ಅತ್ಯಾಚಾರ ಕೇಸ್ ಗೆ ಸಂಬಂಧಿಸಿದಂತೆ ಕಾಮಿಡಿ ಕಿಲಾಡಿ ಖ್ಯಾತಿಯ ಮಡೆನೂರ್ ಮನುನನ್ನ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬೆಂಗ್ಳೂರಿಗೆ ಕರೆತಂದಿದ್ದಾರೆ.ವಿಚಾರಣೆಯಲ್ಲಿ ಹಲವು ರಹಸ್ಯೆಗಳನ್ನು ಮನು ಬಾಯ್ಬಿಟ್ಟಿದ್ದಾರೆ.ಅದು ಅತ್ಯಾಚಾರ ಅಲ್ಲ, ಒಪ್ಪಂದದ ಸಂಪರ್ಕ. ನಟಿಯನ್ನು ಮದುವೆ ಆಗದ್ದೇನೆ. ಮೂವರ ಮಾತು ಕೇಳಿ, ಆಕೆ ದೂರು ನೀಡಿದ್ದಾಳೆ. ಇಬ್ಬರೂ ಹೀರೋ, ಒಬ್ಬಳು ಲೇಡಿ ಡಾನ್ ಮಾತು ಕೇಳಿ ದೂರು ದಾಖಲಿಸಿದ್ದಾಳೆ. ಲೇಡಿ ಡಾನ್ ನಟಿಗೆ ಆತ್ಮಿಯಳು. ಕಾಮಿಡಿ ಕಿಲಾಡಿಗಳು ಶೋ ನಟಿ ಅಂತ ಮನು …
Read More »ಚೆನೈ :ಬಾಲಕಿಯನ್ನು ಕೊಂದು ತಲೆಕಡಿದು ಕೆರೆಗೆ ಎಸೆದ ಕ್ರೂರಿ!
ಮಾನಸಿಕ ಅಸ್ವಸ್ಥನೋರ್ವ ತನ್ನ ಅಣ್ಣನ ಪುಟ್ಟ ಮಗುವನ್ನು ಕೊಂದು, ತುಂಡು ತುಂಡು ಮಾಡಿ ತಲೆಯನ್ನು ಕೆರೆಗೆ ಎಸೆದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಮೊದಲೇ ಮಾನಸಿಕ ಅಸ್ವಸ್ಥನಾಗಿದ್ದ ಸಂಜಯ್, ಲೆಮೋರಿಯಾಳನ್ನು ಹಿತ್ತಲಿಗೆ ಎಳೆದುಕೊಂಡು ಹೋಗಿ, ಚಾಕು ತೆಗೆದುಕೊಂಡು ತಲೆಯನ್ನೇ ಕಡಿದಿದ್ದಾನೆ. ಮಗುವನ್ನು ಕೊಂದ ನಂತರ ಭಯಬಿದ್ದ ಸಂಜಯ್ ಕತ್ತರಿಸಿದ ತಲೆಯನ್ನು ಕೆರೆಯಲ್ಲಿ ಎಸೆದುಬಂದಿದ್ದಾನೆ.ಸುದ್ದಿ ತಿಳಿಯುತ್ತಿದ್ದಂತೆಯೇ ಎಮನೇಶ್ವರಂ ಪೊಲೀಸರು ಮಾಹಿತಿ ಪಡೆದು, ಅಗ್ನಿಶಾಮಕ ಸಿಬ್ಬಂದಿ ಸಹಾಯದಿಂದ ದೇಹ ಮತ್ತು ತಲೆ ಎರಡನ್ನೂ ಹೊರತೆಗೆಸಿದ್ದಾರೆ. …
Read More »ನನ್ನ ಗಂಡನ ಪರ ನಿಲ್ಲುತ್ತೇನೆ, ನ್ಯಾಯ ಸಿಗುವವರೆಗೆ ಹೋರಾಡುತ್ತೇನೆ’; ಮನು ಪತ್ನಿಯ ದೃಢ ನಿಲುವು.
