Breaking News

BigTv News

100 ಕೋಟಿ ಆಸ್ತಿ ಮಾಡಿಟ್ಟೆ, ಒಬ್ಬನೇ ಮಗ ಎಲ್ಲ ಬಿಟ್ಟೋದ…

ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಬುಧವಾರ ಸಂಭವಿಸಿದ ಕಾಲ್ತುಳಿದ ಹನ್ನೊಂದು ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಹಾಸನದ ಭೂಮಿಕ್‌ ಕೂಡ ಒಬ್ಬರು. ಇನ್ನೂ ಇಂಜಿನಿಯರಿಂಗ್‌ ಓದುತ್ತಿದ್ದ ಭೂಮಿಕ್‌, ಮನೆಯಲ್ಲಿ ಯಾರಿಗೂ ಹೇಳದೆ ಆರ್‌ಸಿಬಿ ಸಂಭ್ರಮಾಚರಣೆಗೆ ಬಂದಿದ್ದರು.ರಾತ್ರಿ ಹಗಲು ಎನ್ನದೆ ಅವನಿಗಾಗಿ ಕೋಟಿ ಕೋಟಿ ಹಣ ಮಾಡಿಟ್ಟೆ, ಹತ್ತಾರು ಜನಕ್ಕೆ ಅನ್ನ ಹಾಕುತ್ತಿದ್ದೆ. ನೂರು ಕೋಟಿ ರೂಪಾಯಿ ಆಸ್ತಿ ಮಾಡಿದ್ದೀನಿ. ಆದ್ರೆ ಅವನು ಹೊತ್ಕೊಂಡು ಹೋದ್ನಾ? ಅವನಿಗೆ ಸ್ವರ್ಗವೇ ಇಲ್ಲಿತ್ತು, ಅವನು ಹೇಗಿದ್ದನೋ …

Read More »

ತಾಂತ್ರಿಕ ದೋಷದಿಂದ ಹೊತ್ತಿ ಉರಿದ ಸರ್ಕಾರಿ ಬಸ್!

ತಾಂತ್ರಿಕ ದೋಷದಿಂದ ಸರ್ಕಾರಿ ಬಸ್ ಹೊತ್ತಿ ಉರಿದ ಘಟನೆ ತಿ. ನರಸೀಪುರ ತಾಲೂಕಿನ ಬನ್ನೂರು ಪಟ್ಟಣದಲ್ಲಿ ನಡೆದಿದೆ. ಮೈಸೂರಿನಿಂದ ಬನ್ನೂರಿಗೆ ಬಸ್ ಬರುತ್ತಿತ್ತು. ಮೈಸೂರು ನಗರ ಸಾರಿಗೆ ವಿಭಾಗದ ಬಸ್ ಇದಾಗಿದ್ದು, ಅದೃಷ್ಟವಶಾತ್ ಪ್ರಾಣಪಯದಿಂದ ಪ್ರಯಾಣಿಕರು ಪಾರಾಗಿದ್ದಾರೆ.

Read More »

ಸಾವಿನಲ್ಲೂ ಸಾರ್ಥಕತೆ ಮೆರೆದ ಬಾಲಕಿ…

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಹಂಚಿಪುರ ಗ್ರಾಮದಲ್ಲಿ ದುಃಖದ ಘಟನೆಯೊಂದು ನಡೆದಿದೆ. 13 ವರ್ಷದ ಬಾಲಕಿ ಪ್ರಿಯದರ್ಶಿನಿ ವಾಷಿಂಗ್ ಮಿಷನ್‌ನ ವೈರ್‌ನಿಂದ ವಿದ್ಯುತ್ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.ಬಾಲಕಿಯ ಕಣ್ಣುಗಳನ್ನು ದಾನ ಮಾಡುವ ಮೂಲಕ ಕುಟುಂಬವು ತಮ್ಮ ದುಃಖದ ಸಂದರ್ಭದಲ್ಲೂ ಸಾರ್ಥಕತೆಯನ್ನು ಮೆರೆದಿದೆ.ಮಗಳ ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಿ ಮಾನವೀಯತೆ ಮೆರೆದಿದ್ದಾರೆ. ಈ ಕಾರ್ಯವು ಇತರರ ಜೀವನಕ್ಕೆ ಬೆಳಕು ನೀಡುವ ಮೂಲಕ ಬಾಲಕಿಯ ಸ್ಮರಣೆಯನ್ನು ಶಾಶ್ವತವಾಗಿಸಿದೆ

Read More »

ಅಂಕೋಲಾ: ದನ ಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ!!

