮಾರ್ಗ ಮತ್ತು ಅಂಬೇಡ್ಕರ್ …
Read More »ಟಾಟಾ ಪವರ್ ಕಂಪನಿಯ ವೆಬ್ ಸೈಟ್ ಗೆ ಸೈಬರ್ ಅಟ್ಯಾಕ್
ಟಾಟಾ ಪವರ್ ಕಂಪನಿಯ ವೆಬ್ ಸೈಟ್ ಗೆ ಸೈಬರ್ ಅಟ್ಯಾಕ್ ಆಗಿದ್ದು, ಇದನ್ನು ಸರಿಪಡಿಸುವ ಕಾರ್ಯದಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ. ಸಂತಸದ ಸಂಗತಿ ಎಂದರೆ ಅತಿ ಸೂಕ್ಷ್ಮ ಸಂಗತಿಗಳನ್ನು ಒಳಗೊಂಡ ವ್ಯವಸ್ಥೆ ಮೇಲೆ ಸೈಬರ್ ದಾಳಿಕೋರರು ಪ್ರವೇಶಿಸಲು ಸಾಧ್ಯವಾಗಿಲ್ಲ.ಇದೀಗ ಸೈಬರ್ ದಾಳಿಯನ್ನು ಯಶಸ್ವಿಯಾಗಿ ನಿಭಾಯಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಕಂಪನಿ ಅಧಿಕಾರಿಗಳು ಈ ನಿಟ್ಟಿನಲ್ಲಿ ಈಗಾಗಲೇ ಯಶಸ್ಸು ಸಾಧಿಸಿದ್ದಾರೆ ಎನ್ನಲಾಗಿದೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