ಮಡೆನೂರು ಮನು ಅವರ ಮೇಲೆ ಅತ್ಯಾಚಾರ ಆರೋಪ ಕೇಳಿ ಬಂದಿದೆ. ಸಹಕಲಾವಿದೆ ಆಗಿದ್ದವರಿಂದಲೇ ಈ ರೀತಿಯ ಆರೋಪ ಕೇಳಿ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಮನು ಅವರ ಪತ್ನಿ ಮಾತನಾಡಿದ್ದಾರೆ.ನನ್ನ ಪತಿಯನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ನನ್ನ ಗಂಡನ ಪರ ನಾನು ನಿಲ್ಲುತ್ತೇನೆ. ಅವನು ತಪ್ಪು ಮಾಡಿಲ್ಲ. ನ್ಯಾಯ ಸಿಗೋವರೆಗೆ ಹೋರಾಡುತ್ತೇನೆ’ ಎಂದಿದ್ದಾರೆ ಅವರು.ವೈಯಕ್ತಿಕ ವಿಷಯವನ್ನು ಅಲ್ಲಿಗೆ ಬಿಡಿ, ತನಿಖೆ ಆಗಲಿ. ಆದರೆ ಸಿನಿಮಾ ನೋಡಿ. ಹೆಣ್ಣುಮಗಳನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು …
Read More »ಮಂಗಳೂರು :ಬೇಕರಿ ಮಾಲೀಕನ ಮೇಲೆ ಹಲ್ಲೆಗೆ ಯತ್ನ!
ಬೇಕರಿ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಟೆಂಪೋ ರಿಕ್ಷಾವನ್ನ ಬದಿಗೆ ಸರಿಸಲು ಹೇಳಿದ್ದಕ್ಕೆ ಕುಪಿತಗೊಂಡ ಚಾಲಕ ತನ್ನ ಸಹಚರ ರಿಕ್ಷಾ ಚಾಲಕನೊಂದಿಗೆ ಬೇಕರಿಗೆ ನುಗ್ಗಿ ಮಾಲಕ ಮತ್ತು ಅವರ ತಾಯಿಗೆ ಹಲ್ಲೆಗೆ ಯತ್ನಿಸಿದ್ದು, ರಿಕ್ಷಾ ಚಾಲಕರ ಪುಂಡಾಟಿಕೆಯ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.ತೊಕ್ಕೊಟ್ಟು ಜಂಕ್ಷನ್ ನಲ್ಲಿ ಗುರುವಾರ ಮಧ್ಯಾಹ್ನ ಘಟನೆ ನಡೆದಿದೆ. ಮಾರುತಿ ಸ್ವೀಟ್ಸ್ ಮಾಲಕರಾದ ಅಶ್ವಿನ್ ಕುಮಾರ್ ಅವರು ತಮ್ಮ ಬೇಕರಿ ಮುಂದುಗಡೆಯೇ ಅಡ್ಡಲಾಗಿ ನಿಲ್ಲಿಸಿದ್ದ ಟೆಂಪೋ ರಿಕ್ಷಾವನ್ನ ಸ್ವಲ್ಪ ಬದಿಗೆ ಸರಿಸುವಂತೆ …
Read More »ಸ್ಯಾನ್ಡಿಯಾಗೋ :ಮನೆ ಮೇಲೆ ಪತನಗೊಂಡ ಲಘು ವಿಮಾನ, ಆರು ಮಂದಿ ಮೃತ್ಯು!
ಖ್ಯಾತ ಸಂಗೀತ ಕಾರ್ಯಕ್ರಮ ಸಂಯೋಜನ ಡೇವ್ ಶಾಪಿರೊ ಸೇರಿದಂತೆ ಆರು ಮಂದಿಯನ್ನು ಪ್ರಯಾಣಿಸುತ್ತಿದ್ದ ಖಾಸಗಿ ವಿಮಾನವೊಂದು ಗುರುವಾರ ಮುಂಜಾನೆ ಸ್ಯಾನ್ ಡಿಯಾಗೋ ವಸತಿ ಪ್ರದೇಶದಲ್ಲಿ ಪತನಗೊಂಡಿದ್ದು, ಅದರಲ್ಲಿದ್ದ ಎಲ್ಲಾ ಆರು ಮಂದಿ ಪ್ರಯಾಣಿಕರು ಮೃತಪಟ್ಟಿರುವ ಘಟನೆ ನಡೆದಿದೆ.ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆಯನ್ನು ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲವಾದರೂ, ಈ ಘಟನೆಯಲ್ಲಿ ಯಾರಾದರೂ ಬದುಕುಳಿದಿರುವ ಸಾಧ್ಯತೆ ಕಡಿಮೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.ಬೆಳಗಿನ ದಟ್ಟ ಮಂಜಿನ ನಡುವೆ ಹಾರಾಟ ನಡೆಸುತ್ತಿದ್ದ ವಿಮಾನವು ಮೊದಲು ವಿದ್ಯುತ್ ಕಂಬವೊಂದಕ್ಕೆ …
Read More »ಆಂಧ್ರಪ್ರದೇಶ : ತಿರುಮಲದಲ್ಲಿ ನಮಾಜ್ ಮಾಡಿದ ವ್ಯಕ್ತಿ!