ಜಮಗೋಡ ರೈಲ್ವೆ ಸ್ಟೇಷನ್ ಕ್ರಾಸ್ ಹತ್ತಿರ ರಸ್ತೆ ಬದಿಯಲ್ಲಿ ಮಲಗಿದ್ದ ಎರಡು ಆಕಳುಗಳನ್ನು ಕಳ್ಳತನ ಮಾಡಿಕೊಂಡು ಕಾರಿನ ಹಿಂಬದಿ ಸೀಟಿನಲ್ಲಿ ಹಿಂಸಾತ್ಮಕವಾಗಿ ತುಂಬಿಕೊಂಡು ಹೋಗುತ್ತಿರುವ ಕುರಿತು ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಆರೋಪಿತರ ಬೆನ್ನಟ್ಟಿದ್ದಾರೆ.ರಸ್ತೆಯ ಫ್ಲೈಓವರ್‌ನ ಕೆಳಗೆ ಆರೋಪಿತರನ್ನು ಕಾರು ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಆರೋಪಿತರು ವಿವಿಧ ಪೊಲೀಸ್ ಠಾಣೆಯ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈ ಬಗ್ಗೆ ತನಿಖೆ ಕೈಗೊಳ್ಳಲಾಗಿದ್ದು, ಈ ಕಾರ್ಯಚರಣೆಯಲ್ಲಿ ಭಾಗವಹಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಎಸ್‌ಪಿ …

Read More »

ಕುಂದಾಪುರ: ಡ್ರಗ್ಸ್ ಮಾರಾಟಕ್ಕೆ ಯತ್ನ, ಇಬ್ಬರು ಬಂಧನ!!

ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಕುಂದಾಪುರ ಪೊಲೀಸರು ಜೂ.4ರಂದು ಕೋಡಿ ಚಕ್ರೇಶ್ವರಿ ದೇವಸ್ಥಾನದ ಸಮೀಪ ಬಂಧಿಸಿದ್ದಾರೆ.ಇವರಿಂದ 2,49,440 ರೂ. ಮೌಲ್ಯದ ಒಟ್ಟು 124.72 ಗ್ರಾಂ ಎಂಡಿಎಂಎ, 9 ಇನ್ಸುಲಿನ್ ಸಿರಿಂಜ್, 2 ವೇಯಿಂಗ್ ಮೇಶಿನ್, ಚೂರಿ, 4540 ರೂ., 3 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಬಳ್ಳಾರಿ : ಬಾಲ್ಯ ವಿವಾಹ,6 ಮಂದಿ ವಿರುದ್ಧ FIR.

ಬಾಲಕಿಯರಿಗೆ ವಿವಾಹ ನಡೆಯುತ್ತಿರುವುದಾಗಿ ಮಕ್ಕಳ ಸಹಾಯವಾಣಿಗೆ ಕರೆ ಬಂದಿದೆ.ಇದನ್ನು ಆಧರಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮದುವೆ ನಡೆಯುತ್ತಿರುವ ಸೋಮಲಾಪುರಕ್ಕೆ ತೆರಳಿದ್ದರು. ಆದರೆ, ‌ಅಧಿಕಾರಿಗಳು ಸ್ಥಳಕ್ಕೆ ಹೋಗುವುದಕ್ಕೂ ಮೊದಲೇ, ಇಬ್ಬರೂ ಬಾಲಕಿಯರ ವಿವಾಹ ನಡೆದಿತ್ತು ಎಂದು FIR ಉಲ್ಲೇಖಿಸಲಾಗಿದೆ. ಘಟನೆ ಸಂಬಂಧ, ಬಿ. ಮಂಜುಳಾ, ಯಲ್ಲಪ್ಪ, ರೇಣುಕಮ್ಮ, ವೀರಾಪುರ ಸಿದ್ಧಮ್ಮ, ವಿ. ಶಿವಾನಂದ, ಚಿದಾನಂದ ಎಂಬುವವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

Read More »

ಕಾಸರಗೋಡು : ಆಯಾ ತಪ್ಪಿ ರೈಲಿನಿಂದ ಬಿದ್ದು ಗಂಭೀರ ಗಾಯ!!