ತಿರುಪತಿ ತಿರುಮಲ ಕಲ್ಯಾಣ ಮಂಟಪದ ಬಳಿ ವ್ಯಕ್ತಿಯೋರ್ವ ಹಜರತ್ ಟೋಪಿ ಎಂದು ಹೇಳಲಾಗುತ್ತಿರುವುದನ್ನು ಧರಿಸಿ ಸುಮಾರು 10 ನಿಮಿಷಗಳಿಗೂ ಹೆಚ್ಚು ಕಾಲ ನಮಾಜ್ ಮಾಡಿರುವ ಆರೋಪ ಕೇಳಿಬಂದಿದೆ. ಈ ಕುರಿತಾದ ವಿಡಿಯೋ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.ತಿರುಮಲ ಬೆಟ್ಟಕ್ಕೆ ಬರುವ ವಾಹನಗಳ ಮೇಲೆ ಇತರ ಧರ್ಮಗಳ ಚಿಹ್ನೆಗಳಿದ್ದರೂ ಸಹ ಅವುಗಳನ್ನು ಅನುಮತಿಸಲಾಗಲ್ಲ. ತಿರುಮಲ ಬೆಟ್ಟದಲ್ಲಿ ಅನ್ಯಧರ್ಮೀಯರ ಫೋಟೋಗಳನ್ನು, ಇತರ ಧರ್ಮದ ಜನ ಪ್ರಾರ್ಥನೆ ಮಾಡುವುದನ್ನು ಸಹ ನಿಷೇಧಿಸಲಾಗಿದೆ ಎಂದು …
Read More »ಕೊಲ್ಕತ್ತಾ :ಅಮ್ಮ, ನಾನು ಚಿಪ್ಸ್ ಕದ್ದಿಲ್ಲ’, ಪತ್ರ ಬರೆದಿಟ್ಟು ಬಾಲಕ ಆತ್ಮಹತ್ಯೆ!
ಅಮ್ಮಾ, ನಾನು ಕದ್ದಿಲ್ಲ’ ಎಂದು ಬಾಲಕ ಬರೆದಿದ್ದ. ಹುಡುಗನ ಈ ಕೊನೆಯ ಮಾತುಗಳು ಎಂಥಾ ಕಲ್ಲು ಹೃದಯವನ್ನಾದರೂ ಕರಗಿಸುತ್ತದೆ. ಅಂದು ಭಾನುವಾರ. ಬಕುಲ್ಡಾ ಪ್ರೌಢಶಾಲೆಯ 13 ವರ್ಷದ ವಿದ್ಯಾರ್ಥಿ ಕೃಷ್ಣೇಂದು ದಾಸ್, ಸ್ವೀಟ್ ಶಾಪ್ನಿಂದ ಮೂರು ಪ್ಯಾಕೆಟ್ ಚಿಪ್ಸ್ ಕದ್ದ ಎಂದು ಆರೋಪ ಮಾಡಲಾಗಿತ್ತು. ಅಂಗಡಿ ಮಾಲೀಕ ಶುಭಂಕರ್ ಇಲ್ಲದ ಸಮಯದಲ್ಲಿ ಬಾಲಕ 3 ಪ್ಯಾಕೆಟ್ ಚಿಪ್ಸ್ ಕದ್ದಿದ್ದ ಎಂದು ಎಂದು ಜನರು ಹೇಳಿದ್ದರು.ಹಣ ವಾಪಸ್ ಪಡೆಯುವ ನೆಪದಲ್ಲಿ ಬಾಲಕನನ್ನು …
Read More »UP: ಮನೆಯಲ್ಲಿ ಕರೆಂಟ್ ಇಲ್ಲ, ಸೆಕೆ ತಡೆಯಲಾಗದೆ ಎಟಿಎಂ ಎಸಿಗೆ ಬಂದು ಕುಳಿತ ಕುಟುಂಬ!
ವಿದ್ಯುತ್ ಕಡಿತದ ವಿರುದ್ಧ ಜನರು ಪ್ರತಿಭಟನೆ ಮಾಡಿದರೂ ಏನು ಪ್ರಯೋಜನವಾಗುತ್ತಿಲ್ಲ. ಇದೀಗ ಕುಟುಂಬವೊಂದು ಈ ಬಿಸಿಲಿನ ತಾಪದಿಂದ ಮುಕ್ತಿ ಪಡೆಯಲು ಎಟಿಎಂ ಬೂತ್ ನಲ್ಲೇ ಆಶ್ರಯ ಪಡೆದುಕೊಂಡಿದೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ವಿದ್ಯುತ್ ಇಲಾಖೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಉತ್ತರ ಪ್ರದೇಶದಲ್ಲಿ ಭ್ರಷ್ಟ ಇಲಾಖೆ ಯಾವುದಾದರೂ ಇದ್ದರೆ ಅದುವೇ ವಿದ್ಯುತ್ ಇಲಾಖೆ, ಇದನ್ನು ತಕ್ಷಣವೇ ಖಾಸಗಿಕರಣಗೊಳಿಸಬೇಕು ಎಂದಿದ್ದಾರೆ. ಇನ್ನೊಬ್ಬರು, ಇದರಲ್ಲಿ ಯಾವುದೇ ತಪ್ಪಿಲ್ಲ, ಅಧಿಕಾರಿಗಳು ಮೂಲಭೂತ …
Read More »ಗುಜರಾತ್ :ಮಾದಕ ದ್ರವ್ಯ ನೀಡಿ ಯುವತಿಯ ಸಾಮೂಹಿಕ ಅತ್ಯಾಚಾರ, ಬಿಜೆಪಿ ನಾಯಕನ ಬಂಧನ!
23 ವರ್ಷದ ಯುವತಿಯೊಬ್ಬಳಿಗೆ ಪಾನೀಯದಲ್ಲಿ ಮಾದಕ ದ್ರವ್ಯ ಬೆರೆಸಿ ಕುಡಿಸಿ, ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಆಕೆಯನ್ನು ಹೋಟೆಲ್ ಒಂದಕ್ಕೆ ಕರೆದೊಯ್ದು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಆಘಾತಕಾರಿ ಘಟನೆ ಗುಜರಾತ್ನ ಸೂರತ್ ನಗರದಲ್ಲಿ ನಡೆದಿದೆ.ತನಗೆ ಪ್ರಜ್ಞೆ ಮರಳಿದ ಕೂಡಲೇ ಪೊಲೀಸರನ್ನು ಸಂಪರ್ಕಿಸಿರುವ ಸಂತ್ರಸ್ತ ಯುವತಿಯು, ಈ ಸಂಬಂಧ ಅಧಿಕೃತ ದೂರು ದಾಖಲಿಸಿದ್ದಾಳೆ. ಇದರ ಬೆನ್ನಿಗೇ ಕ್ಷಿಪ್ರ ಕ್ರಮ ಕೈಗೊಂಡಿರುವ ಪೊಲೀಸರು, ಆರೋಪಿಗಳಾದ ಆದಿತ್ಯ ಉಪಾಧ್ಯಾಯ ಹಾಗೂ ಆತನ ಸಹಚರ ಗೌರವ್ …
Read More »ನಂಜನಗೂಡು: ಮಕ್ಕಳಾಗದ್ದಕ್ಕೆ ಮಹಿಳೆ ಆತ್ಮಹತ್ಯೆ!!
ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ತಾಲ್ಲೂಕಿನ ಕರಳಪುರದಲ್ಲಿ ಬುಧವಾರ ಶ್ರೀಕಾಂತ ಅವರ ಮಡದಿ ಮಹಾದೇವಿ (25) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಮೃತಳ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆಯ ಸಿಪಿಐ ಸುನಿಲ್ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