ಹೊಸದುರ್ಗ ರೈಲು ನಿಲ್ದಾಣದಲ್ಲಿ ನಿಲ್ಲಿಸಿದಾಗ ಆಹಾರ ಖರೀದಿಸಲೆಂದು ಅವರು ರೈಲಿನಿಂದ ಇಳಿದಿದ್ದು, ಆಹಾರ ಖರೀದಿಸಿ ಬರುವಷ್ಟರಲ್ಲಿ ರೈಲು ಹೊರಟಿತ್ತು. ಚಲಿಸುತ್ತಿದ್ದ ರೈಲನ್ನೇರಲು ಯತ್ನಿಸಿದಾಗ ಆಯ ತಪ್ಪಿ ಬಿದ್ದು ಪಾಲಕ್ಕಾಡ್‌ ಮುಳಿಯಕಾವ್‌ ನಿವಾಸಿ ಸುಂದರ (39) ಗಂಭೀರ ಗಾಯಗೊಂಡಿದ್ದಾರೆ.ಅವರನ್ನು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯ ಬಳಿಕ ಕಲ್ಲಿಕೋಟೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕನ ಎಡಗಾಲು ಮತ್ತು ಹೆಗಲಿಗೆ ಗಂಭೀರ ಗಾಯವಾಗಿದೆ.

Read More »

ಮುಳ್ಳೇರಿಯ :ಗ್ಯಾಸ್‌ ತುಂಬಿದ್ದ 4 ಸಿಲಿಂಡರ್‌ ಕಳವು!

ಅಡೂರು ಸಂಜೆಕಡವಿನ ಮುಹಮ್ಮದ್‌ ರಾಫಿ ಅವರ ಮನೆಯ ಸಮೀಪದ ಗೋದಾಮಿನಲ್ಲಿ ಇರಿಸಿದ್ದ ನಾಲ್ಕು ಅಡುಗೆ ಅನಿಲ ಸಿಲಿಂಡರ್‌ಗಳನ್ನು ಕಳವು ಮಾಡಲಾಗಿದೆ. ಆದೂರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Read More »

ಕಾಸರಗೋಡು : ಕಾರು-ಜೀಪು ಢಿಕ್ಕಿ, 10 ಮಂದಿಗೆ ಗಾಯ!!

ಪಾಣತ್ತೂರು ಮೈಲಾಟಿ ರಸ್ತೆ ಬಳಿಯ ಕಂಬಿಕಾನದಲ್ಲಿ ಕಾರು ಮತ್ತು ಜೀಪು ಢಿಕ್ಕಿ ಹೊಡೆದು ವಿದ್ಯಾರ್ಥಿಗಳ ಸಹಿತ 10 ಮಂದಿ ಗಾಯಗೊಂಡಿದ್ದಾರೆ. ರಾಣಿಪುರ ಪ್ರವಾಸಿ ಕೇಂದ್ರವನ್ನು ವೀಕ್ಷಿಸಿ ವಾಪಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ.ಜೀಪಿನಲ್ಲಿ ಸಂಚರಿಸುತ್ತಿದ್ದ ಪಾಣತ್ತೂರು ಸರಕಾರಿ ಹೈಸ್ಕೂಲ್‌ನ ವಿದ್ಯಾರ್ಥಿಗಳಾದ ಶಿವ ಕುಮಾರ್‌ (11), ಗೀತಾ (11), ಅರ್ಜುನ್‌ (6), ಅಮೃತ (12), ಲಯ (10), ಅದಿದೇವ್‌ (7), ಆರ್ಯಾ (15), ಶಿವನ್ಯ (9), ಕಾರು ಪ್ರಯಾಣಿಕರಾದ ಪುತ್ತೂರು ನಿವಾಸಿಗಳಾದ ಅಸ್ವಾಫ್‌ (21) …

Read More »

18.46 ಲಕ್ಷ ರೂ. ಅಪಹರಣ,ಇಬ್ಬರ ಬಂಧನ!!

ರಶೀದ್‌ ಅವರಿಗೆ ಹಲ್ಲೆಗೈದು ಬೆದರಿಕೆಯೊಡ್ಡಿ ಹಣವನ್ನು ತಮ್ಮ ಖಾತೆಗೆ ಬದಲಾಯಿಸಿಕೊಂಡ ಬಳಿಕ ಪೆರ್ಮುದೆ ಪೇಟೆಯಲ್ಲಿ ಇಳಿಸಿ ಪರಾರಿಯಾಗಿದ್ದರು. ಮುಖ್ಯ ಆರೋಪಿಯಾದ ಪುತ್ತಿಗೆ ಚಳ್ಳಂಗಯದ ಸಯ್ಯಿದ್‌ (31) ನನ್ನು ಕೆಲವು ದಿನಗಳ ಹಿಂದೆ ಬಂಧಿಸಲಾಗಿತ್ತು.ಹಾಡಹಗಲೇ ಕುಂಬಳೆ ಪೇಟೆಯಿಂದ ಕಾರಿನಲ್ಲಿ ಅಪಹರಿಸಿ 18,46,127 ರೂ. ಲಪಟಾಯಿಸಿದ ಪ್ರಕರಣದಲ್ಲಿ ಇನ್ನಿಬ್ಬರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.

Read More »